ಮೈಸೂರು

ಗ್ರಾಮೀಣ ದಸರಾ ಮೂಲಕ ಸಂಸ್ಕೃತಿ, ಕಲೆ ಉಳಿವು ಸಾಧ್ಯ-ಶಾಸಕ ಹೆಚ್.ವಿಶ್ವನಾಥ್
ಮೈಸೂರು

ಗ್ರಾಮೀಣ ದಸರಾ ಮೂಲಕ ಸಂಸ್ಕೃತಿ, ಕಲೆ ಉಳಿವು ಸಾಧ್ಯ-ಶಾಸಕ ಹೆಚ್.ವಿಶ್ವನಾಥ್

October 12, 2018

ಹುಣಸೂರು: ನಾಡಿನ ಪಾರಂಪರಿಕ ಗ್ರಾಮೀಣ ಕಲೆಗಳನ್ನು ಗ್ರಾಮೀಣ ದಸರಾ ಕಾರ್ಯಕ್ರಮದಲ್ಲಿ ಪ್ರದರ್ಶಿಸುವ ಮೂಲಕ ಕಲೆಗಳನ್ನು ಉಳಿಸಿಕೊಳ್ಳಬಹುದು ಎಂದು ಶಾಸಕ ಹೆಚ್.ವಿಶ್ವನಾಥ್ ತಿಳಿಸಿದರು. ತಾಲೂಕಿನ ಬಿಳಿಕೆರೆ ಗ್ರಾಮದಲ್ಲಿ ಗ್ರಾಮೀಣ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾಡಹಬ್ಬಗಳ ಆಚರಣೆ ಮೂಲಕ ಸಾಂಪ್ರದಾಯಿಕ ಗ್ರಾಮೀಣ ಕಲೆಗಳನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕಾಗಿದೆ ಎಂದರು. ಬಿಳಿಕೆರೆಯ ಕಾಲೇಜು ಮುಂಭಾಗದಿಂದ ಹೊರಟ ಗ್ರಾಮೀಣ ದಸರಾ ಮೆರವಣಿಗೆಯು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ಮಂಗಳವಾದ್ಯದೊಂದಿಗೆ ಕಳಸ ಹೊತ್ತ ಮಹಿಳೆಯರು, ಬೆಳ್ಳಿರಥದಲ್ಲಿ ತಾಯಿ ಚಾಮುಂಡೇಶ್ವರಿ…

ತಾಯಿ ಅಗಲಿಕೆಯಿಂದ ಮನನೊಂದು ಯುವಕ ಆತ್ಮಹತ್ಯೆ
ಮೈಸೂರು

ತಾಯಿ ಅಗಲಿಕೆಯಿಂದ ಮನನೊಂದು ಯುವಕ ಆತ್ಮಹತ್ಯೆ

October 12, 2018

ಮೈಸೂರು:  ತಾಯಿಯ ಅಗಲಿಕೆಯಿಂದ ಮನನೊಂದು ಯುವಕನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಮೇಟಗಳ್ಳಿಯಲ್ಲಿ ನಡೆದಿದೆ. ಮೇಟಗಳ್ಳಿಯ ಮಾರಿಗುಡಿ ಬೀದಿ ನಿವಾಸಿ ವಿನಾಯಕ(28), ಆತ್ಮಹತ್ಯೆ ಮಾಡಿ ಕೊಂಡಿರುವ ಯುವಕ. ಬೆಂಗಳೂರು ಮೂಲದ ವಿನಾಯಕನ ಕುಟುಂಬ ಮೇಟಗಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿತ್ತು. ತಂದೆ ತೀರಿಹೋದ ಬಳಿಕ ವಿನಾಯಕ ಕ್ಲಬ್‍ವೊಂದರಲ್ಲಿ ಕೆಲಸ ಮಾಡಿಕೊಂಡು ತಾಯಿಯನ್ನು ಸಲಹುತ್ತಿದ್ದ. ಆದರೆ ಸುಮಾರು 20 ದಿನಗಳ ಹಿಂದೆ ಪಾಶ್ರ್ವವಾಯುಗೆ ತಾಯಿಯೂ ಬಲಿಯಾಗಿದ್ದರು. ಪರಿಣಾಮ ಒಂಟಿಯಾಗಿದ್ದ ವಿನಾಯಕ ಆಘಾತಕ್ಕೊಳಗಾಗಿದ್ದ. ಮೂರ್ನಾಲ್ಕು ದಿನಗಳಿಂದ ವಿನಾಯಕನಿದ್ದ ಮನೆಯ…

