ಮೈಸೂರು: ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಮೈಸೂರು ಅರಮನೆ ವೇದಿಕೆ ಸೇರಿದಂತೆ ನಗರದ ವಿವಿಧ ವೇದಿಕೆಗಳಲ್ಲಿ ಆಯೋಜಿಸಿದ್ದ 2ನೇ ದಿನದ ಸಾಂಸ್ಕøತಿಕ ಕಾರ್ಯಕ್ರಮ ಗಳು ಪ್ರವಾಸಿಗರ ಮನಸೂರೆಗೊಂಡವು.
ಮೈಸೂರು ಅಂಬಾವಿಲಾಸ ಅರಮನೆ ಮುಂಭಾಗದ ವೇದಿಕೆಯಲ್ಲಿ ವಿದ್ವಾನ್ ಎ.ವಿ.ದತ್ತಾತ್ರೇಯ ತಂಡದಿಂದ ಶಾಸ್ತ್ರೀಯ ಮ್ಯಾಂಡೋಲಿನ್ ವಾದನ, ಕೊಳಲು ವಾದಕ ಸಮೀರ್‍ರಾವ್ ಮತ್ತು ವಂಶಿಧರ್ ನಡೆಸಿಕೊಟ್ಟ ಕೊಳಲು ವಾದನದ ಜುಗಲ್ ಬಂದಿ, ಬೆಂಗಳೂರಿನ ಗಾಯಕ ರವಿ ಮುರೂರು ಮತ್ತು ನಾಗಚಂದ್ರಿಕ ಭಟ್ ನಡೆಸಿ ಕೊಟ್ಟ ಗೀತಾಗಾಯನ ಹಾಗೂ ನೃತ್ಯ ಕಲಾವಿದೆ ಲಕ್ಷ್ಮೀಗೋಪಾಲಸ್ವಾಮಿ ತಂಡ ನಡೆಸಿಕೊಟ್ಟ ನೃತ್ಯವೈಭವ ಕಾರ್ಯಕ್ರಮಗಳು ಕಲಾ ರಸಿಕರ ಮನಸೂರೆಗೊಂಡವು.
ಅದರಲ್ಲೂ ಗಾಯಕ ರವಿ ಮುರೂರು ಮತ್ತು ಗಾಯಕಿ ನಾಗಚಂದ್ರಿಕಾ ಭಟ್ ನಡೆಸಿಕೊಟ್ಟ ಗೀತಾಗಾಯನದಲ್ಲಿ `ಮುಚ್ಚು ಮರೆಯಿಲ್ಲದೆ’, ಡಿವಿಜಿಯವರ `ಧೃತನಾದ ವೀಣೆ’, ಜಿ.ಪಿ.ರಾಜರತ್ನಂ ಅವರ `ಬೆಳ ದಿಂಗಳ ರಾತ್ರೀಲಿ’, `ಸೂಜಿಗಲ್ಲಾಗಿರುವೆ’, ಜಿ.ಎಸ್.ಶಿವರುದ್ರಪ್ಪ ಅವರ `ಕಾಣದ ಕಡಲಿಗೆ ಹಂಬಲಿಸಿದೆ ಮನ’ ಸೇರಿದಂತೆ ಇತರೆ ಕವಿತೆಗಳ ಗಾಯನ ರಸಿಕರ ಮನಸೆಳೆದವು.
ಆಹಾರ ಮೇಳದ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದ ಸಾಂಸ್ಕøತಿಕ ವೇದಿಕೆ ಯಲ್ಲಿ ಕೊಡಗಿನ ಸಂತ್ರಸ್ತರಿಗಾಗಿ ಕುಶಾಲ ನಗರದ ಸಾಗರ್ ಮೆಲೋಡಿಸ್ ತಂಡದ ಕಲಾವಿದರಿಂದ ಏರ್ಪಡಿಸಿದ್ದ ರಸಮಂಜರಿ ಕಾರ್ಯಕ್ರಮ ಎಲ್ಲರ ಗಮನ ಸೆಳೆದವು.
