ಮೈಸೂರು

ಜೂ.2ರಂದು ಚಿತ್ರಕಲಾ, ಪ್ರಬಂಧ ಸ್ಪರ್ಧೆ
ಮೈಸೂರು

ಜೂ.2ರಂದು ಚಿತ್ರಕಲಾ, ಪ್ರಬಂಧ ಸ್ಪರ್ಧೆ

May 31, 2018

ಮೈಸೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಜಿಲ್ಲಾಡಳಿತದ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೂನ್ 2ರಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಕುಕ್ಕರಹಳ್ಳಿ ಕೆರೆ ಉದ್ಯಾನವನದ ಆವರಣದಲ್ಲಿ ಶಾಲಾ ಮಕ್ಕಳಿಗೆ ಪರಿಸರ ಸಂರಕ್ಷಣೆ ವಿಷಯ ಕುರಿತು ಚಿತ್ರಕಲಾ ಹಾಗೂ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದೆ. ಸ್ಪರ್ಧೆಯ ವಿಷಯ ಪ್ಲಾಸ್ಟಿಕ್ ಮಾಲಿನ್ಯವನ್ನು ತಡೆಯಿರಿಯಾಗಿರುತ್ತದೆ. ಚಿತ್ರಕಲಾ ಸ್ಪರ್ಧೆಯಲ್ಲಿ 1 ರಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸಬಹುದು ಎಂದು ಮೈಸೂರು ನಗರ…

ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭೇಟಿ
ಮೈಸೂರು

ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭೇಟಿ

May 31, 2018

ನಂಜನಗೂಡು:  ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಕೆ.ಎಸ್ ಈಶ್ವರಪ್ಪ ಇಂದು ಸಂಜೆ ಇಲ್ಲಿನ ಪ್ರಸಿದ್ಧ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಜೂನ್ 10ರಂದು ಕೆ.ಎಸ್. ಈಶ್ವರಪ್ಪನವರ ಜನುಮದಿನವಿದ್ದು, ಈ ಹಿನ್ನಲೆಯಲ್ಲಿ ನಂಜುಂಡೇಶ್ವರ ಸನ್ನಿಧಿಯಲ್ಲಿ ಹೋಮ ಹವನಗಳನ್ನು ಏರ್ಪಾಡು ಮಾಡಲು ಆಗಮಿಸಿದ್ದರೆನ್ನಲಾಗಿದೆ. ಸುಮಾರು ಮೂರೂವರೆ ಸಾವಿರಕ್ಕೂ ಹೆಚ್ಚು ಮಹಿಳೆಯರು ಶಿವಮೊಗ್ಗದಿಂದ ಜೂನ್ 9ರಂದು ನಡೆಯಲಿರುವ ಹೋಮದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿ ರುವುದರಿಂದ ಅವರಿಗೆ ವಸತಿ, ಸ್ನಾನ, ಊಟದ ವ್ಯವಸ್ಥೆಗಳ ಬಗ್ಗೆ ಕಾರ್ಯಕರ್ತರು ಮತ್ತು ಅಭಿಮಾನಿಗಳೊಡನೆ ಇದೇ ವೇಳೆ…

