ಮೈಸೂರು

ರೂ.999ರಲ್ಲಿ ಮೈಸೂರು-ಬೆಂಗಳೂರು ವಿಮಾನ ಪ್ರಯಾಣ
ಮೈಸೂರು, ಮೈಸೂರು ದಸರಾ

ರೂ.999ರಲ್ಲಿ ಮೈಸೂರು-ಬೆಂಗಳೂರು ವಿಮಾನ ಪ್ರಯಾಣ

October 12, 2018

ಮೈಸೂರು:  ನಾಡಹಬ್ಬ ದಸರಾ ಮಹೋತ್ಸವಕ್ಕೆ ಆಗಮಿಸುವ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು ರಾಜ್ಯ ಪ್ರವಾಸೋದ್ಯಮ ಇಲಾಖೆ `ಆಕಾಶ ಅಂಬಾರಿ’ ವಿಮಾನ ಸೇವೆ ಆರಂಭಿಸಿದ್ದು, ಗುರುವಾರ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಈ ವಿಮಾನದಲ್ಲಿ ಪ್ರಯಾಣಿಸುವುದರೊಂದಿಗೆ ಸೇವೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ `ಆಕಾಶ ಅಂಬಾರಿ’ಯಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸುವ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಾ.ರಾ.ಮಹೇಶ್, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸೂಚನೆ ಮೇರೆಗೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಬರುವ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆ,…

ಮೈಸೂರಲ್ಲಿ ಸಾಂಪ್ರದಾಯಿಕ ಉಡುಗೆ-ತೊಡುಗೆಯೊಂದಿಗೆ ಪಾರಂಪರಿಕ ನಡಿಗೆ
ಮೈಸೂರು, ಮೈಸೂರು ದಸರಾ

ಮೈಸೂರಲ್ಲಿ ಸಾಂಪ್ರದಾಯಿಕ ಉಡುಗೆ-ತೊಡುಗೆಯೊಂದಿಗೆ ಪಾರಂಪರಿಕ ನಡಿಗೆ

October 12, 2018

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗುರುವಾರ ದಸರಾ ಮಹೋತ್ಸವದ ಹಿನ್ನೆಲೆ ಯಲ್ಲಿ ಏರ್ಪಡಿಸಿದ್ದ ಪಾರಂಪರಿಕ ನಡಿಗೆಯಲ್ಲಿ ಸಾರ್ವಜನಿಕರಲ್ಲದೆ ಪ್ರವಾಸಿಗರು, ವಿದ್ಯಾರ್ಥಿಗಳು ನೂರಾರು ಮಂದಿ ಸಾಂಪ್ರದಾಯಿಕ ಉಡುಗೆ-ತೊಡುಗೆ ತೊಟ್ಟು, ಪಾರಂಪರಿಕ ಕಟ್ಟಡಗಳನ್ನು ವೀಕ್ಷಿಸುವುದರೊಂದಿಗೆ ಕುತೂಹಲದಿಂದ ಅವುಗಳ ಇತಿಹಾಸ ಕೇಳಿ ಅರಿತರು. ನಾಡಹಬ್ಬದ ಅಂಗವಾಗಿ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಪಾರಂಪರಿಕ ನಡಿಗೆಯನ್ನು ಇಂದು ಬೆಳಿಗ್ಗೆ ಪುರಭವನದ ಆವರಣದಲ್ಲಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹಸಿರು ನಿಶಾನೆ ತೋರಿದರು. ಶರ್ಟ್, ಪಂಚೆ ಧರಿಸಿ ಆಗಮಿ ಸಿದ್ದ ಸಚಿವರು…

