ಮೈಸೂರು

ಸಾಲ ಮನ್ನಾ ಸಂಬಂಧ ಭಿನ್ನ ಅಭಿಪ್ರಾಯಗಳು
ಮೈಸೂರು

ಸಾಲ ಮನ್ನಾ ಸಂಬಂಧ ಭಿನ್ನ ಅಭಿಪ್ರಾಯಗಳು

May 31, 2018

ಬೆಂಗಳೂರು:  ರೈತರ ಸಂಪೂರ್ಣ ಕೃಷಿ ಸಾಲ ಮನ್ನಾಕ್ಕೆ ಇಂದು ವಿಧಾನಸೌಧದಲ್ಲಿ ಕರೆದಿದ್ದ ರೈತರ ಸಭೆಯಲ್ಲಿ ವಿಭಿನ್ನ ಅಭಿಪ್ರಾಯ ವ್ಯಕ್ತವಾಯಿತು. ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮಾತನಾಡಿ, ಸಾಲ ಮನ್ನಾಕ್ಕೆ ನಮ್ಮ ವಿರೋಧವಿಲ್ಲ ಎಂದು ಸಭೆಗೆ ಸ್ಪಷ್ಟ ಪಡಿಸಿದರು. ಕೊಳವೆಬಾವಿ, ಟ್ರ್ಯಾಕ್ಟರ್ ಸೇರಿದಂತೆ ಇತರ ಸಾಲಗಳ ಬಗ್ಗೆ ಇನ್ನೆರಡು ಮೂರು ದಿನಗಳಲ್ಲಿ ಚರ್ಚಿಸಿ 2ನೇ ಫೇಸ್‍ನಲ್ಲಿ ಮನ್ನಾ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು.ಸರ್ಕಾರ ರೈತರ ಸಮಸ್ಯೆ ಪರಿಹಾರಕ್ಕೆ ಬದ್ಧವಾಗಿದೆ, ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದರು….

ನದಿ ಮೂಲದಿಂದಲೇ ಹಳ್ಳಿಗಳಿಗೆ ಕುಡಿಯುವ ನೀರು ಕಲ್ಪಿಸಲು ತೀರ್ಮಾನ
ಮೈಸೂರು

ನದಿ ಮೂಲದಿಂದಲೇ ಹಳ್ಳಿಗಳಿಗೆ ಕುಡಿಯುವ ನೀರು ಕಲ್ಪಿಸಲು ತೀರ್ಮಾನ

May 31, 2018

ಬೆಂಗಳೂರು: ರಾಜ್ಯದ ಎಲ್ಲಾ ಹಳ್ಳಿಗಳಿಗೆ ನದಿ ಪಾತ್ರದಿಂದ ನೀರು ಹರಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ಘೋಷಣೆ ಮಾಡಿದ್ದಾರೆ. ಕೃಷಿ ಸಾಲ ಮನ್ನಾ ಸಂಬಂಧ ರೈತರ ಅಭಿಪ್ರಾಯ ಸಭೆ ನಂತರ ಮಾತನಾಡಿದ ಅವರು, ಈ ಯೋಜನೆಗೆ 30 ರಿಂದ 40 ಸಾವಿರ ಕೋಟಿ ರೂ. ವೆಚ್ಚ ತಗುಲಲಿದೆ ಎಂದರು. ಈ ನಿರ್ಧಾರವನ್ನು ಏಕಾಏಕಿ ಪ್ರಕಟಿಸುತ್ತಿರುವುದಕ್ಕೆ ಪಕ್ಕದಲ್ಲೇ ಕುಳಿತಿದ್ದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರ ಕ್ಷಮೆ ಯಾಚಿಸಿ, ಗ್ರಾಮೀಣ ಭಾಗದ ಜನತೆಗೆ ಶುದ್ಧ ಕುಡಿಯುವ ನೀರು ಕಲ್ಪಿಸಲು…