ಯುಬಿಯಿಂದ ಕುಡಿಯುವ ನೀರಿನ ಘಟಕ
ಮೈಸೂರು

ಯುಬಿಯಿಂದ ಕುಡಿಯುವ ನೀರಿನ ಘಟಕ

May 31, 2018

ನಂಜನಗೂಡು: ತಾಲೂಕಿನ ತಾಂಡವಪುರ ಕೈಗಾರಿಕಾ ಪ್ರದೇಶದಲ್ಲಿರುವ ಯುಬಿ ಕಂಪನಿಯು (ಯುನೈಟೆಡ್ ಬ್ರೇವರೀಸ್ ಲಿಮಿಟೆಡ್) ಸಾಮಾಜಿಕ ಜವಾಬ್ದಾರಿಯಡಿ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಿ ರುವುದರ ಬಗ್ಗೆ ಶಾಸಕ ಡಾ.ಯತೀಂದ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರು ತಾಲೂಕಿನ ಬಂಚಳ್ಳಿಹುಂಡಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸರ್ಕಾರ ಜನರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುತ್ತಿದ್ದು ಜೊತೆಗೆ ಯುಬಿಯಂತಹ ಕಂಪನಿಗಳು ಸಾಮಾಜಿಕ ಕಳಕಳಿಯಿಂದ ಅನುಕೂಲ ಮಾಡಿ ಕೊಟ್ಟರೆ ಗ್ರಾಮಗಳಿಗೆ ಉತ್ತಮವಾದ ಕೆಲಸ ಮಾಡಬಹುದು ಎಂದರು. ಯುಬಿ ಕಂಪನಿಯವರು ಈ ಭಾಗದ 10…

ಕಾಡಾನೆಗಳಿಂದ ಬಾಳೆ ಬೆಳೆ ನಾಶ
ಮೈಸೂರು

ಕಾಡಾನೆಗಳಿಂದ ಬಾಳೆ ಬೆಳೆ ನಾಶ

May 31, 2018

ಸರಗೂರು:  ಸಮೀಪದ ಹೂವಿನಕೊಳ ಗ್ರಾಮದ ವ್ಯಾಪ್ತಿಯ ಜಮೀನುಗಳಿಗೆ ಕಾಡಾನೆಗಳು ದಾಳಿಯಿಟ್ಟು ಬಾಳೆ ಫಸಲು ನಾಶಪಡಿಸಿವೆ. ಗ್ರಾಮದ ಹೆಚ್.ಎಂ. ಬಸವರಾಜು ಹಾಗೂ ಸಿದ್ದಯ್ಯ ಅವರಿಗೆ ಸೇರಿದ ಎರಡು ಎಕರೆ ಜಮೀನಿನಲ್ಲಿ ಬೆಳೆದ ಬೆಳೆ ಫಸಲನ್ನು ನಾಶಪಡಿಸಿವೆ. ಕಾಡಾನೆಗಳ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿರುವ ಗ್ರಾಮಸ್ಥರು ಆನೆ ಹಾವಳಿ ತಡೆಯಬೇಕು. ಇಲ್ಲವಾದಲ್ಲಿ ಸಂಬಂಧಿಸಿದ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಹಾವು ಕಚ್ಚಿ ಯುವಕ ಸಾವು
ಮೈಸೂರು

ಹಾವು ಕಚ್ಚಿ ಯುವಕ ಸಾವು

May 31, 2018

ಸರಗೂರು: ಹಾವು ಕಚ್ಚಿ ಯುವಕ ನೊಬ್ಬ ಸಾವನ್ನ ಪ್ಪಿರುವ ಘಟನೆ ಸಮೀಪದ ಚೆನ್ನಿ ಪುರ ಗ್ರಾಮದಲ್ಲಿ ನಡೆದಿದೆ. ಯುವ ರೈತ ಮಧು(20) ಮೃತಪಟ್ಟವ. ಗ್ರಾಮದ ಬಳಿಯ ತನ್ನ ಜಮೀನಿನಲ್ಲಿ ದನ-ಕರು ಗಳನ್ನು ಮೇಯಿಸುತ್ತಿದ್ದಾಗ ಹಾವು ಕಚ್ಚಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡ ಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾ ಗದೆ ಮೃತಪಟ್ಟಿದ್ದಾನೆ. ಮಧು ನಿಧನಕ್ಕೆ ಮುಖಂಡ ಸುನೀಲ್ ಕುಮಾರ್, ಪಪಂ ಮಾಜಿ ಸದಸ್ಯ ಶ್ರೀನಿವಾಸ್, ಕರವೇ ಮಾಜಿ ಅಧ್ಯಕ್ಷ ಎಸ್.ಎಂ. ನಾಗೇಂದ್ರ, ತಾಲೂಕು ಛಾಯಾಗ್ರಾಹಕರ ಸಂಘದ ಮಾಜಿ ಅಧ್ಯಕ್ಷ ವನಸಿರಿ…

