ಮೈಸೂರು

ರೈತ ದಸರಾ: ಜೋಡೆತ್ತಿನ ಗಾಡಿಯಲ್ಲಿ ಅನ್ನದಾತನ ಅದ್ಧೂರಿ ಮೆರವಣಿಗೆ
ಮೈಸೂರು, ಮೈಸೂರು ದಸರಾ

ರೈತ ದಸರಾ: ಜೋಡೆತ್ತಿನ ಗಾಡಿಯಲ್ಲಿ ಅನ್ನದಾತನ ಅದ್ಧೂರಿ ಮೆರವಣಿಗೆ

October 13, 2018

ಮೈಸೂರು:  ದಸರಾ ಅಂಗವಾಗಿ ರೈತ ದಸರಾ ಉಪ ಸಮಿತಿ ವತಿಯಿಂದ ಶುಕ್ರವಾರ ರೈತ ದಸರಾ ಮೆರವಣಿಗೆ ಮೈಸೂರಿನಲ್ಲಿ ಅದ್ಧೂರಿಯಿಂದ ನಡೆಯಿತು. ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ರೈತರು ಸಂಭ್ರಮ ದಿಂದ ಪಾಲ್ಗೊಂಡಿದ್ದರು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರೊಂದಿಗೆ ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ, ಮೈಸೂರು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ, ಬಳಿಕ ನಗಾರಿ ಬಾರಿಸುವ ಮೂಲಕ ಅದ್ಧೂರಿ ರೈತ ದಸರಾ ಮೆರವಣಿಗೆಯನ್ನು…

ಮೈಸೂರು ದಸರೆಗೆ ಹೈಟೆಕ್ ಮೊಬೈಲ್ ಕಮಾಂಡ್ ಭದ್ರತೆ
ಮೈಸೂರು, ಮೈಸೂರು ದಸರಾ

ಮೈಸೂರು ದಸರೆಗೆ ಹೈಟೆಕ್ ಮೊಬೈಲ್ ಕಮಾಂಡ್ ಭದ್ರತೆ

October 13, 2018

ಮೈಸೂರು: ಈ ಬಾರಿ ದಸರೆಗೆ ಭಾರೀ ಬಿಗಿ ಭದ್ರತೆ ಮಾಡಿರುವ ಪೊಲೀಸರು, ಮೊದಲ ಬಾರಿಗೆ ಹೈಟೆಕ್ ಮೊಬೈಲ್ ಕಮಾಂಡ್ ಕಣ್ಗಾವಲು ವ್ಯವಸ್ಥೆಯೊಂದಿಗೆ ಕಟ್ಟೆಚ್ಚರ ವಹಿಸಿದ್ದಾರೆ. ಲಕ್ಷಾಂತರ ಮಂದಿ ಒಂದೆಡೆ ಸೇರುವ ಸ್ಥಳದಲ್ಲಿ ಉಂಟಾಗುವ ಅಹಿತಕರ ಘಟನೆಗಳ ನಿಯಂತ್ರಿಸಿ, ನಿರ್ವಹಣೆ ಮಾಡುವ ಸಲುವಾಗಿ ಕಳೆದ 5 ತಿಂಗಳ ಹಿಂದೆ ಸರ್ಕಾರ ಮೈಸೂರು ನಗರಕ್ಕೆ ಮೊಬೈಲ್ ಕಮಾಂಡ್ ಸೆಂಟರ್ ಹೈಟೆಕ್ ಸಾಧನಗಳನ್ನು ಹೊಂದಿರುವ ವಾಹನವನ್ನು ನೀಡಿದೆ. ಈ ವಾಹನವು ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸಿಎಆರ್ ಮೈದಾನದಲ್ಲಿರುತ್ತದೆ. ಗಣ್ಯರ ಸಮಾವೇಶಗಳು, ರಾಜಕೀಯ…

