ಮೈಸೂರು, ಡಿ.2(ಆರ್‍ಕೆಬಿ)- ವಿಧಾನಪರಿಷತ್ತಿಗೆ ಸ್ಥಳೀಯ ಸಂಸ್ಥೆಗಳಿಂದ ನಡೆಯಲಿರುವ ಚುನಾ ವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಪರವಾದ ವಾತಾವರಣ ಇದೆ. ಮೈಸೂರಿನಲ್ಲಿ ನಮ್ಮ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ ಎಂದು ಬಿಜೆಪಿ ರಾಜ್ಯ ಉಪಾ ಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು. ಮೈಸೂರು-ಚಾಮರಾಜನಗರ ಸ್ಥಳೀಯ ಸಂಸ್ಥೆ ಗಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯ ಪರ ಪ್ರಚಾರ ಕೈಗೊಂಡಿರುವ ಅವರು ಗುರುವಾರ ಮೈಸೂರಲ್ಲ್ಲಿ ಮಾಧ್ಯಮದೊಂದಿಗೆ ಮಾತನಾಡಿದರು. ಮಂಡ್ಯ ದಲ್ಲಿಯೂ ನಮ್ಮ ಅಭ್ಯರ್ಥಿಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈಗ ಅಲ್ಲಿ ತ್ರಿಕೋನ ಸ್ಪರ್ಧೆ ಏರ್ಪ ಟ್ಟಿದೆ….
ಕೋರ್ಟ್‍ನಲ್ಲಿ ದಾವೆ: ನೆನೆಗುದಿಗೆ ಬಿದ್ದ ಇರ್ವಿನ್ ರಸ್ತೆ ಅಭಿವೃದ್ಧಿ
December 3, 2021ಮೈಸೂರು, ಡಿ.2(ಆರ್‍ಕೆ)- ಎರಡು ಕಟ್ಟಡಗಳಿಗೆ ಸಂಬಂಧಿಸಿದಂತೆ ನ್ಯಾಯಾ ಲಯದಲ್ಲಿ ದಾವೆ ಹೂಡಿರುವುದರಿಂದ ಮೈಸೂರಿನ ಹೃದಯ ಭಾಗದಲ್ಲಿರುವ ಪ್ರತಿಷ್ಠಿತ ಇರ್ವಿನ್ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಬಿ.ಎನ್.ರಸ್ತೆಯ ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಇರುವ ಕಮಾನ್ ಗೇಟ್ ನಿಂದ ಸರ್ಕಾರಿ ಆಯುರ್ವೇದ ಕಾಲೇಜು ಸರ್ಕಲ್‍ವರೆಗಿನ 850 ಮೀಟರ್ ಇರ್ವಿನ್ ರಸ್ತೆಯನ್ನು ಹಾಲಿ 30 ಅಡಿಯಿಂದ 60 ಅಡಿವರೆಗೆ ಅಗಲೀಕರಿಸಿ, ಅಭಿವೃದ್ಧಿಪಡಿಸುವ ಕಾಮಗಾರಿಯನ್ನು ಮೈಸೂರು ನಗರಪಾಲಿಕೆ ಕಳೆದ 4 ವರ್ಷಗಳ ಹಿಂದೆ ಕೈಗೆತ್ತಿಕೊಂಡಿತ್ತು. ಈ ರಸ್ತೆಯ…
ಸಾಂಸ್ಕøತಿಕ ನಗರಿ ಮೈಸೂರಲ್ಲಿ ಕಟ್ಟೆಚ್ಚರ
December 3, 2021ಮೈಸೂರು, ಡಿ.2(ಎಂಟಿವೈ)- ಕೊರೊನಾ ರೂಪಾಂತರಿ `ಒಮಿಕ್ರಾನ್’ ಬೆಂಗಳೂರಲ್ಲಿ ಪತ್ತೆಯಾಗುತ್ತಿದ್ದಂತೆ ಸಾಂಸ್ಕøತಿಕ ನಗರಿ ಮೈಸೂರಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಸೋಂಕಿ ನಿಂದಾಗುವ ಜೀವಹಾನಿ ತಡೆಗಟ್ಟಲು ಲಸಿಕೆ ಅಭಿಯಾನ ಚುರುಕುಗೊಳಿಸಲು ಸೂಚಿಸಲಾಗಿದೆ. ಅಂತರರಾಷ್ಟ್ರೀಯ ಪ್ರಯಾಣಿಕರ ನೇರ ಸಂಪರ್ಕವಿಲ್ಲದಿ ರುವುದರಿಂದ ಮೈಸೂರಿಗೆ ಒಮಿಕ್ರಾನ್ ಸೋಂಕು ಹರಡು ವುದು ವಿರಳ ಎಂಬ ಭಾವನೆಯಿತ್ತು. ಆದರೂ ಕರ್ನಾಟಕ-ಕೇರಳ ಗಡಿ ಭಾಗದಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿತ್ತು. ಈ ನಡುವೆ ಬೆಂಗಳೂರಲ್ಲಿ ಇಬ್ಬರಲ್ಲಿ ರೂಪಾಂತರಿ ಒಮಿಕ್ರಾನ್ ಪತ್ತೆಯಾಗಿರುವುದರಿಂದ ಮೈಸೂರಿನ ಜನರ ಆತಂಕ ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಸೋಂಕು…
ದಲಿತರು, ಹಿಂದುಳಿದವರು ಬಿಜೆಪಿಯತ್ತ ಮುಖ ಮಾಡಿದ್ದಾರೆ
December 2, 2021ಮೈಸೂರು,ಡಿ.೧(ಆರ್‌ಕೆಬಿ)- ಕಾಂಗ್ರೆಸ್ ದುರಾಡಳಿತ ದಿಂದ ಬೇಸತ್ತಿರುವ ದಲಿತರು, ಹಿಂದುಳಿದವರು ಬಿಜೆಪಿ ಯತ್ತ ಮುಖ ಮಾಡಿದ್ದಾರೆ. ಇದೇ ರೀತಿ ಮುಂದುವರಿದರೆ ಕಾಂಗ್ರೆಸ್‌ಗೆ ಪ್ರಾದೇಶಿಕ ಪಕ್ಷದ ಮಾನ್ಯತೆ ಪಡೆದುಕೊಳ್ಳಲೂ ಸಾಧ್ಯವಾಗುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. ಮೈಸೂರಿನ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣ ದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಬುಧವಾರ ಆಯೋಜಿಸಿದ್ದ ಮೋರ್ಚಾದ ಮೈಸೂರು ನಗರ, ಗ್ರಾಮಾಂತರ, ಚಾಮರಾಜನಗರ, ಮಂಡ್ಯ, ಹಾಸನ ಜಿಲ್ಲೆಗಳನ್ನು ಒಳಗೊಂಡ ವಿಭಾಗೀಯ ಪ್ರಮುಖರ ಚಿಂತನಾ ಸಭೆಯನ್ನು…
ಸಿದ್ದರಾಮಯ್ಯರ ಮುಗಿಸಲು ಬಿಜೆಪಿ, ಜೆಡಿಎಸ್ ಸಂಚು
December 2, 2021ಡಾ.ಹೆಚ್.ಸಿ.ಮಹದೇವಪ್ಪ ಆರೋಪ ಮಾಜಿ ಸಿಎಂ ಸಿದ್ದರಾಮಯ್ಯನವರ `ಕೈ’ ಬಲಪಡಿಸಲು ಡಾ.ತಿಮ್ಮಯ್ಯ ಗೆಲ್ಲಿಸಿ ಡಾ.ಹೆಚ್.ಸಿ.ಮಹದೇವಪ್ಪ ಆರೋಪ ಮಾಜಿ ಸಿಎಂ ಸಿದ್ದರಾಮಯ್ಯನವರ `ಕೈ’ ಬಲಪಡಿಸಲು ಡಾ.ತಿಮ್ಮಯ್ಯ ಗೆಲ್ಲಿಸಿ ಮೈಸೂರು, ಡಿ.೧(ಜಿಎ)- ಬಿಜೆಪಿ, ಜೆಡಿಎಸ್‌ನವರು ಹೊಂದಾಣಿಕೆ ಮಾಡಿಕೊಂಡು ಸಿದ್ದರಾಮಯ್ಯನವರ ನಾಯಕತ್ವವನ್ನೇ ಮುಗಿಸಲು ಷಡ್ಯಂತ್ರ ನಡೆಸುತ್ತಿದ್ದಾರೆ. ಆದರೆ ಅವರ ಆಟ ನಡೆಯುವುದಿಲ್ಲ. ಸಿದ್ದರಾಮಯ್ಯನವರ ಕೈಬಲಪಡಿಸಲು ಡಾ.ಡಿ.ತಿಮ್ಮಯ್ಯನವರನ್ನು ಗೆಲ್ಲಿಸಬೇಕೆಂದು ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಕರೆ ನೀಡಿದರು. ಚಾಮುಂಡೇಶ್ವರಿ ಕ್ಷೇತ್ರದ ಕೇರ್ಗಳ್ಳಿಯಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆಗೆ…
