ಮೈಸೂರು

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಭೂಮಿಪೂಜೆ
ಮೈಸೂರು

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಭೂಮಿಪೂಜೆ

October 15, 2018

ಪಿರಿಯಾಪಟ್ಟಣ: ತಾಲೂಕಿನ ಕಾವೇರಿ ನದಿ ದಂಡೆಯ ಹನುಮಂತಪುರ ಗ್ರಾಮದಲ್ಲಿ ಕಾವೇರಿ ನೀರಾವರಿ ವತಿಯಿಂದ ಗ್ರಾಮಕ್ಕೆ ಮಂಜೂರಾದ 60 ಲಕ್ಷ ರೂ.ಗಳ ಅನುದಾನದಡಿ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಶಾಸಕ ಕೆ.ಮಹದೇವ್ ಭೂಮಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ದೊಡ್ಡ ಕಮರವಳ್ಳಿ ಗ್ರಾಮ ಪಂಚಾಯಿತಿಗೆ ವಿಶೇಷವಾಗಿ ಒತ್ತು ನೀಡಿ ಮಾದರಿ ಗ್ರಾಮ ಪಂಚಾಯತಿಯನ್ನಾಗಿ ಮಾಡಲಾಗುವುದು. ಆಂಜನೇಯ ದೇವಾಲಯದ ಎದರು ಹೈಟೆಕ್ ದೀಪದ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು ಎಂದು ಭರವಸೆ ನೀಡಿದರು. ಹೊನ್ನಾಪುರ ಗ್ರಾಮದಲ್ಲಿ ಜನರ ಕುಂದು-ಕೊರತೆಗಳನ್ನು ಆಲಿಸಿ ಮಾತನಾಡಿದ ಅವರು,…

ವಿಷ ಸೇವಿಸಿದ ಯುವ ಪ್ರೇಮಿಗಳು ಯುವತಿ ಸಾವು, ಯುವಕ ಆಸ್ಪತ್ರೆಗೆ ದಾಖಲು
ಮೈಸೂರು

ವಿಷ ಸೇವಿಸಿದ ಯುವ ಪ್ರೇಮಿಗಳು ಯುವತಿ ಸಾವು, ಯುವಕ ಆಸ್ಪತ್ರೆಗೆ ದಾಖಲು

October 15, 2018

ತಿ.ನರಸೀಪುರ/ನಂಜನಗೂಡು :  ತಮ್ಮ ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಬಹುದೆಂಬ ಆತಂಕದಲ್ಲಿ ಯುವ ಪ್ರೇಮಿಗಳು ವಿಷ ಸೇವಿಸಿದ್ದು, ಇದರ ಪರಿಣಾಮವಾಗಿ ಯುವತಿ ಸಾವನ್ನಪ್ಪಿ, ಯುವಕ ಆಸ್ಪತ್ರೆ ಸೇರಿರುವ ಘಟನೆ ತಾಲೂಕಿನ ತಾಯೂರು ಗ್ರಾಮದಿಂದ ವರದಿಯಾಗಿದೆ. ತಾಲೂಕಿನ ಕಲಿಯೂರು ಗ್ರಾಮದ ನಿವಾಸಿ ಶ್ರೀಧರ್ ಅವರ ಪುತ್ರಿ ಸ್ವಾತಿ(18) ವಿಷ ಸೇವನೆಯಿಂದ ಮೃತಪಟ್ಟಿದ್ದು, ಈಕೆಯ ಪ್ರಿಯಕರ ಕೊಳ್ಳೇಗಾಲ ತಾಲೂಕು ಹಂಪಾಪುರ ಗ್ರಾಮದ ನಿವಾಸಿ ರಾಜೇಂದ್ರನಾಯಕ ಅವರ ಪುತ್ರ ಮಣಿ(19) ವಿಷ ಸೇವಿಸಿ, ಅಸ್ವಸ್ಥಗೊಂಡು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ವಿವರ: ಕೊಳ್ಳೇಗಾಲ…