ಎಸ್ಸಿ, ಎಸ್ಟಿ ನೌಕರರ ಬಡ್ತಿ ಮೀಸಲಾತಿ ಕಾಯ್ದೆ ಜಾರಿಗೊಳಿಸದಂತೆ ಅಹಿಂಸಾ ವೇದಿಕೆ ಕಾರ್ಯಕರ್ತರ ಪ್ರತಿಭಟನೆ
ಮೈಸೂರು

ಎಸ್ಸಿ, ಎಸ್ಟಿ ನೌಕರರ ಬಡ್ತಿ ಮೀಸಲಾತಿ ಕಾಯ್ದೆ ಜಾರಿಗೊಳಿಸದಂತೆ ಅಹಿಂಸಾ ವೇದಿಕೆ ಕಾರ್ಯಕರ್ತರ ಪ್ರತಿಭಟನೆ

October 12, 2018

ಮೈಸೂರು: ಬಡ್ತಿ ಮೀಸಲಾತಿ ಕಾಯ್ದೆ-2018ನ್ನು ಜಾರಿ ಗೊಳಿಸದಂತೆ ಮತ್ತು ಬಿ.ಕೆ.ಪವಿತ್ರ ಪ್ರಕರಣ ದಲ್ಲಿ ಸುಪ್ರೀಂಕೋರ್ಟ್ ಆದೇಶವನ್ನು ಯಥಾಸ್ಥಿತಿಯಲ್ಲಿ ಜಾರಿಗೊಳಿಸಲು ಆಗ್ರಹಿಸಿ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ಸಾಮಾನ್ಯ ನೌಕರರ (ಅಹಿಂಸಾ) ವೇದಿಕೆ ಮೈಸೂರು ಘಟಕದ ಆಶ್ರಯದಲ್ಲಿ ಗುರುವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು. ಯಾವುದೇ ಕಾರಣಕ್ಕೂ ಕಾಯ್ದೆಯನ್ನು ಜಾರಿಗೊಳಿಸಬಾರದು ಎಂದು ಒತ್ತಾಯಿ ಸಿದ ಪ್ರತಿಭಟನಾಕಾರರು ಕೇವಲ ಶೇ.18 ವರ್ಗದವರ ರಕ್ಷಣೆಗೆ ಮಾತ್ರ ಮುಂದಾ ಗುವುದು ತಪ್ಪು. ಈ ಸರ್ಕಾರದಲ್ಲಿ ಶೇ.82 ವರ್ಗದ ನೌಕರರು ಬಡ್ತಿ ಇಲ್ಲದೆ…

ಸಾಮಾಜಿಕ ಜಾಲತಾಣದ ಮೂಲಕ ಪ್ರಧಾನಿ ತೇಜೋವಧೆ: ಸೈಬರ್ ಕ್ರೈಂ ಠಾಣೆಯಲ್ಲಿ ವಕೀಲ ದೂರು ದಾಖಲು
ಮೈಸೂರು