ಪರಿಷತ್ ಚುನಾವಣೆ; ಜೆಡಿಎಸ್ ಅಭ್ಯರ್ಥಿ ಸಿ.ಎನ್.ಮಂಜೇಗೌಡ ವಿರುದ್ಧ ಆಕ್ಷೇಪಾರ್ಹ ಪದ ಬಳಸಿ ವೈಯಕ್ತಿಕ ನಿಂದನೆ ಆರೋಪ
December 2, 2021ಜೆಡಿಎಸ್‌ನಿಂದ ಸಚಿವ ಎಸ್.ಟಿ.ಸೋಮಶೇಖರ್ ವಿರುದ್ಧ ಡಿಸಿಗೆ ದೂರು ಮೈಸೂರು,ಡಿ.೧(ಪಿಎಂ)-ಮೈಸೂರು-ಚಾಮರಾಜನಗರ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಸಿ.ಎನ್.ಮಂಜೇಗೌಡ ಅವರ ಬಗ್ಗೆ ಆಕ್ಷೇಪಾರ್ಹ ಪದ ಬಳಸಿ ವೈಯಕ್ತಿಕವಾಗಿ ನಿಂದಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಚುನಾ ವಣೆಯ ಮಾದರಿ ನೀತಿ ಸಂಹಿತೆ ನಿಯಮ-೨ರ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಜೆಡಿಎಸ್ ವತಿಯಿಂದ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಯಿತು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಯಲ್ಲಿ ಬುಧವಾರ ಜೆಡಿಎಸ್ ರಾಜ್ಯ ವಕ್ತಾರರೂ ಆದ ಪಕ್ಷದ…
ಚಾಮುಂಡಿಬೆಟ್ಟದಲ್ಲಿ ಭೂ ಕುಸಿತಕ್ಕೆ ಪರಿಹಾರೋಪಾಯ
December 2, 2021ನಂದಿ ರಸ್ತೆಯನ್ನು ಚಾರಣ ಮಾರ್ಗವಾಗಿಸಿ ಇಲ್ಲವೇ ೮೦೦ ಮೀ. ಕಾಂಕ್ರೀಟ್ ಗೋಡೆ ನಿರ್ಮಿಸಿ ಇಂಜಿನಿರ‍್ಸ್ ಸಂಸ್ಥೆಯ ಮೈಸೂರು ಸ್ಥಳೀಯ ಕೇಂದ್ರದ ತಾಂತ್ರಿಕ ಸಮಿತಿ ವರದಿಯಲ್ಲಿ ಶಿಫಾರಸ್ಸು ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ಗೆ ವರದಿ ಸಲ್ಲಿಸಿದ ಸಮಿತಿ ನಿವೃತ್ತ ಮೇಜರ್ ಜನರಲ್ ಡಾ.ಎಸ್.ಜಿ.ಒಂಬತ್ಕೆರೆ ನೇತೃತ್ವದ ಸಮಿತಿಯಿಂದ ಸಿದ್ಧಗೊಂಡ ವರದಿ ಮೈಸೂರು,ಡಿ.೧(ಪಿಎಂ)- ಚಾಮುಂಡಿ ಬೆಟ್ಟದ ನಂದಿ ಪ್ರತಿಮೆ ಸಂಪರ್ಕ ರಸ್ತೆ ಯಲ್ಲಿ ವಾಹನ ಸಂಚಾರ ನಿರ್ಬಂಧಿಸಿ, ಚಾರಣ ಮಾರ್ಗವಾಗಿ ಪರಿವರ್ತಿಸುವ ಮೂಲಕ ಇಲ್ಲಿ ಪದೇ ಪದೆ ಉಂಟಾ ಗುತ್ತಿರುವ ಭೂ…
ಡಿ.೧೦ರಿಂದ ಬಹುರೂಪಿ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತುಳಸಿಗೌಡ ಚಾಲನೆ
