ಮೈಸೂರು

ಅ.10ರಿಂದ ದಸರಾ ವಿಶೇಷ ವಿಮಾನಯಾನ
ಮೈಸೂರು, ಮೈಸೂರು ದಸರಾ

ಅ.10ರಿಂದ ದಸರಾ ವಿಶೇಷ ವಿಮಾನಯಾನ

October 8, 2018

ಮೈಸೂರು: ಕೆಎಸ್‍ಟಿಡಿಸಿ ಹಾಗೂ ಪ್ರವಾಸೋದ್ಯಮ ಇಲಾಖೆ ಜಂಟಿ ಆಶ್ರಯ ದಲ್ಲಿ ಈ ಬಾರಿಯ ದಸರಾಕ್ಕೆ ಅ.10ರಿಂದ 20ರವರೆಗೆ ಮೈಸೂರು-ಬೆಂಗಳೂರು ನಡುವೆ ವಿಶೇಷ ವಿಮಾನಯಾನದ ವ್ಯವಸ್ಥೆ ಮಾಡಲಾಗಿದೆ ಎಂದು ಕೆಎಸ್‍ಟಿಡಿಸಿ ವ್ಯವ ಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್ ಹೇಳಿದರು. ಏರ್ ಇಂಡಿಯಾ ಅಂಗ ಸಂಸ್ಥೆಯಾದ ಅಲಯನ್ಸ್ ಏರ್ ಸಂಸ್ಥೆಯ 72 ಆಸನ ವ್ಯವಸ್ಥೆಯ ವಿಮಾನಗಳು ಪ್ರಯಾಣ ಸೇವೆ ನೀಡಲಿವೆ. ಟಿಕೆಟ್ ದರಗಳು 999 ರೂ.ಗಳಿಂದ ಆರಂಭವಾಗಲಿವೆ. ಪ್ರತಿ ದಿನ ಮಧ್ಯಾಹ್ನ 2.10ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ…

ದಸರಾ ಗಜ, ಅಶ್ವಪಡೆಗೆ ಪೂರ್ಣ ಪ್ರಮಾಣದ ಸಿಡಿಮದ್ದು ತಾಲೀಮು ಯಶಸ್ವಿ
ಮೈಸೂರು, ಮೈಸೂರು ದಸರಾ

ದಸರಾ ಗಜ, ಅಶ್ವಪಡೆಗೆ ಪೂರ್ಣ ಪ್ರಮಾಣದ ಸಿಡಿಮದ್ದು ತಾಲೀಮು ಯಶಸ್ವಿ

October 8, 2018

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವ ಗಜ, ಅಶ್ವಪಡೆಗೆ ಭಾನುವಾರ ಅರಮನೆಯ ವರಾಹ ಗೇಟ್ ಬಳಿಯಿರುವ ವಾಹನ ನಿಲುಗಡೆ ಸ್ಥಳದಲ್ಲಿ ಅಂತಿಮ ಹಂತದಲ್ಲಿ ಪೂರ್ಣ ಪ್ರಮಾಣದ ಸಿಡಿಮದ್ದು ಸಿಡಿಸುವ ತಾಲೀಮನ್ನು ಯಶಸ್ವಿಯಾಗಿ ನಡೆಸಲಾಯಿತು. ಜಂಬೂಸವಾರಿ ಹಾಗೂ ಬನ್ನಿಮಂಟ ಪದ ಪಂಜಿನ ಕವಾಯತು ವೇಳೆ ವಿಜಯದ ಸಂಕೇತವಾಗಿ 21 ಸುತ್ತು ಕುಶಾಲತೋಪು ಸಿಡಿಸುವ ಪರಂಪರೆಯಿದ್ದು, ಈ ಹಿನ್ನೆಲೆ ಯಲ್ಲಿ ಜಂಬೂಸವಾರಿ ಮೆರವಣಿಗೆಯಲ್ಲಿ ಜನಸಂದಣಿಯ ನಡುವೆ ಸಾಗಲಿರುವ ಆನೆ ಹಾಗೂ ಕುದುರೆಗಳು ಕುಶಾಲ ತೋಪಿನ ಶಬ್ದಕ್ಕೆ ಹೆದರದಂತೆ ತರಬೇತಿ ನೀಡುವು…

