ಮೈಸೂರು

ರಾಷ್ಟ್ರೀಯ ಶಿಕ್ಷಣ ನೀತಿಗೆ ಎಎಸ್‍ಡಿಎಸ್‍ಓ ವಿರೋಧ
ಮೈಸೂರು

ರಾಷ್ಟ್ರೀಯ ಶಿಕ್ಷಣ ನೀತಿಗೆ ಎಎಸ್‍ಡಿಎಸ್‍ಓ ವಿರೋಧ

December 10, 2021

ಮೈಸೂರು,ಡಿ.9(ಪಿಎಂ)-ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020 (ಎನ್‍ಇಪಿ) ವಿದ್ಯಾರ್ಥಿ ವಿರೋಧಿಯಾಗಿದೆ. ಇದರ ಅನುಷ್ಠಾನದಿಂದ ಶೈಕ್ಷಣಿಕ ಸಮಸ್ಯೆಗಳು ಉಂಟಾ ಗಿವೆ ಎಂದು ಆರೋಪಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ (ಎಐಡಿಎಸ್‍ಓ) ನೇತೃತ್ವ ದಲ್ಲಿ ವಿವಿಧ ಪದವಿ ಕಾಲೇಜು ವಿದ್ಯಾರ್ಥಿ ಗಳು ಗುರುವಾರ ಪ್ರತಿಭಟನೆ ನಡೆಸಿದರು. ಮೈಸೂರಿನ ಕೃಷ್ಣರಾಜ-ಬುಲೇ ವಾರ್ಡ್ ರಸ್ತೆಯಲ್ಲಿರುವ ಮೈಸೂರು ವಿವಿ ಕ್ರಾಫರ್ಡ್ ಭವನದ ಎದುರು ಜಮಾಯಿಸಿದ ಪ್ರತಿಭಟ ನಾಕಾರರು, ಈ ಶೈಕ್ಷಣಿಕ ವರ್ಷದಿಂದ ರಾಜ್ಯ ಸರ್ಕಾರ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಿದೆ. ರಾಜ್ಯದ ಶಿಕ್ಷಣ…

ಆರೋಗ್ಯ ಇಲಾಖೆ ಕಾರ್ಯಕ್ರಮಗಳ ಬಗ್ಗೆ ಜನಪದ ಕಲೆಗಳ ಮೂಲಕ ಜಾಗೃತಿ
ಮೈಸೂರು

ಆರೋಗ್ಯ ಇಲಾಖೆ ಕಾರ್ಯಕ್ರಮಗಳ ಬಗ್ಗೆ ಜನಪದ ಕಲೆಗಳ ಮೂಲಕ ಜಾಗೃತಿ

December 10, 2021

ಮೈಸೂರು,ಡಿ.9(ಎಂಟಿವೈ)-ಆರೋಗ್ಯ ಇಲಾಖೆ ಕಾರ್ಯಕ್ರಮಗಳ ಬಗ್ಗೆ ಜನರಲ್ಲಿ ಪರಿಣಾಮಕಾರಿ ಯಾಗಿ ಜಾಗೃತಿ ಮೂಡಿಸಲು ಜನಪದ ಕಲೆ ಪ್ರಮುಖ ವಾಗಿದ್ದು, ಈ ಹಿನ್ನೆಲೆಯಲ್ಲಿ ವಿವಿಧ ಪ್ರಕಾರಗಳ ಜನಪದ ಕಲೆಗಳ ಕಲಾವಿದರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಹೆಚ್.ಪ್ರಸಾದ್ ತಿಳಿಸಿದ್ದಾರೆ. ಮೈಸೂರು ತಾಲೂಕಿನ ನಾಗನಹಳ್ಳಿ ಕೃಷಿ ತರ ಬೇತಿ ಕೇಂದ್ರದ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ಮೈಸೂರು ವಿಭಾಗ ಮಟ್ಟದ ಆಯ್ದ ಜನಪದ ಕಲಾವಿದರ ತರಬೇತಿ ಕಾರ್ಯಾಗಾರ ದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ…

ಸೋಲಿನ ಭಯದಿಂದ ತಾಪಂ, ಜಿಪಂ ಚುನಾವಣೆ ಮುಂದೂಡಿದ ಬಿಜೆಪಿ
ಮೈಸೂರು

ಸೋಲಿನ ಭಯದಿಂದ ತಾಪಂ, ಜಿಪಂ ಚುನಾವಣೆ ಮುಂದೂಡಿದ ಬಿಜೆಪಿ

December 9, 2021

ಮೈಸೂರು,ಡಿ.8(ಆರ್‍ಕೆಬಿ)- ಸೋಲಿನ ಭೀತಿಯಿಂದ ಬಿಜೆಪಿ ಸ್ಥಳೀಯ ಸಂಸ್ಥೆಗಳ ಚುನಾ ವಣೆಯಿಂದ ಹಿಂದೆ ಸರಿ ದಿದೆ ಎಂದು ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋ ಪಿಸಿದ್ದಾರೆ. ಮೈಸೂರಿನ ರಾಮಕೃಷ್ಣನಗರದಲ್ಲಿರುವ ತಮ್ಮ ನಿವಾಸ ದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಸಂವಿಧಾನಕ್ಕೆ 73 ಹಾಗೂ 74ನೇ ತಿದ್ದುಪಡಿ ತಂದು ಮೊದಲ ಬಾರಿ ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ, ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿದ್ದರು. ಬಿಜೆಪಿ…

ಎರಡು ದಿನದಲ್ಲಿ 78 ಸಾವಿರ ಮಂದಿಗೆ ಲಸಿಕೆ
ಮೈಸೂರು

ಎರಡು ದಿನದಲ್ಲಿ 78 ಸಾವಿರ ಮಂದಿಗೆ ಲಸಿಕೆ

December 9, 2021

ಮೈಸೂರು,ಡಿ.8(ಎಂಟಿವೈ)- ಹೆಚ್ಚಾಗುತ್ತಿರುವ ಕೊರೊನಾ ಭೀತಿಯಿಂದಾಗಿ ಕೊನೆಗೂ ಜನ ಎಚ್ಚೆತ್ತುಕೊಂಡಿದ್ದು, ಬುಧವಾರ ಒಂದೇ ದಿನ 50 ಸಾವಿರ ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಹೆಚ್.ಪ್ರಸಾದ್ `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದರು. ಮೈಸೂರು ಜಿಲ್ಲೆಯಲ್ಲಿ ಬುಧವಾರ 10300 ಮಂದಿ ಮೊದಲ ಡೋಸ್, 39948 ಮಂದಿ ಎರಡನೇ ಡೋಸ್ ಸೇರಿದಂತೆ 50 ಸಾವಿರ ಮಂದಿಗೆ ಲಸಿಕೆ ಹಾಕಲಾಗಿದೆ. ಮೈಸೂರು ನಗರದಲ್ಲಿ 3311 ಮೊದಲ ಡೋಸ್, 12293 ಎರಡನೇ ಡೋಸ್ ಸೇರಿದಂತೆ 15604 ಮಂದಿ ಲಸಿಕೆ…

ಮೈಸೂರಲ್ಲಿ ಕೊರೊನಾಗೆ ಲಸಿಕೆ ಮೂಲಕ ಕಡಿವಾಣಕ್ಕೆ ಜಿಲ್ಲಾಡಳಿತ ಹರಸಾಹಸ
ಮೈಸೂರು

ಮೈಸೂರಲ್ಲಿ ಕೊರೊನಾಗೆ ಲಸಿಕೆ ಮೂಲಕ ಕಡಿವಾಣಕ್ಕೆ ಜಿಲ್ಲಾಡಳಿತ ಹರಸಾಹಸ

December 9, 2021

ಮೈಸೂರು,ಡಿ.8(ಎಂಟಿವೈ)-ಹೆಚ್ಚಾಗುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆ ಹಾಗೂ ರೂಪಾಂ ತರಿ ಒಮಿಕ್ರಾನ್, ಡೆಲ್ಟಾಫ್ಲಸ್‍ನಿಂದ ಜನರನ್ನು ರಕ್ಷಿ ಸುವ ನಿಟ್ಟಿನಲ್ಲಿ ಮೈಸೂರು ಜಿಲ್ಲಾಡಳಿತ ತ್ವರಿತ ಕ್ರಮ ಕೈಗೊಂಡಿದ್ದು, 2ನೇ ಡೋಸ್ ಲಸಿಕೆ ಪಡೆ ಯದೇ ಇರುವವರ ಪತ್ತೆ ಮಾಡುವುದರೊಂದಿಗೆ ಲಸಿಕೆ ಹಾಕುವ ಅಭಿಯಾನ ಚುರುಕುಗೊಳಿಸಲಾಗಿದೆ. ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮನೆ ಮನೆಗೆ ತೆರಳಿ ಲಸಿಕೆ ಹಾಕುವುದರೊಂದಿಗೆ ಜನ ದಟ್ಟಣೆ ಇರುವ ಪ್ರದೇಶದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಮೊಬೈಲ್ ಯೂನಿಟ್ ಸ್ಥಾಪಿಸಲಾಗಿದೆ. ಕಳೆದ 2 ತಿಂಗಳಿಂದ ಲಸಿಕೆ…