ಕಲಾಮಂದಿರ ಸಭಾಂಗಣದಲ್ಲಿ ಕೇರಳದ ಕಲಾವಿದರಿಂದ ಮೋಹನಿ ಅಟ್ಟಂ, ಕಲ್ಬುರ್ಗಿಯ ಶಂಕರಪ್ಪ ಹೂಗಾರ ಅವ ರಿಂದ ವಚನ ಗಾಯನ, ಕೋಲಾರದ ಕಲಾವಿದರಿಂದ ಜಾನಪದ ಗಾಯನ, ಹಂಸಲೇಖಾ ಮ್ಯೂಜಿಕಲ್ ಟ್ರಸ್ಟ್ ಕಲಾ ವಿದರಾದ ರಾಜೇಂದ್ರ ಮತ್ತು ಲೋಕೇಶ್ ಅವರಿಂದ ಜುಗಲ್‍ಬಂದಿ ಸಂಗೀತ ನಡೆಯಿತು.
ಅಲ್ಲದೆ ಕಲಾಮಂದಿರ ಹೊರ ಭಾಗದ ವೇದಿಕೆಯಲ್ಲಿ ಹಿಮಾಚಲ ಪ್ರದೇಶದ ನಟಿ ಸಿರಿಮೌರಿ ಅವರಿಂದ ನೃತ್ಯ, ಕಲಾವಿದ ಗೋವಿಂದರಾಜು ತಂಡದವರಿಂದ ನಾದಸ್ವರ ಕಾರ್ಯಕ್ರಮ, ಐಶ್ವರ್ಯ ಮತ್ತು ತಂಡದವರಿಂದ ಶಾಸ್ತ್ರೀಯ ಸಂಗೀತ, ಕಲ್ಲಡ್ಕದ ಕಲಾನಿಕೇತನ ಟ್ರಸ್ಟ್‍ನ ವಿದ್ಯಾ ಮನೋಜ್ ತಂಡದವರಿಂದ ಸಮೂಹ ನೃತ್ಯ ಹಾಗೂ ಕಿರುರಂಗ ಮಂದಿರದಲ್ಲಿ ಬೆಂಗಳೂರಿನ ತುಕ್ಕೋಜಿ ಅವರಿಂದ ಸ್ನೇಹರಂಗ ಕಾರ್ಯಕ್ರಮ, ಬಿಎಂ ಟಿಸಿ ಸಂಸ್ಥೆ ಕಲಾವಿದರಿಂದ `ಯಮನ ಸೋಲು’ ನಾಟಕ ಪ್ರದರ್ಶನಗೊಂಡಿತು.
ಜಗನ್ಮೋಹನ ಅರಮನೆ ವೇದಿಕೆಯಲ್ಲಿ ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರದ ಮಹಾರಾಷ್ಟ್ರದ ಜಾನಪದ ಕಲಾವಿದ ರಿಂದ `ಕೂಲಿ’ ನೃತ್ಯ, ಮೈಸೂರಿನ ಸ್ಮಿತಾ ಕಿರಣ್ ಮತ್ತು ತಂಡದಿಂದ ಕೊಳಲುವಾದನ, ಮೈಸೂರಿನ ಶಾಂತಲಾ ವಟ್ಟಂ ತಂಡದಿಂದ ಗಝಲ್, ಬೆಂಗಳೂರಿನ ರಂಜಿತ ಸುದರ್ಶನ್ ಮತ್ತು ತಂಡದಿಂದ ಭರತನಾಟ್ಯ ನಡೆಯಿತು.
ಕುವೆಂಪುನಗರದ ಗಾನಭಾರತೀ ಸಭಾಂಗಣದಲ್ಲಿ ಹಿಮಾಚಲ ಪ್ರದೇಶದ ನಟಿ ಸಿರಿಮೌರಿ ಅವರಿಂದ ನೃತ್ಯ, ಕೊಳ್ಳೇ ಗಾಲದ ವಾಯ್ಸ್ ಆಫ್ ಮ್ಯೂಜಿಕ್ ತಂಡದ ಪಿ.ಎಂ.ಬ್ರಹ್ಮೇಶ್ ತಂಡದಿಂದ ಸುಗಮ ಸಂಗೀತ, ಮೈಸೂರಿನ ಸುಮಾ ರಾಜ ಕುಮಾರ್ ಅವರಿಂದ ಮಾತನಾಡುವ ಗೊಂಬೆ ಪ್ರದರ್ಶನ, ಮೈಸೂರಿನ ಶ್ರೀದೇವಿ ಕುಳೇನೂರು ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ಜರುಗಿತು.
ಲಲಿತಮಹಲ್ ಹೋಟೆಲ್ ಬಳಿಯ ಆಹಾರ ಮೇಳದಲ್ಲಿ ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳಿನ ಜಿ.ಚೇತನ್‍ಕುಮಾರ್ ಅವರಿಂದ ನಾದಸ್ವರ, ಮೈಸೂರಿನ ಯದು ಕುಮಾರ್ ಅವರಿಂದ ಸ್ಯಾಕ್ಸೋಫೋನ್, ಮೈಸೂರಿನ ಹಂಸಿನಿ ಎಸ್.ಕುಮಾರ್ ಅವರಿಂದ ಸುಗಮಸಂಗೀತ, ಮೈಸೂರಿನ ಆದರ್ಶ ವಿ.ಸುಪ್ರಿಯ ಅವರಿಂದ ರಿವೈಬ್ ಡ್ಯಾನ್ಸ್ ಪ್ರದರ್ಶನವಾಯಿತು.
ಪುರಭವನ ವೇದಿಕೆಯಲ್ಲಿ ಚಿತ್ರದುರ್ಗದ ಸಾಹಿತ್ಯ ಸಾಮಾಜ್ರ್ಯ ನಾಟ್ಯ ಸಂಘದ ಸಿ.ಕೆ.ನಳನಿ ತಂಡದಿಂದ ಶ್ರೀ ಮಹಿಷಾ ಸುರ ಮರ್ಧಿನಿ ಕಾರ್ಯಕ್ರಮ ಪ್ರದರ್ಶನಗೊಂಡಿತು. ನಂತರ ಚಿಕ್ಕಗಡಿ ಯಾದ ವೇದಿಕೆಯಲ್ಲಿ ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರದಿಂದ ನಿಕೋಬಾರಿ ನೃತ್ಯ, ಮೈಸೂರಿನ ಮಲ್ಲಿಗೆ ಕಲಾತಂಡದ ಎಂ.ಸಿ.ಜಗದೀಶ್ ಅವರಿಂದ ಸುಗಮ ಸಂಗೀತ, ಮೈಸೂರಿನ ವಿ. ನಂಜುಂಡ ಮತ್ತು ಹೆಚ್.ಎಂ.ಮಹೇಶ್ ಅವರಿಂದ ಸುಗಮ ಸಂಗೀತ ಜುಗಲ್‍ಬಂದಿ, ಮೈಸೂರಿನ ಮೋಹನ್ ಸುಮುಖ್ ಗ್ರೂಪ್ ಕಲಾವಿದರಿಂದ `ಕ್ಲಾರಿಯೋನೆಟ್ ಫ್ಯೂಷನ್’ ವಾದನ ಜರುಗಿತು.
ರಂಗಾಯಣ ಭೂಮಿಗೀತಾದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ರಂಗಕರ್ಮಿ ಮೂರ್ತಿ ದೇರಾಜೆ ಅವರನ್ನು ಸನ್ಮಾನಿಸಲಾಯಿತು. ನಂತರ ಕಲಾವಿದ ಮಂಜುನಾಥ್ ಬೆಳೆಕೆರೆ ರಚನೆಯ ಎಸ್.ಕಾರ್ತಿಕ್ ನಿರ್ದೇಶನದ ಅಮೃತ ವಿದ್ಯಾಪೀಠಂ ವಿದ್ಯಾರ್ಥಿಗಳಿಂದ `ಇದಿತಾಯಿ’ ನಾಟಕ ಪ್ರದರ್ಶನಗೊಂಡಿತು.