ಮೈಸೂರು

ನಾಳೆ, ನಾಡಿದ್ದು ನೀರು ಸರಬರಾಜಲ್ಲಿ ವ್ಯತ್ಯಯ
ಮೈಸೂರು

ನಾಳೆ, ನಾಡಿದ್ದು ನೀರು ಸರಬರಾಜಲ್ಲಿ ವ್ಯತ್ಯಯ

October 21, 2018

ಮೈಸೂರು:  ಮೈಸೂರು ನಗರಕ್ಕೆ ಕುಡಿಯುವ ನೀರು ಸರಬರಾಜಾಗುವ ಕಬಿನಿ ನದಿ ಮೂಲದಿಂದ ಸಗಟು ನೀರು ಸರಬರಾಜು ಮಾಡುವ ಯಂತ್ರಾಗಾರಗಳಿಗೆ 22-10-2018 ರಂದು ಚೆಸ್ಕಾಂ ಇಲಾಖೆಯವರು ತುರ್ತು ದುರಸ್ತಿ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ, ವಿದ್ಯುತ್ ನಿಲುಗಡೆ ಇರುವುದಾಗಿ ತಿಳಿಸಿರುತ್ತಾರೆ. ಆದು ದರಿಂದ ಮೈಸೂರು ನಗರಕ್ಕೆ ಪೂರ್ಣ ಪ್ರಮಾಣದಲ್ಲಿ ನೀರನ್ನು ಪಂಪು ಮಾಡಲು ಸಾಧ್ಯವಾಗುವುದಿಲ್ಲ. ಆದ ಕಾರಣ ಅಕ್ಟೋಬರ್ 22 ಮತ್ತು 23 ರಂದು ಈ ಕೆಳಕಂಡ ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.ವಾರ್ಡ್ ನಂ. 44 ರಿಂದ ವಾರ್ಡ್ ನಂ….

ಮೈಸೂರಲ್ಲಿ ವರ್ಷವಿಡೀ ದಸರಾ ರೀತಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಿಂತನೆ: ಸಿಎಂ
ಮೈಸೂರು, ಮೈಸೂರು ದಸರಾ

ಮೈಸೂರಲ್ಲಿ ವರ್ಷವಿಡೀ ದಸರಾ ರೀತಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಿಂತನೆ: ಸಿಎಂ

October 20, 2018

ಮೈಸೂರು:  ಮೈಸೂರಿನಲ್ಲಿ ವರ್ಷವಿಡೀ ನಾನಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಕುರಿತು ಚಿಂತನೆ ನಡೆಸಿರುವುದಾಗಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ಹೇಳಿದರು. ದಸರಾ ವಿಜಯದಶಮಿ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡುವ ಮುನ್ನ ಲಲಿತ ಮಹಲ್ ಹೋಟೆಲ್‍ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸೌಹಾರ್ದ ಭೇಟಿಯಲ್ಲಿ ಮಾತನಾಡಿದ ಅವರು, ದಸರಾ ಮಹೋತ್ಸವವನ್ನು 10 ದಿನಕ್ಕೆ ಸೀಮಿತ ಮಾಡದೇ ವರ್ಷವಿಡೀ ಕಾರ್ಯಕ್ರಮ ನಡೆಸಲು ಸರ್ಕಾರ ಚಿಂತನೆ ನಡೆಸಿದೆ ಎಂದರು. ಬೃಂದಾವನ, ಮೇಲುಕೋಟೆ, ಸೋಮನಾಥಪುರ, ಮೈಸೂ ರಿನ ಪಾರಂಪರಿಕ ಕಟ್ಟಡಗಳು, ಕೊಡಗು ಒಳಗೊಂಡಂತೆ ಟೂರಿಸ್ಟ್…