‘ಯಶಸ್ವಿನಿ’ ಮುಂದುವರಿಕೆ
ಮೈಸೂರು

‘ಯಶಸ್ವಿನಿ’ ಮುಂದುವರಿಕೆ

May 31, 2018

ಬೆಂಗಳೂರು:  ಗ್ರಾಮೀಣ ಕೃಷಿಕರ ಆರೋಗ್ಯ ರಕ್ಷಾ ಕವಚವಾದ ಯಶಸ್ವಿನಿ ಯೋಜನೆ ಮುಂದುವರಿಸಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಇಂದಿಲ್ಲಿ ತುರ್ತು ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿರುವುದಲ್ಲದೆ, ಮೇ 31 ಕ್ಕೆ ಕೊನೆಗೊಳ್ಳಲಿದ್ದ ಯೋಜನೆಯನ್ನು ಮುಂದುವರಿಸಲು ನಿರ್ಧರಿಸಲಾಗಿದೆ. ರೈತರು ಮತ್ತು ಗ್ರಾಮೀಣ ಜನತೆಯ ಒತ್ತಾಯಕ್ಕೆ ಮಣ ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ. ಯಶಸ್ವಿನಿ ಯೋಜನೆಯನ್ನು ಆರೋಗ್ಯ ಖಾತರಿ ಯೋಜನೆಯಲ್ಲಿ ವಿಲೀನಗೊಳಿಸದಿರಲು ತೀರ್ಮಾನ ಕೈಗೊಂಡಿದ್ದಾರೆ. ಆರೋಗ್ಯ ಯೋಜನೆ ಜತೆ ಯಶಸ್ವಿನಿ ಯೋಜನೆ ಮುಂದುವರೆಸುವ ತೀರ್ಮಾನ ಮಾಡಿ…

ವೇತನ ಪರಿಷ್ಕರಣೆಗೆ ಆಗ್ರಹಿಸಿ: ದೇಶವ್ಯಾಪಿ ಬ್ಯಾಂಕ್ ನೌಕರರ ಎರಡು ದಿನಗಳ ಮುಷ್ಕರ ಆರಂಭ
ಮೈಸೂರು

ವೇತನ ಪರಿಷ್ಕರಣೆಗೆ ಆಗ್ರಹಿಸಿ: ದೇಶವ್ಯಾಪಿ ಬ್ಯಾಂಕ್ ನೌಕರರ ಎರಡು ದಿನಗಳ ಮುಷ್ಕರ ಆರಂಭ

May 31, 2018

ಮೈಸೂರು:  ವೇತನ ಪರಿಷ್ಕರಣೆಯೂ ಸೇರಿದಂತೆ ಹಲವು ಬಾಕಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬ್ಯಾಂಕ್ ನೌಕರರು ಇಂದಿನಿಂದ ಎರಡು ದಿನಗಳ ಕಾಲದ ಮುಷ್ಕರವನ್ನು ದೇಶಾದ್ಯಂತ ಆರಂಭಿಸಿದ್ದಾರೆ. ಅಖಿಲ ಭಾರತ ಬ್ಯಾಂಕ್ ನೌಕರರ ಸಂಘಗಳ ಒಕ್ಕೂಟ ಕರೆ ನೀಡಿರುವ ಮುಷ್ಕರಕ್ಕೆ ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ ರಾಷ್ಟ್ರೀಕೃತ ಬ್ಯಾಂಕ್ ನೌಕರರು ಹಾಗೂ ಅಧಿಕಾರಿಗಳಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಪರಿಣಾಮ ಬ್ಯಾಂಕ್ ಶಾಖೆಗಳು ಬಂದ್ ಆಗಿರುವುದರಿಂದ ಆರ್ಥಿಕ ಹಾಗೂ ವಾಣ ಜ್ಯ ವ್ಯವಹಾರಗಳು ಸಂಪೂರ್ಣ ಸ್ಥಗಿತಗೊಂಡಿವೆ. ಮೈಸೂರಿನ ಟಿಕೆ ಬಡಾವಣೆಯ ಶ್ರೀಕೃಷ್ಣಧಾಮದ…