ಮೈಸೂರಿನ 13 ಕಡೆ ದಸರಾ ಯೋಗ ಪ್ರದರ್ಶನ
ಮೈಸೂರು, ಮೈಸೂರು ದಸರಾ

ಮೈಸೂರಿನ 13 ಕಡೆ ದಸರಾ ಯೋಗ ಪ್ರದರ್ಶನ

October 13, 2018

ಮೈಸೂರು:  ಬೆಳಂಬೆಳಿಗ್ಗೆಯ ಪ್ರಶಾಂತಮಯ ವಾತಾವರಣದಲ್ಲಿ ನಾನಾ ಯೋಗಾಸನ ಭಂಗಿಗಳನ್ನು ಪ್ರದರ್ಶಿ ಸಿದ ನೂರಾರು ಮಂದಿ ಯೋಗದ ಮಹತ್ವವನ್ನು ಸಾರಿದರು. ಏಕ ಕಾಲದಲ್ಲಿ ಮೈಸೂರು ನಗರದ 13 ಸ್ಥಳಗಳಲ್ಲಿ ಪ್ರತ್ಯೇಕವಾಗಿ ಯೋಗಾ ಸನ ಪ್ರದರ್ಶಿಸಿಸುವ ವಿನೂತನ ಕಾರ್ಯಕ್ರಮವನ್ನು ಈ ಬಾರಿಯ ದಸರಾ ಮಹೋತ್ಸವ ಅಂಗವಾಗಿ ಯೋಗ ದಸರಾ ಉಪಸಮಿತಿ ವತಿ ಯಿಂದ ಆಯೋಜಿಸಿದ್ದು, ಇದಕ್ಕೆ ಶುಕ್ರವಾರ ಚಾಲನೆ ಪಡೆಯಿತು. ಮೈಸೂರಿನ ಕುವೆಂಪುನಗರದ ಸೌಗಂಧಿಕ ಉದ್ಯಾನವನದಲ್ಲಿ ಇಂದು ಬೆಳಿಗ್ಗೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ…

ತೆರೆದ ಬಸ್‍ನಲ್ಲಿ ಸಿಎಂ ಕುಮಾರಸ್ವಾಮಿ ದಸರಾ ದರ್ಶನ
ಮೈಸೂರು, ಮೈಸೂರು ದಸರಾ

ತೆರೆದ ಬಸ್‍ನಲ್ಲಿ ಸಿಎಂ ಕುಮಾರಸ್ವಾಮಿ ದಸರಾ ದರ್ಶನ

October 13, 2018

ಮೈಸೂರು:  ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತೆರೆದ ಬಸ್ (ಓಪನ್ ಟಾಪ್ ಬಸ್)ನಲ್ಲಿ ಮೈಸೂರು ಸುತ್ತು ಹಾಕಿ, ದೀಪಾಲಂಕಾರವನ್ನು ಕಣ್ತುಂಬಿ ಕೊಂಡರಲ್ಲದೆ, ಮಹಾರಾಜ  ಮೈದಾನದವರೆಗೂ ಅದೇ ಬಸ್‍ನಲ್ಲಿ ತೆರಳಿ, ಯುವ ದಸರಾ ಉದ್ಘಾಟಿಸಿದರು. ಸರ್ಕಾರಿ ಅತಿಥಿ ಗೃಹದಿಂದ ಇರ್ವಿನ್ ರಸ್ತೆ, ಸಯ್ಯಾಜಿರಾವ್ ರಸ್ತೆ, ಕೆ.ಆರ್.ವೃತ್ತ, ಚಾಮರಾಜ ಒಡೆಯರ್ ವೃತ್ತ, ಜಯ ಚಾಮರಾಜ ಒಡೆಯರ್ ವೃತ್ತ, ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಕಾಲೇಜುವೃತ್ತ(ಗನ್‍ಹೌಸ್), ಚಾಮರಾಜ ನೂರಡಿ ಜೋಡಿ ರಸ್ತೆ, ರಾಮ ಸ್ವಾಮಿ ವೃತ್ತದ ಮೂಲಕ ಮಹಾರಾಜ ಕಾಲೇಜು ಮೈದಾನಕ್ಕೆ ತೆರೆದ ಬಸ್‍ನಲ್ಲಿ…