ಮೈಸೂರು-ಬೆಂಗಳೂರು ದಶಪಥ ರಸ್ತೆ ದಸರಾಗೆ ರೆಡಿ
ಮೈಸೂರು

ಮೈಸೂರು-ಬೆಂಗಳೂರು ದಶಪಥ ರಸ್ತೆ ದಸರಾಗೆ ರೆಡಿ

December 9, 2021

ಮೈಸೂರು, ಡಿ. 8- ಬಹು ನಿರೀಕ್ಷಿತ ಮೈಸೂರು ಮತ್ತು ಬೆಂಗಳೂರು ನಡುವಿನ ದಶಪಥ ಬೃಹತ್ ಯೋಜನೆಯು 2022ರ ದಸರಾ ಮಹೋತ್ಸವದೊಳಗಾಗಿ ಪೂರ್ಣಗೊಳ್ಳಲಿದೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಈಗಾಗಲೇ ತಿಳಿಸಿದ್ದಾರೆ. ಬೆಂಗಳೂರನ್ನು ಹೊರತುಪಡಿಸಿದರೆ ಅತೀ ವೇಗವಾಗಿ ಬೆಳೆಯುತ್ತಿರುವ ರಾಜ್ಯದ ಎರಡನೇ ನಗರವಾಗಿರುವ ಮೈಸೂರಿನ ಸಮಗ್ರ ಅಭಿವೃದ್ಧಿಯನ್ನು ಗುರಿಯಾಗಿಸಿ ಕೊಂಡು ಕೈಗೆತ್ತಿಕೊಂಡಿರುವ ಈ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಮರೋಪಾದಿ ನಡೆಯುತ್ತಿದ್ದು, ಈಗಾಗಲೇ ಶೇ. 80ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಎರಡೂ ಕಡೆ ಸರ್ವಿಸ್ ರಸ್ತೆ ಸೇರಿ 10 ಪಥದ…

ಹಾಸ್ಟೆಲ್‍ನಲ್ಲಿ ಸಮರ್ಪಕ ಊಟದ ವ್ಯವಸ್ಥೆಗೆ ಆಗ್ರಹಿಸಿ ಮೈಸೂರು ಮಹಾರಾಣಿ ವಿಜ್ಞಾನ ಕಾಲೇಜು ವಿದ್ಯಾರ್ಥಿನಿಯರ ಪ್ರತಿಭಟನೆ
ಮೈಸೂರು

ಹಾಸ್ಟೆಲ್‍ನಲ್ಲಿ ಸಮರ್ಪಕ ಊಟದ ವ್ಯವಸ್ಥೆಗೆ ಆಗ್ರಹಿಸಿ ಮೈಸೂರು ಮಹಾರಾಣಿ ವಿಜ್ಞಾನ ಕಾಲೇಜು ವಿದ್ಯಾರ್ಥಿನಿಯರ ಪ್ರತಿಭಟನೆ

December 8, 2021

ಮೈಸೂರು,ಡಿ.7(ಪಿಎಂ)-ತರಗತಿಗಳು ಪ್ರಾರಂಭವಾಗಿ ಎರಡು ತಿಂಗಳಾಗುತ್ತಿದ್ದರೂ ಹಾಸ್ಟೆಲ್‍ನ ಮೆಸ್ ಆರಂಭಿಸಿ, ಊಟದ ವ್ಯವಸ್ಥೆ ಮಾಡಲು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಮಹಾರಾಣಿ ವಿಜ್ಞಾನ ಕಾಲೇ ಜಿನ ವಿದ್ಯಾರ್ಥಿನಿಯರು ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿದರು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ವಿದ್ಯಾರ್ಥಿನಿಯರು, ಅ.18 ರಿಂದ ಕಾಲೇಜಿನ ತರಗತಿಗಳು ಆರಂಭ ವಾಗಿವೆ. ಹಾಗಾಗಿ ಅಧಿಕೃತವಾಗಿ ಹಾಸ್ಟೆಲ್‍ಗೆ ಪ್ರವೇಶ ಪಡೆದಿಲ್ಲವಾದರೂ ದ್ವಿತೀಯ, ಅಂತಿಮ ವರ್ಷದ ಬಿಎಸ್‍ಸಿ ಹಾಗೂ ಎಂಎಸ್‍ಸಿ ವಿದ್ಯಾರ್ಥಿನಿಯರು ಕಾಲೇಜಿನ ಹಾಸ್ಟೆಲ್‍ನಲ್ಲಿದ್ದೇವೆ. ನಮಗೆ ಹಾಸ್ಟೆಲ್‍ನಲ್ಲಿ ಉಳಿದುಕೊಳ್ಳಲು ಅನುಮತಿ ನೀಡಲಾಗಿದೆ. ಆದರೆ…