ಸಾಮಾಜಿಕ ಜಾಲತಾಣದ ಮೂಲಕ ಪ್ರಧಾನಿ ತೇಜೋವಧೆ: ಸೈಬರ್ ಕ್ರೈಂ ಠಾಣೆಯಲ್ಲಿ ವಕೀಲ ದೂರು ದಾಖಲು

October 12, 2018

ಮೈಸೂರು: ಸಾಮಾಜಿಕ ಜಾಲತಾಣ ಫೇಸ್‍ಬುಕ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತೇಜೋವಧೆ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮೈಸೂರು ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೈಸೂರಿನ ಮಂಡಿ ಮೊಹಲ್ಲಾ ನಿವಾಸಿಯೂ ಆದ ವಕೀಲ ಹಾಗೂ ಬಿಜೆಪಿ ಚಾಮರಾಜ ಕ್ಷೇತ್ರದ ಬಿಜೆಪಿ ಲೀಗಲ್ ಸೆಲ್‍ನ ಸಂಚಾಲಕ ಸತ್ಯಮೂರ್ತಿ ಎಂ.ಚೆಟ್ಟಿ ದೂರು ದಾಖಲಿಸಿ ದವರಾಗಿದ್ದು, ಪ್ರಕರಣ ನಡೆದ ಸ್ಥಳವನ್ನು ಮೈಸೂರು ನಗರ ಎಂದು ಇವರು ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ…

ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ಅವರಿಂದ ದಸರಾ ಮಹೋತ್ಸವಕ್ಕೆ ಚಾಲನೆ
ಮೈಸೂರು, ಮೈಸೂರು ದಸರಾ

ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ಅವರಿಂದ ದಸರಾ ಮಹೋತ್ಸವಕ್ಕೆ ಚಾಲನೆ

October 11, 2018

ಮೈಸೊರು: ವಿಶ್ವೆ ಖ್ಯಾತಿಯ ಮೈಸೊರು ದಸರಾ ಮಹೋತ್ಸವಕ್ಕೆ ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥರೂ ಆದ ಹಸೆರಾಂತ ಲೇಖಕಿ ಡಾ.ಸುಧಾಮೂರ್ತಿ ಅವರು ಇಂದು ವಿಧ್ಯುಕ್ತ ಚಾಲನೆ ನೀಡಿದರು. ಚಾಮುಂಡೀಶ್ವೆರಿ ಸನ್ನಿಧಿಯಲ್ಲಿ ಅಲಂಕೃತ ಬೆಳ್ಳಿ ರಥದಲ್ಲಿ ವಸ್ತ್ರಾಭರಣಗಳಿಂದ ಅಲಂಕೃತಳಾಗಿದ್ದ ನಾಡಿನ ಅಧಿದೇವತೆ ತಾಯಿ ಶ್ರೀ ಚಾಮುಂಡೀಶ್ವೆರಿ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಶುಭ ತುಲಾ ಲಗ್ನದಲ್ಲಿಇಂದು ಬೆಳಿಗ್ಗೆ 7.30 ಗಂಟೆಗೆ ಶ್ರೀಮತಿ ಸುಧಾಮೂರ್ತಿ ಅವರು 2018ರ ನವರಾತ್ರಿ ಉತ್ಸವವನ್ನು ಉದ್ಘಾಟಿಸಿದರು ಆ ಮೂಲಕ 408 ವರ್ಷಗಳ ಇತಿಹಾಸ ಹೊಂದಿರುವ…

ಖಾಸಗಿ ದರ್ಬಾರ್ ಆರಂಭ
ಮೈಸೂರು, ಮೈಸೂರು ದಸರಾ

ಖಾಸಗಿ ದರ್ಬಾರ್ ಆರಂಭ

October 11, 2018

ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ಚಾಲನೆ ದೊರೆಯುವುದರೊಂದಿಗೆ ಅರಮನೆಯಲ್ಲಿ ಖಾಸಗಿ ದರ್ಬಾರ್ ಸಹ ಬುಧವಾರದಿಂದ ಆರಂಭವಾಯಿತು. ನವರಾತ್ರಿಯ ಮೊದಲ ದಿನವಾದ ಇಂದು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರತ್ನ ಖಚಿತ ಸಿಂಹಾಸನಾರೂಢರಾಗಿ ಸಂಪ್ರದಾಯದಂತೆ ಕೆಲ ವಿಧಿ-ವಿಧಾನಗಳನ್ನು ಪೂರೈಸಿ, ಗಮನ ಸೆಳೆದರು. ಅರಮನೆಯ ದರ್ಬಾರ್ ಹಾಲ್‍ನಲ್ಲಿ ಇಂದು ಬೆಳಗಿನಿಂದ ಮಧ್ಯಾಹ್ನ ದವರೆಗೆ ವಿವಿಧ ಪೂಜಾ ಕೈಂಕರ್ಯ ಗಳಲ್ಲಿ ರಾಜ ವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾಕುಮಾರಿ ಒಡೆಯರ್ ಪಾಲ್ಗೊಂಡು, ಖಾಸಗಿ ದರ್ಬಾರ್‌ಗೆ…