ಚಿನ್ನದ ಅಂಬಾರಿಯಲ್ಲಿದ್ದ ನಾಡದೇವಿ ಕಂಡು ಪುಳಕಗೊಂಡ ಜನತೆ
ಮೈಸೂರು, ಮೈಸೂರು ದಸರಾ

ಚಿನ್ನದ ಅಂಬಾರಿಯಲ್ಲಿದ್ದ ನಾಡದೇವಿ ಕಂಡು ಪುಳಕಗೊಂಡ ಜನತೆ

October 20, 2018

ಮೈಸೂರು: ಜಂಬೂ ಸವಾರಿ ಮೆರವಣಿಗೆಯಲ್ಲಿ ಅರ್ಜುನನ ಮೇಲೆ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿ ಬಂದ ನಾಡದೇವಿ ಚಾಮುಂಡೇಶ್ವರಿಯನ್ನು ಕಂಡು ಮೆರವಣಿಗೆಯುದ್ದಕ್ಕೂ ಅಪಾರ ಸಂಖ್ಯೆಯ ಜನರು ಕೈಮುಗಿದು ಹರ್ಷೋದ್ಘಾರದಿಂದ ಘೋಷಣೆ ಕೂಗಿದರು, ಆನಂದಭಾಷ್ಪ ಸುರಿಸಿದರು. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಮಾಡಿದ ನಂತರ ಸಂಜೆ 4.32ಕ್ಕೆ ಬಲರಾಮ ದ್ವಾರದಿಂದ ಚಿನ್ನದ ಅಂಬಾರಿಯನ್ನು ಹೊತ್ತಿದ್ದ ಅರ್ಜುನ ಅರಮನೆಯಿಂದ ಹೊರ ಬರುತ್ತಿದ್ದಂತೆ ಚಾಮರಾಜ ವೃತ್ತದ ಸುತ್ತಲೂ ಕುಳಿತಿದ್ದ ಅಪಾರ ಸಂಖ್ಯೆಯ ಜನ ಏಕಕಾಲಕ್ಕೆ ಹರ್ಷೋದ್ಘಾರಗೈದರು. ನಂತರ ಚಾಮರಾಜ ವೃತ್ತವನ್ನು ಬಳಸಿ ಕೆ.ಆರ್.ವೃತ್ತದ…

ಜಂಬೂ ಸವಾರಿ ವೀಕ್ಷಿಸಿದ ಸಾವಿರಾರು ವಿದೇಶಿಯರು
ಮೈಸೂರು, ಮೈಸೂರು ದಸರಾ

ಜಂಬೂ ಸವಾರಿ ವೀಕ್ಷಿಸಿದ ಸಾವಿರಾರು ವಿದೇಶಿಯರು

October 20, 2018

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಗೆಯಲ್ಲಿ ಅರ್ಜುನನ ಮೇಲೆ ವಿರಾಜಮಾನಳಾಗಿದ್ದ ಶ್ರೀ ಚಾಮುಂಡೇಶ್ವರಿ ದೇವಿಯನ್ನು ಸಾವಿರಕ್ಕೂ ಅಧಿಕ ಮಂದಿ ವಿದೇಶಿ ಪ್ರವಾಸಿಗರು ವೀಕ್ಷಿಸಿ ನಮಿಸಿದರು. ಆಯುರ್ವೇದ ವೃತ್ತದಲ್ಲಿ ಕಲ್ಪವೃಕ್ಷ ಟ್ರಸ್ಟ್ ಹಾಗೂ ಡಾ. ರಾಜಶೇಖರ್ ಮೆಡಿಕಲ್ ಫೌಂಡೇಷನ್ ಸಹ ಯೋಗ ದೊಂದಿಗೆ ಪ್ರತಿವರ್ಷದಂತೆ ಈ ಬಾರಿಯೂ ಆಯೋಜಿಸಿದ್ದ ವೀಕ್ಷಣಾ ಗ್ಯಾಲರಿಯಲ್ಲಿ ಕುಳಿತಿದ್ದ ಸ್ಪೇನ್, ಫ್ರಾನ್ಸ್, ಬ್ರಿಟನ್, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ಅಮೇರಿಕಾ ಹಾಗೂ ಮೈಸೂ ರಿನ ಕಂಪ್ಯೂಟರ್ ಕೇಂದ್ರವೊಂದರಲ್ಲಿ ತರಬೇತಿ ಪಡೆಯುತ್ತಿ ರುವ 30ಕ್ಕೂ ಹೆಚ್ಚು ಚೀನಿ…