ಪುಟಾಣಿಗಳ ಹಾಡು, ಕುಣಿತ: ನೆರೆದವರ ಕಣ್ಣಿಗೆ ಹಬ್ಬ
ಮೈಸೂರು, ಮೈಸೂರು ದಸರಾ

ಪುಟಾಣಿಗಳ ಹಾಡು, ಕುಣಿತ: ನೆರೆದವರ ಕಣ್ಣಿಗೆ ಹಬ್ಬ

October 13, 2018

ಮೈಸೂರು:  ದೊಡ್ಡ ವೇದಿಕೆಯಲ್ಲಿ ಪುಟಾಣಿಗಳ ಕಲರವ, ಚಿಣ್ಣರ ನೃತ್ಯೋತ್ಸವಕ್ಕೆ ಮನಸೋತ ಪ್ರೇಕ್ಷಕರು ಸಿಳ್ಳೆ, ಚಪ್ಪಾಳೆ ಮೂಲಕ ಪ್ರೋತ್ಸಾಹ ನೀಡಿದರು. ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ವತಿಯಿಂದ ಜೆಕೆ ಮೈದಾನದಲ್ಲಿ ಆಯೋಜಿಸಿದ್ದ ಚಿಣ್ಣರ ಮೇಳದಲ್ಲಿ ವಿಶೇಷ ಉಡುಗೆ ತೊಟ್ಟ ಚಿಣ್ಣರು ಜಾನಪದ, ಸಿನಿಮಾ ಹಾಡುಗಳಿಗೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರೆ, ಪ್ರೇಕ್ಷಕರು ಮಕ್ಕಳ ನೃತ್ಯವನ್ನು ಕಣ್ತುಂಬಿಕೊಂಡು ಸಂತೋಷಪಟ್ಟರು. ಮೊದಲಿಗೆ ಬಿಳಿಕೆರೆ ತಂಡವು ‘ಚನ್ನಪ್ಪ ಚನ್ನೇಗೌಡ ಕುಂಬಾರ ಮಾಡಿದ ಕೊಡನವ್ವ’ ಜಾನಪದ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಎಲ್ಲರ ಮೆಚ್ಚುಗೆ…

ಮೈಸೂರಿನ ವಿವಿಧ ವೇದಿಕೆಗಳಲ್ಲಿ ನಾನಾ ರೀತಿಯ ಸಂಗೀತ ಸಂಭ್ರಮ
ಮೈಸೂರು, ಮೈಸೂರು ದಸರಾ

ಮೈಸೂರಿನ ವಿವಿಧ ವೇದಿಕೆಗಳಲ್ಲಿ ನಾನಾ ರೀತಿಯ ಸಂಗೀತ ಸಂಭ್ರಮ

October 13, 2018

ಮೈಸೂರು: ಮೈಸೂರು ಅರಮನೆ ವೇದಿಕೆಯಲ್ಲಿ ಬೆಂಗಳೂರಿನ ಮಂಜುಳಾ ಪರಮೇಶ್ ನೇತೃತ್ವದ ತಂಡ ಪ್ರಸ್ತುತಪಡಿಸಿದ ಸಮೂಹ ಗೀತೆಗಳ `ನೃತ್ಯ ರೂಪಕ’ ಪ್ರೇಕ್ಷಕರ ಮನಸೂರೆಗೊಂಡಿತು. ದಸರಾ ಮಹೋತ್ಸವದ ಅಂಗವಾಗಿ ಮೈಸೂರು ಅರಮನೆ ವೇದಿಕೆ ಸೇರಿದಂತೆ ನಗರದ ವಿವಿಧ ವೇದಿಕೆಗಳಲ್ಲಿ ಆಯೋಜಿಸಿದ್ದ 3ನೇ ದಿನದ ವಿವಿಧ ಸಾಂಸ್ಕøತಿಕ ಕಾರ್ಯ ಕ್ರಮಗಳು ಪ್ರೇಕ್ಷಕರ ಮನ ಸೆಳೆದವು. ಅರಮನೆ ವೇದಿಕೆ ಯಲ್ಲಿ ಮೊದಲಿಗೆ ವಿನಾಯಕನ ಕುರಿತಾದ ನೃತ್ಯ, ಮಹಿಷಾ ಮರ್ಧಿನಿ ನೃತ್ಯ, ಕೆ.ಎಸ್. ನರ ಸಿಂಹಸ್ವಾಮಿ ರಚಿತ ದೀಪವು ನನ್ನದೇ, ಗಾಳಿಯು ನಿನ್ನದೇ ಹಾಡಿಗೆ…