ಕೊಡಗು ನೆರೆ ಸಂತ್ರಸ್ತರಿಗೆ ಡಾ. ಸುಧಾಮೂರ್ತಿ 25 ಕೋಟಿ ರೂ. ನೆರವು ಘೋಷಣೆ
ಮೈಸೂರು

ಕೊಡಗು ನೆರೆ ಸಂತ್ರಸ್ತರಿಗೆ ಡಾ. ಸುಧಾಮೂರ್ತಿ 25 ಕೋಟಿ ರೂ. ನೆರವು ಘೋಷಣೆ

October 11, 2018

ಮೈಸೂರು: ಪ್ರಕೃತಿ ವಿಕೋಪದಿಂದ ನಿರಾಶ್ರಿತರಾಗಿರುವ ಕೊಡಗಿನವರಿಗೆ ಮನೆ ನಿರ್ಮಿಸಿಕೊಡಲು ತಾವು 25 ಕೋಟಿ ರೂ. ನೆರವು ನೀಡು ವುದಾಗಿ ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಡಾ. ಸುಧಾಮೂರ್ತಿ ಅವರು ಇಂದಿಲ್ಲಿ ಪ್ರಕಟಿಸಿದ್ದಾರೆ. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ದಸರಾ ಮಹೋತ್ಸವ ಉದ್ಘಾ ಟಿಸಿ, ಮಾತನಾಡುತ್ತಿದ್ದ ಅವರು, ನೆರೆ ಪೀಡಿತ ಕೊಡಗಿನ ಜನರು ಮನೆ-ಮಠ, ಆಸ್ತಿ-ಪಾಸ್ತಿ ಕಳೆದುಕೊಂಡು ತೊಂದರೆಗೆ ಸಿಲುಕಿದ್ದಾರೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಸರ್ಕಾರ ಅಲ್ಲಿನ ಜನರಿಗೆ ಪುನರ್ವಸತಿ ಕಲ್ಪಿಸುತ್ತಿದೆ. ಆ ಕಾರ್ಯಕ್ಕೆ ನಮ್ಮ ಸಂಸ್ಥೆಯೂ ಕೈಜೋಡಿಸುವುದು ನಮ್ಮ…

ಮೈಸೂರು ಅರಮನೆ ಅಂಗಳದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಾರಂಭ
ಮೈಸೂರು, ಮೈಸೂರು ದಸರಾ

ಮೈಸೂರು ಅರಮನೆ ಅಂಗಳದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಾರಂಭ

October 11, 2018

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮೈಸೂರು ವಿಶ್ವವಿದ್ಯಾನಿಲಯಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ನಾಮಕರಣ ಮಾಡುವ ಸಂಬಂಧ ಸದ್ಯದಲ್ಲೇ ತೀರ್ಮಾನಿಸುವುದಾಗಿ ತಿಳಿಸಿದರು. ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿದ್ದ ಅಂಬಾವಿಲಾಸ ಅರಮನೆ ಮುಂಭಾಗದ ಭವ್ಯ ವೇದಿಕೆಯಲ್ಲಿ ಮೊಳಗಿದ ವಿಜಯದ ಸಂಕೇತವಾದ ಕಹಳೆ ಸದ್ದಿನ ನಡುವೆ, ದೀಪ ಬೆಳಗಿಸಿ, ನಗಾರಿ ಬಾರಿಸುವ ಮೂಲಕ ನವರಾತ್ರಿ ಸಾಂಸ್ಕೃತಿಕ ಕಾರ್ಯ ಕ್ರಮಗಳಿಗೆ ವಿದ್ಯುಕ್ತವಾಗಿ ಚಾಲನೆ ನೀಡಿ ಅವರು ಮಾತನಾಡಿದರು. ಮೈಸೂರು ರಾಜಮಹಾರಾಜರು ನಾಡಿಗೆ ನೀಡಿರುವ…

