ಮೈಸೂರು

ಮೈಸೂರು ಕಾಂಗ್ರೆಸ್‍ನಿಂದ ದಸರಾ ಬಹಿಷ್ಕಾರ
ಮೈಸೂರು

ಮೈಸೂರು ಕಾಂಗ್ರೆಸ್‍ನಿಂದ ದಸರಾ ಬಹಿಷ್ಕಾರ

October 15, 2018

ಮೈಸೂರು: ಈ ಬಾರಿ ದಸರಾ ಮಹೋತ್ಸವವನ್ನು ನಾವು ಬಹಿಷ್ಕರಿಸಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಅವರಿಗೆ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹೇಳಿದರು. ಮೈಸೂರು ದಸರಾ ಸಾಂಸ್ಕೃತಿಕ ಮೆರವಣಿಗೆ ಉದ್ಘಾಟಿಸಲು ನಗರಕ್ಕೆ ಆಗಮಿಸಿದ್ದ ಡಾ.ಜಿ.ಪರಮೇಶ್ವರ್ ಇಂದು ಮಧ್ಯಾಹ್ನ 1.30ರ ವೇಳೆಯಲ್ಲಿ ಸರ್ಕಾರಿ ಅತಿಥಿ ಗೃಹ ದಲ್ಲಿ ಕಾಂಗ್ರೆಸ್ ಮುಖಂಡರ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಈ ಬಾರಿ ದಸರಾದಲ್ಲಿ ನಮ್ಮನ್ನು (ಕಾಂಗ್ರೆ ಸ್ಸಿಗರು) ಕಡೆಗಣಿಸಲಾಗಿದೆ….

ಮೈಸೂರು ಅರಮನೆ ಆವರಣದಲ್ಲಿ ದಸರಾ ಯೋಗೋತ್ಸವ
ಮೈಸೂರು, ಮೈಸೂರು ದಸರಾ

ಮೈಸೂರು ಅರಮನೆ ಆವರಣದಲ್ಲಿ ದಸರಾ ಯೋಗೋತ್ಸವ

October 15, 2018

ಮೈಸೂರು:  ಬಾನಂಗಳದಲ್ಲಿ ಭಾಸ್ಕರನ ಆಗಮನದ ಕ್ಷಣಗಳ ಮುಸು ಕಿನ ಮುಂಜಾನೆಯಲ್ಲಿ ಯೋಗದ ಸುಯೋಗದಲ್ಲಿ ನೂರಾರು ಮಂದಿ ಮಿಂದೆದ್ದರು. ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಯೋಗ ದಸರಾ ಉಪಸಮಿತಿ ವತಿಯಿಂದ ಭಾನು ವಾರ ಅರಮನೆಯ ಅಂಗಳದಲ್ಲಿ ಏರ್ಪಡಿಸಿದ್ದ ದಸರಾ ಯೋಗೋತ್ಸವದಲ್ಲಿ ಈ ದೃಶ್ಯಾವಳಿ ಮನಸೂರೆಗೊಂಡಿತು. ನೂರಾರು ಯೋಗಪಟುಗಳನ್ನು ಒಳಗೊಂಡ ಈ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹಾಗೂ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಯೋಗ ಭಂಗಿಯಲ್ಲಿ ತಲ್ಲೀನರಾಗಿ ಗಮನ ಸೆಳೆದರು….

ದಸರಾ ವಿಶೇಷ: ರಾಜ್ಯ  ಮಟ್ಟದ ಯೋಗಾಸನ ಸ್ಪರ್ಧೆ
ಮೈಸೂರು, ಮೈಸೂರು ದಸರಾ

ದಸರಾ ವಿಶೇಷ: ರಾಜ್ಯ  ಮಟ್ಟದ ಯೋಗಾಸನ ಸ್ಪರ್ಧೆ

October 15, 2018

ಮೈಸೂರು: ದಸರಾ ಮಹೋತ್ಸವ ಅಂಗವಾಗಿ ಯೋಗ ದಸರಾ ಉಪ ಸಮಿತಿ ವತಿಯಿಂದ ಮೈಸೂರಿನ ವಸ್ತುಪ್ರದರ್ಶನ ಪ್ರಾಧಿಕಾರ ಆವರಣದ ಪಿ.ಕಾಳಿಂಗರಾವ್ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿಶೇಷ ಮಕ್ಕಳು ಹಾಗೂ ವಿಶೇಷ ಚೇತನರು ಪಾಲ್ಗೊಂಡು ಗಮನ ಸೆಳೆದರು. 9 ವಿಭಾಗಗಳಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ನಡೆದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಒಟ್ಟಾರೆಯಾಗಿ ಸುಮಾರು 800 ಯೋಗಪಟುಗಳು ಭಾಗವಹಿಸಿದ್ದರು. ಮೈಸೂರು ರಾಮಕೃಷ್ಣನಗರದ ನಿರೀಕ್ಷೆ ಶಾಲೆಯ ವಿಶೇಷ…

ನೆರೆದವರ ಮೂಕ ವಿಸ್ಮಿತಗೊಳಿಸಿದ ಅಂಧ ಮಕ್ಕಳ ಯೋಗ ಪ್ರದರ್ಶನ
ಮೈಸೂರು, ಮೈಸೂರು ದಸರಾ

ನೆರೆದವರ ಮೂಕ ವಿಸ್ಮಿತಗೊಳಿಸಿದ ಅಂಧ ಮಕ್ಕಳ ಯೋಗ ಪ್ರದರ್ಶನ

October 15, 2018

ಮೈಸೂರು:  ಅಂಧ ತನವಿದ್ದರೇನು, ಅಂತರಂಗದ ಕಣ್ಣುಗಳ ಪ್ರಖರತೆಯ ಶಕ್ತಿಯಿಂದ ಆ ವಿಶೇಷ ಮಕ್ಕಳು ದಸರಾ ಯೋಗೋತ್ಸವದಲ್ಲಿ ಯಾವುದೇ ಆಯಾಸ, ಅಡ್ಡಿ-ಆತಂಕ ವಿಲ್ಲದೆ, ನಿರರ್ಗಳವಾಗಿ ಕಠಿಣ ಯೋಗಾ ಸನದ ಭಂಗಿಗಳನ್ನು ಪ್ರದರ್ಶಿಸುವ ಮೂಲಕ ನೆರೆದವರಲ್ಲಿ ಅಚ್ಚರಿ ಮೂಡಿಸಿ ರೋಮಾಂಚನಗೊಳಿಸಿದರು. ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ-ಆಲೂರ ಗ್ರಾಮದ ಜ್ಞಾನಸಿಂಧು ಅಂಧ ಮಕ್ಕಳ ವಸತಿಯುತ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಇಂತಹ ರೋಚಕ ಕ್ಷಣಗಳನ್ನು ಅನಾವರಣಗೊಳಿಸಿದರು. ಯೋಗೋತ್ಸವದಲ್ಲಿದ್ದ ಎಲ್ಲಾ ಆಸನ ಗಳನ್ನು ಯಾವುದೇ ಅಡ್ಡಿ ಇಲ್ಲದಂತೆ ಪ್ರದರ್ಶಿಸಿ, ಅಚ್ಚರಿ ಮೂಡಿಸಿದರು. ಪತ್ರಿಕೆಯೊಂದಿಗೆ…