ಮೈಸೂರಿಗೆ ಲಗ್ಗೆಯಿಟ್ಟಿದ್ದಾರೆ ದೇಶದ  ನಾನಾ ಭಾಗದ ವ್ಯಾಪಾರಿಗಳು
ಮೈಸೂರು, ಮೈಸೂರು ದಸರಾ

ಮೈಸೂರಿಗೆ ಲಗ್ಗೆಯಿಟ್ಟಿದ್ದಾರೆ ದೇಶದ  ನಾನಾ ಭಾಗದ ವ್ಯಾಪಾರಿಗಳು

October 13, 2018

ಮೈಸೂರು: ನಾಡಹಬ್ಬ ಬಂತೆಂದರೆ ಸಾಂಸ್ಕೃತಿಕ ನಗರಿ ಕಳೆ ಕಟ್ಟುತ್ತದೆ. ವಿವಿಧೆಡೆ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು, ದೀಪಾಲಂಕಾರ ಮೆರಗು ನೀಡಿದರೆ, ವಿವಿಧೆಡೆಗಳಿಂದ ಆಗಮಿಸಿರುವ ನಾನಾ ರೀತಿಯ ಆಟಿಕೆಗಳ ಮಾರಾಟಗಾರರು ಹಬ್ಬದ ವೈಭವವನ್ನು ಮತ್ತಷ್ಟು ಹೆಚ್ಚಿಸುತ್ತಿದ್ದಾರೆ. ಪ್ರತಿ ವರ್ಷ ನವರಾತ್ರಿಯ ಹಿನ್ನೆಲೆಯಲ್ಲಿ ನಡೆಯಲಿರುವ ಕಾರ್ಯಕ್ರಮಗಳ ಸ್ಥಳಗಳು, ಜನದಟ್ಟಣೆ ಇರುವ ರಸ್ತೆಗಳಲ್ಲಿ ಬಲೂನು, ಪೀಪಿ, ಮುಖವಾಡ, ಆಟಿಕೆಗಳು, ಹೇರ್ ಬ್ಯಾಂಡ್, ಕೈ ಬಂದಿ ಸೇರಿದಂತೆ ವಿವಿಧ ವಸ್ತುಗಳನ್ನು ಮಾರಾಟ ಮಾಡಲೆಂದು ದೂರ ದೂರದ ಊರುಗಳಿಂದ ವ್ಯಾಪಾರಿಗಳು ಆಗಮಿಸಿದ್ದಾರೆ. ಪ್ರತಿ ವರ್ಷದಂತೆ ಈ…

ಮೈಸೂರಿನ ಪಾರಂಪರಿಕ ಕಟ್ಟಡಗಳ ಪರಿಚಯ  ಮಾಡಿಕೊಟ್ಟ `ಪಾರಂಪರಿಕ ಸೈಕಲ್ ಸವಾರಿ’
ಮೈಸೂರು

ಮೈಸೂರಿನ ಪಾರಂಪರಿಕ ಕಟ್ಟಡಗಳ ಪರಿಚಯ  ಮಾಡಿಕೊಟ್ಟ `ಪಾರಂಪರಿಕ ಸೈಕಲ್ ಸವಾರಿ’

October 13, 2018

ಮೈಸೂರು: ಮೈಸೂರಿನ ಪಾರಂಪರಿಕ ಕಟ್ಟಡಗಳ ಪರಿಚಯ ಮಾಡಿಕೊಡುವ ಉದ್ದೇಶದಿಂದ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ಶುಕ್ರವಾರ ಮೈಸೂರಿನಲ್ಲಿ ಆಯೋಜಿಸಿದ್ದ ಪಾರಂಪರಿಕ ಸೈಕಲ್ ಸವಾರಿಯಲ್ಲಿ ವಿವಿಧ ವಯೋಮಾನದ 200ಕ್ಕೂ ಹೆಚ್ಚು ಮಂದಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಮೈಸೂರು ಪೇಟ ಧರಿಸಿದ್ದ ಎಲ್ಲಾ ಸೈಕಲ್ ಸವಾರರೂ ರಂಗಾಚಾರ್ಲು ಪುರಭವನದಿಂದ ಚಾಮ ರಾಜ ಒಡೆಯರ್ ವೃತ್ತ, ಅಂಬಾವಿಲಾಸ ಅರಮನೆ, ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತ, ಲ್ಯಾನ್ಸ್ ಡೌನ್ ಕಟ್ಟಡ, ಜಗನ್ಮೋಹನ ಅರಮನೆ, ಪರಕಾಲ ಮಠ, ಶೇಷಾದ್ರಿ ಹೌಸ್, ಪದ್ಮಾಲಯ, ಚಾಮುಂಡಿ…

