ಮೈಸೂರು: ಅಂಧ ತನವಿದ್ದರೇನು, ಅಂತರಂಗದ ಕಣ್ಣುಗಳ ಪ್ರಖರತೆಯ ಶಕ್ತಿಯಿಂದ ಆ ವಿಶೇಷ ಮಕ್ಕಳು ದಸರಾ ಯೋಗೋತ್ಸವದಲ್ಲಿ ಯಾವುದೇ ಆಯಾಸ, ಅಡ್ಡಿ-ಆತಂಕ ವಿಲ್ಲದೆ, ನಿರರ್ಗಳವಾಗಿ ಕಠಿಣ ಯೋಗಾ ಸನದ ಭಂಗಿಗಳನ್ನು ಪ್ರದರ್ಶಿಸುವ ಮೂಲಕ ನೆರೆದವರಲ್ಲಿ ಅಚ್ಚರಿ ಮೂಡಿಸಿ ರೋಮಾಂಚನಗೊಳಿಸಿದರು.
ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ-ಆಲೂರ ಗ್ರಾಮದ ಜ್ಞಾನಸಿಂಧು ಅಂಧ ಮಕ್ಕಳ ವಸತಿಯುತ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಇಂತಹ ರೋಚಕ ಕ್ಷಣಗಳನ್ನು ಅನಾವರಣಗೊಳಿಸಿದರು. ಯೋಗೋತ್ಸವದಲ್ಲಿದ್ದ ಎಲ್ಲಾ ಆಸನ ಗಳನ್ನು ಯಾವುದೇ ಅಡ್ಡಿ ಇಲ್ಲದಂತೆ ಪ್ರದರ್ಶಿಸಿ, ಅಚ್ಚರಿ ಮೂಡಿಸಿದರು.
ಪತ್ರಿಕೆಯೊಂದಿಗೆ ಮಾತನಾಡಿದ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶಿವಾ ನಂದ ಕೇಲೂರಾ, ನಮ್ಮ ಶಾಲೆಯ ಮಕ್ಕಳು ಸಹಜ ಯೋಗಪಟುಗಳ (ಕಣ್ಣು ಹೊಂದಿರುವ) ಎದುರು ಸ್ಪರ್ಧೆ ಮಾಡಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಕೀರ್ತಿ ಗಳಿಸಿದ್ದಾರೆ.
ಮಲ್ಲಗಂಭ ಪ್ರದರ್ಶನದಲ್ಲಿ ಯಾವುದೇ ಅಳುಕಿಲ್ಲದೆ, ಪ್ರದರ್ಶನ ನೀಡುವ ಕಲೆ ಕರಗತ ಮಾಡಿಕೊಂಡಿ ದ್ದಾರೆ. ದೇಶದಲ್ಲೇ ಮಲ್ಲಗಂಭ ಸಾಹಸ ಕಲೆ ಪ್ರದರ್ಶನ ನೀಡುವ ಅಂಧ ಮಕ್ಕಳ ತಂಡ ನಮ್ಮ ಶಾಲೆಯ ವಿದ್ಯಾರ್ಥಿ ತಂಡ ಒಂದೇ ಇರಬೇಕು ಎಂದು ಸಂತಸ ವ್ಯಕ್ತಪಡಿಸಿದರು.