ದಸರಾ ಮ್ಯಾರಥಾನ್‍ನಲ್ಲಿ ಸಾವಿರಾರು ಸ್ಪರ್ಧಿಗಳು ಭಾಗಿ
ಮೈಸೂರು, ಮೈಸೂರು ದಸರಾ

ದಸರಾ ಮ್ಯಾರಥಾನ್‍ನಲ್ಲಿ ಸಾವಿರಾರು ಸ್ಪರ್ಧಿಗಳು ಭಾಗಿ

October 15, 2018

ಮೈಸೂರು:  ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಮೈಸೂರು ಜಿಲ್ಲಾಡಳಿತ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯೋಜಿಸಿದ್ದ ಮ್ಯಾರಥಾನ್ (ದಸರಾ ಓಟ ಸ್ಪರ್ಧೆ)ನಲ್ಲಿ ಸಾವಿರಾರು ಮಂದಿ ಓಡುವ ಮೂಲಕ ಓಟದಿಂದ ಆರೋಗ್ಯ ವೃದ್ಧಿ ಎಂದು ಸಾರಿದರು. ಮೈಸೂರು ವಿಶ್ವವಿದ್ಯಾನಿಲಯದ ಓವಲ್ ಕ್ರೀಡಾಂಗಣ ಬಳಿ ಯುವರಾಜ ಕಾಲೇಜು ಬಳಿ ಸಣ್ಣ ಕೈಗಾರಿಕಾ ಸಚಿವ ಎಸ್.ಆರ್. ಶ್ರೀನಿವಾಸ್ ಹಸಿರು ನಿಶಾನೆ ತೋರಿಸಿ ದಸರಾ ಓಟ ಸ್ಪರ್ಧೆಗೆ ಚಾಲನೆ ನೀಡಿ ದರು. ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ…

ಮುಗ್ಗರಿಸಿ ಬಿದ್ದ ಸಚಿವ ಜಿಟಿಡಿ
ಮೈಸೂರು, ಮೈಸೂರು ದಸರಾ

ಮುಗ್ಗರಿಸಿ ಬಿದ್ದ ಸಚಿವ ಜಿಟಿಡಿ

October 15, 2018

ಮೈಸೂರು:  ದಸರಾ ಮ್ಯಾರಥಾನ್‍ನಲ್ಲಿ ಅತ್ಯುತ್ಸಾಹದಿಂದ ಸ್ಪರ್ಧಿಗಳಿಗೆ ಉತ್ಸಾಹ ತುಂಬುತ್ತಿದ್ದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಹಿರಿಯರ ವಿಭಾಗದಲ್ಲಿ ಓಡಲು ಹೋಗಿ ಮುಗ್ಗರಿಸಿ ಬಿದ್ದ ಘಟನೆಯೂ ನಡೆಯಿತು. ಅದೃಷ್ಟವಶಾತ್ ಯಾವುದೇ ಗಾಯವಾಗಲಿಲ್ಲ. ಸಚಿವರು, ಯುವರಾಜ ಕಾಲೇಜು ಬಳಿ ಒಂದೊಂದೇ ವಿಭಾಗದ ಸ್ಪರ್ಧಿಗಳಿಗೆ ತಮ್ಮದೇ ಭರವಸೆ ಮಾತುಗಳ ಮೂಲಕ ಉತ್ಸಾಹ ತುಂಬಿ ಸ್ಪರ್ಧೆಗೆ ಚಾಲನೆ ನೀಡುತ್ತಿದ್ದರು. ಅವರು ಆಟದಲ್ಲಿ ಎಷ್ಟು ಉತ್ಸಾಹದಿಂದ ಪಾಲ್ಗೊಂಡಿದ್ದರೆಂದರೆ ಅವರ ಪ್ರತಿಯೊಂದು ಮಾತುಗಳು ಸ್ಪರ್ಧಿಗಳಲ್ಲಿ ಇನ್ನಷ್ಟು ಉತ್ಸಾಹ ತುಂಬುವಂತಿತ್ತು. ಸ್ಪರ್ಧೆಯ ಕೊನೆಯ ವಿಭಾಗವಾದ ಹಿರಿಯರ…