ಯುವ ದಸರಾಕ್ಕೆ ಶಾಸಕ ನಾಗೇಂದ್ರ ಬಹಿಷ್ಕಾರ
ಮೈಸೂರು

ಯುವ ದಸರಾಕ್ಕೆ ಶಾಸಕ ನಾಗೇಂದ್ರ ಬಹಿಷ್ಕಾರ

October 13, 2018

ಮೈಸೂರು:  ಯುವ ದಸರಾಗೆ ಸೂಕ್ತ ಸಮಯ ದಲ್ಲಿ ಆಹ್ವಾನಿಸದ ಹಿನ್ನೆಲೆಯಲ್ಲಿ ಶಾಸಕ ಎಲ್.ನಾಗೇಂದ್ರ, ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದಾರೆ. ನಾಡಹಬ್ಬ ದಸರಾ ಅಂಗವಾಗಿ ಯುವ ದಸರಾ ಕಾರ್ಯಕ್ರಮ ಆಯೋಜಿಸಿರುವ ಮಹಾರಾಜ ಕಾಲೇಜು ಮೈದಾನ ಚಾಮರಾಜ ಕ್ಷೇತ್ರದ ವ್ಯಾಪ್ತಿ ಯಲ್ಲಿದೆ. ಹಾಗಾಗಿ ಶಿಷ್ಠಾಚಾರದನ್ವಯ ಸ್ಥಳೀಯ ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಕಾರ್ಯ ಕ್ರಮ ನಡೆಯಬೇಕಿತ್ತು. ಆದರೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ನನಗೆ ತಲುಪಿರ ಲಿಲ್ಲ. ಹಾಗಾಗಿ ಇಂದು ಬೆಳೆಗ್ಗೆಯೇ ಯುವ ದಸರಾ ಸಮಿತಿ ಕಾರ್ಯದರ್ಶಿ ನಟರಾಜ್ ಅವರಿಗೆ ಕರೆ ಮಾಡಿದ್ದೆ. ಆದರೆ…

ಮೈಸೂರಲ್ಲಿ ಗಮನ ಸೆಳೆದ ದಸರಾ ಕರಾಟೆ ಮ್ಯಾರಥಾನ್
ಮೈಸೂರು, ಮೈಸೂರು ದಸರಾ

ಮೈಸೂರಲ್ಲಿ ಗಮನ ಸೆಳೆದ ದಸರಾ ಕರಾಟೆ ಮ್ಯಾರಥಾನ್

October 13, 2018

ಮೈಸೂರು:  ದಸರಾ ಅಂಗವಾಗಿ ಮೈಸೂರು ಕರಾಟೆ ಅಸೋಸಿ ಯೇಷನ್ ವತಿಯಿಂದ ಶುಕ್ರವಾರ ಮೈಸೂ ರಿನಲ್ಲಿ ದಸರಾ ಕರಾಟೆ ಮ್ಯಾರಥಾನ್ ನಡೆಸ ಲಾಯಿತು. ರಾಮಸ್ವಾಮಿ ವೃತ್ತದಿಂದ ಚಾಮರಾಜ ಜೋಡಿ ರಸ್ತೆ, ಗನ್‍ಹೌಸ್ ಮೂಲಕ ಮೈಸೂರು ಅರಮನೆ ಆವರಣ ದವರೆಗೆ ನೂರಾರು ಕರಾಟೆ ಪಟುಗಳು ಓಡಿದರು. ದಸರಾ ಸಂಭ್ರಮದಲ್ಲಿ ತಾವು ಭಾಗವಹಿಸಿರುವುದಾಗಿ ತಿಳಿಸಿದರು. ಬಳಿಕ ಅರಮನೆ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಕರಾಟೆ ಮ್ಯಾರಥಾನ್ ನಲ್ಲಿ ಜಯಗಳಿಸಿದ ಕ್ರಮವಾಗಿ ವಿಜೇತ ರಾದ ಲೋಕೇಶ್, ಕಿಶಲಿಯಾ ಹಾಗೂ ಧಮ ಕಟ್ಟಿ ಅವರಿಗೆ ಕ್ರಮವಾಗಿ…

1 1,330 1,331 1,332 1,333 1,334 1,611
Translate »