ದಸರಾ ಯುವ ಸಂಭ್ರಮಕ್ಕೆ ವರ್ಣರಂಜಿತ ತೆರೆ
ಮೈಸೂರು

ದಸರಾ ಯುವ ಸಂಭ್ರಮಕ್ಕೆ ವರ್ಣರಂಜಿತ ತೆರೆ

October 8, 2018

ಮೈಸೂರು:ಡ್ರಾಮಾ ಜೂನಿಯರ್ಸ್‍ನ ಅಚಿಂತ್ಯನ ಕಾಮಿಡಿ ಜಲಕ್, ಕನ್ನಡ ನಾಡು-ನುಡಿ-ಜಲ, ಮಹಿಳಾ ಸಬಲೀಕರಣ, ಕಾವೇರಿ ಕನ್ನಡಿಗರ ಸ್ವತ್ತು ಮತ್ತು ದೇಶಪ್ರೇಮದ ಸಂದೇಶ ಸಾರುವ ಮೂಲಕ 2018ರ ಯುವ ಸಂಭ್ರಮಕ್ಕೆ ವರ್ಣರಂಜಿತ ತೆರೆಬಿದ್ದಿತು. ವಿಶ್ವ ವಿಖ್ಯಾತ ಮೈಸೂರು ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಮಾನಸ ಗಂಗೋತ್ರಿ ಬಯಲುರಂಗ ಮಂದಿರದಲ್ಲಿ ಆಯೋಜಿಸಿರುವ `ಯುವ ಸಂಭ್ರಮ’ದ ಕಡೆಯ ದಿನವಾದ ಭಾನುವಾರ, ಕೆಲವು ಕಾಲೇಜು ವಿದ್ಯಾರ್ಥಿಗಳು ಕನ್ನಡ ನಾಡು- ನುಡಿ ಕುರಿತ ಹಾಡುಗಳಿಗೆ ನೃತ್ಯ ಪ್ರದರ್ಶಿಸಿ ಕನ್ನಡ ಪ್ರೇಮವನ್ನು ಎತ್ತಿಹಿಡಿದರೆ, ಮತ್ತೆ ಕೆಲವು ಕಾಲೇಜುಗಳು…

ಪ್ರಕಾಶ್ ರೈ ಅಂಕಣ ಸಂಗ್ರಹ `ಅವರವರ ಭಾವಕ್ಕೆ’ ಪುಸ್ತಕ ಹಸ್ತಾಂತರ
ಮೈಸೂರು

ಪ್ರಕಾಶ್ ರೈ ಅಂಕಣ ಸಂಗ್ರಹ `ಅವರವರ ಭಾವಕ್ಕೆ’ ಪುಸ್ತಕ ಹಸ್ತಾಂತರ

October 8, 2018

ಮೈಸೂರು: ಚಿತ್ರನಟ ಪ್ರಕಾಶ್ ರೈ ಅವರ ಅಂಕಣ ಬರಹಗಳ ಸಂಗ್ರಹ `ಅವರವರ ಭಾವಕ್ಕೆ’ ಪುಸ್ತಕ ಹಸ್ತಾಂತರ ಕಾರ್ಯಕ್ರಮ ಮೈಸೂರಿನಲ್ಲಿ ಭಾನುವಾರ ನಡೆಯಿತು. ಮೈಸೂರಿನ ಮಾನಸ ಗಂಗೋತ್ರಿ ಮಾನವಿಕ ಸಭಾಂಗಣದಲ್ಲಿ ನೆಲೆ ಹಿನ್ನೆಲೆ, ಜನಮನ ಸಾಂಸ್ಕøತಿಕ ಸಂಘಟನೆ ಹಾಗೂ ಸಾವಣ್ಣ ಪ್ರಕಾಶನದ ಸಹಯೋಗದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ವಿಮರ್ಶಕ ಓ.ಎಲ್.ನಾಗಭೂಷಣ ಸ್ವಾಮಿ, ಹಿರಿಯ ಸಾಹಿತಿ ದೇವನೂರ ಮಹಾದೇವ ಅವರಿಗೆ ಪುಸ್ತಕವನ್ನು ಹಸ್ತಾಂತರಿಸಿದರು. ಪುಸ್ತಕ ಸ್ವೀಕರಿಸಿ ಮಾತನಾಡಿದ ದೇವನೂರ ಮಹಾದೇವ ಅವರು, ಪ್ರಕಾಶ್ ರೈ ಅವರ ಬರವಣಿಗೆಯಲ್ಲಿ ಉಗುರು ಬೆಚ್ಚನೆಯ ಜೀವಂತ…