ಗ್ರಾಹಕರ ತೀವ್ರ ಅಸಮಾಧಾನ
ಮೈಸೂರು

ಗ್ರಾಹಕರ ತೀವ್ರ ಅಸಮಾಧಾನ

May 31, 2018

ಮೈಸೂರು: ದೇಶವ್ಯಾಪಿ 2 ದಿನ ಬ್ಯಾಂಕ್ ನೌಕರರು ಮುಷ್ಕರದಲ್ಲಿ ನಿರತರಾಗಿರುವುದ ರಿಂದ ಬ್ಯಾಂಕ್ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದ್ದು, ಗ್ರಾಹಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮ್ಮ ದಿನ ನಿತ್ಯದ ವ್ಯಾಪಾರ- ವಹಿವಾಟಿಗೆ ತೊಂದರೆಯಾಗುವುದಲ್ಲದೆ, ಸಗಟು ವ್ಯಾಪಾರಸ್ಥರಿಂದ ತರಿಸಿದ ಸರಕಿಗೆ ಬ್ಯಾಂಕ್ ಮೂಲಕ ಹಣ ವರ್ಗಾವಣೆ ಮಾಡಲು ಸಾಧ್ಯವಾಗುತ್ತಿಲ್ಲ. ಮುಷ್ಕರ ಇಡೀ ಆರ್ಥಿಕ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಹೆಬ್ಬಾಳಿನ ಲೇಖನ ಸಾಮಗ್ರಿ ಹಾಗೂ ತಾರಸಿ ಮೌಲ್ಡಿಂಗ್ ಚಾಪೆ ವ್ಯಾಪಾರಿ ಕೆ.ಕಾಂತರಾಜು ಅಭಿಪ್ರಾಯಪಟ್ಟಿದ್ದಾರೆ. ಇಟ್ಟಿಗೆ ಕಾರ್ಖಾನೆ ಮತ್ತು…

ವಿಧಾನಸಭೆಯಿಂದ ಪರಿಷತ್‍ಗೆ ಚುನಾವಣೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿ ಪ್ರಕಟ
ಮೈಸೂರು

ವಿಧಾನಸಭೆಯಿಂದ ಪರಿಷತ್‍ಗೆ ಚುನಾವಣೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿ ಪ್ರಕಟ

May 31, 2018

ಬೆಂಗಳೂರು: ವಿಧಾನಸಭೆ ಯಿಂದ ವಿಧಾನ ಪರಿಷತ್‍ನ 11 ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ತಮ್ಮ ಅಭ್ಯರ್ಥಿ ಗಳನ್ನು ಪ್ರಕಟಿಸಿದೆ. ಕಾಂಗ್ರೆಸ್ ತನ್ನ ಪಾಲಿನ ನಾಲ್ಕು ಸ್ಥಾನಗಳಿಗೆ ಸಿ.ಎಂ.ಇಬ್ರಾಹಿಂ, ಕೆ.ಗೋವಿಂದರಾಜ್, ಅರವಿಂದ ಕುಮಾರ್ ಎಸ್.ಅರಳಿ ಮತ್ತು ಕೆ.ಹರೀಶ್ ಕುಮಾರ್ ಅಭ್ಯರ್ಥಿಗಳನ್ನಾಗಿ ಘೋಷಿಸಿದೆ. ಇನ್ನು ಬಿಜೆಪಿ ತನ್ನ ಪಾಲಿಗೆ ಬರುವ 5 ಸ್ಥಾನಕ್ಕೆ ಕೆ.ಪಿ.ನಂಜುಂಡಿ, ತೇಜಸ್ವಿನಿಗೌಡ, ಎಸ್.ರುದ್ರೇ ಗೌಡ, ಎನ್.ರವಿಕುಮಾರ್ ಹಾಗೂ ರಘುನಾಥ್ ಮಲ್ಕಾಪುರೆ ಅವರನ್ನು ಆಯ್ಕೆ ಮಾಡಿದೆ. ಜೆಡಿಎಸ್ ತನ್ನ ಪಾಲಿಗೆ ದಕ್ಕುವ ಎರಡು…

