ಜಯದೇವ ಹೃದ್ರೋಗ ಆಸ್ಪತ್ರೆ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿದೆ
ಮೈಸೂರು

ಜಯದೇವ ಹೃದ್ರೋಗ ಆಸ್ಪತ್ರೆ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿದೆ

February 11, 2019

ಮೈಸೂರು: ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆ ಪೂರ್ಣ ಪ್ರಮಾಣದಲ್ಲಿ ಎಲ್ಲಾ ವಿಭಾಗಗಳು ಕಾರ್ಯನಿರ್ವಹಿಸುತ್ತಿದ್ದು, ಸಿಬ್ಬಂದಿ ಸೌಲಭ್ಯದ ಯಾವುದೇ ಕೊರತೆ ಇಲ್ಲ ಎಂದು ಜಯ ದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಪದ್ಮಶ್ರೀ ಡಾ.ಸಿ.ಎನ್.ಮಂಜುನಾಥ್ ಸ್ಪಷ್ಟಪಡಿಸಿದ್ದಾರೆ.

ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಜಯದೇವ ಆಸ್ಪತ್ರೆ ಕಳೆದ 10 ವರ್ಷಗಳಲ್ಲಿ ಶೇ.500 ರಷ್ಟು ಪ್ರಗತಿ ಸಾಧಿಸಿದ್ದು, ಹೃದ್ರೋಗ ಕ್ಷೇತ್ರದಲ್ಲಿ ಭಾರತದ ಭೂಪಟದಲ್ಲಿ ಮೊದಲನೇ ಸ್ಥಾನದಲ್ಲಿದೆ. ಜಯದೇವ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ಹಾಗೂ ಸಿಬ್ಬಂದಿ ಗಳ ಸೇವಾ ಮನೋಭಾವ ಹಾಗೂ ಆಸ್ಪತ್ರೆ ಮೇಲಿರುವ ವಿಶ್ವಾಸದಿಂದ ಪ್ರತಿದಿನ 500 ಜನ ಹೊರರೋಗಿಗಳು ಬರುತ್ತಿದ್ದಾರೆ. ಪ್ರತಿದಿನ 25ರಿಂದ 30 ರೋಗಿ ಗಳಿಗೆ ಆಂಜಿಯೋಪ್ಲಾಸ್ಟಿ ಮತ್ತು ಆಂಜಿಯೋಗ್ರಾಂ ಮಾಡಲಾಗುತ್ತಿದ್ದು, ಈಗಾಗಲೇ 60 ಜನರಿಗೆ ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ವಿಶೇಷ ಹೊರ ರೋಗಿಗಳ ವಿಭಾಗವಿದ್ದು, ಮಾಸ್ಟರ್ ಹೆಲ್ತ್ ಚೆಕ್ ಅಪ್ ಮಾಡಲಾಗುತ್ತಿದೆ. ಆಸ್ಪತ್ರೆಯಲ್ಲಿ ಅತ್ಯುನ್ನತ ತಜ್ಞ ವೈದ್ಯರು ಗಳಿದ್ದು, ಸಾಮಾನ್ಯ ರೋಗಿಗಳಿಗೆ, ಬಡವರಿಗೆ ಪಂಚ ತಾರಾ ಆಸ್ಪತ್ರೆಯಲ್ಲಿ ಸಿಗುವ ಸೌಲಭ್ಯ ನೀಡಲಾಗು ತ್ತಿದೆ. ಇತ್ತೀಚೆಗೆ ಆಸ್ಪತ್ರೆಗೆ ಭೇಟಿ ನೀಡಿದ ಅಮೇರಿಕಾದ ಹೃದ್ರೋಗ ತಜ್ಞರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗುಲ್ಬರ್ಗಾದಲ್ಲಿ ಜಯದೇವ ನೂತನ ಆಸ್ಪತ್ರೆಯ ಕಟ್ಟಡ ನಿರ್ಮಾಣಕ್ಕೆ ಬಜೆಟ್‍ನಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ 150 ಕೋಟಿ ರೂ.