ಮೈಸೂರು: ಪ್ರವಾ ಸೋದ್ಯಮದಲ್ಲಿ ದೇಶದಲ್ಲಿ 7ನೇ ಸ್ಥಾನ ಹೊಂದಿರುವ ಕರ್ನಾಟಕ ರಾಜ್ಯವನ್ನು 2ನೇ ಸ್ಥಾನಕ್ಕೆ ತರಲು ಸರ್ಕಾರ ಮುಂದಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಇಂದಿಲ್ಲಿ ತಿಳಿಸಿದರು. ಮೈಸೂರಿನ ಕೆಆರ್‍ಎಸ್ ರಸ್ತೆಯಲ್ಲಿ ರುವ ಪೂಜಾ ಭಾಗವತ್ ಮೆಮೋರಿಯಲ್ ಮಹಾಜನ ಎಜುಕೇಷನ್ ಸೆಂಟರ್‌ನ ಸಭಾಂಗಣದಲ್ಲಿ ಪ್ರವಾಸೋದ್ಯಮ ಇಲಾಖೆ ಮತ್ತು ಪ್ರವಾಸೋದ್ಯಮ ಮತ್ತು ಹಾಸ್ಪಿಟಾಲಿಟಿ ಮ್ಯಾನೇಜ್‍ಮೆಂಟ್ ಆಯೋಜಿಸಿದ್ದ `ಪ್ರವಾಸೋದ್ಯಮ ಮತ್ತು ಡಿಜಿಟಲ್ ರೂಪಾಂತರ’ ಕುರಿತ ಎರಡು ದಿನಗಳ `ಟ್ರಾವೆಲ್ ಲಾಗ್-18’ ರಾಷ್ಟ್ರೀಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ರಾಜ್ಯಕ್ಕೆ…
ಪೌರ ಕಾರ್ಮಿಕರ ಧರಣಿ ಸ್ಥಳಕ್ಕೆ ಶಾಸಕ ರಾಮದಾಸ್ ಭೇಟಿ
October 6, 2018ಮೈಸೂರು: ಮುಷ್ಕರ ನಿರತ ಪೌರಕಾರ್ಮಿಕರನ್ನು ಶುಕ್ರವಾರ ಭೇಟಿ ಮಾಡಿದ ಕೃಷ್ಣ ರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್, ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿಕೊಂಡರು. ನಿಮ್ಮ ಸಮಸ್ಯೆಗಳು ಹಾಗೂ ಬೇಡಿಕೆಗಳ ಬಗ್ಗೆ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ತಿಳಿಸಿದ್ದು, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರನ್ನೂ ಭೇಟಿ ಮಾಡಿ ಅವರ ಗಮನಕ್ಕೂ ತಂದಿದ್ದೇನೆ. ಪೌರ ಕಾರ್ಮಿಕರ ಸಮಸ್ಯೆ ಪರಿಹಾರಕ್ಕೆ ಗಮನಹರಿಸಬೇಕೆಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಲ್ಲೂ ಮನವಿ ಮಾಡಿದ್ದೇವೆ ಎಂದು ರಾಮದಾಸ್, ಪ್ರತಿ ಭಟನಾನಿರತ ಕಾರ್ಮಿಕರಿಗೆ ತಿಳಿಸಿದರು. ನಿಮ್ಮ ಸಮಸ್ಯೆಗಳು,…
ವರುಣಾ ಕೆರೆಯಲ್ಲಿ ಜಲ ಸಾಹಸ ಕ್ರೀಡೆಗೆ ಸಚಿವರಿಂದ ಚಾಲನೆ
October 6, 2018ಮೈಸೂರು: ಮೈಸೂರು ತಾಲೂಕು, ವರುಣಾ ಕೆರೆಯಲ್ಲಿ ಶಾಶ್ವತ ಜಲ ಸಾಹಸ ಕ್ರೀಡೆಗೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಇಂದು ಚಾಲನೆ ನೀಡಿದರು. ವರುಣಾ ಕ್ಷೇತ್ರದ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯರೊಂದಿಗೆ ಬೋಟ್‍ನಲ್ಲಿ ಜಾಲಿ ರೈಡ್ ಮಾಡುವ ಮೂಲಕ ಸಚಿವದ್ವಯರು ಜಲ ಸಾಹಸ ಕ್ರೀಡೆಗೆ ಚಾಲನೆ ನೀಡಿದರು. ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಸಚಿವ ಜಿ.ಟಿ.ದೇವೇಗೌಡರು, ಕೇವಲ ದಸರಾ ಸಂದರ್ಭ ಆಯೋಜಿಸುತ್ತಿದ್ದ ಕ್ರೀಡೆಗೆ ಉತ್ತಮ ಪ್ರತಿಕ್ರಿಯೆ ಬರು ತ್ತಿದ್ದರಿಂದ ಇದೀಗ ವರುಣಾ ಕೆರೆಯಲ್ಲಿ…
ಮೈಸೂರು ಪ್ರಾಂತ್ಯದ ಜೀವ ವೈವಿಧ್ಯತೆ, ವನ್ಯಜೀವಿಗಳ ಛಾಯಾಚಿತ್ರ ಪ್ರದರ್ಶನ
October 6, 2018ಮೈಸೂರು: ರಾಷ್ಟ್ರೀಯ ವನ್ಯಜೀವಿ ಸಪ್ತಾಹದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮೈಸೂರಿನ ಕಲಾಮಂದಿರದ ಸುಚಿತ್ರ ಆರ್ಟ್ ಗ್ಯಾಲರಿಯಲ್ಲಿ ಆಯೋ ಜಿಸಿದ್ದ ಮೈಸೂರು ಪ್ರಾಂತ್ಯದ ಜೀವವೈವಿಧ್ಯತೆ ಹಾಗೂ ವನ್ಯಜೀವಿಗಳ ಮೂರು ದಿನಗಳ ಛಾಯಾಚಿತ್ರ ಪ್ರದರ್ಶನಕ್ಕೆ ಶುಕ್ರವಾರ ಅರಣ್ಯ ಸಚಿವ ಆರ್.ಶಂಕರ್ ಚಾಲನೆ ನೀಡಿದರು. ಅರಣ್ಯ ಇಲಾಖೆ ವತಿಯಿಂದ ನಡೆದ ಛಾಯಾಚಿತ್ರ ಪ್ರದರ್ಶನದಲ್ಲಿ ಹಲವು ವನ್ಯಜೀವಿ ಛಾಯಾಗ್ರಾಹಕರು ತಮ್ಮ ತಮ್ಮ ಕ್ಯಾಮರಾಗಳಲ್ಲಿ ಸೆರೆ ಹಿಡಿದ ಅಪರೂಪದ ವನ್ಯಜೀವಿಗಳ ಛಾಯಾಚಿತ್ರವನ್ನು ಸ್ಪರ್ಧೆಗೆ ಕಳುಹಿಸಿದ್ದಾರೆ. ಸುಮಾರು 128 ಕ್ಕೂ ಹೆಚ್ಚು ಛಾಯಾಚಿತ್ರಗಳಿದ್ದು, ಬಂಡೀಪುರ, ನಾಗರಹೊಳೆ…
ಅ.10ರಿಂದ ಬೆಂಗಳೂರು-ಮಂಗಳೂರು ನಡುವೆ ರೈಲು ಸಂಚಾರ ಪುನರಾರಂಭ
October 6, 2018ಬೆಂಗಳೂರು: ಅತಿವೃಷ್ಟಿ, ಭೂಕುಸಿತದ ಪರಿಣಾಮ ರೈಲು ಸಂಚಾರ ಸ್ಥಗಿತಗೊಂಡಿದ್ದ ಸುಬ್ರಹ್ಮಣ್ಯ-ಸಕಲೇಶಪುರ ರೈಲು ಮಾರ್ಗದಲ್ಲಿ ಅ.10ರಿಂದ ರೈಲು ಸಂಚಾರ ಪುನರಾರಂಭವಾಗಲಿದೆ. ಕಳೆದ ಆಗಸ್ಟ್‍ನ ಮೊದಲ ಹಾಗೂ ಎರಡನೇ ವಾರದಲ್ಲಿ ಸುರಿದ ಭಾರೀ ಮಹಾಮಳೆಯಿಂದ ಪಶ್ಚಿಮಘಟ್ಟದ ಬೆಟ್ಟ, ಗುಡ್ಡ, ಮಳೆಕಾಡು, ಕಂದಕಗಳ ನಡುವೆ ಹಾದು ಹೋಗಿರುವ ಸಕಲೇಶ ಪುರ- ಸುಬ್ರಹ್ಮಣ್ಯ ನಡುವಿನ ರೈಲು ಹಳಿಗಳ ಮೇಲೆ ಬೆಟ್ಟಗಳೇ ಕುಸಿದು ಬಿದ್ದವು. 2 ಲಕ್ಷ ಕ್ಯೂಬಿಕ್ ಮೀಟರ್‍ಗೂ ಹೆಚ್ಚು ಪ್ರಮಾಣದ ಮಣ್ಣು, ಭಾರೀ ಗಾತ್ರದ ಬಂಡೆಗಳು, ಮರ, ಗಿಡಗಳು ರೈಲು ಹಳಿಗಳನ್ನು…
ಬೆಂಗಳೂರು ಉಪ ಮೇಯರ್ ರಮಿಳಾ ಉಮಾಶಂಕರ್ ನಿಧನ