ಜಂಬೂ ಸವಾರಿ ವೀಕ್ಷಿಸಿದ ಡಾ.ಶಿವರಾಜ್ ಕುಮಾರ್ ದಂಪತಿ
ಮೈಸೂರು, ಮೈಸೂರು ದಸರಾ

ಜಂಬೂ ಸವಾರಿ ವೀಕ್ಷಿಸಿದ ಡಾ.ಶಿವರಾಜ್ ಕುಮಾರ್ ದಂಪತಿ

October 20, 2018

ಮೈಸೂರು: ಈ ಬಾರಿ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಯನ್ನು ನಟ ಶಿವರಾಜ್‍ಕುಮಾರ್ ದಂಪತಿ ವೀಕ್ಷಿಸಿದರು. ಸಯ್ಯಾಜಿರಾವ್ ರಸ್ತೆಯ ಹೈವೇ ವೃತ್ತ ಬಳಿಯಿರುವ ಪ್ರತಿಷ್ಟಿತ ಖಾಸಗಿ ಹೋಟೆಲ್ ಬಳಿ ನಿರ್ಮಿಸಿದ್ದ ವೇದಿಕೆಯಲ್ಲಿ ಇತರೆ ಗಣ್ಯರೊಂದಿಗೆ ಕುಳಿತು, ಶ್ರೀ ಚಾಮುಂಡೇಶ್ವರಿ ಉತ್ಸವ ಮೂರ್ತಿ ಹೊತ್ತ ಜಂಬೂ ಸವಾರಿಯನ್ನು ವೀಕ್ಷಣೆ ಮಾಡಿದರು. ಎಪಿಎಂಸಿಯಿಂದ ವಿಶೇಷ ಪೂಜೆ: ಸಯ್ಯಾಜಿರಾವ್ ರಸ್ತೆಯಲ್ಲಿನÀ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿ ಬಳಿ, ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ, ಹಣ್ಣು ಹಂಪಲು ನೀಡಲಾಯಿತು. ಈ ವೇಳೆ…

ನಂದಿಧ್ವಜಕ್ಕೆ ಮುಖ್ಯಮಂತ್ರಿ ಪೂಜೆ
ಮೈಸೂರು, ಮೈಸೂರು ದಸರಾ

ನಂದಿಧ್ವಜಕ್ಕೆ ಮುಖ್ಯಮಂತ್ರಿ ಪೂಜೆ

October 20, 2018

ಮೈಸೂರು: ಅರಮನೆ ಬಲರಾಮ ದ್ವಾರದ ಬಳಿ ಕೋಟೆ ಆಂಜನೇಯಸ್ವಾಮಿ ದೇವಾಲಯ ಆವರಣದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿ ಸುವ ಮೂಲಕ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಶುಕ್ರವಾರ 408ನೇ ದಸರಾ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಿದರು. ಮಧ್ಯಾಹ್ನ 2.47ರ ವೇಳೆಗೆ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಮ್ಮ ಸಂಪುಟದ ಹಲವು ಸಹೋದ್ಯೋಗಿ ಗಳೊಡನೆ ಆಗಮಿಸಿದರು. ಶುಭ ಕುಂಭ ಲಗ್ನದಲ್ಲಿ ನಾದಸ್ವರದ ನಡುವೆ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದಸರಾ ಉದ್ಘಾಟಕಿ ಡಾ.ಸುಧಾಮೂರ್ತಿ, ಸಿಎಂ…

ಎಚ್ಚರಿಕೆ ನೀಡಿದ್ದರೂ ಅಪಾಯವನ್ನೂ ಲೆಕ್ಕಿಸದೆ ಕಟ್ಟಡ, ಮರ ಏರಿ ಮೆರವಣಿಗೆ ವೀಕ್ಷಣೆ
ಮೈಸೂರು, ಮೈಸೂರು ದಸರಾ