ಗಳನ್ನು ನೀಡಿದ್ದಾರೆ. ಜಿಲ್ಲಾ ಆರೋಗ್ಯ ಅಧಿಕಾರಿಗಳ ಕಚೇರಿ ಆವರಣ ದಲ್ಲಿ 7 ಎಕರೆ ಜಾಗ ಗುರುತಿಸಿದ್ದು, 350 ಹಾಸಿಗೆ ಸಾಮಥ್ರ್ಯದ ಆಸ್ಪತ್ರೆ ನೂತನ ಕಟ್ಟಡ ನಿರ್ಮಾಣ ಕಾಮಗಾರಿ 3 ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಹೈದರಾಬಾದ್ ಕರ್ನಾಟಕ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದರು. ಬೆಂಗಳೂರಿನ ಜಯದೇವ ಆಸ್ಪತ್ರೆ ಈಗಾಗಲೇ 700 ಹಾಸಿಗೆ ಸಾಮಥ್ರ್ಯ ಹೊಂದಿದ್ದು, ಪ್ರತಿನಿತ್ಯ 1500 ಹೊರ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. 300 ಹಾಸಿಗೆ ಸಾಮಥ್ರ್ಯದ ಹೊಸ ಕಟ್ಟಡ ಶೀಘ್ರ ದಲ್ಲೇ ನಿರ್ಮಾಣವಾಗಲಿದ್ದು, ಇದನ್ನು ಇನ್ಫೋಸಿಸ್ ಫೌಂಡೇಷನ್‍ನ ಅಧ್ಯಕ್ಷರಾದ ಸುಧಾಮೂರ್ತಿ ಹಾಗೂ ನಾರಾಯಣ ಮೂರ್ತಿ ದಂಪತಿ ಈ ಆಸ್ಪತ್ರೆ ಕಟ್ಟಡ ವನ್ನು ಕೊಡುಗೆಯಾಗಿ ಕಟ್ಟಿಸಿಕೊಡಲಿದ್ದಾರೆ. ಬೆಂಗಳೂರಿನಲ್ಲಿ ಪುನರ್ವಸತಿ ಕೇಂದ್ರ, ರೋಗಿಗಳ ತಂಗು ದಾಣ ಹಾಗೂ 40 ಹಾಸಿಗೆ ಸಾಮಥ್ರ್ಯವುಳ್ಳ ಕಾರ್ಡಿ ಯಾಕ್ ವಾರ್ಡ್‍ಗಳನ್ನು ದಾನಿಗಳ ಸಹಾಯದಿಂದ ಪ್ರಾರಂಭಿಸಲಾಗುತ್ತಿದೆ. ಹನುಮಾನ್ ಮತ್ತು ಶಾರದಮ್ಮ ದಂಪತಿಗಳು ಡಾ. ಸಂದೀಪ್ ಸ್ಮರಣಾರ್ಥವಾಗಿ 62 ಲಕ್ಷ ದೇಣಿಗೆ ನೀಡಿದ್ದಾರೆ. ಚೆನ್ನೈನ ಬಾದಲ್ ಚಂದ್ ಟ್ರಸ್ಟ್ 50 ಲಕ್ಷ ದೇಣಿಗೆ ನೀಡಿದ್ದಾರೆ. ಕೆನರಾ ಬ್ಯಾಂಕ್ ಅಂಗ ಸಂಸ್ಥೆಯಾದ ಕ್ಯಾನ್‍ಫಿನ್ ಸಂಸ್ಥೆಯಿಂದ ಹಾರ್ಟ್ ಲಂಗ್ ಉಪಕರಣಕ್ಕೆ 86 ಲಕ್ಷ ದೇಣಿಗೆಯನ್ನು ಉದಾರ ವಾಗಿ ನೀಡಿದೆ ಎಂದರು.

ಈ ಸಂದರ್ಭದಲ್ಲಿ ಆರ್.ಎಂ.ಒ. ಡಾ.ಪಾಂಡುರಂಗ, ಡಾ. ಹರ್ಷಬಸಪ್ಪ, ಡಾ. ಹೇಮಾ ರವೀಶ್, ಡಾ. ಭಾರತಿ, ಡಾ. ಸಂತೋಷ್, ಡಾ. ರಾಜೀತ್, ಡಾ.ದೇವರಾಜ್, ನರ್ಸಿಂಗ್ ಅಧೀಕ್ಷಕ ಕೆ.ಹರೀಶ್, ಪಿಆರ್‍ಒ ವಾಣಿ ಹಾಗೂ ಚಂಪಕ ಮಾಲ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »