ಕನಿಷ್ಠ ವೇತನ ಜಾರಿಗೆ ರಾಜ್ಯ ಕಾರ್ಯದರ್ಶಿ ನಾಗಲಕ್ಷ್ಮಿ ಆಗ್ರಹ
ಮೈಸೂರು

ಕನಿಷ್ಠ ವೇತನ ಜಾರಿಗೆ ರಾಜ್ಯ ಕಾರ್ಯದರ್ಶಿ ನಾಗಲಕ್ಷ್ಮಿ ಆಗ್ರಹ

February 11, 2019

ಮೈಸೂರು: ದುಡಿ ತಕ್ಕೆ ತಕ್ಕಂತೆ ಇಲ್ಲದ ಗೌರವಧನವನ್ನು ರದ್ದು ಗೊಳಿಸಿ, ಕನಿಷ್ಟ ವೇತನ ಮಾಸಿಕ ರೂ. 21,000 ನೀಡಬೇಕು. ಅಕ್ಷರ ದಾಸೋಹ ಯೋಜನೆಯ ಕಾರ್ಯಕರ್ತೆಯರಾದ ಅಡುಗೆಯವರು ಮತ್ತು ಸಹಾಯಕರನ್ನು ಖಾಯಂಗೊಳಿಸಬೇಕು. ಅಲ್ಲಿಯವರೆಗೆ ಇಂಡಿಯನ್ ಲೇಬರ್ ಆರ್ಗನೈಸೇಷನ್ ನಿಗದಿಪಡಿಸಿದ ಕನಿಷ್ಟ ವೇತನದಂತೆ ಜೀವನ ಯೋಗ್ಯ ವೇತನ ಜಾರಿ ಮಾಡಬೇಕು. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಷ್ಟು ಅಡುಗೆ ತಯಾರಕರು ಮತ್ತು ಸಹಾಯಕರನ್ನು ನೇಮಕ ಮಾಡಬೇಕು. ಅಡುಗೆ ತಯಾರಕರು ಮತ್ತು ಸಹಾಯಕರಿಗೆ ಸಾಮಾಜಿಕ ಭದ್ರತೆಯೊಂ ದಿಗೆ ಆರೋಗ್ಯ ರಕ್ಷಣೆ, ವಿಮೆ, ರಜೆ, ಹೆರಿಗೆ ರಜೆ, ಹೆರಿಗೆ ಭತ್ಯೆ, ಪಿಂಚಣಿ ಇನ್ನಿತರ ಸೌಲಭ್ಯಗಳನ್ನು ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಭಾನುವಾರ ಮೈಸೂರಿನಲ್ಲಿ ನಡೆದ ಅಕ್ಷರ ದಾಸೋಹ ಕಾರ್ಯಕರ್ತೆ ಯರ ಸಮಾವೇಶದಲ್ಲಿ ಒತ್ತಾಯಿಸಲಾಯಿತು.
ಮೈಸೂರಿನ ಹರ್ಷ ರಸ್ತೆ ವರ್ಧ ಮಾನಯ್ಯ ಸ್ಮಾರಕ ಭವನದಲ್ಲಿ ಎಐಯು ಟಿಯುಗೆ ಸಂಯೋಜಿತವಾದ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿ ಕರ ಸಂಘದ ವತಿಯಿಂದ ನಡೆದ ಸಮಾ ವೇಶದಲ್ಲಿ ಭಾಗವಹಿಸಿದ್ದ 300ಕ್ಕೂ ಹೆಚ್ಚು ಅಕ್ಷರ ದಾಸೋಹ ಕಾರ್ಯಕರ್ತರು ಈ ಕುರಿತ ನಿರ್ಣಯ ಅಂಗೀಕರಿಸಿದರು.

ಸಮಾವೇಶಕ್ಕೆ ಚಾಲನೆ ನೀಡಿ ಮಾತ ನಾಡಿದ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದ ರಾಜ್ಯ ಕಾರ್ಯದರ್ಶಿ ನಾಗಲಕ್ಷ್ಮಿ, ಅಡುಗೆ ಮಾಡು ವಾಗ ಕಾಟನ್ ಸೀರೆಯನ್ನೇ ಉಡಬೇಕು. ವೇಪ್ರನ್ ತೊಡಬೇಕು, ಕೈಗಳಿಗೆ ಗ್ಲೌಸ್ ಧರಿಸಬೇಕು ಎಂಬಿತ್ಯಾದಿ ನಿಯಮಗಳನ್ನು ಪಾಲಿಸುವಂತೆ ಹೇಳುವ ಸರ್ಕಾರ, ಕಾರ್ಮಿ ಕರಿಗೆ ಸಮವಸ್ತ್ರದ ಜೊತೆಗೆ ಅವೆಲ್ಲವನ್ನೂ ಸರ್ಕಾರ ಕಾಲ ಕಾಲಕ್ಕೆ ಸರಿಯಾಗಿ ಪೂರೈಸ ಬೇಕು. ಸರ್ಕಾರ ನಮಗೆ ನೀಡುತ್ತಿರುವ 2600 ರೂ. ಭತ್ಯೆ ಏತಕ್ಕೂ ಸಾಲುವುದಿಲ್ಲ. ನಮ್ಮ ಹೊಟ್ಟೆಗಿಲ್ಲದಿದ್ದರೂ ಸಮಯಕ್ಕೆ ಸರಿಯಾಗಿ ಮಕ್ಕಳ ಹಸಿವು ನೀಗಿಸುವ ನಮಗೆ ಸೂಕ್ತ ಮಾಸಿಕ ಭತ್ಯೆ ನೀಡಬೇಕು. ಕನಿಷ್ಟ ವೇತನ ಜಾರಿಗೊಳಿಸಬೇಕು. ನಮ್ಮನ್ನು ನಿಕೃಷ್ಟವಾಗಿ ದುಡಿಸಿಕೊಳ್ಳುತ್ತಿರುವ ಸರ್ಕಾರ, ಕನಿಷ್ಟ ವೇತನ ಜಾರಿಗೊಳಿಸ ಬೇಕು. ಇದಕ್ಕಾಗಿ ಅಡುಗೆ ಕಾರ್ಮಿಕರು ಒಗ್ಗಟ್ಟಿನಿಂದ ಹೋರಾಟ ನಡೆಸುವುದು ಅಗತ್ಯ ಎಂದು ಸಲಹೆ ನೀಡಿದರು.
ಸಂಘದ ಜಿಲ್ಲಾ ಸಂಚಾಲಕ ಮುದ್ದು ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಎಸ್‍ಯು ಸಿಐ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಸಮಿತಿ ಸದಸ್ಯೆ ಪಿ.ಸಂಧ್ಯಾ, ಎಐಯುಟಿಯುಸಿ ಜಿಲ್ಲಾ ಸಂಚಾಲಕ ಚಂದ್ರಶೇಕರ್ ಮೇಟಿ, ಎಐಎಂಎಸ್‍ಎಸ್ ಜಿಲ್ಲಾ ಕಾರ್ಯದರ್ಶಿ ¸ಜಿ.ಎಸ್.ಸೀತಾ, ಪದಾಧಿಕಾರಿಗಳಾದ ವಿಜಯಾಬಾಯಿ, ಗೀತಾ, ಹಿಹಾನ ತಸ್ನಿಂ, ಮೆಹರುನ್ನಿಸಾ, ಜ್ಯೋತಿ, ರಾಜೇ ಶ್ವರಿ, ರೇಖಾ, ಸುಲೋಚನಾ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Translate »