October 6, 2018ಬೆಂಗಳೂರು: ಬೃಹತ್ ಬೆಂಗ ಳೂರು ಮಹಾನಗರ ಪಾಲಿಕೆಯ ಉಪಮೇಯರ್ ಆಗಿ ಇತ್ತೀಚೆಗಷ್ಟೇ ಆಯ್ಕೆಯಾಗಿದ್ದ ರಮೀಳಾ ಉಮಾ ಶಂಕರ್(44 ವರ್ಷ) ತೀವ್ರ ಹೃದಯಾ ಘಾತದಿಂದ ಗುರುವಾರ ತಡರಾತ್ರಿ ನಿಧನ ಹೊಂದಿದ್ದಾರೆ. ಕಳೆದ ರಾತ್ರಿ 12.50ರಲ್ಲಿ ರಮೀಳಾ ಅವರಿಗೆ ತೀವ್ರ ಎದೆನೋವು ಕಾಣಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ಪಶ್ಚಿಮ ಕಾರ್ಡ್ ರಸ್ತೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿ ಸದೇ ಅವರು ಕೊನೆಯುಸಿರೆಳೆದಿದ್ದಾರೆ. 2015ರಲ್ಲಿ ನಡೆದಿದ್ದ ಬಿಬಿಎಂಪಿ ಚುನಾವಣೆಯಲ್ಲಿ ಗೋವಿಂದರಾಜ ನಗರದ ಕಾವೇರಿಪುರಂ ವಾರ್ಡ್‍ನಿಂದ (103) ಜೆಡಿಎಸ್…
ಗಣಪತಿ ಸಚ್ಚಿದಾನಂದ ಶ್ರೀಗಳಿಂದ ಪ್ರಚಾರ ಪೋಸ್ಟರ್ ಬಿಡುಗಡೆ
October 6, 2018ಮೈಸೂರು: ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಇದೇ ಡಿಸೆಂಬರ್ 15 ಹಾಗೂ 16 ನಡೆಯಲಿರುವ ಬೃಹತ್ ಬ್ರಾಹ್ಮಣ ಸಮಾವೇಶದ ಪ್ರಚಾರ ಸಮಿತಿಯ ಪೆÇೀಸ್ಟರನ್ನು ಶ್ರೀ ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಶ್ರೀಗಳು ಆಶ್ರಮ ದಲ್ಲಿ ಬಿಡುಗಡೆಗೊಳಿಸಿ, ಆಶೀರ್ವಾದ ಮಾಡಿದರು. ಈ ಬ್ರಾಹ್ಮಣ ಸಮಾವೇಶವನ್ನು ಯಶಸ್ವಿಗೊಳಿಸ ಬೇಕು. ಜೊತೆಗೆ ಇಲ್ಲಿ ಯಾರೂ ಮೇಲಲ್ಲ ಯಾರೂ ಕೀಳಲ್ಲ ಎಂಬ ಭಾವನೆಯಿಂದ ಭಾಗವಹಿಸಬೇಕು ಆಗ ಮಾತ್ರ ಸಮಾಜದಲ್ಲಿ ಸಾಮರಸ್ಯ ಉಂಟಾಗು…
ಅ.8ರಂದು ದಸರೆಗೆ ಹೆಚ್ಚುವರಿ ಪೊಲೀಸರ ಆಗಮನ
October 6, 2018ಮೈಸೂರು: ದಸರೆಗೆ ನಿಯೋಜನೆಗೊಂಡಿರುವ ಹೆಚ್ಚುವರಿ ಪೊಲೀಸರ ಮೊದಲ ತಂಡವು ಅಕ್ಟೋಬರ್ 8ರಂದು ಮೈಸೂರು ತಲುಪಲಿದೆ ಎಂದು ನಗರ ಪೊಲೀಸ್ ಕಮೀಷ್ನರ್ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ತಿಳಿಸಿದ್ದಾರೆ. ಅಕ್ಟೋಬರ್ 10ರಂದು 2018ರ ದಸರಾ ಮಹೋತ್ಸವ ಉದ್ಘಾಟನೆಯಾಗಲಿದ್ದು, 2 ದಿನ ಮುಂಚಿತವಾಗಿ ಹೊರ ಜಿಲ್ಲೆ ಗಳ ಹೆಚ್ಚುವರಿ ಭದ್ರತಾ ಸಿಬ್ಬಂದಿ ಮೈಸೂ ರಿಗೆ ಆಗಮಿಸಲಿದ್ದಾರೆ. ಅವರಿಗೆ ಊಟ- ವಸತಿ ಸೌಲಭ್ಯ ಒದಗಿಸಲು ಸಿದ್ಧತೆ ಮಾಡಿ ಕೊಳ್ಳಲಾಗಿದೆ ಎಂದು ತಿಳಿಸಿದರು. ಎರಡನೇ ತಂಡದ ಪೊಲೀಸರು ಅಕ್ಟೋ ಬರ್ 8ರಂದು ಬರಲಿದ್ದು, ವಿಜಯ ದಶಮಿ…
ಗಡಿ ಕಾಯುವ ಸೈನಿಕರಿಗೆ ಮೈಸೂರಿನ ಟೋಪಿ, ಸ್ಕಾರ್ಫ್!