ದಸರಾ ಆನೆಗಳಿಗೆ ಸಿದ್ಧಗೊಳ್ಳುತ್ತಿದೆ ಗಾದಿ, ನಮ್ದಾ
ಮೈಸೂರು

ದಸರಾ ಆನೆಗಳಿಗೆ ಸಿದ್ಧಗೊಳ್ಳುತ್ತಿದೆ ಗಾದಿ, ನಮ್ದಾ

October 8, 2018

ಮೈಸೂರು:  ನಾಡಹಬ್ಬ ದಸರಾ ಪ್ರಮುಖ ಆಕರ್ಷಣೆ ಜಂಬೂಸವಾರಿ. 750 ಕೆಜಿ ತೂಕದ ಚಿನ್ನದ ಅಂಬಾರಿ ಹೊರಲು ಆನೆಗಳ ಸುರಕ್ಷತೆ ದೃಷ್ಟಿಯಿಂದ `ಗಾದಿ’ ಹಾಗೂ ನಮ್ದಾ ತಯಾರಿ ಕೆಲಸ ಪ್ರತಿ ವರ್ಷದಂತೆ ಈ ಬಾರಿಯೂ ಆರಂಭವಾಗಿದೆ. ಅರಮನೆ ಆವರಣದ ಶ್ರೀ ಕೋಡಿ ಸೋಮೇಶ್ವರ ದೇವಾಲಯದ ಮುಂಭಾಗದ ಪ್ರಾಂಗಣದಲ್ಲಿ ವಿಶೇಷ ಮಾವುತರಾದ ಪಾಷಾ, ಜಕಾವುಲ್ಲಾ, ಗಾದಿ ತಯಾರಿಯನ್ನು ಇಂದು ಆರಂಭಿಸಿದ್ದಾರೆ. ಶತಮಾನಗಳಿಂದ ಅಂಬಾರಿ ಕೆಳಗೆ ಗಾದಿ ಬಳಸುತ್ತಾ ಬರಲಾಗುತ್ತಿದೆ. ಮೆರವಣಿಗೆಯಲ್ಲಿ ಸಾಗುವ ಆನೆಗಳ ಮೇಲೆ ಅಲಂಕಾರಿಕ ಗೌನ್‍ಗೆ ಅನುಗುಣವಾಗಿ ಗಾದಿ…

ಮಾವುತರು, ಕಾವಾಡಿಗಳಿಗೆ ಪಾನಿಪುರಿ ವಿತರಣೆ
ಮೈಸೂರು

ಮಾವುತರು, ಕಾವಾಡಿಗಳಿಗೆ ಪಾನಿಪುರಿ ವಿತರಣೆ

October 8, 2018

ಮೈಸೂರು:  ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವ ಗಜಪಡೆಯ 12 ಮಾವುತರು, ಕಾವಾಡಿಗಳು ಹಾಗೂ ವಿಶೇಷ ಮಾವುತರ ಕುಟುಂಬದ ಸದಸ್ಯರಿಗೆ ಭಾನುವಾರ ಸಿದ್ಧಾರ್ಥ ಬಡಾವಣೆಯ ಶ್ರೀ ಗುರು ರಾಘವೇಂದ್ರ ಬಂಗಾರ ಪೇಟೆ ಪಾನಿಪೂರಿ ಸೆಂಟರ್ ವತಿಯಿಂದ ಉಚಿತವಾಗಿ ಪಾನಿಪೂರಿ ನೀಡಲಾಯಿತು. ಕಳೆದ ಮೂರು ವರ್ಷದಿಂದ ದಸರಾ ಆನೆಗಳ ಮಾವುತರು, ಕಾವಾಡಿಗರು ಹಾಗೂ ವಿಶೇಷ ಮಾವುತರಿಗೆ ಶ್ರೀ ಗುರು ರಾಘವೇಂದ್ರ ಬಂಗಾರಪೇಟೆ ಪಾನಿಪೂರಿ ಸೆಂಟರ್‌ನ ಮಾಲೀಕ ದಿನೇಶ್ ಅವರು ಒಂದು ದಿನ ಪಾನಿಪೂರಿಯನ್ನು ನೀಡುವ ಸೇವೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ…

