ರಫೆಲ್ ಯುದ್ಧ ವಿಮಾನ ಖರೀದಿ: ರಿಲೆಯನ್ಸ್ ಕಂಪನಿ ಹಿತ ಕಾಯಲು ಎಚ್‍ಎಎಲ್‍ಗೆ ಕೇಂದ್ರ ಅವಮಾನ
ಮೈಸೂರು, ಮೈಸೂರು ದಸರಾ

ರಫೆಲ್ ಯುದ್ಧ ವಿಮಾನ ಖರೀದಿ: ರಿಲೆಯನ್ಸ್ ಕಂಪನಿ ಹಿತ ಕಾಯಲು ಎಚ್‍ಎಎಲ್‍ಗೆ ಕೇಂದ್ರ ಅವಮಾನ

October 14, 2018

ಬೆಂಗಳೂರು: ಸಮರ ವಿಮಾನ ತಯಾರಿಕೆಯಲ್ಲಿ ಅನುಭವ ಹೊಂದಿದ ಸಾರ್ವಜನಿಕ ಸ್ವಾಮ್ಯದ ಎಚ್‍ಎಎಲ್ ಸಂಸ್ಥೆ ಹಿತವನ್ನು ಬಲಿಕೊಟ್ಟು, ಮುಳುಗುತ್ತಿದ್ದ ರಿಲೆಯನ್ಸ್ ಕಂಪನಿ ಮೇಲೆತ್ತಲು ರಫೆಲ್ ಯುದ್ಧ ವಿಮಾನ ಖರೀದಿಗೆ ಕೇಂದ್ರ ಸರ್ಕಾರ ಅವಕಾಶ ಮಾಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದಿಲ್ಲಿ ಬಲವಾದ ಆರೋಪ ಮಾಡಿದ್ದಾರೆ.

ನಗರದ ಕಬ್ಬನ್ ಪಾರ್ಕ್ ಬದಿಯಲ್ಲಿನ ಮಿನ್ಸ್ ವೃತ್ತ ದಲ್ಲಿ ಎಚ್‍ಎಎಲ್‍ನ ಹಾಲಿ ಮತ್ತು ಮಾಜಿ ನೌಕರರ ಜೊತೆ ಸಂವಾದ ನಂತರ ಸುದ್ದಿಗಾರರೊಂದಿಗೆ ಪ್ರತ್ಯೇಕ ವಾಗಿ ಮಾತನಾಡಿದ ಅವರು, ಇಂತಹ ಒಪ್ಪಂದದಿಂದ ಕರ್ನಾಟಕ ಮತ್ತು ರಾಷ್ಟ್ರದ ಯುವಜನರ ವೈಮಾನಿಕ ಕ್ಷೇತ್ರದಲ್ಲಿನ ಸಾವಿರಾರು ಕೋಟಿ ರೂ. ಮೌಲ್ಯದ ಉದ್ಯೋಗವನ್ನು ಪ್ರಧಾನಿ ನರೇಂದ್ರ ಮೋದಿ ಕಸಿದು ಕೊಂಡಿದ್ದಾರೆ ಎಂದರು. ಈ ಒಪ್ಪಂದದ ಮೂಲಕ ಎಚ್‍ಎಎಲ್‍ಗೆ ದಕ್ಕಬೇಕಿದ್ದ ಗುತ್ತಿಗೆಯನ್ನು ಕಸಿದು ಕೊಂಡು ಸಂಸ್ಥೆಯನ್ನು ದಿವಾಳಿ ಮಾಡಲು ಹೊರಟಿ ದ್ದಾರೆ. ರಾಷ್ಟ್ರದಲ್ಲಿನ ತಂತ್ರಜ್ಞಾನ ದೇವಾಲಯಗಳ ಮೇಲೆ ಕೇಂದ್ರ ದಾಳಿ ಮಾಡುವುದರ ಜೊತೆಗೆ ನಾಶ ಮಾಡಲು ಮುಂದಾಗಿದೆ. ಯಾರಿಗೋ ಅನುಕೂಲ ಮಾಡಿಕೊಡುವ ಉದ್ದೇಶದ ಇಂತಹ ಒಪ್ಪಂದ ಸಾರ್ವ ಜನಿಕ ಸ್ವಾಮ್ಯದ ಸಂಸ್ಥೆಗಳು ಮುಚ್ಚಲು ಹಾಗೂ ಯುವ ಜನತೆ ನಿರುದ್ಯೋಗಿಗಳಾಗಲು ಕಾರಣವಾಗುತ್ತಿದೆ.