ರೈತರಿಂದಲೇ ಗದ್ದಲ: ಸಿಎಂ ಎಚ್ಚರಿಕೆ…
ಮೈಸೂರು

ರೈತರಿಂದಲೇ ಗದ್ದಲ: ಸಿಎಂ ಎಚ್ಚರಿಕೆ…

May 31, 2018

ಬೆಂಗಳೂರು: ರೈತರ ಸಾಲ ಮನ್ನಾಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿ ಕರೆದಿದ್ದ ರೈತ ಮುಖಂಡರ ಸಭೆಯಲ್ಲಿ ಗದ್ದಲ, ಆರೋಪ, ಪ್ರತ್ಯಾ ರೋಪ, ವಾಕ್ಸಮರವೇ ನಡೆಯಿತು. ರೈತ ಮುಖಂಡರೇ ಗದ್ದಲ ಎಬ್ಬಿಸಿ ಕೆಲ ಕಾಲ ಗೊಂದಲದ ವಾತಾವರ ಣಕ್ಕೆ ಕಾರಣರಾದರು. ಇದರಿಂದ ಸಿಟ್ಟಿಗೆದ್ದ ಮುಖ್ಯ ಮಂತ್ರಿ ಕುಮಾರ ಸ್ವಾಮಿ, ಇಲ್ಲೇನು ಜಾತ್ರೆ ಮಾಡೋದಕ್ಕೆ ಕರೆಸಿದ್ದೀನಾ ನಿಮ್ಮನ್ನಾ? ಕಿತಾಪತಿ ಮಾಡೋಕೆ ಬಂದಿದ್ದೀರಾ, ರಾಜಕೀಯ ಮಾಡೋಕ್ಕೆ ಬಂದಿದ್ದೀರಾ, ಗದ್ದಲ ಮಾಡುವುದಾದರೆ ಕಬ್ಬನ್ ಪಾರ್ಕ್ ಮುಂದೆ ಹೋಗಿ ಕುಳಿತುಕೊಳ್ಳಿ ಎಂದು ಗದರಿಸಿದರು….

ಮುಖ್ಯಮಂತ್ರಿಯಿಂದ ರೈತ ಸಮುದಾಯಕ್ಕೆ ಅನ್ಯಾಯ
ಮೈಸೂರು

ಮುಖ್ಯಮಂತ್ರಿಯಿಂದ ರೈತ ಸಮುದಾಯಕ್ಕೆ ಅನ್ಯಾಯ

May 31, 2018

ಬೆಂಗಳೂರು: ರೈತರ ಸಾಲಮನ್ನಾಕ್ಕೆ 15 ದಿವಸ ಕಾಲಾವಕಾಶ ಬೇಕೆಂದು ಸಿಎಂ ಕುಮಾರಸ್ವಾಮಿ ಉಲ್ಲೇಖಿಸುತ್ತಿರುವುದು ರೈತ ಸಮುದಾಯಕ್ಕೆ ಮಾಡುತ್ತಿರುವ ಅನ್ಯಾಯ ಮಾಜಿ ಸಿಎಂ ಯಡಿಯೂರಪ್ಪ ಆರೋ ಪಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಸಾಲ ಮನ್ನಾ ಘೋಷಣೆ ಕುರಿತು ಸ್ಪಷ್ಟ ನಿರ್ಧಾರಕ್ಕೆ ಬರುವಲ್ಲಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಮೀನಾ-ಮೇಷ ಎಣ ಸುತ್ತಿದೆ. ರೈತ ಕಲ್ಯಾಣದ ಹೆಸರು ಹೇಳಿಕೊಂಡು ಅಧಿಕಾರ ಗಿಟ್ಟಿಸಿಕೊಂಡಿರುವ ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಸರ್ಕಾರ ಇಂದು ರೈತರಿಗೆ ಮೋಸ ಮಾಡಲು ಹೊರಟಿದೆ ಎಂದು ಆಪಾದಿಸಿದರು.