ವಾಕಥಾನ್ ಮೂಲಕ ಹೃದ್ರೋಗ ನಿಯಂತ್ರಣ ಜಾಗೃತಿ
ಮೈಸೂರು

ವಾಕಥಾನ್ ಮೂಲಕ ಹೃದ್ರೋಗ ನಿಯಂತ್ರಣ ಜಾಗೃತಿ

October 8, 2018

ಮೈಸೂರು: ಹೃದ್ರೋಗಗಳ ತಡೆಗಟ್ಟುವಿಕೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಭಾನುವಾರ ಬೆಳಿಗ್ಗೆ ಮೈಸೂರಿನಲ್ಲಿ ವಾಕಥಾನ್ ಏರ್ಪಡಿಸಲಾಗಿತ್ತು. ಕಾರ್ಡಿಯಾಲಜಿಕಲ್ ಸೊಸೈಟಿ ಆಫ್ ಇಂಡಿಯಾ ಮೈಸೂರು ಘಟಕದ ವತಿಯಿಂದ `ಮೈ ಹಾರ್ಟ್, ಯುವರ್ ಹಾರ್ಟ್(ನನ್ನ ಹೃದಯ, ನಿಮ್ಮ ಹೃದಯ)’ ಶೀರ್ಷಿಕೆಯಲ್ಲಿ ಆಯೋಜಿಸಿದ್ದ ವಾಕಥಾನ್‍ಗೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಜೆ.ಕೆ.ಮೈದಾನದ ಬಳಿ ಚಾಲನೆ ನೀಡಿದರು. ಸಂಸ್ಥೆಯ ಸದಸ್ಯರು, ಹೃದ್ರೋಗಿಗಳು ಸೇರಿದಂತೆ ಸುಮಾರು 700ಕ್ಕೂ ಹೆಚ್ಚು ಸಾರ್ವಜನಿಕರು ವಾಕಥಾನ್‍ನಲ್ಲಿ ಭಾಗಿಯಾಗಿ ಹೃದ್ರೋಗಗಳನ್ನು ತಡೆಗಟ್ಟು ವಿಕೆ ಬಗ್ಗೆ ಅರಿವು ಮೂಡಿಸಿದರು….

ಲಕ್ಷಗಟ್ಟಲೆ ಸಂಬಳ ಪಡೆಯುವ ಪ್ರೊಫೆಸರ್‍ಗಳು ನಾಲ್ಕು ಗಂಟೆಯೂ ಪಾಠ ಮಾಡುತ್ತಿಲ್ಲ…
ಮೈಸೂರು

ಲಕ್ಷಗಟ್ಟಲೆ ಸಂಬಳ ಪಡೆಯುವ ಪ್ರೊಫೆಸರ್‍ಗಳು ನಾಲ್ಕು ಗಂಟೆಯೂ ಪಾಠ ಮಾಡುತ್ತಿಲ್ಲ…

October 8, 2018

ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ವಿಷಾದ ಮೈಸೂರು:  ಲಕ್ಷಗಟ್ಟಲೆ ಸಂಬಳ ತೆಗೆದುಕೊಳ್ಳುವ ಪ್ರೊಫೆಸರ್‍ಗಳು ಸರಿಯಾಗಿ ನಾಲ್ಕು ಗಂಟೆ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿಲ್ಲ. ವಿಶ್ವವಿದ್ಯಾನಿಲಯಗಳಿಗೆ ಮಾರ್ಗದರ್ಶನ ನೀಡಬೇಕಾಗಿರುವ ಸಿಂಡಿಕೆಟ್ ಸಮಿತಿಯೇ ಸರಿಯಿಲ್ಲ. ಹೀಗಿರು ವಾಗ ಶಿಕ್ಷಣ ಕ್ಷೇತ್ರ ಬೆಳೆಯುವುದು ಹೇಗೆ? ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಬೇಸರ ವ್ಯಕ್ತಪಡಿಸಿದರು. ಮೈಸೂರಿನ ವಿಜಯನಗರದಲ್ಲಿರುವ ಕೃಷಿಕ್ ಸರ್ವೋದಯ ಫೌಂಡೇಷನ್ ಮೈಸೂರು ಶಾಖೆಯ ಕೃಷಿಕ್ ಭವನದ ಆವರಣದಲ್ಲಿ ಭಾನುವಾರ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ.ಡಾ….