ರೈತರ ಸಾಲ ಮನ್ನಾ ಸಂಬಂಧ ಅಧಿಕಾರಿಗಳೊಂದಿಗೆ ಸಿಎಂ ಕುಮಾರಸ್ವಾಮಿ ಸುದೀರ್ಘ ಸಮಾಲೋಚನೆ
ಮೈಸೂರು

ರೈತರ ಸಾಲ ಮನ್ನಾ ಸಂಬಂಧ ಅಧಿಕಾರಿಗಳೊಂದಿಗೆ ಸಿಎಂ ಕುಮಾರಸ್ವಾಮಿ ಸುದೀರ್ಘ ಸಮಾಲೋಚನೆ

May 30, 2018

ಬೆಂಗಳೂರು: ವಾಣಿಜ್ಯ , ಸಹಕಾರಿ ಹಾಗೂ ಖಾಸಗಿ ಬ್ಯಾಂಕು ಗಳಲ್ಲಿ ರೈತರು ಪಡೆದಿರುವ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡುವ ನಿರ್ಧಾರ ವನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ತೆಗೆದುಕೊಂಡಿದ್ದಾರೆ. ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ಗೃಹ ಕಚೇರಿ ಕೃಷ್ಣಾದಲ್ಲಿ ಹಿರಿಯ ಅಧಿಕಾರಿ ಗಳೊಟ್ಟಿಗೆ ಸುದೀರ್ಘ ಸಮಾಲೋಚನೆ ನಡೆಸಿದ ನಂತರ ಈ ತೀರ್ಮಾನಕ್ಕೆ ಬಂದಿದ್ದಾರೆ. ಕೃಷಿ ಸಾಲ ಮನ್ನಾ ಕುರಿತಂತೆ ಸಮಾ ಲೋಚನೆ ನಡೆಸಲು ನಾಳೆ ರೈತ ಮುಖಂಡರ ಸಭೆ ಕರೆದಿದ್ದಾರೆ. ಸಭೆಯಲ್ಲಿ ಯಾವ ಯಾವ ರೂಪದಲ್ಲಿ ರೈತರು ಬ್ಯಾಂಕುಗಳಿಂದ…

ಆರಂಭವಾಯಿತು ಜನತಾ ದರ್ಶನ: ಸಂಕಷ್ಟ ಹೇಳಿಕೊಳ್ಳಲು ಬಂದವರಿಗೆ ನೀರು, ಮಜ್ಜಿಗೆ, ಬಿಸ್ಕತ್ ನೀಡಿ ಸಂತೈಸಿ ಅವರ ಅಹವಾಲು ಆಲಿಸಿದ ಸಿಎಂ
ಮೈಸೂರು

ಆರಂಭವಾಯಿತು ಜನತಾ ದರ್ಶನ: ಸಂಕಷ್ಟ ಹೇಳಿಕೊಳ್ಳಲು ಬಂದವರಿಗೆ ನೀರು, ಮಜ್ಜಿಗೆ, ಬಿಸ್ಕತ್ ನೀಡಿ ಸಂತೈಸಿ ಅವರ ಅಹವಾಲು ಆಲಿಸಿದ ಸಿಎಂ