ರೈತರಿಗೆ ಬ್ಯಾಂಕ್‍ಗಳಿಂದ ನೋಟೀಸ್ ಕುರುಬೂರು ಶಾಂತಕುಮಾರ್ ಆರೋಪ
ಮೈಸೂರು

ರೈತರಿಗೆ ಬ್ಯಾಂಕ್‍ಗಳಿಂದ ನೋಟೀಸ್ ಕುರುಬೂರು ಶಾಂತಕುಮಾರ್ ಆರೋಪ

October 15, 2018

ತಿ.ನರಸೀಪುರ: ರಾಷ್ಟ್ರೀಕೃತ ಬ್ಯಾಂಕ್‍ಗಳ ಮೇಲೆ ರಾಜ್ಯ ಸರ್ಕಾರದ ನಿಯಂತ್ರಣ ಇಲ್ಲದ ಕಾರಣ ಬ್ಯಾಂಕ್‍ಗಳು ರೈತರ ಸಾಲ ವಸೂಲಿಗೆ ನೋಟೀಸ್ ನೀಡಿ ಕಿರುಕುಳ ನೀಡುತ್ತಿವೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆರೋಪಿಸಿದರು. ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆದ ರೈತ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡಿದ್ದು, ರೈತರಿಗೆ ಕಿರುಕುಳ ಕೊಟ್ಟರೆ ಬ್ಯಾಂಕ್‍ಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡುತ್ತಿ ದ್ದಾರೆ. ಆದರೆ ಸಾಲ…

ಓಪನ್ ಸ್ಟ್ರೀಟ್ ಫೆಸ್ಟಿವಲ್‍ನಲ್ಲಿ ಯುವ ಸಮುದಾಯದ ದರ್ಬಾರ್
ಮೈಸೂರು, ಮೈಸೂರು ದಸರಾ

ಓಪನ್ ಸ್ಟ್ರೀಟ್ ಫೆಸ್ಟಿವಲ್‍ನಲ್ಲಿ ಯುವ ಸಮುದಾಯದ ದರ್ಬಾರ್

October 14, 2018

ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಮೈಸೂರಿನ ಕೃಷ್ಣರಾಜ ಬುಲೆವಾರ್ಡ್ ರಸ್ತೆಯಲ್ಲಿ ಶನಿವಾರ ಏರ್ಪಡಿಸಿದ್ದ ‘ಓಪನ್ ಸ್ಟ್ರೀಟ್ ಫೆಸ್ಟಿವಲ್‍’ನಲ್ಲಿ ಯುವ ಸಮುದಾಯದ್ದು ಸಂಭ್ರಮವೋ ಸಂಭ್ರಮ. ಈ ರಸ್ತೆಯಲ್ಲಿ ಪಾಶ್ಚಿಮಾತ್ಯ ಸಂಪ್ರದಾಯದ ಡಿಜೆ ಜೊತೆಗೆ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಜಾನಪದ ಕಲೆಯು ಅನಾವರಣಗೊಂಡು ಮೈಸೂರಿಗರು ಮಾತ್ರ ವಲ್ಲದೆ, ಪ್ರವಾಸಿಗರನ್ನು ಮುದಗೊಳಿಸಿತು. ಇಂದು ಬೆಳಿಗ್ಗೆ 7 ಗಂಟೆಗೆ ಓಪನ್ ಸ್ಟ್ರೀಟ್ ಫೆಸ್ಟಿವಲ್ ಆರಂಭವಾಯಿತಾದರೂ ಬೆಳಿಗ್ಗೆ 11 ಗಂಟೆಯ ನಂತರ ಸಂಪೂರ್ಣ ಕಳೆ ಕಟ್ಟಿತು. ಈ ರಸ್ತೆಯಲ್ಲಿ ಸೂಕ್ತ ಬೀದಿ ದೀಪ ವ್ಯವಸ್ಥೆ…