ಎಚ್ಚರಿಕೆ ನೀಡಿದ್ದರೂ ಅಪಾಯವನ್ನೂ ಲೆಕ್ಕಿಸದೆ ಕಟ್ಟಡ, ಮರ ಏರಿ ಮೆರವಣಿಗೆ ವೀಕ್ಷಣೆ

October 20, 2018

ಮೈಸೂರು:  ದಸರಾ ಮೆರವಣಿಗೆ ವೇಳೆ ಪಾರಂಪರಿಕ ಕಟ್ಟಡ ಗಳು ಹಾಗೂ ಶಿಥಿಲಗೊಂಡ ಕಟ್ಟಡಗಳ ಮೇಲೆ ಹತ್ತಬಾರದು ಎಂಬ ನಗರಪಾಲಿಕೆ ಆಯುಕ್ತರ ಎಚ್ಚರಿಕೆ ಆದೇಶವನ್ನೂ ಜನತೆ ಲೆಕ್ಕಕ್ಕೆ ತೆಗೆದುಕೊಂಡಂತೆ ಕಾಣಲಿಲ್ಲ. ಜಂಬೂ ಸವಾರಿ ಮಾರ್ಗದ ಬಹುತೇಕ ಕಟ್ಟಡಗಳು ಅದರಲ್ಲೂ ಮುಖ್ಯವಾಗಿ ಶಿಥಿಲಗೊಂಡಿರುವ ದೇವರಾಜ ಮಾರುಕಟ್ಟೆ ಕಟ್ಟಡದ ಮೇಲೂ ಅಪಾಯವನ್ನೂ ಲೆಕ್ಕಿಸದೆ ಭಾರೀ ಜನ ಕುಳಿತು ಮೆರವಣಿಗೆ ವೀಕ್ಷಿಸಿದರು. ಮರ, ಕಾಂಪೌಂಡ್, ಪೆಟ್ಟಿಗೆ ಅಂಗಡಿ, ಜಾಹೀರಾತು ಫಲಕಗಳ ಮೇಲೂ ಹತ್ತಿ ಕುಳಿತು ಮೆರವಣಿಗೆ ವೀಕ್ಷಿಸಿದರು. ಟೌನ್ ಹಾಲ್ ಆವರಣದಲ್ಲಿರುವ ಮರಗಳು,…

ಜನರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ
ಮೈಸೂರು, ಮೈಸೂರು ದಸರಾ

ಜನರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ

October 20, 2018

ಮೈಸೂರು: ಜಂಬೂಸವಾರಿ ಮೆರವಣಿಗೆಯಲ್ಲಿ ಎಂದಿನಂತೆ ಜನರನ್ನು ನಿಯಂ ತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಬ್ಯಾರಿಕೇಡ್‍ಗಳನ್ನು ತಳ್ಳಿ ಮುಂದೆ ಮುಂದೆ ಬರಲು ಯತ್ನಿಸುತ್ತಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಬ್ಯಾರಿಕೇಡ್‍ಗೆ ತಮ್ಮ ಬಲವನ್ನೆಲ್ಲಾ ಬಿಟ್ಟು ತಳ್ಳಿ ಹಿಡಿದು ಜನರನ್ನು ನಿಯಂತ್ರಿಸುತ್ತಿದ್ದರು. ಜಂಬೂಸವಾರಿ ಮಾರ್ಗದ ಇಕ್ಕೆಲಗಳಲ್ಲಿ ಬೆಳಿಗ್ಗೆಯಿಂದಲೇ ಜಾಗಗಳನ್ನು ಹಿಡಿದು ಕುಳಿತು ಮೆರವಣಿಗೆ ವೀಕ್ಷಿಸಲು ಆಗಮಿಸಿದ್ದ ಜನರಿಗೆ ಈ ಬಾರಿ ಮಳೆರಾಯ ಯಾವುದೇ ತೊಂದರೆ ನೀಡಲಿಲ್ಲ. ಸುಡು ಬಿಸಿಲನ್ನೂ ಲೆಕ್ಕಿಸದೆ ಜನ ಮೆರವಣಿಗೆ ವೀಕ್ಷಿಸಿದರು. ಡಾ.ರಾಜ್‍ಕುಮಾರ್ ಡಾ.ವಿಷ್ಣುವರ್ಧನ್ ಉದ್ಯಾನದ ಬಳಿ ಹಾಕಿದ್ದ…