ನಾಳೆ ಎರಡನೇ ಶನಿವಾರ ರಜೆ, ಅ.20ರಂದು ರಜೆ ಇಲ್ಲ
ಮೈಸೂರು

ನಾಳೆ ಎರಡನೇ ಶನಿವಾರ ರಜೆ, ಅ.20ರಂದು ರಜೆ ಇಲ್ಲ

October 12, 2018

ಬೆಂಗಳೂರು: ಎರಡನೇ ಶನಿವಾರ (ಅ.13)ದಂದು ಮಾಮೂಲಿನಂತೆ ಸರ್ಕಾರಿ ರಜೆ ಇದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಎರಡನೇ ಶನಿವಾರ (ಅ.13) ಇದ್ದ ರಜೆಯನ್ನು ರದ್ದುಪಡಿಸಿ ಮೂರನೇ ಶನಿವಾರಕ್ಕೆ (ಅ.20) ರಜೆ ನೀಡಿ ದಸರಾ ರಜೆ ಸತತವಾಗಿ ನಾಲ್ಕು ದಿನ ದೊರಕುವಂತೆ ಮಾಡಲಾಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ಸುದ್ದಿ ಹರಿದಾಡಿತ್ತು. ಹಾಗಾಗಿ ಸರ್ಕಾರ ಇದರ ಬಗ್ಗೆ ಸ್ಪಷ್ಟನೆ ನೀಡಿದೆ. ಗುರುವಾರ (ಅ.18) ಆಯುಧ ಪೂಜೆ, ಶುಕ್ರವಾರ (ಅ.19) ವಿಜಯದಶಮಿಗೆ ಸರ್ಕಾರಿ ರಜೆ ಇದೆ. ಶನಿವಾರ (ಅ.20) ರಜೆ ನೀಡಿದರೆ ಮರುದಿನ…

ರಾಜೀನಾಮೆ ಅಂಗೀಕರಿಸುವ ವಿಚಾರ ಆಮೇಲೆ ನೋಡೋಣ: ಸಿಎಂ
ಮೈಸೂರು

ರಾಜೀನಾಮೆ ಅಂಗೀಕರಿಸುವ ವಿಚಾರ ಆಮೇಲೆ ನೋಡೋಣ: ಸಿಎಂ

October 12, 2018

ಬೆಂಗಳೂರು: -ಶಿಕ್ಷಣ ಸಚಿವ ಎನ್.ಮಹೇಶ್ ಅವರು ರಾಜೀನಾಮೆ ನೀಡಿರುವುದು ಅವರ ಪಕ್ಷದ ಆಂತರಿಕ ವಿಚಾರವಾಗಿದ್ದು, ಸಚಿವರಾಗಿದ್ದರೆ ಪಕ್ಷ ಸಂಘಟನೆ ಸಾಧ್ಯವಿಲ್ಲವೆಂದು ಅವರು ರಾಜೀನಾಮೆ ಕೊಟ್ಟಿರಬಹುದು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ವಿಧಾನಸೌಧ ದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಹೇಶ್ ಅವರ ರಾಜೀನಾಮೆ ಅಂಗೀಕರಿಸುವ ವಿಚಾರ ಆಮೇಲೆ ನೋಡೊಣ ಎಂದ ರಲ್ಲದೆ, ಬಿಎಸ್‍ಪಿ ಮುಖಂಡರು ತಮ್ಮ ಸಂಪರ್ಕದಲ್ಲಿರುವುದಾಗಿ ತಿಳಿಸಿದರು. ಕೆಲ ವಿಷಯಗಳನ್ನು ಬಹಿರಂಗವಾಗಿ ಕೇಳಲು ಸಾಧ್ಯವಿಲ್ಲ. ಸೂಕ್ತ ಸಮಯ ದಲ್ಲಿ ಎಲ್ಲಾ ವಿಚಾರ ಕುರಿತು…

