8 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ  ಕಾಮಗಾರಿಗೆ ಸಚಿವ ಜಿಟಿಡಿ ಚಾಲನೆ
ಮೈಸೂರು

8 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಸಚಿವ ಜಿಟಿಡಿ ಚಾಲನೆ

February 11, 2019

ಮೈಸೂರು: ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಜಿಲ್ಲೆಯ ವಿವಿಧೆಡೆ 8.06 ಕೋಟಿ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಭಾನುವಾರ ಚಾಲನೆ ನೀಡಿದರು.

ಮೈಸೂರು ತಾಲೂಕಿನ ಶ್ರೀರಾಂಪುರ ರಿಂಗ್‍ರಸ್ತೆ ಬಳಿ ಕೊಟಗೇರಿ-ಬಾವಲಿ ಹೆದ್ದಾರಿ 33ರ ಸಂಪರ್ಕ ರಸ್ತೆ 192.90 ಕಿ.ಮೀ.ನಿಂದ 195ರವರೆಗೆ 4.60 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.

125 ಲಕ್ಷ ರೂ. ವೆಚ್ಚದಲ್ಲಿ ಮಹದೇವಪುರ ಗ್ರಾಮ ದಿಂದ ಮಾನಂದವಾಡಿ ರಸ್ತೆ ಮೂಲಕ ಶ್ರೀರಾಂಪುರಕ್ಕೆ ಹೋಗುವ ರಸ್ತೆ ಅಭಿವೃದ್ಧಿ, 176 ಲಕ್ಷ ರೂ. ವೆಚ್ಚದಲ್ಲಿ ಶ್ರೀರಾಂಪುರ (ಮಹದೇವಪುರ) ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ ಹಾಗೂ ಮೈಸೂರಿನ ಮುಡಾ ವತಿಯಿಂದ 45 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸುವ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಸಚಿವ ಜಿ.ಟಿ.ದೇವೇಗೌಡ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಮ ಗಾರಿಗಳನ್ನು ಅಚ್ಚುಕಟ್ಟಾಗಿ, ಯಾವುದೇ ದೂರುಗಳು ಬರದಂತೆ ಅಚ್ಚುಕಟ್ಟಾಗಿ, ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

Translate »