ಸಮರ ವಿಮಾನ ಒಪ್ಪಂದ ಸಂದರ್ಭದಲ್ಲಿ ಭಾರತದ ಯಾವ ಸಂಸ್ಥೆಯೊಂದಿಗೆ ಗುತ್ತಿಗೆ ಮಾಡಿಕೊಳ್ಳಬೇಕೆಂಬ ಬಗ್ಗೆ ರಫೆಲ್ ವಿಮಾನ ತಯಾರಿಕಾ ಸಂಸ್ಥೆ ಡಸಾಲ್ಟ್ ಜೊತೆ ಮಾತುಕತೆ ನಡೆದಿಲ್ಲ ಎಂಬುದಾಗಿ ರಕ್ಷಣಾ ಸಚಿವರು ಸುಳ್ಳು ಹೇಳುತ್ತಿದ್ದಾರೆ. ಅಂಬಾನಿ ಕಂಪನಿಗೆ ಗುತ್ತಿಗೆ ನೀಡಬೇಕೆಂಬ ಷರತ್ತನ್ನು ನರೇಂದ್ರ ಮೋದಿ ಡಸಾಲ್ಟ್ ಸಂಸ್ಥೆಗೆ ಹಾಕಿದ್ದರು. ಈ ಒಪ್ಪಂದದಿಂದ ಅಂಬಾನಿ ಕಂಪನಿಗೆ 30,000 ಕೋಟಿ ರೂ. ವ್ಯವಹಾರ ನಡೆಸಲು ಅವಕಾಶ ಮಾಡಿಕೊಡಲಾಗಿದೆ ಎಂದರು.

ಇದಕ್ಕೂ ಮುನ್ನ ಸಂವಾದ ಸಂದರ್ಭದಲ್ಲಿ ಮಾತ ನಾಡಿದ ರಾಹುಲ್ ಗಾಂಧಿ, ಸಮರ ವಿಮಾನ ತಯಾರಿಕೆ ಯಲ್ಲಿ 78 ವರ್ಷಗಳ ಅನುಭವ ಇರುವ ಎಚ್‍ಎಎಲ್ ಸಂಸ್ಥೆಗೆ ಗುತ್ತಿಗೆ ತಪ್ಪಿಸುವ ಮೂಲಕ ಅವಮಾನ ಮಾಡ ಲಾಗಿದೆ, ಸಂಸ್ಥೆಯ ದೇಶಪ್ರೇಮಕ್ಕೆ ಧಕ್ಕೆ ತರಲಾಗಿದೆ, ಇದಕ್ಕಾಗಿ ಕೇಂದ್ರ ಸರ್ಕಾರದ ಪರವಾಗಿ ನಾನು ಕ್ಷಮೆ ಕೇಳುತ್ತೇನೆ ಎಂದರು. ಎಚ್‍ಎಎಲ್‍ಗೆ ಸಮರ ವಿಮಾನ ತಯಾರಿಕೆಯಲ್ಲಿ ಎಲ್ಲಾ ತಾಂತ್ರಿಕ ಸಾಮಥ್ರ್ಯ ವಿದ್ದರೂ, ಯಾವುದೇ ಅನುಭವ ಇಲ್ಲದ ರಿಲೆಯನ್ಸ್‍ಗೆ ಗುತ್ತಿಗೆಯಲ್ಲಿ ಪಾಲು ನೀಡಲಾಗಿದೆ ಎಂದು ಟೀಕಿಸಿದರು.

ಇದಕ್ಕೂ ಮೊದಲು ಎಚ್‍ಎಎಲ್ ಸಂಸ್ಥೆಯ ಹಾಲಿ ಮತ್ತು ನಿವೃತ್ತ ನೌಕರರು ಮಾತನಾಡಿ, ನಮ್ಮ ಸಂಸ್ಥೆ ತಯಾರಿಸಿದ ಸಮರ ವಿಮಾನಗಳು ಚೀನಾ ಮತ್ತು ಪಾಕಿಸ್ತಾನದೊಂದಿಗಿನ ಯುದ್ಧಗಳಲ್ಲಿ ಸಾಹಸ ಮೆರೆದಿವೆ. ನಮ್ಮ ಎಚ್‍ಎಫ್-24 ನ್ಯಾಟೋ ವಿಮಾನಗಳು ಶತ್ರು ಪಡೆಗಳಿಗೆ ಸಿಂಹಸ್ವಪ್ನವಾಗಿದ್ದವು, ವಿಮಾನ ತಯಾರಿಕೆ ಯಲ್ಲಿ ಹೆಚ್ಚಿನ ಅನುಭವ ಹೊಂದಿದೆ, ನಮ್ಮ ತಂತ್ರ ಜ್ಞಾನವನ್ನು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರೇ ಕೊಂಡಾಡಿದ್ದಾರೆ ಎಂದರು.

Translate »