ಬಂಡೀಪುರ ಉಳಿಸಿ, ವನ್ಯಜೀವಿಗಳನ್ನು ರಕ್ಷಿಸಿ
ಮೈಸೂರು

ಬಂಡೀಪುರ ಉಳಿಸಿ, ವನ್ಯಜೀವಿಗಳನ್ನು ರಕ್ಷಿಸಿ

October 12, 2018

ಕಾಡಿನೊಳಗೆ ಮೇಲ್ಸೇತುವೆ ನಿರ್ಮಾಣ ಪ್ರಯತ್ನಕ್ಕೆ ಪರಿಸರವಾದಿಗಳ ಆಕ್ರೋಶ, ಪ್ರತಿಭಟನೆ ಮೈಸೂರು:  ಬಂಡೀಪುರ ಉಳಿಸಿ, ವನ್ಯಜೀವಿಗಳನ್ನು ರಕ್ಷಿಸಿ ಎಂದು ವಿವಿಧ ಪರಿಸರ ಪೂರಕ ಸಂಘಟನೆಗಳು ಗುರುವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದವು. ಮೈಸೂರು ಗ್ರಾಹಕರ ಪರಿಷತ್, ಸೇವ್ ವೈಲ್ಡ್‍ಲೈಫ್, ಪರಿಸರ ಸಂರಕ್ಷಣಾ ಸಮಿತಿ, ಪ್ರಕೃತಿ ಸಾವಯವ ಕೃಷಿಕರು ಸೇರಿದಂತೆ ಇನ್ನಿತರ ಪರಿಸರಪೂರಕ ಸಂಘಟನೆಗಳ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡು, ಯಾವುದೇ ಕಾರಣಕ್ಕೂ ಬಂಡೀಪುರ ಅಭಯಾರಣ್ಯದಲ್ಲಿ ಎಲಿವೇಟೆಡ್ ರಸ್ತೆ ನಿರ್ಮಿಸಲು ಅವಕಾಶ ನೀಡಬಾರದು ಎಂದು ಒಕ್ಕೊರಲಿನಿಂದ ಆಗ್ರಹಿಸಿದರು. ಬಂಡೀಪುರ…

ಕಾವೇರಿ ಸಿಲ್ಕ್ ಉದ್ಯೋಗ ಎಂಪೋರಿಯಂ ಮಳಿಗೆಗೆ ತಹಶೀಲ್ದಾರ್‌ರಿಂದ ಬೀಗಮುದ್ರೆ
ಮೈಸೂರು

ಕಾವೇರಿ ಸಿಲ್ಕ್ ಉದ್ಯೋಗ ಎಂಪೋರಿಯಂ ಮಳಿಗೆಗೆ ತಹಶೀಲ್ದಾರ್‌ರಿಂದ ಬೀಗಮುದ್ರೆ

October 12, 2018

ಮೈಸೂರು:  ಬಾಡಿಗೆ ಹಣ ಮತ್ತು ಲಾಭಾಂಶ ನೀಡುವ ಸಂಬಂಧ ಉಂಟಾಗಿರುವ ವಿವಾದದ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಮೈಸೂರಿನ ಚಾಮುಂಡಿಬೆಟ್ಟದ ರಸ್ತೆಯಲ್ಲಿರುವ ಕಾವೇರಿ ಸಿಲ್ಕ್ ಉದ್ಯೋಗ ಎಂಪೋರಿಯಂ ಮಳಿಗೆಗೆ ತಹಶೀಲ್ದಾರ್ ಟಿ.ರಮೇಶ್‍ಬಾಬು ಇಂದು ಬೀಗಮುದ್ರೆ ಮಾಡಿಸಿದರು. ಮಳಿಗೆ ಸ್ವಾಧೀನ ಪಡೆಯುವ ವಿಚಾರದಲ್ಲಿ ಅಕ್ಟೋಬರ್ 6ರಂದು ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ದೂರು-ಪ್ರತಿದೂರು ನೀಡಿದ ಹಿನ್ನೆಲೆಯಲ್ಲಿ ನಜರ್‍ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೋಮು ಸೌಹಾರ್ದತೆ ಕಾಪಾಡುವ ದೃಷ್ಟಿ ಹಾಗೂ ನಾಡಹಬ್ಬ…

ಮೈಸೂರು ದಸರಾ ಮಹೋತ್ಸವ-2018: ವಿವಿಧ ವೇದಿಕೆಯಲ್ಲಿ ವಿಭಿನ್ನ ಸಂಗೀತ ಗಾಯನ, ನೃತ್ಯ ರಸದೌತಣ
ಮೈಸೂರು, ಮೈಸೂರು ದಸರಾ