October 6, 2018ಮೈಸೂರು: ಗಡಿ ಕಾಯುವ ಸೈನಿಕರಿಗೆ ಮೈಸೂರಿನಲ್ಲಿ ಟೋಪಿ ಮತ್ತು ಸ್ಕಾರ್ಫ್ ತಯಾರಾಗುತ್ತಿದೆ. ಚೆನ್ನೈ ಮೂಲದ ಮದರ್ ಇಂಡಿ ಯಾಸ್ ಕ್ರೋಷೆ ಕ್ವೀನ್ಸ್ ಸಂಸ್ಥೆಯ ಪ್ರಾದೇಶಿಕ ಸಂಯೋಜಕಿ ಶಾರದಾ ಸಿ.ಅರಸ್ ಅವರು ಇಂದಿಲ್ಲಿ ಈ ವಿಷಯ ತಿಳಿಸಿದರು. ಹ್ಯಾಟ್ರಿಕ್ ಗಿನ್ನಿಸ್ ದಾಖಲೆ ಮಾಡಿರುವ ಮದರ್ ಇಂಡಿಯಾಸ್ ಕ್ರೋಷೆ ಕ್ವೀನ್ಸ್ ಸಂಸ್ಥೆಯು `ರಿಟರ್ನ್ ವಿತ್ ಥ್ಯಾಂಕ್ಸ್ ಟು ಇಂಡಿಯನ್ ಬ್ರೇವ್ ಬ್ರದರ್ಸ್’ ಘೋಷವಾಕ್ಯದಡಿ ಗಡಿ ಕಾಯುವ ಸೈನಿಕರಿಗಾಗಿ ಮಿಲಿಟರಿ ಹಸಿರು ಬಣ್ಣದ ಉಣ್ಣೆಯಿಂದ ಬೆಚ್ಚಗಿನ ಸ್ಕಾರ್ಫ್ ಮತ್ತು ಟೋಪಿಗಳನ್ನು ತಯಾರಿಸುತ್ತಿದೆ….
ಮೈಸೂರು ಜೈಲಿನಿಂದ 9 ಮಂದಿ ಖೈದಿಗಳ ಬಿಡುಗಡೆ
October 6, 2018ಮೈಸೂರು: 150ನೇ ಮಹಾತ್ಮ ಗಾಂಧಿ ಜಯಂತಿ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರದ ನಿರ್ದೇಶನದಂತೆ ಮೈಸೂರು ಕೇಂದ್ರ ಕಾರಾಗೃಹದ 9 ಮಂದಿ ಸಾಮಾನ್ಯ ಸಜಾ ಬಂಧಿಗಳನ್ನು ಸನ್ನಡತೆ ಆಧಾರದ ಮೇಲೆ ಇಂದು ಬಿಡುಗಡೆ ಮಾಡಲಾಯಿತು. ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾ ಲಯದ ನ್ಯಾಯಾಧೀಶ ಎಸ್.ಕೆ.ಒಂಟಿಗೋಡಿ ಅವರು 9 ಮಂದಿಯನ್ನು ಪ್ರಮಾಣ ಪತ್ರ ನೀಡಿ, ಬೀಳ್ಕೊಟ್ಟರು. ಅದೇ ವೇಳೆ ಎನ್.ವಿ. ಶ್ರೀಧರ ರಾವ್ ಬರೆದಿರುವ `ಗಾಂಧೀಜಿ ಮತ್ತು ಸ್ವಾತಂತ್ರ್ಯ ಸಂಗ್ರಾಮ’, ಸತ್ಯ ರಥ ಅವರ `ಸೆರೆಮನೆಯಲ್ಲಿ ಮಹಾತ್ಮ’ ಹಾಗೂ…