ಮಹಿಷ ರಾಕ್ಷಸನಲ್ಲ… ಜನರ ರಕ್ಷಕ
ಮೈಸೂರು

ಮಹಿಷ ರಾಕ್ಷಸನಲ್ಲ… ಜನರ ರಕ್ಷಕ

October 8, 2018

ಮೈಸೂರು:  ಮಹಿಷ ರಾಕ್ಷಸನಲ್ಲ… ಆತ ಜನರ ರಕ್ಷಕ. ಬುದ್ಧನ ತತ್ವವನ್ನು ಎತ್ತಿ ಹಿಡಿದ ಆತನನ್ನು ರಾಕ್ಷಸನನ್ನಾಗಿ ಚಿತ್ರಿಸಿದ್ದಾರೆ ಎಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಣೆ ಸಮಿತಿ ಆಯೋಜಿಸಿದ್ದ ಮಹಿಷ ದಸರಾ ಕಾರ್ಯಕ್ರಮದಲ್ಲಿ ವ್ಯಕ್ತವಾದ ಅಭಿಪ್ರಾಯವಿದು. ಚಾಮುಂಡಿಬೆಟ್ಟದ ಮಹಿಷನ ಪ್ರತಿಮೆ ಬಳಿ ಭಾನುವಾರ ನಡೆದ ಸಮಾರಂಭದಲ್ಲಿ ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್, ವಿಚಾರ ವಾದಿಗಳಾದ ಪ್ರೊ.ಕೆ.ಎಸ್.ಭಗವಾನ್, ಪ್ರೊ. ಮಹೇಶ್‍ಚಂದ್ರು, ಉರಿಲಿಂಗಿಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಇನ್ನಿತರರು ಮಹಿಷ ರಾಕ್ಷಸನಲ್ಲ. ಆತ ಜನರಕ್ಷಕ ಎಂದು ಪ್ರತಿ ಪಾದಿಸಿದರು. ಮೊದಲಿಗೆ…

ಸಂಚಾರ ನಿಯಮ ಉಲ್ಲಂಘನೆ 14,456 ಪ್ರಕರಣಗಳಲ್ಲಿ 14,74,500 ದಂಡ ವಸೂಲಿ
ಮೈಸೂರು

ಸಂಚಾರ ನಿಯಮ ಉಲ್ಲಂಘನೆ 14,456 ಪ್ರಕರಣಗಳಲ್ಲಿ 14,74,500 ದಂಡ ವಸೂಲಿ

October 8, 2018

ಮೈಸೂರು: ಸಂಚಾರ ನಿಯಮ ಉಲ್ಲಂಘಿಸಿ ಎಫ್‍ಟಿವಿಆರ್ ನೋಟೀಸ್‍ಗಳಿಗೆ ದಂಡ ಪಾವತಿಸದೇ ಇರುವವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ಒಟ್ಟು 14,456 ಪ್ರಕರಣಗಳಿಂದ ಒಟ್ಟು 14,74,500 ರೂ. ದಂಡ ಸಂಗ್ರಹ ವಾಗಿದೆ. ಮೈಸೂರು ನಗರ ಸಂಚಾರ ನಿಯಮಗಳ ಉಲ್ಲಂಘನೆ ಸಂಬಂಧ ಪೊಲೀಸ್ ಸಿಬ್ಬಂದಿಗಳು ಮತ್ತು ಸಿಸಿಟಿವಿಗಳಿಂದ ಫೋಟೋ ತೆಗೆದು ಸಂಬಂಧಪಟ್ಟ ವಾಹನ ಮಾಲೀಕರಿಗೆ ದಂಡ ಕಟ್ಟುವಂತೆ ಅಂಚೆ ಮೂಲಕ ನೋಟೀಸ್‍ಗಳನ್ನು ಕಳುಹಿಸಲಾಗಿತ್ತು. ಈ ನೋಟೀಸ್‍ಗಳಿಗೆ ದಂಡ ಕಟ್ಟದೇ ಬಾಕಿ ಉಳಿಸಿಕೊಂಡಿದ್ದವರ ವಿರುದ್ಧ ನಗರ ಸಂಚಾರ ಪೊಲೀಸರು ಕಳೆದೆರಡು ದಿನಗಳಿಂದ…

1 1,339 1,340 1,341 1,342 1,343 1,611
Translate »