ಜಯದೇವದಲ್ಲಿ ನೂರಾರು ಮಂದಿಗೆ ಯಶಸ್ವಿ ಆಂಜಿಯೋಪ್ಲಾಸ್ಟಿ ಕಾರ್ಯಾಗಾರ
ಮೈಸೂರು

ಜಯದೇವದಲ್ಲಿ ನೂರಾರು ಮಂದಿಗೆ ಯಶಸ್ವಿ ಆಂಜಿಯೋಪ್ಲಾಸ್ಟಿ ಕಾರ್ಯಾಗಾರ

October 15, 2018

ಮೈಸೂರು: ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಕಳೆದ 5 ದಿನಗಳಲ್ಲಿ 225 ಹೃದ್ರೋಗಿಗಳಿಗೆ ಉಚಿತವಾಗಿ ಆಂಜಿಯೋ ಪ್ಲಾಸ್ಟಿ ಮಾಡಿರುವುದು ಮತ್ತೊಂದು ದಾಖಲೆಯಾಗಿದೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಪದ್ಮಶ್ರೀ ಡಾ. ಸಿ.ಎನ್. ಮಂಜುನಾಥ್ ತಿಳಿಸಿದರು. ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆ ಯಲ್ಲಿ ನಡೆದ ಇಂಡೋ ಅಮೇರಿಕನ್ ಆಂಜಿಯೋಪ್ಲಾಸ್ಟಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ಯಾವ ರಾಜ್ಯದಲ್ಲಿಯೂ ಉಚಿತ ವಾಗಿ ಆಂಜಿಯೋಪ್ಲಾಸ್ಟಿ ಕಾರ್ಯಾಗಾರ ನಡೆಸುತ್ತಿಲ್ಲ. ಆದರೆ ಅಮೇರಿಕದಲ್ಲಿ ನೆಲೆಸಿ ರುವ ಡಾ. ಸುಬ್ರಮಣಿಯವರ ಸೇವಾ ಮನೋಭಾವ, ಮಾನವೀಯ…

ಇಂದು ಪ್ರದರ್ಶಿತ ಚಿತ್ರಗಳಿವು
ಮೈಸೂರು

ಇಂದು ಪ್ರದರ್ಶಿತ ಚಿತ್ರಗಳಿವು

October 15, 2018

ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಚಲನಚಿತ್ರೋತ್ಸವ ಕನ್ನಡ ಜನಪ್ರಿಯ ಚಿತ್ರಗಳು ಮಾಲ್ ಆಫ್ ಮೈಸೂರು, ಐನಾಕ್ಸ್ ಮೂವೀಸ್‍ನಲ್ಲಿ ಅ.15ರಂದು ಬೆಳಿಗ್ಗೆ 10ಕ್ಕೆ ರ್ಯಾಂಬೋ-2, ಮಧ್ಯಾಹ್ನ 1ಕ್ಕೆ ಹಸಿರು ರಿಬ್ಬನ್, ಸಂಜೆ 4ಕ್ಕೆ ಮಫ್ತಿ, ಸಂಜೆ 7ಕ್ಕೆ ಲೈಫ್ ಜೊತೆ ಒಂದು ಸೆಲ್ಫಿ ಚಲನಚಿತ್ರಗಳು ಪ್ರದರ್ಶನವಾಗಲಿವೆ. ಭಾರತೀಯ ಪನೋರಮಾ ಚಲನಚಿತ್ರ: ಅಕ್ಟೋಬರ್ 15 ರಂದು ಬೆಳಿಗ್ಗೆ 10-15ಕ್ಕೆ ವೆಂಟಿಲೇಟರ್, ಮಧ್ಯಾಹ್ನ 1-15ಕ್ಕೆ ಪೂರ್ಣ, ಸಂಜೆ 4-15ಕ್ಕೆ ಮನುಸಂಗದ, ಸಂಜೆ 7-15 ಕ್ಕೆ (ಕಾಯ್ದಿರಿಸಿದೆ) ಚಲನಚಿತ್ರಗಳು ಪ್ರದರ್ಶನವಾಗಲಿವೆ. ವಲ್ರ್ಡ್ ಸಿನಿಮಾ:…

ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ:  ಶಾಲಾ ಶಿಕ್ಷಕನ ವಿರುದ್ಧ ಪ್ರಕರಣ ದಾಖಲು
ಮೈಸೂರು

ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ:  ಶಾಲಾ ಶಿಕ್ಷಕನ ವಿರುದ್ಧ ಪ್ರಕರಣ ದಾಖಲು

October 15, 2018

ಮೈಸೂರು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದರೆಂಬ ಆರೋಪದ ಮೇಲೆ ಖಾಸಗಿ ಶಾಲಾ ಶಿಕ್ಷಕರೊಬ್ಬರ ವಿರುದ್ಧ ಉದಯಗಿರಿ ಠಾಣೆ ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿದ್ದಾರೆ. ಮೈಸೂರಿನ ಗೌಸಿಯಾನಗರ ನಿವಾಸಿ ಯಾದ ಖಾಸಗಿ ಶಾಲಾ ಶಿಕ್ಷಕ ಅಬೂಬಕರ್ (23) 6 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದರೆಂಬ ಗಂಭೀರ ಆರೋಪ ಎದುರಿಸುತ್ತಿರುವವರು. ಬಾಲಕಿ ಬಟ್ಟೆ ಬಿಚ್ಚಿಸಿ ಲೈಂಗಿಕ ಕಿರುಕುಳ ನೀಡಿದರೆಂಬ ಕಾರಣಕ್ಕೆ ಸಾರ್ವಜನಿಕರು ಶುಕ್ರವಾರ ಶಾಲೆ ಬಳಿ ಘೇರಾವ್ ಮಾಡಿ ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಿದರು. ವಿಷಯ…

ಸರ್ಕಾರದ ಸೌಲಭ್ಯ ದುರುಪಯೋಗವಾದರೆ ಕಠಿಣ ಕ್ರಮ: ಶಾಸಕ ಹೆಚ್.ವಿಶ್ವನಾಥ್ ಎಚ್ಚರಿಕೆ
ಮೈಸೂರು

ಸರ್ಕಾರದ ಸೌಲಭ್ಯ ದುರುಪಯೋಗವಾದರೆ ಕಠಿಣ ಕ್ರಮ: ಶಾಸಕ ಹೆಚ್.ವಿಶ್ವನಾಥ್ ಎಚ್ಚರಿಕೆ

October 15, 2018

ಹನಗೋಡು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆದಿವಾಸಿ ಜನಾಂಗದ ಉನ್ನತಿಗೆ ನೀಡುತ್ತಿರುವ ಸೌಲಭ್ಯಗಳನ್ನು ಹಣದ ಆಸೆಗೆ ಇತರರಿಗೆ ನೀಡಿದರೆ ಅಂತಹ ಅಧಿಕಾರಿಗಳ ವಿರುದ್ಧ ಕಾನೂನು ಅನ್ವಯ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಎ.ಹೆಚ್. ವಿಶ್ವನಾಥ್ ಎಚ್ಚರಿಸಿದರು. ಹನಗೋಡಿನಲ್ಲಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ ವತಿಯಿಂದ ಜೇನುಕುರುಬ ಜನಾಂಗದವರಿಗೆ ಉಳುಮೆ ಎತ್ತುಗಳನ್ನು ವಿತರಿಸಿ ಅವರು ಮಾತನಾಡಿದರು. ಅರಣ್ಯದ ಮೇಲೆ ಅವಲಂಬಿತವಾಗಿದ್ದ ಆದಿವಾಸಿಗಳ ಆರ್ಥಿಕ ಸ್ಥಿತಿ ಬದಲಾವಣೆಗಾಗಿ ಸರ್ಕಾರಗಳು ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ. ಇದನ್ನು ಸದ್ಬಳಕೆ ಮಾಡಿ ಕೊಂಡು…

1 1,327 1,328 1,329 1,330 1,331 1,611
Translate »