ದಸರಾ ಉದ್ಘಾಟನೆ ವೇದಿಕೆಯಲ್ಲಿ ಅಪರಿಚಿತ ಮಹಿಳೆ ಪ್ರತ್ಯಕ್ಷ!
ಮೈಸೂರು, ಮೈಸೂರು ದಸರಾ

ದಸರಾ ಉದ್ಘಾಟನೆ ವೇದಿಕೆಯಲ್ಲಿ ಅಪರಿಚಿತ ಮಹಿಳೆ ಪ್ರತ್ಯಕ್ಷ!

October 11, 2018

ಮೈಸೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ, ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ಹಾಗೂ ಇನ್ನಿತರ ಸಚಿವರು, ಗಣ್ಯರು ಪಾಲ್ಗೊಂಡಿದ್ದ ದಸರಾ ಉದ್ಘಾಟನಾ ಸಮಾರಂಭದಲ್ಲಿ ಆಹ್ವಾನಿತರಲ್ಲದ ಅಪರಿಚಿತ ಮಹಿಳೆ ಯೊಬ್ಬರು ಗಣ್ಯರ ಸಾಲಿನಲ್ಲೇ ಆಸೀನರಾಗಿ ಅಚ್ಚರಿ ಮೂಡಿಸಿದ ಪ್ರಸಂಗ ಇಂದು ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಡೆಯಿತು. ಮುಖ್ಯಮಂತ್ರಿಗಳೊಂದಿಗೆ ಚಾಮುಂಡೇಶ್ವರಿ ದರ್ಶನ ಮಾಡಿ ಕೊಂಡು ಹಿಂದಿರುಗುತ್ತಿದ್ದ ಸುಧಾಮೂರ್ತಿ ಅವರಿಗೆ ಎದುರಾದ ಮಹಿಳೆ, ನಗೆ ಬೀರಿದರು. ನಂತರ ಆ ಮಹಿಳೆ ಡಾ.ಸುಧಾ ಮೂರ್ತಿ ಹಾಗೂ ಮುಖ್ಯಮಂತ್ರಿಗಳೊಂದಿಗೆ ವೇದಿಕೆಯನ್ನೇರಿ ನೇರವಾಗಿ ಪಕ್ಕದಲ್ಲೇ ಬೆಳ್ಳಿ ರಥದಲ್ಲಿ ಪ್ರತಿಷ್ಠಾಪಿಸಿದ್ದ…

ದಸರಾ ನಾಡಕುಸ್ತಿ ಪಂದ್ಯಾವಳಿಗೆ ಚಾಲನೆ
ಮೈಸೂರು, ಮೈಸೂರು ದಸರಾ

ದಸರಾ ನಾಡಕುಸ್ತಿ ಪಂದ್ಯಾವಳಿಗೆ ಚಾಲನೆ

October 11, 2018

ಮೈಸೂರು: ದೊಡ್ಡಕೆರೆ ಮೈದಾನದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಆರಂಭ ವಾಗಿರುವ ದಸರಾ ನಾಡಕುಸ್ತಿ ಪಂದ್ಯಾವಳಿಗೆ ಬುಧವಾರ ಚಾಲನೆ ನೀಡಲಾಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಹಾಗೂ ಕರ್ನಾಟಕ ರೆಸ್ಲಿಂಗ್ ಅಸೋಸಿಯೇಷನ್ ಸಹಯೋಗದೊಂದಿಗೆ ಅ.10ರಿಂದ 15ರವರೆಗೆ ನಡೆಯುವ ದಸರಾ ನಾಡಕುಸ್ತಿ ಪಂದ್ಯಾವಳಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪೈಲ್ವಾನರನ್ನು ಅಖಾಡಕ್ಕೆ ಬಿಡುವ ಮೂಲಕ ಕುಸ್ತಿಗೆ ಚಾಲನೆ ನೀಡಿದರು. ನಂತರ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ,…

1 1,333 1,334 1,335 1,336 1,337 1,611
Translate »