May 30, 2018

ಬೆಂಗಳೂರು:  ನೀರು, ಮಜ್ಜಿಗೆ, ಬಿಸ್ಕತ್ ನೀಡಿ, ಸಾರ್ವ ಜನಿಕ ಕಷ್ಟ ಸುಖಗಳನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಮೊದಲ ಜನತಾ ದರ್ಶನ ಕಾರ್ಯಕ್ರಮದಲ್ಲಿ ಆಲಿಸಿದ್ದಾರೆ. ಮೂರು ಗಂಟೆ ತಡವಾಗಿ ಜನತಾದರ್ಶನ ಕಾರ್ಯಕ್ರಮ ನಡೆಸಿದ ಮುಖ್ಯಮಂತ್ರಿಯವರು, ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಂಡುಹಿಡಿದರೆ, ಇನ್ನು ಕೆಲವು ಸಮಸ್ಯೆಗಳನ್ನು ಬಗೆಹರಿಸುವಂತೆ ಅಧಿಕಾರಿ ಗಳಿಗೆ ಆದೇಶಿಸಿದರು. ಸಾವಿರಕ್ಕೂ ಹೆಚ್ಚು ಅಹವಾಲು ಸಲ್ಲಿಸಿದರು. ಬಹುತೇಕರು ಹಿರಿಯ ನಾಗರಿಕರಾಗಿದ್ದರು. ಅವರೆಲ್ಲರೂ ತಮ್ಮ ಮಾಸಿಕ ವೇತನ ದುಪ್ಪಟ್ಟು ಮಾಡಿ, ಉಚಿತ ವೈದ್ಯಕೀಯ ಸೇವೆ ಕಲ್ಪಿಸಿ, ರಿಯಾಯಿತಿ ಬಸ್…

ಖ್ಯಾತ ಸರೋದ್ ವಾದಕ ಪಂಡಿತ್ ಡಾ.ರಾಜೀವ್ ತಾರಾನಾಥ್‍ರಿಗೆ ಹಂಪಿ ಕನ್ನಡ ವಿವಿಯಿಂದ `ನಾಡೋಜ’ ಗೌರವ ಪದವಿ ಪ್ರದಾನ
ಮೈಸೂರು

ಖ್ಯಾತ ಸರೋದ್ ವಾದಕ ಪಂಡಿತ್ ಡಾ.ರಾಜೀವ್ ತಾರಾನಾಥ್‍ರಿಗೆ ಹಂಪಿ ಕನ್ನಡ ವಿವಿಯಿಂದ `ನಾಡೋಜ’ ಗೌರವ ಪದವಿ ಪ್ರದಾನ

May 30, 2018

ಮೈಸೂರು: ಅಂತಾರಾಷ್ಟ್ರೀಯ ಸರೋದ್ ವಾದಕ ಪಂಡಿತ್ ಡಾ.ರಾಜೀವ್ ತಾರಾನಾಥ್ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾನಿಲ ಯವು ಸೋಮವಾರ ಮೈಸೂರಿನ ಅವರ ನಿವಾಸದಲ್ಲಿ `ನಾಡೋಜ’ ಪದವಿ ನೀಡಿ, ಗೌರವಿಸಿತು. ಮೈಸೂರಿನ ಸರಸ್ವತಿ ಪುರಂನಲ್ಲಿರುವ ಪಂಡಿತ್ ರಾಜೀವ್ ತಾರಾನಾಥ್ ಮನೆಯ ಮುಂದೆ ಇಂದು ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಸಂಗೀತ ಮತ್ತು ಸಾಹಿತ್ಯ ಕ್ಷೇತ್ರದ ಪ್ರಮುಖರ ಸಮ್ಮುಖದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾ ನಿಲಯದ ಕುಲಪತಿ ಡಾ.ಮಲ್ಲಿಕಾ ಎಸ್. ಘಂಟಿ ಅವರು ಪಂಡಿತ್ ಡಾ.ರಾಜೀವ್ ತಾರಾನಾಥ್ ಅವರಿಗೆ ನಾಡೋಜ ಪದವಿ ಪ್ರದಾನ ಮಾಡಿದರು….