ಹೊಂದಾಣಿಕೆ ಬಗ್ಗೆ ಬಿಎಸ್‍ವೈ  ನನ್ನೊಂದಿಗೆ ಮಾತನಾಡಿದ್ದಾರೆ
ಮೈಸೂರು

ಹೊಂದಾಣಿಕೆ ಬಗ್ಗೆ ಬಿಎಸ್‍ವೈ ನನ್ನೊಂದಿಗೆ ಮಾತನಾಡಿದ್ದಾರೆ

December 6, 2021

ಮೈಸೂರು,ಡಿ.5(ಪಿಎಂ)-ಸ್ಥಳೀಯ ಸಂಸ್ಥೆಗಳ ಪರಿಷತ್ ಚುನಾವಣೆ ಹೊಂದಾಣಿಕೆ ಸಂಬಂಧ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ನನ್ನ ನಡುವೆ ವೈಯಕ್ತಿಕ ಮಾತು ಕತೆ ಆಗಿದ್ದು, ಯಾವುದನ್ನೂ ಸೋಮವಾರ (ಡಿ.6) ಘೋಷಣೆ ಮಾಡಲಿದ್ದೇನೆ ಎಂದು ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಭಾನು ವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ಕ್ಷಣದವರೆಗೆ ಹೊಂದಾಣಿಕೆÉ (ಬೆಂಬಲ) ಬಗ್ಗೆ ಮುಕ್ತ ಮತ್ತು ಅಧಿಕೃತ ಚರ್ಚೆ ಯಾಗಿಲ್ಲ. ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಇಲ್ಲದ ಕ್ಷೇತ್ರಗಳಲ್ಲಿ ಜೆಡಿಎಸ್ ಮತದಾರರು ನಮಗೆ…

15 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ
ಮೈಸೂರು

15 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ

December 6, 2021

ಮೈಸೂರು,ಡಿ.5(ಎಸ್‍ಬಿಡಿ)- ಸ್ಥಳೀಯ ಸಂಸ್ಥೆ ಗಳಿಂದ ವಿಧಾನಪರಿಷತ್‍ಗೆ ನಡೆಯುತ್ತಿರುವ ಚುನಾ ವಣೆಯಲ್ಲಿ ಮೈಸೂರು-ಚಾಮರಾಜನಗರ ಜಿಲ್ಲಾ ಕ್ಷೇತ್ರದ ಅಭ್ಯರ್ಥಿ ರಘು ಕೌಟಿಲ್ಯ ಸೇರಿದಂತೆ 15 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿ ಸುವ ವಿಶ್ವಾಸವಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಹೇಳಿದರು. ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ರಾಜೇಂದ್ರ ಕಲಾಮಂದಿರದಲ್ಲಿ ಬಿಜೆಪಿ ಮೈಸೂರು ನಗರ ಹಾಗೂ ಗ್ರಾಮಾಂತರ(ಜಿಲ್ಲೆ) ಘಟಕಗಳ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಮೈಸೂರು-ಚಾಮರಾಜನಗರ ಜಿಲ್ಲಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯ ಅವರಿಗೆ ಮತ ಚಲಾವಣೆ ಮಾಡುವ…

ಮೈಸೂರಲ್ಲಿ ಕೋವಿಡ್ ವಾರ್ ರೂಂ, ಹೆಲ್ಪ್‍ಲೈನ್ ಆರಂಭಕ್ಕೆ ಸಿದ್ಧತೆ
ಮೈಸೂರು

ಮೈಸೂರಲ್ಲಿ ಕೋವಿಡ್ ವಾರ್ ರೂಂ, ಹೆಲ್ಪ್‍ಲೈನ್ ಆರಂಭಕ್ಕೆ ಸಿದ್ಧತೆ

December 6, 2021

ಮೈಸೂರು,ಡಿ.5(ಎಂಟಿವೈ)- ಕೊರೊನಾ ರೂಪಾಂತರಿ ವೈರಸ್ ಒಮಿಕ್ರಾನ್ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಯಲ್ಲಿ ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದು, ಕೋವಿಡ್ ವಾರ್ ರೂಂ ಹಾಗೂ ಹೆಲ್ಪ್‍ಲೈನ್ ಪುನರಾ ರಂಭಿಸಲು ಮುಂದಾಗಿದೆ. ಮೈಸೂರು ಜಿಲ್ಲೆಯಲ್ಲಿ ಕೊರೊನಾ 2ನೇ ಅಲೆ ಸಂದರ್ಭದಲ್ಲಿ ಸಾಕಷ್ಟು ಸಾವು -ನೋವು ಉಂಟಾದ ಹಿನ್ನೆಲೆಯಲ್ಲಿ ಸೋಂಕಿತರಿಗೆ ಅಗತ್ಯ ಚಿಕಿತ್ಸಾ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸಿದ್ದ ಕೋವಿಡ್ ವಾರ್ ರೂಂ ಮತ್ತು ಹೆಲ್ಪ್‍ಲೈನ್ ಆರಂಭಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಇದೀಗ ರೂಪಾಂತರಿ…

1 132 133 134 135 136 1,611
Translate »