ಮೈಸೂರು ದಸರಾ ಮಹೋತ್ಸವ-2018: ವಿವಿಧ ವೇದಿಕೆಯಲ್ಲಿ ವಿಭಿನ್ನ ಸಂಗೀತ ಗಾಯನ, ನೃತ್ಯ ರಸದೌತಣ

October 12, 2018

ಮೈಸೂರು:  ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಮೈಸೂರು ಅರಮನೆ ವೇದಿಕೆ ಸೇರಿದಂತೆ ನಗರದ ವಿವಿಧ ವೇದಿಕೆಗಳಲ್ಲಿ ಆಯೋಜಿಸಿದ್ದ 2ನೇ ದಿನದ ಸಾಂಸ್ಕøತಿಕ ಕಾರ್ಯಕ್ರಮ ಗಳು ಪ್ರವಾಸಿಗರ ಮನಸೂರೆಗೊಂಡವು. ಮೈಸೂರು ಅಂಬಾವಿಲಾಸ ಅರಮನೆ ಮುಂಭಾಗದ ವೇದಿಕೆಯಲ್ಲಿ ವಿದ್ವಾನ್ ಎ.ವಿ.ದತ್ತಾತ್ರೇಯ ತಂಡದಿಂದ ಶಾಸ್ತ್ರೀಯ ಮ್ಯಾಂಡೋಲಿನ್ ವಾದನ, ಕೊಳಲು ವಾದಕ ಸಮೀರ್‍ರಾವ್ ಮತ್ತು ವಂಶಿಧರ್ ನಡೆಸಿಕೊಟ್ಟ ಕೊಳಲು ವಾದನದ ಜುಗಲ್ ಬಂದಿ, ಬೆಂಗಳೂರಿನ ಗಾಯಕ ರವಿ ಮುರೂರು ಮತ್ತು ನಾಗಚಂದ್ರಿಕ ಭಟ್ ನಡೆಸಿ ಕೊಟ್ಟ ಗೀತಾಗಾಯನ ಹಾಗೂ ನೃತ್ಯ ಕಲಾವಿದೆ…

ಗನ್‍ಹೌಸ್ ಆವರಣದಲ್ಲಿ ಮತ್ತೊಂದು ‘ಆಹಾರ ಮೇಳ’
ಮೈಸೂರು, ಮೈಸೂರು ದಸರಾ

ಗನ್‍ಹೌಸ್ ಆವರಣದಲ್ಲಿ ಮತ್ತೊಂದು ‘ಆಹಾರ ಮೇಳ’

October 12, 2018

ಮೈಸೂರು:  ನಾಡ ಹಬ್ಬ ದಸರಾ ಅಂಗವಾಗಿ ಎರಡು ಕಡೆ ಆಹಾರ ಮೇಳದ ಆಯೋಜಿಸಿದ್ದು, ಆಹಾರ ಪ್ರಿಯರಿಗೆ ಇನ್ನಷ್ಟು ಖಾದ್ಯಗಳನ್ನು ಉಣಬಡಿಸಲು ಗನ್‍ಹೌಸ್ ಆವರಣ ದಲ್ಲೂ ಆಹಾರ ಮೇಳಕ್ಕೆ ಚಾಲನೆ ನೀಡಲಾಯಿತು. ನಾಗಾರ್ಜುನ್ ಗ್ರೂಪ್ ವತಿಯಿಂದ ಆಯೋಜಿಸಿರುವ ಆಹಾರಮೇಳಕ್ಕೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಚಾಲನೆ ನೀಡಿದರು. ಕೋಡಿಮಠದ ಶಿವಯೋಗಿ ಶಿವಾನಂದ ಸ್ವಾಮೀಜಿ, ಸಾಯಿ ಅವಧೂತ ಅರ್ಜುನ್ ಗುರೂಜಿ, ಮಾಜಿ ಸಚಿವ ಎ.ಮಂಜು, ಶಾಸಕ ಎಸ್.ಎ.ರಾಮದಾಸ್, ನಗರ ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ನಾಗಾರ್ಜುನ್ ಗ್ರೂಪ್‍ನ ಮುಖ್ಯಸ್ಥೆ ಸುನಂದ ಗಿರೀಶ್ ಉಪಸ್ಥಿತರಿದ್ದರು….