ಯುವ ದಸರಾದಲ್ಲಿ ಮುಂದುವರೆದ ಹಾಡು, ಕುಣಿತದ ಸಂಭ್ರಮ
ಮೈಸೂರು, ಮೈಸೂರು ದಸರಾ

ಯುವ ದಸರಾದಲ್ಲಿ ಮುಂದುವರೆದ ಹಾಡು, ಕುಣಿತದ ಸಂಭ್ರಮ

October 14, 2018

ಮೈಸೂರು:  ಬಾಲಿವುಡ್ ಗಾಯಕರಾದ ಬಾದ್‍ಶಾ, ಅಸ್ಥ ಗಿಲ್ ಹಾಗೂ ವಿವಿಧ ತಂಡ ಗಳ ಸಂಗೀತ ಝೇಂಕಾರ ಯುವ ದಸರಾದ ರಂಗು ಹೆಚ್ಚಿಸಿತ್ತು.ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಯುವ ದಸರಾದ 2ನೇ ದಿನವಾದ ಶನಿವಾರ, ಪ್ರೇಕ್ಷಕರು ಕಿಕ್ಕಿರಿದಿದ್ದರು. ಮೈದಾನ ತುಂಬಿ, ಸುತ್ತಮುತ್ತಲಿನ ಸ್ಥಳಗಳಲ್ಲೂ ನಿಂತು ಕಾರ್ಯಕ್ರಮ ಸವಿದರು. ಬಾದ್‍ಶಾ ಹಾಗೂ ಅಸ್ಥ ಗಿಲ್ ಅವರ ಕಾರ್ಯಕ್ರಮ ತಡವಾಗಿ ಆರಂಭ ವಾದರೂ ಪ್ರೇಕ್ಷಕರು ಎತ್ತಲೂ ಕದಲದೆ ಕಾದು ಕುಳಿತಿದ್ದರು. ರಾತ್ರಿ ಸುಮಾರು 10 ಗಂಟೆಗೆ ವೇದಿಕೆ ಏರಿದ ಇವರು,…

ರಫೆಲ್ ಯುದ್ಧ ವಿಮಾನ ಖರೀದಿ: ರಿಲೆಯನ್ಸ್ ಕಂಪನಿ ಹಿತ ಕಾಯಲು ಎಚ್‍ಎಎಲ್‍ಗೆ ಕೇಂದ್ರ ಅವಮಾನ
ಮೈಸೂರು, ಮೈಸೂರು ದಸರಾ

ರಫೆಲ್ ಯುದ್ಧ ವಿಮಾನ ಖರೀದಿ: ರಿಲೆಯನ್ಸ್ ಕಂಪನಿ ಹಿತ ಕಾಯಲು ಎಚ್‍ಎಎಲ್‍ಗೆ ಕೇಂದ್ರ ಅವಮಾನ

October 14, 2018

ಬೆಂಗಳೂರು: ಸಮರ ವಿಮಾನ ತಯಾರಿಕೆಯಲ್ಲಿ ಅನುಭವ ಹೊಂದಿದ ಸಾರ್ವಜನಿಕ ಸ್ವಾಮ್ಯದ ಎಚ್‍ಎಎಲ್ ಸಂಸ್ಥೆ ಹಿತವನ್ನು ಬಲಿಕೊಟ್ಟು, ಮುಳುಗುತ್ತಿದ್ದ ರಿಲೆಯನ್ಸ್ ಕಂಪನಿ ಮೇಲೆತ್ತಲು ರಫೆಲ್ ಯುದ್ಧ ವಿಮಾನ ಖರೀದಿಗೆ ಕೇಂದ್ರ ಸರ್ಕಾರ ಅವಕಾಶ ಮಾಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದಿಲ್ಲಿ ಬಲವಾದ ಆರೋಪ ಮಾಡಿದ್ದಾರೆ. ನಗರದ ಕಬ್ಬನ್ ಪಾರ್ಕ್ ಬದಿಯಲ್ಲಿನ ಮಿನ್ಸ್ ವೃತ್ತ ದಲ್ಲಿ ಎಚ್‍ಎಎಲ್‍ನ ಹಾಲಿ ಮತ್ತು ಮಾಜಿ ನೌಕರರ ಜೊತೆ ಸಂವಾದ ನಂತರ ಸುದ್ದಿಗಾರರೊಂದಿಗೆ ಪ್ರತ್ಯೇಕ ವಾಗಿ ಮಾತನಾಡಿದ ಅವರು, ಇಂತಹ ಒಪ್ಪಂದದಿಂದ…