ಮಾಲ್‍ಗಳಲ್ಲಿ ವಾಹನ ನಿಲುಗಡೆ ಶುಲ್ಕ ಸಂಗ್ರಹ
ಮೈಸೂರು

ಮಾಲ್‍ಗಳಲ್ಲಿ ವಾಹನ ನಿಲುಗಡೆ ಶುಲ್ಕ ಸಂಗ್ರಹ

May 30, 2018

ಮೈಸೂರು:  ತನ್ನ ವ್ಯಾಪ್ತಿಯಲ್ಲಿ ಬರುವ ಮಾಲ್‍ಗಳು ಹಾಗೂ ಶಾಪಿಂಗ್ ಕಾಂಪ್ಲೆಕ್ಸ್‍ಗಳಲ್ಲಿ ಗ್ರಾಹಕರ ವಾಹನ ನಿಲುಗಡೆಗೆ ಶುಲ್ಕ ಪಾವತಿಸುವಂತಿಲ್ಲ ಎಂದು ನೀಡಿದ್ದ ಮೈಸೂರು ಮಹಾನಗರ ಪಾಲಿಕೆ ಆದೇಶಕ್ಕೆ ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ಬಿಎಂ ಹ್ಯಾಬಿಟೆಟ್ ಮಾಲ್ ಜಂಟಿ ಮಾಲೀಕ ದೀಪಕ್‍ಲುಲ್ಲಾ ತಿಳಿಸಿದ್ದಾರೆ. ಮೈಸೂರಿನ ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಇಂದು ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಅವರು, ಯಾವುದೇ ನೋಟಿಸ್ ನೀಡದೆ ಮೈಸೂರು ಮಹಾ ನಗರ ಪಾಲಿಕೆಯು ಮಾಲ್, ಶಾಪಿಂಗ್ ಕಾಂಪ್ಲೆಕ್ಸ್ ಹಾಗೂ ಎಲ್ಲಾ ಬಗೆಯ…

ಇಂದು, ನಾಳೆ ಬ್ಯಾಂಕ್ ಬಂದ್ : ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ಬ್ಯಾಂಕ್ ನೌಕರರ ಮುಷ್ಕರ
ಮೈಸೂರು

ಇಂದು, ನಾಳೆ ಬ್ಯಾಂಕ್ ಬಂದ್ : ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ಬ್ಯಾಂಕ್ ನೌಕರರ ಮುಷ್ಕರ

May 30, 2018

ಬೆಂಗಳೂರು: ವೇತನ ಪರಿಷ್ಕರಣೆ ಸೇರಿದಂತೆ ಇತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಾಳೆ ಯಿಂದ ಎರಡು ದಿನಗಳ ಕಾಲ ಅಖಿಲ ಭಾರತ ಬ್ಯಾಂಕ್ ಮುಷ್ಕರಕ್ಕೆ ಯುನೈಟೆಡ್ ಫೆÇೀರಂ ಆಫ್ ಬ್ಯಾಂಕ್ ಯೂನಿಯನ್ ಕರೆ ಕೊಟ್ಟಿದೆ. ವೇತನ ಪರಿಷ್ಕರಣೆ ಮಾಡಬೇಕೆಂದು ಈಗಾಗಲೇ ಸಾಕಷ್ಟು ಬಾರಿ ಇಂಡಿಯನ್ ಬ್ಯಾಂಕ್ ಅಸೋಸಿ ಯೇಷನ್ ಜೊತೆಗೆ ಮಾತುಕತೆ ನಡೆದಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಸರ್ಕಾರ ಮಧ್ಯಪ್ರವೇಶ ಮಾಡಿ ವೇತನ ಪರಿ ಷ್ಕರಣೆ ಮಾಡಬೇಕೆಂದು ಒತ್ತಾಯ ಮಾಡಿದ್ದಾರೆ. ಬ್ಯಾಂಕ್ ನೌಕರರು ಮುಷ್ಕರಕ್ಕೆ ಕರೆ ನೀಡಿರುವ…

1 1,321 1,322 1,323 1,324 1,325 1,353