December 2, 2021ಡಿ.೧೯ರವರೆಗೆ ಪ್ರತಿ ದಿನ ನಾಟಕ ಪ್ರದರ್ಶನ `ತಾಯಿ’ ವಿಷಯದಡಿ ವಿಚಾರ ಸಂಕಿರಣ ಭರದಿಂದ ಸಾಗಿದೆ ಸಿದ್ಧತಾ ಕಾರ್ಯ ಮೈಸೂರು, ಡಿ.೧(ಎಂಟಿವೈ)- ಮೈಸೂರಿನ ರಂಗಾಯಣ ದಲ್ಲಿ ಡಿ.೧೦ರಿಂದ ೧೯ರವರೆಗೆ ನಡೆಯಲಿರುವ`ಬಹುರೂಪಿ ರಾಷ್ಟೀಯ ನಾಟಕೋತ್ಸವ-೨೦೨೧’ ಅನ್ನು ಪರಿಸರ ಪ್ರೇಮಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತುಳಸಿಗೌಡ ಉದ್ಘಾಟಿಸಲಿದ್ದು, ರಂಗಾಯಣದ ಆವರಣದಲ್ಲಿ ರಂಗ ವೈಭವದೊಂದಿಗೆ ಕಲಾ ಪ್ರಕಾರಗಳು ಅನಾವರಣಗೊಳ್ಳಲಿವೆ. ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು, ರಂಗಾಯಣದ ಆವರಣದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಕೋವಿಡ್-೧೯ ಮುಂಜಾಗ್ರತಾ ಕ್ರಮ ದೊಂದಿಗೆ ೨೦೨೧ನೇ…
ಮಳೆ ಹಾನಿಗೆ ಸೂಕ್ತ ಪರಿಹಾರ: ಸಂಪೂರ್ಣ ಕುಸಿದ ಮನೆಗೆ ೫ ಲಕ್ಷ, ಹಾನಿಗೀಡಾದ ಮನೆಗೆ ಲಕ್ಷ ಪರಿಹಾರ
December 2, 2021ಕಂದಾಯ ಸಚಿವ ಆರ್.ಅಶೋಕ್ ಭರವಸೆ ದಾಖಲೆ ಪತ್ರಗಳ ಪರಿಶೀಲಿಸಿ ತಕ್ಷಣ ಪರಿಹಾರ ನೀಡಲು ಸೂಚನೆ ಮೈಸೂರು, ಡಿ.೧(ಎಂಕೆ)- ರಾಜ್ಯದಲ್ಲಿ ಸುರಿದ ಭಾರೀ ಮಳೆಗೆ ೩೯,೮೧೫ ಮನೆಗಳು ಕುಸಿದಿದ್ದು, ೨೦೪ ಕೋಟಿ ರೂ. ಪರಿಹಾರ ನೀಡಲಾಗಿದೆ. ಮಳೆ ಯಿಂದ ಉಂಟಾದ ಸಂಪೂರ್ಣ ಮನೆ ಹಾನಿಗೆ ೫ ಲಕ್ಷ ಪರಿಹಾರ ಕೊಡಬೇಕು. ಈ ಪೈಕಿ ಹಾನಿ ಗೀಡಾದ ಮನೆಗಳನ್ನು ಗುರುತಿಸಿ ೨-೩ ದಿನದಲ್ಲೇ ೧ ಲಕ್ಷ ರೂ. ಪರಿಹಾರವನ್ನು ತಕ್ಷಣದ ಅಗತ್ಯಗಳಿ ಗಾಗಿ ಸಂತ್ರಸ್ತರಿಗೆ ನೀಡಬೇಕು. ದಾಖಲೆಗಳನ್ನು ಪರಿಶೀಲಿಸಿದ ಬಳಿಕ…
ಶಾಸಕ ವಿಶ್ವನಾಥ್ ಹತ್ಯೆಗೆ ಹಿಂದಿನಿAದಲೂ ಪ್ರಯತ್ನ ನಡೆದಿದೆ: ಅಶೋಕ್ ಸಂಶಯ
December 2, 2021ಮೈಸೂರು,ಡಿ.೧(ಎಂಕೆ)- ಶಾಸಕ ಎಸ್.ಆರ್. ವಿಶ್ವನಾಥ್ ಕೊಲೆ ಸಂಚು ದೊಡ್ಡ ಷಡ್ಯಂತ್ರ ವಾಗಿದ್ದು, ಬಹಳ ಹಿಂದಿನಿAದಲೂ ಕೊಲೆ ಪ್ರಯತ್ನ ನಡೆದಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಸಂಶಯ ವ್ಯಕ್ತಪಡಿಸಿದರು. ಮೈಸೂರು ಡಿಸಿ ಕಚೇರಿ ಬಳಿ ವಿಶ್ವನಾಥ್ ಕೊಲೆ ಸಂಚು ಕುರಿತು ಮಾಧ್ಯಮಗಳಿಗೆ ಪ್ರತಿ ಕ್ರಿಯಿಸಿದ ಅವರು, ವಿಶ್ವನಾಥ್ ಅವರು ಈಗಾ ಗಲೇ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕೊಲೆ ಸಂಚು ಕುರಿತು ಮಾತನಾಡಿರುವ ಆಡಿಯೋ ಕೇಳಿದರೆ, ಇದು ಇವತ್ತು ನಿನ್ನೆ ಮಾಡಿರುವ ಸಂಚಲ್ಲ. ಬಹಳ ಹಿಂದಿನಿಂದಲೇ ಕೊಲೆ…










