ಸಮ್ಮಿಶ್ರ ಸರ್ಕಾರ ಸುಭದ್ರ: ಸಿಎಂ
ಮೈಸೂರು

ಸಮ್ಮಿಶ್ರ ಸರ್ಕಾರ ಸುಭದ್ರ: ಸಿಎಂ

October 20, 2018

ಮೈಸೂರು:  ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಭದ್ರವಾಗಿರುತ್ತದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಅಭಿಪ್ರಾಯಪಟ್ಟರು. ಮೈಸೂರಿನ ಚಾಮುಂಡಿಬೆಟ್ಟದ ಪಾದದ ಬಳಿಯ ಸುತ್ತೂರು ಮಠಕ್ಕೆ ತಮ್ಮ ತಂದೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ತಾಯಿ ಶ್ರೀಮತಿ ಚನ್ನಮ್ಮ, ಪತ್ನಿ ಶ್ರೀಮತಿ ಅನಿತಾ ಅವರೊಂದಿಗೆ ಭೇಟಿ ನೀಡಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಜನರ ಆಶೀ ರ್ವಾದವಿದ್ದರೆ ಮುಂದೆ ನಮ್ಮ ನೇತೃತ್ವದಲ್ಲೇ ದಸರಾ ಆಚರಿಸುತ್ತೇವೆ ಎಂದು ಹೇಳುವ ಮೂಲಕ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದರು.

ಸುತ್ತೂರು ಶ್ರೀಗಳ ಆಶೀರ್ವಾದ ಪಡೆದಿದ್ದೇನೆ. ಈ ಮಠದಲ್ಲಿ ಉಪಾಹಾರ ಸೇವಿಸುತ್ತಿರುವುದು ಸಂತೋಷ ತಂದಿದೆ. ಸಂಪ್ರದಾಯದಂತೆ ವಿಜಯದಶಮಿ ದಿನದಂದು ಸುತ್ತೂರು ಶ್ರೀಗಳು ಸುತ್ತೂರು ಮಠದಲ್ಲೇ ಉಪಾಹಾರ ಆಯೋಜನೆ ಮಾಡಿಸುತ್ತಾರೆ. ಇಲ್ಲಿಗೆ ಭೇಟಿ ನೀಡಿರುವುದೇ ನಮ್ಮ ಪುಣ್ಯ ಎಂದರು.

ಸಂತಾಪ: ರಾಜಮಾತೆ ಪ್ರಮೋದಾದೇವಿ ಒಡೆಯರ್ ತಾಯಿ ನಿಧನಕ್ಕೆ ಸಂತಾಪ ಸೂಚಿಸಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಪ್ರಮೋದಾದೇವಿ ಅವರಿಗೆ ಮತ್ತು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಹೇಳಿದರು.

Translate »