ಸಮ್ಮಿಶ್ರ ಸರ್ಕಾರ ಸುಭದ್ರ: ಸಿಎಂ
ಮೈಸೂರು

ಸಮ್ಮಿಶ್ರ ಸರ್ಕಾರ ಸುಭದ್ರ: ಸಿಎಂ

October 20, 2018

ಮೈಸೂರು:  ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಭದ್ರವಾಗಿರುತ್ತದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಅಭಿಪ್ರಾಯಪಟ್ಟರು. ಮೈಸೂರಿನ ಚಾಮುಂಡಿಬೆಟ್ಟದ ಪಾದದ ಬಳಿಯ ಸುತ್ತೂರು ಮಠಕ್ಕೆ ತಮ್ಮ ತಂದೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ತಾಯಿ ಶ್ರೀಮತಿ ಚನ್ನಮ್ಮ, ಪತ್ನಿ ಶ್ರೀಮತಿ ಅನಿತಾ ಅವರೊಂದಿಗೆ ಭೇಟಿ ನೀಡಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಜನರ ಆಶೀ ರ್ವಾದವಿದ್ದರೆ ಮುಂದೆ ನಮ್ಮ ನೇತೃತ್ವದಲ್ಲೇ ದಸರಾ ಆಚರಿಸುತ್ತೇವೆ ಎಂದು ಹೇಳುವ ಮೂಲಕ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದರು. ಸುತ್ತೂರು ಶ್ರೀಗಳ ಆಶೀರ್ವಾದ ಪಡೆದಿದ್ದೇನೆ. ಈ ಮಠದಲ್ಲಿ…

ಬಿರು ಬಿಸಿಲಲ್ಲಿ ಬಸವಳಿದ ಜನತೆ
ಮೈಸೂರು, ಮೈಸೂರು ದಸರಾ

ಬಿರು ಬಿಸಿಲಲ್ಲಿ ಬಸವಳಿದ ಜನತೆ

October 20, 2018

ಮೈಸೂರು: ಶುಕ್ರವಾರ ವಿಜಯದಶಮಿ ಜಂಬೂಸವಾರಿ ಮೆರವಣಿಗೆ ನೋಡಲು ಕಾತುರದಿಂದ ಕಾದಿದ್ದ ಜನತೆ ಬಿರು ಬಿಸಿಲಲ್ಲಿ ಬಸವಳಿದರು. ಮೆರವಣಿಗೆಯ ಉದ್ದಕ್ಕೂ ಭಾರೀ ಸಂಖ್ಯೆಯಲ್ಲಿ ಜನತೆ ಸೇರಿದ್ದರು. ಆದರೆ ಬೆಳಿಗ್ಗೆಯಿಂದಲೇ ಜಾಗ ಹಿಡಿದು ಕುಳಿತು ಮೆರವಣಿಗೆ ವೀಕ್ಷಿಸಲು ಆಗಮಿಸಿದ್ದ ಜನರು, ಕಲಾವಿದರು, ಪೊಲೀಸರು ಎಲ್ಲರೂ ಬಿರು ಬಿಸಿಲಿನಿಂದ ಬೆವರಿದರು. ಮೆರವಣಿಗೆ ಉದ್ದಕ್ಕೂ ವಿವಿಧ ಸಂಘಟನೆಗಳು ನೀರಿನ ವ್ಯವಸ್ಥೆ ಮಾಡಿದ್ದವು. ಡಾ.ರಾಜ್ ಸಂಘ, ಮೈಸೂರು ಕನ್ನಡ ವೇದಿಕೆ, ಶ್ರೀ ರಾಜೇಶ್ವರ್ ಪಟೇಲ್ ಗ್ರೂಪ್, ವಾಸವಿ ಯುವ ಜನ ಸಂಘ ಜಂಬೂಸವಾರಿಯಲ್ಲಿ ಭಾಗ…

1 1,323 1,324 1,325 1,326 1,327 1,611
Translate »