ವಿದ್ವತ್ ಮೇಲಿನ ಹಲ್ಲೆ ಪ್ರಕರಣ
ಮೈಸೂರು

ವಿದ್ವತ್ ಮೇಲಿನ ಹಲ್ಲೆ ಪ್ರಕರಣ

May 31, 2018

ಬೆಂಗಳೂರು: ವಿದ್ವತ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಬೆಂಗಳೂರು ಶಾಂತಿನಗರ ಶಾಸಕ ಹ್ಯಾರೀಸ್ ಪುತ್ರ ಮೊಹಮ್ಮದ್ ನಲ ಪಾಡ್ ಜಾಮೀನು ಅರ್ಜಿಯನ್ನು 63ನೇ ಸೆಷನ್ಸ್ ನ್ಯಾಯಾಲಯ ಬುಧವಾರ ಎರಡನೇ ಬಾರಿ ವಜಾಗೊಳಿಸಿದೆ. ಇದೊಂದು ಕೊಲೆ ಯತ್ನ ಪ್ರಕರಣವಾಗಿದ್ದು, ಬೆಂಗಳೂರಿನ ಲ್ಲಿಯೇ ಭೀತಿ ಹುಟ್ಟಿಸುವ ಘಟನೆಯಾ ಗಿತ್ತು. ಆರೋಪಿ ಪ್ರಭಾವಿ ವ್ಯಕ್ತಿಯಾಗಿರು ವುದರಿಂದ ಹೊರಬಂದರೆ ಸಾಕ್ಷಿಗಳನ್ನು ನಾಶಪಡಿಸುವ, ಸಾಕ್ಷಿಗಳಿಗೆ ಬೆದರಿಕೆಯೊ ಡ್ಡುವ ಸಾಧ್ಯತೆ ಇರುವುದರಿಂದ ಮತ್ತು ವೈದ್ಯಕೀಯ ವರದಿಗಳನ್ನು ನಾಶಪಡಿಸುವ ಸಾಧ್ಯತೆ ಇರುವುದರಿಂದ ನಲಪಾಡ್‍ಗೆ ಜಾಮೀನು…

ಪರಿಸರ ದಿನಾಚರಣೆ ಪೂರ್ವಭಾವಿ ಸಭೆ: ಪ್ಲಾಸ್ಟಿಕ್ ಬಳಕೆ ನಿಷೇಧ, ಪರಿಸರ ಸಂರಕ್ಷಣೆ ಇಂದಿನ ತುರ್ತು ಅನಿವಾರ್ಯ
ಮೈಸೂರು

ಪರಿಸರ ದಿನಾಚರಣೆ ಪೂರ್ವಭಾವಿ ಸಭೆ: ಪ್ಲಾಸ್ಟಿಕ್ ಬಳಕೆ ನಿಷೇಧ, ಪರಿಸರ ಸಂರಕ್ಷಣೆ ಇಂದಿನ ತುರ್ತು ಅನಿವಾರ್ಯ

May 31, 2018

ಮೈಸೂರು: ಪರಿಸರ ಸಂರಕ್ಷಣೆ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತಂತೆ ಜನಜಾಗೃತಿ ಮೂಡಿಸುವುದು ಅಗತ್ಯವಿದ್ದು, ಈ ಬಗ್ಗೆ ಜೂನ್ ತಿಂಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಪರಿಸರ ದಿನಾಚರಣೆ ಕುರಿತು ಪೂರ್ವಭಾವಿ ಸಭೆಯಲ್ಲಿ ವಿವಿಧ ಇಲಾಖೆಗಳ ಮೂಲಕ ಪರಿಸರ ಜಾಗೃತಿಗೆ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಸೂಚನೆ ನೀಡಿದರು. ಶಾಲಾ ಕಾಲೇಜುಗಳಲ್ಲಿ ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಹಾಗೂ ಪರಿಸರ ಸಂರಕ್ಷಣೆಯ ಅಗತ್ಯತೆ ಬಗ್ಗೆ ವಿದ್ಯಾರ್ಥಿಗಳ ಮೂಲಕ…

1 1,319 1,320 1,321 1,322 1,323 1,353