ಮೈಸೂರು: ಎರಡು ಪ್ರತ್ಯೇಕ ಹತ್ಯೆ ಪ್ರಕರಣಗಳ ನಾಲ್ವರು ಹಂತಕರಿಗೆ ಮೈಸೂರಿನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ನಜರ್‍ಬಾದ್‍ನ ಪೀಪಲ್ಸ್ ಪಾರ್ಕ್ ಕಾವಲುಗಾರ ವೆಂಕಟರಂಗಯ್ಯ ಹತ್ಯೆ ಮಾಡಿದ್ದ ಎಸ್.ಶೇಖರ್, ಸಿ.ಆರ್. ಪ್ರದೀಪ್ ಮತ್ತು ಕುಂಟ ಹಾಗೂ ಕ್ಷುಲ್ಲಕ ಕಾರಣಕ್ಕೆ ದಿನೇಶ್ ಎಂಬುವವರನ್ನು ಹತ್ಯೆ ಮಾಡಿದ ಮನುಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಮಂಗಳಮುಖಿಯರಿಂದ ಹಣ ದೋಚಲೆಂದು ಎಸ್.ಶೇಖರ್, ಸಿ.ಆರ್.ಪ್ರದೀಪ್ ಮತ್ತು ಕುಂಟ, 2016ರ ಅ.21ರಂದು ಪೀಪಲ್ಸ್‍ಪಾರ್ಕ್‍ಗೆ ಬಂದಿದ್ದು, ಇವರನ್ನು ಕಂಡ ಮಂಗಳಮುಖಿಯರು ಪರಾರಿಯಾಗಿದ್ದಾರೆ….
ಇಂದಿನಿಂದ ಮೈಸೂರು ದಸರಾ ಮಹೋತ್ಸವ
October 10, 2018ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ನಾಳೆ(ಬುಧವಾರ) ಆರಂಭಗೊಳ್ಳಲಿದೆ.ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಶ್ರೀಮತಿ ಸುಧಾಮೂರ್ತಿ ಅವರು ಚಾಮುಂಡಿ ಬೆಟ್ಟದಲ್ಲಿ ನಾಡಿನ ಅಧಿದೇವತೆ ತಾಯಿ ಶ್ರೀ ಚಾಮುಂಡೇಶ್ವರಿ ದೇವಿಗೆ ಬುಧವಾರ ಬೆಳಿಗ್ಗೆ 7.05ರಿಂದ 7.35 ಗಂಟೆಯೊಳಗೆ ಸಲ್ಲುವ ಶುಭ ಲಗ್ನದಲ್ಲಿ ಅಗ್ರ ಪೂಜೆ ಸಲ್ಲಿಸುವ ಮೂಲಕ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡುವರು. ದಸರಾ ಉದ್ಘಾಟಿ ಸಲೆಂದು ಸುಧಾಮೂರ್ತಿ ಅವರು ಇಂದು ವಿಶೇಷ ವಿಮಾನದಲ್ಲಿ ಮೈಸೂರಿಗೆ ಆಗಮಿಸಿದ್ದು, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಪುಷ್ಪಗುಚ್ಛ ನೀಡುವ ಮೂಲಕ ಅವರನ್ನು…
ಸುಧಾಮೂರ್ತಿ ಅವರಿಗೆ ಮೈಸೂರು ಜಿಲ್ಲಾಡಳಿತದಿಂದ ಆತ್ಮೀಯ ಸ್ವಾಗತ
October 10, 2018ಮೈಸೂರು: ‘ಎನಿತು ಜನರಿಗೆ, ಎನಿತು ಜನ್ಮಗಳಿಗೆ, ನಾನು ಎನಿತು ಋಣಿಯೋ, ಹಾಗೆ ನೋಡಿದರೆ ಈ ಜನ್ಮವೆಂಬುದು ಒಂದು ಋಣದ ಗಣಿಯೋ….’ ಹೀಗೆ ಕನ್ನಡದ ಜನತೆಗೆ ನಾನು ಋಣಿಯಾಗಿದ್ದೇನೆ ಎಂದು ದಸರಾ ಮಹೋತ್ಸವದ ಉದ್ಘಾಟನೆ ನೆರವೇರಿಸಲಿರುವ ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾಮೂರ್ತಿ ಸಂತಸ ವ್ಯಕ್ತಪಡಿಸಿದ್ದಾರೆ. ದಸರಾ ಉದ್ಘಾಟನೆಗಾಗಿ ಮಂಗಳವಾರ ಮೈಸೂರಿಗೆ ಆಗಮಿಸಿದ ಶ್ರೀಮತಿ ಸುಧಾಮೂರ್ತಿ ಅವರನ್ನು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಜಿಲ್ಲಾಡಳಿತದ ಪರವಾಗಿ ಸ್ವಾಗತಿಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸುಧಾಮೂರ್ತಿ ಅವರು,…
ಅರಮನೆಯಲ್ಲಿ ಇಂದಿನಿಂದ ಖಾಸಗಿ ದರ್ಬಾರ್
October 10, 2018ಮೈಸೂರು: ದಸರಾ ಮಹೋತ್ಸವದ ಪ್ರಮುಖ ಧಾರ್ಮಿಕ ಆಚರಣೆಗಳಲ್ಲಿ ಒಂದಾಗಿರುವ ಖಾಸಗಿ ದರ್ಬಾರ್ ನಾಳೆಯಿಂದ(ಅ.10) ಆರಂಭವಾಗಲಿದೆ. ಅರಮನೆಯ ದರ್ಬಾರ್ ಹಾಲ್‍ನಲ್ಲಿ ರಾಜಪರಂಪರೆಯೂ ಆದ ಖಾಸಗಿ ದರ್ಬಾರ್‍ನಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ರತ್ನ ಖಚಿತ ಸಿಂಹಾಸನವೇರಿ ಸಾಂಪ್ರದಾಯಿಕ ಪೂಜಾ ವಿಧಿ ವಿಧಾನ ನೆರವೇರಿಸಲಿದ್ದಾರೆ. ಖಾಸಗಿ ದರ್ಬಾರ್ ಹಿನ್ನೆಲೆಯಲ್ಲಿ ಬುಧವಾರ ಮುಂಜಾನೆ 4.30ಕ್ಕೆ ಎಣ್ಣೆಶಾಸ್ತ್ರ ನಡೆಯಲಿದೆ. ನಂತರ ಅ.4ರಂದು ದರ್ಬಾರ್ ಹಾಲ್‍ನಲ್ಲಿ ಜೋಡಿಸಲ್ಪಟ್ಟಿರುವ ಚಿನ್ನದ ಸಿಂಹಾಸನಕ್ಕೆ ಬೆಳಿಗ್ಗೆ 5.30ರಿಂದ 6ಗಂಟೆಯೊಳಗೆ ಸಿಂಹವನ್ನು ಜೋಡಿಸಲಾಗುತ್ತದೆ. ಬೆ. 7.02ರಿಂದ 7.45ರೊಳಗೆ ಚಾಮುಂಡಿ…
ಮೈಸೂರು ನಗರ ಪಾಲಿಕೆ ಪೌರ ಕಾರ್ಮಿಕರ ಮುಷ್ಕರ ಅಂತ್ಯ
October 10, 2018ಮೈಸೂರು: ಮುಖ್ಯಮಂತ್ರಿಗಳೊಂದಿಗಿನ ಮಾತುಕತೆ ಯಶಸ್ವಿಯಾಗಿದ್ದು, ಇದರೊಂದಿಗೆ ಕಳೆದ 7 ದಿನಗಳಿಂದ ಮೈಸೂರು ಮಹಾನಗರ ಪಾಲಿಕೆ ಪೌರ ಕಾರ್ಮಿಕರು ನಡೆಸುತ್ತಿದ್ದ ಮುಷ್ಕರ ಅಂತ್ಯ ಗೊಂಡಿದೆ. ತಮ್ಮ ಬೇಡಿಕೆ ಗಳನ್ನು ಈಡೇರಿಸುವುದಾಗಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿರುವುದರಿಂದ ಮುಷ್ಕರ ಕೈಬಿಟ್ಟು ಇಂದು ರಾತ್ರಿಯಿಂದಲೇ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗುವಂತೆ ತಾವು ಪೌರ ಕಾರ್ಮಿಕರಿಗೆ ಸೂಚನೆ ನೀಡಿದ್ದೇನೆ ಎಂದು ಪೌರ ಕಾರ್ಮಿಕರ ಸಂಘದ ಮುಖಂಡರಾದ ಮಾಜಿ ಮೇಯರ್ ನಾರಾಯಣ ಅವರು `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಎಲ್ಲಾ 2000 ಮಂದಿ ಪೌರಕಾರ್ಮಿ ಕರು…
ಜಂಬೂ ಸವಾರಿಗೆ ಸಾಂಸ್ಕೃತಿಕ ನಗರಿ ಸಜ್ಜು
October 10, 2018ಮೈಸೂರು: ಅಕ್ಟೋಬರ್ 19ರಂದು ನಡೆಯಲಿರುವ ವಿಶ್ವವಿಖ್ಯಾತ ಜಂಬೂ ಸವಾರಿಗೆ (ವಿಜಯದಶಮಿ ಮೆರವಣಿಗೆ) ಸಾಂಸ್ಕೃತಿಕ ನಗರಿ ಸರ್ವ ರೀತಿಯಲ್ಲಿ ಸಜ್ಜುಗೊಂಡು ಬಿನ್ನಾಣಗಿತ್ತಿಯಂತೆ ಶೃಂಗಾರಗೊಂಡಿದೆ. ವೈಭವಪೂರಿತ ಹಾಗೂ ಐತಿಹಾಸಿಕ ಜಂಬೂ ಸವಾರಿಯಲ್ಲಿ ಈ ಬಾರಿ ತಂಜಾವೂರ್, ಅಸ್ಸಾಂ ಸೇರಿದಂತೆ ಹೊರ ರಾಜ್ಯಗಳ 5 ಕಲಾ ತಂಡಗಳ 75 ಮಂದಿ ಕಲಾವಿದರು ಜಂಬೂ ಸವಾರಿಯಲ್ಲಿ ಭಾಗವಹಿಸುತ್ತಿರುವುದು ವಿಶೇಷ. ಮೈಸೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ 2000ಕ್ಕೂ ಅಧಿಕ ಕಲಾವಿದರು ಭಾಗವಹಿಸಿ, ನಾಡಿನ ಸಂಸ್ಕೃತಿಯನ್ನು ಪ್ರದರ್ಶಿಸುವರು. ಸಿಸಿ ಕ್ಯಾಮರಾಗಳು: ಲಕ್ಷಾಂತರ…
ದೇಶ-ವಿದೇಶಿ ಪ್ರವಾಸಿಗರಿಗೆ ಮೈಸೂರು ದಸರಾ ಮಹೋತ್ಸವಕ್ಕೆ ಸಾಂಪ್ರದಾಯಿಕ ಸ್ವಾಗತ
October 10, 2018ಮೈಸೂರು: ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸುವ ದೇಶ ವಿದೇಶಗಳ ಪ್ರವಾಸಿಗರಿಗೆ ಮೈಸೂರಿನ ಜನನಿ ಟ್ರಸ್ಟ್ ವತಿಯಿಂದ ಮಂಗಳವಾರ ಮೈಸೂರು ಅರಮನೆ ಆವರಣದಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಯಿತು. ವಿದೇಶಿಯರಿಗೆ ಮೈಸೂರಿನ ಸಂಸ್ಕೃತಿಯನ್ನು ಬಿಂಬಿಸುವ ಸಲುವಾಗಿ ಮೈಸೂರು ಸಿಲ್ಕ್ ಸೀರೆ ಉಟ್ಟ ಜನನಿ ಟ್ರಸ್ಟ್ ಮಹಿಳಾ ಸದಸ್ಯರು ದೇಶ ವಿದೇಶಗಳ ಪ್ರವಾಸಿಗರಿಗೆ ಸಾಂಪ್ರದಾಯಿಕವಾಗಿ ಹಣೆಗೆ ತಿಲಕವಿಟ್ಟು, `ಸ್ವಾಗತವು ನಿಮಗೆ, ಸುಸ್ವಾಗತವೂ ನಿಮಗೆ.. ಹಾಡು ಹೇಳಿ ಆರತಿ ಎತ್ತಿ ಸ್ವಾಗತಿಸಿದರು. ಪನ್ನೀರ್‍ದಾನಿಯಿಂದ ಸುವಾಸಿತ ಪನ್ನೀರು ಸಿಂಪಡಿಸಿ, ಗುಲಾಬಿ ಹೂ ನೀಡಿ, ಮೈಸೂರು ಪೇಟ…
ಪಂಡಿತ್ ರಾಜೀವ್ ತಾರಾನಾಥ್ ಅವರಿಗೆ ‘ಸಂಗೀತ ವಿದ್ವಾನ್’ ಪ್ರಶಸ್ತಿ
October 10, 2018ಮೈಸೂರು: ಪ್ರತಿ ದಸರಾ ಮಹೋತ್ಸವದ ವೇಳೆ ನೀಡ ಲಾಗುವ ‘ಸಂಗೀತ ವಿದ್ವಾನ್’ ಪುರ ಸ್ಕಾರಕ್ಕೆ ಈ ಸಾಲಿನಲ್ಲಿ ಮೈಸೂರಿನ ಹೆಸರಾಂತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ಅವರನ್ನು ಆಯ್ಕೆ ಮಾಡಲಾಗಿದೆ. ಕನ್ನಡ ಮತ್ತು ಸಂಸ್ಕøತಿ ಇಲಾ ಖೆಯು ಇಂದು ಪಂಡಿತ್ ರಾಜೀವ್ ತಾರಾನಾಥ್ ಹೆಸರನ್ನು ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ತಿಳಿದು ಬಂದಿದೆ. ನಾಳೆ (ಅ.10) ಸಂಜೆ ಅರಮನೆ ಆವರಣದಲ್ಲಿ ನಡೆಯಲಿರುವ ದಸರಾ ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟನೆ ವೇಳೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ…
ಅ. 14 ರಂದು ಮೈಸೂರಲ್ಲಿ ಸಾಂಸ್ಕೃತಿಕ ಮೆರವಣಿಗೆ
October 10, 2018ಮೈಸೂರು:ನಾಡಿನ ಕಲಾವೈಭವ ಬಿಂಬಿಸಲು ಅಕ್ಟೋಬರ್ 14 ರಂದು ಮೈಸೂರಿನ ಜಂಬೂ ಸವಾರಿ ಮಾರ್ಗದಲ್ಲಿ ಸಾಂಸ್ಕೃತಿಕ ಮೆರವಣಿಗೆಯನ್ನು ಆಯೋಜಿಸಲಾಗಿದೆ. ಮೈಸೂರಿನ ಪೈ ವಿಸ್ತಾ ಹೋಟೆಲ್‍ನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ದಸರಾ ಮೆರವಣಿಗೆ ಉಪಸಮಿತಿ ಕಾರ್ಯಾಧ್ಯಕ್ಷರೂ ಆದ ನಗರ ಪೊಲೀಸ್ ಕಮೀಷನರ್ ಡಾ. ಎ. ಸುಬ್ರಹ್ಮಣ್ಯೇಶ್ವರರಾವ್ ಈ ವಿಷಯ ತಿಳಿಸಿದರು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಹಾಗೂ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಸೂಚನೆಯಂತೆ ಇದೇ ಮೊದಲ ಬಾರಿ ವಿಜಯದಶಮಿ ಮೆರವಣಿಗೆಗೂ ಮುನ್ನ ಸಾಂಸ್ಕೃತಿಕ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಅಕ್ಟೋಬರ್…
ಶಬರಿಮಲೆಯಲ್ಲಿ ಹಿಂದಿನ ಪದ್ಧತಿ ಅನುಸರಣೆಗೆ ಅವಕಾಶ ಕಲ್ಪಿಸಲು ಆಗ್ರಹಿಸಿ ಜಾಥಾ ನಡೆಸಿದ ಭಕ್ತರು
October 10, 2018ಮೈಸೂರು: ಕೇರಳದ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ನೀಡಿರುವ ತೀರ್ಪನ್ನು ಸುಪ್ರೀಂ ಕೋರ್ಟ್ ಮರುಪರಿ ಶೀಲಿಸಿ ಈ ಹಿಂದಿನ ಪದ್ಧತಿ ಆಚರಣೆಗೆ ಆದೇಶಿಸಬೇಕೆಂದು ಕೋರಿ ಮೈಸೂರಿನ ಅಯ್ಯಪ್ಪಸ್ವಾಮಿ ಭಕ್ತ ಮಂಡಳಿ ವತಿಯಿಂದ `ಶಬರಿಮಲೆ ಉಳಿಸಿ’ ಘೋಷ ವಾಕ್ಯದೊಂದಿಗೆ ಮಂಗಳವಾರ ಜಾಥಾ ನಡೆಸಲಾಯಿತು. ಮೈಸೂರು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಸಮಾವೇಶಗೊಂಡ ಭಕ್ತ ಮಂಡಳಿ ಕಾರ್ಯಕರ್ತರು, ಶಬರಿಮಲೆಯ ಪರಂಪರಾಗತ ಸಂಸ್ಕøತಿಯನ್ನು ಉಳಿಸ ಬೇಕಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ವಯೋ ಮಾನದ…