ಮೈತ್ರಿ ಸರ್ಕಾರಕ್ಕೆ ಧಕ್ಕೆ ಉಂಟು ಮಾಡಬೇಡಿ
ಮೈಸೂರು

ಮೈತ್ರಿ ಸರ್ಕಾರಕ್ಕೆ ಧಕ್ಕೆ ಉಂಟು ಮಾಡಬೇಡಿ

October 14, 2018

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಬಿರುಕು ಉಂಟು ಮಾಡುವ ಕೆಲಸ ಬೇಡ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಮಟ್ಟಿಗೆ ಜೆಡಿಎಸ್‍ನೊಂದಿಗೆ ಸೀಟು ಹೊಂದಾಣಿಕೆ ಮಾಡಿಕೊಳ್ಳಲಾಗುವುದು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಿವಿಮಾತು ಹೇಳಿದ್ದಾರೆ. ಬಿಜೆಪಿಯೇತರ ಪಕ್ಷಗಳು ಒಂದಾಗುವ ಕಾಲ ಬಂದಿದೆ. ಇಂತಹ ಸ್ಥಿತಿಯಲ್ಲಿ ನಮ್ಮನ್ನು ನಂಬಿ ಬಂದ ಪಕ್ಷಗಳ ಕೈಹಿಡಿಯಬೇಕು ಎಂದರು. ರಾಷ್ಟ್ರಮಟ್ಟದಲ್ಲಿ ತೆಗೆದುಕೊಂಡಿರುವ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿ. ನಮ್ಮದು ಒಂದೇ ಸರ್ಕಾರ ಎನ್ನುವ ಭಾವನೆಯಲ್ಲಿ ಅಭಿವೃದ್ಧಿ ಕೆಲಸ ಮಾಡಿ ಎಂದು…

ಬಾಲಿವುಡ್ ಮೇರುನಟ ಬಚ್ಚನ್‍ಗೂ ತಟ್ಟಿದ ‘ಮೀ ಟೂ’ ಕಳಂಕ
ಮೈಸೂರು

ಬಾಲಿವುಡ್ ಮೇರುನಟ ಬಚ್ಚನ್‍ಗೂ ತಟ್ಟಿದ ‘ಮೀ ಟೂ’ ಕಳಂಕ

October 14, 2018

ಮುಂಬೈ: ಮೀ ಟೂ ಆಂದೋ ಲನ ಚಿತ್ರರಂಗ ಗಣ್ಯಾತಿಗಣ್ಯರ ಬಣ್ಣ ಬಯಲು ಮಾಡುತ್ತಿರುವ ಬೆನ್ನಲ್ಲೇ, ಸ್ಫೋಟಕ ಆರೋಪ ವೊಂದು ಇದೀಗ ಬಾಲಿವುಡ್ ಮೇರುನಟ ಅಮಿತಾಭ್ ಬಚ್ಚನ್ ವಿರುದ್ಧ ಕೇಳಿಬಂದಿದೆ. ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಕೂಡ ಇಂತಹದ್ದೇ ಕೆಲಸಗಳಲ್ಲಿ ಭಾಗಿ ಯಾಗಿದ್ದಾರೆಂದು ಖ್ಯಾತ ಕೇಶ ವಿನ್ಯಾಸಕಿ ಸಪ್ನಾ ಭವಾನಿಯವರು ಗಂಭೀರ ಆರೋಪ ಮಾಡಿದ್ದು, ಇದು ಬಾಲಿವುಡ್‍ನಲ್ಲಿ ಹೊಸ ಸಂಚಲನಕ್ಕೆ ದಾರಿ ಮಾಡಿಕೊಟ್ಟಿದೆ. ಮೀ ಟೂ ಆಂದೋಲನ ಬೆಂಬಲಿಸಿ ಬಚ್ಚನ್ ಮಾಡಿದ್ದ ಟ್ವೀಟ್ ಒಂದನ್ನು ಮಹಿಳೆಯೊಬ್ಬರು ಟ್ವೀಟ್ ಮಾಡಿದ್ದರು….

