ಜಯದೇವದಲ್ಲಿ ನೂರಾರು ಮಂದಿಗೆ ಯಶಸ್ವಿ ಆಂಜಿಯೋಪ್ಲಾಸ್ಟಿ ಕಾರ್ಯಾಗಾರ
ಮೈಸೂರು

ಜಯದೇವದಲ್ಲಿ ನೂರಾರು ಮಂದಿಗೆ ಯಶಸ್ವಿ ಆಂಜಿಯೋಪ್ಲಾಸ್ಟಿ ಕಾರ್ಯಾಗಾರ

October 15, 2018

ಮೈಸೂರು: ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಕಳೆದ 5 ದಿನಗಳಲ್ಲಿ 225 ಹೃದ್ರೋಗಿಗಳಿಗೆ ಉಚಿತವಾಗಿ ಆಂಜಿಯೋ ಪ್ಲಾಸ್ಟಿ ಮಾಡಿರುವುದು ಮತ್ತೊಂದು ದಾಖಲೆಯಾಗಿದೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಪದ್ಮಶ್ರೀ ಡಾ. ಸಿ.ಎನ್. ಮಂಜುನಾಥ್ ತಿಳಿಸಿದರು.

ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆ ಯಲ್ಲಿ ನಡೆದ ಇಂಡೋ ಅಮೇರಿಕನ್ ಆಂಜಿಯೋಪ್ಲಾಸ್ಟಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ಯಾವ ರಾಜ್ಯದಲ್ಲಿಯೂ ಉಚಿತ ವಾಗಿ ಆಂಜಿಯೋಪ್ಲಾಸ್ಟಿ ಕಾರ್ಯಾಗಾರ ನಡೆಸುತ್ತಿಲ್ಲ. ಆದರೆ ಅಮೇರಿಕದಲ್ಲಿ ನೆಲೆಸಿ ರುವ ಡಾ. ಸುಬ್ರಮಣಿಯವರ ಸೇವಾ ಮನೋಭಾವ, ಮಾನವೀಯ ಕಳಕಳಿ ಯಿಂದ ಬಡವರಿಗೆ ಸಹಾಯ ಹಸ್ತ ನೀಡುತ್ತಿ ರುವುದರಿಂದ ಕಳೆದ 10 ವರ್ಷಗಳಿಂದ ಉಚಿತವಾಗಿ ಕಾರ್ಯಾಗಾರ ಮಾಡುತ್ತಿದ್ದೇವೆ. ಈ ಕಾರ್ಯಾಗಾರಕ್ಕೆ ಸುಮಾರು 2 ಕೋಟಿ ವೆಚ್ಚವಾಗಿದ್ದು, ಉಚಿತವಾಗಿ ಮೂರು ತಿಂಗಳ ವರೆಗೆ ಔಷಧಿಯನ್ನು ವಿತರಿಸಲಾಗಿದೆ ಎಂದರು.

ಕರ್ನಾಟಕ ರಾಜ್ಯವಲ್ಲದೆ ಪಶ್ಚಿಮ ಬಂಗಾಳ, ಜಾರ್ಖಂಡ್, ಅಸ್ಸಾಂ, ಉತ್ತರ ಪ್ರದೇಶ, ರಾಜ್ಯಗಳ ರೋಗಿಗಳಿಗೂ ಚಿಕಿತ್ಸೆ ನೀಡ ಲಾಗಿದೆ. ಇದರಲ್ಲಿ ಕಡುಬಡವರು, ನಿರ್ಗ ತಿಕರು, ರೈತಾಪಿ ವರ್ಗ, ಅಶಕ್ತ ನಾಗರಿಕ ರಿಗೆ ಚಿಕಿತ್ಸೆ ನೀಡಲಾಗಿದೆ. 28 ವರ್ಷದ ಯುವಕರಿಂದ ಹಿಡಿದು 82 ವರ್ಷದ ವಯೋವೃದ್ಧರವರೆಗೂ ಚಿಕಿತ್ಸೆ ನೀಡಲಾ ಗಿದೆ. ಚಿಕಿತ್ಸೆಗೆ ಒಳಗಾದವರಲ್ಲಿ ಶೇ. 45 ರಷ್ಟು ಜನರು ಸಕ್ಕರೆ ಕಾಯಿಲೆ ಇದ್ದವರು. ಶೇ.40ರಷ್ಟು ಜನರು ಅಧಿಕ ರಕ್ತದ ಒತ್ತಡ ದಿಂದ ಕೂಡಿದವರಾಗಿದ್ದರು. ಶೇ. 60 ರಷ್ಟು ಜನರು ಧೂಮಪಾನ ಮಾಡಿದ ವರು ಇದ್ದರು. ಆದ್ದರಿಂದ ಜನರು ನಿಯ ಮಿತ ಆಹಾರ, ವ್ಯಾಯಾಮ, ಪ್ರತೀ ವರ್ಷ ಹೃದಯ ತಪಾಸಣೆ ಮಾಡಿಸಿಕೊಳ್ಳುವು ದರ ಜೊತೆಗೆ ಧೂಮಪಾನ ಮದ್ಯಪಾನ ದಂತಹ ದುಶ್ಚಟಗಳಿಂದ ದೂರವಿರುವುದು ಒಳ್ಳೆಯದೆಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಡಾ.ಸುಬ್ರಮಣಿ, ಡಾ. ರವೀಂದ್ರ ನಾಥ್, ಡಾ.ಸದಾನಂದ್, ಡಾ. ಹರ್ಷಬಸಪ್ಪ, ಡಾ.ಪಾಂಡುರಂಗ, ಡಾ. ಸಂತೋಷ್, ಡಾ. ರಾಜಿತ್, ಡಾ.ಭಾರತಿ, ಡಾ.ಹರ್ಷ, ಪಿಆರ್‍ಓ ವಾಣಿ, ಚಂಪಕ ಮಾಲ, ನರ್ಸಿಂಗ್ ಅಧೀಕ್ಷಕ ಹರೀಶ, ಗುರುಸ್ವಾಮಿ, ಉಮಾ, ಸುನೀತ, ನಾಗರಾಜು ಹಾಜರಿದ್ದರು.

ONE COMMENT ON THIS POST To “ಜಯದೇವದಲ್ಲಿ ನೂರಾರು ಮಂದಿಗೆ ಯಶಸ್ವಿ ಆಂಜಿಯೋಪ್ಲಾಸ್ಟಿ ಕಾರ್ಯಾಗಾರ”

  1. Dr.Shankařsìra says:

    Dr.cn Manjunath sir is great humanatarin with commitment care and kindness towards poorest of the poor heart patients.For past 12 years as Director of JAYADEVA Hospital sir as achieved best reputation..and made Karnataka government proud . All jic institutes banglore Jic…Esi center New mysoor hospital and Gulbarga has made Good service and saved thosunds of lives.
    We solute padmashree dr CN.Manjunath sìr and team of Jaydeva hospital..

    Dr.shankarSira.

Translate »