ಚುಂಚನಕಟ್ಟೆ ಶ್ರೀರಾಮ ದೇವಾಲಯಕ್ಕೆ ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ ಭೇಟಿ
ಮೈಸೂರು

ಚುಂಚನಕಟ್ಟೆ ಶ್ರೀರಾಮ ದೇವಾಲಯಕ್ಕೆ ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ ಭೇಟಿ

October 12, 2018

ಚುಂಚನಕಟ್ಟೆ: ಕೆ.ಆರ್. ನಗರ ತಾಲೂಕಿನ ಚುಂಚನಕಟ್ಟೆ ಶ್ರೀರಾಮ ದೇವಾಲಯಕ್ಕೆ ಗುರುವಾರ ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾ ಮೂರ್ತಿ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ವೇಳೆ ಇಲ್ಲಿನ ಐತಿಹ್ಯ ಮತ್ತು ವಿಶೇಷತೆ ಗಳ ಬಗ್ಗೆ ಮಾಹಿತಿ ಪಡೆದರಲ್ಲದೆ, ಗ್ರಾಮಸ್ಥರು ಮತ್ತು ಭಕ್ತಾಧಿಗಳ ಜತೆ ಮುಕ್ತವಾಗಿ ಮಾತುಕತೆ ನಡೆಸಿ ಅವರ ಜೀವನ ಶೈಲಿಯ ಬಗ್ಗೆ ಕುಶಲೋಪರಿ ವಿಚಾರಿಸಿದರು. ಬುಧವಾರ ನಾಡಹಬ್ಬ ದಸರಾ ಉದ್ಘಾಟನೆ ನೆರವೇರಿಸಿದ ಸುಧಾಮೂರ್ತಿ ಅವರು ಚುಂಚನಕಟ್ಟೆಗೆ ಆಗಮಿಸಿದ್ದು, ಅವರ ಸರಳತೆ ಮತ್ತು ಸಾರ್ವಜನಿಕರ ಮೇಲಿನ…

ಹೆಚ್.ಡಿ.ಕೋಟೆಯಲ್ಲಿ ದಸರಾ ಕ್ರೀಡಾಕೂಟ
ಮೈಸೂರು

ಹೆಚ್.ಡಿ.ಕೋಟೆಯಲ್ಲಿ ದಸರಾ ಕ್ರೀಡಾಕೂಟ

October 12, 2018

ಹೆಚ್.ಡಿ.ಕೋಟೆ:  ನವರಾತ್ರಿ ಉತ್ಸವವನ್ನು ದೇಶಾದ್ಯಂತ ನಾನಾ ರೀತಿ ಯಲ್ಲಿ ಮತ್ತು ಸಂಪ್ರದಾಯಕವಾಗಿ ಆಚರಣೆ ಮಾಡಲಾಗುತ್ತದೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು. ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಗ್ರಾಮೀಣ ದಸರಾ ಅಂಗವಾಗಿ ನಡೆದ ಕಸಬಾ ವಲಯ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಮೈಸೂರಿನಲ್ಲಿ ದಸರಾವನ್ನು ಕಳೆದ 400ಕ್ಕೂ ಹೆಚ್ಚು ವರ್ಷಗಳ ಹಿಂದಿನಿಂದಲೂ ಅದ್ಧೂರಿಯಾಗಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಹಿಂದೆ ಮೈಸೂರಿನ ರಾಜವಂಶಸ್ಥರು ನಡೆಸುತ್ತಿದ್ದರು. ಈಗ ಸರಕಾರ ನಡೆಸುತ್ತಿದೆ. ಗ್ರಾಮೀಣ ಭಾಗದ ಜನತೆ ಕೂಡ ಮೈಸೂರಿ…

1 1,332 1,333 1,334 1,335 1,336 1,611
Translate »