ಇಂದು ದಸರಾ ಸಾಂಸ್ಕøತಿಕ ಮೆರವಣಿಗೆ
ಮೈಸೂರು, ಮೈಸೂರು ದಸರಾ

ಇಂದು ದಸರಾ ಸಾಂಸ್ಕøತಿಕ ಮೆರವಣಿಗೆ

October 14, 2018

ಮೈಸೂರು:  ಇದೇ ಮೊದಲ ಬಾರಿಗೆ ಆಯೋಜಿಸಿರುವ ದಸರಾ ಸಾಂಸ್ಕøತಿಕ ಮೆರವಣಿಗೆಗೆ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಅವರು ಅ.14ರಂದು ಮಧ್ಯಾಹ್ನ 2ಗಂಟೆಗೆ ಕೋಟೆ ಆಂಜ ನೇಯ ಸ್ವಾಮಿ ದೇವಸ್ಥಾನದ ಮುಂಭಾಗ ನಂದಿಧ್ವಜಕ್ಕೆ ಪೂಜೆ ನೆರವೇರಿಸುವರು.ಈ ಭವ್ಯ ಸಾಂಸ್ಕøತಿಕ ಮೆರವಣಿಗೆಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಸೇರಿದಂತೆ ಮತ್ತಿತರ ಗಣ್ಯರು ಭಾಗವಹಿಸುವರು. ಈ ಮೆರ ವಣಿಗೆಯಲ್ಲಿ ಆನೆಗಳು ಸೇರಿದಂತೆ ಹಲವು ಪ್ರಕಾರದ ಕಲಾ ಮತ್ತು ಜನಪದ ನೃತ್ಯ ತಂಡಗಳು, ಯುವ…

ಬಹುಮಾನಗಳನ್ನು ಬಾಚಿದ ಹುಣಸೂರು ತಾಲೂಕಿನ ರೈತರು
ಮೈಸೂರು, ಮೈಸೂರು ದಸರಾ

ಬಹುಮಾನಗಳನ್ನು ಬಾಚಿದ ಹುಣಸೂರು ತಾಲೂಕಿನ ರೈತರು

October 14, 2018

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ರೈತ ದಸರಾ ಉಪ ಸಮಿತಿ ಮೈಸೂರಿನ ಜೆ.ಕೆ.ಮೈದಾನದಲ್ಲಿ ಶನಿವಾರ ರೈತರಿಗಾಗಿ ಆಯೋಜಿಸಿದ್ದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಹುಣಸೂರು ತಾಲೂಕಿನ ರೈತರು ಹೆಚ್ಚಿನ ಬಹುಮಾನಗಳನ್ನು ಬಾಚಿಕೊಂಡಿದ್ದಾರೆ. ರೈತ ದಸರಾ ಉಪ ಸಮಿತಿ ಕಾರ್ಯಾಧ್ಯಕ್ಷರೂ ಆದ ಜಂಟಿ ಕೃಷಿ ನಿರ್ದೇಶಕ ಮಹಂತೇಶಪ್ಪ ನೇತೃತ್ವದಲ್ಲಿ ನಡೆದ ಕ್ರೀಡಾ ಸ್ಪರ್ಧೆಗಳಲ್ಲಿ ರೈತ ಪುರುಷರು, ಮಹಿಳೆಯರು ಗೆಲ್ಲಲೇಬೇಕೆಂಬ ಹಠದಲ್ಲಿ ಓಡಿದರು, ಬಿದ್ದು ಮತ್ತೆ ಎದ್ದು ಓಡಿದರು. 50 ಕೆ.ಜಿ ಗೊಬ್ಬರದ ಮೂಟೆ ಹೊತ್ತು ಓಡುವಾಗ ಸ್ಪರ್ಧಿಯೊಬ್ಬರು…

1 1,328 1,329 1,330 1,331 1,332 1,611
Translate »