ಮೈಸೂರು

ಇಂದಿನಿಂದ ಮೈಸೂರಲ್ಲಿ ದಸರಾ ವಸ್ತು ಪ್ರದರ್ಶನ
ಮೈಸೂರು

ಇಂದಿನಿಂದ ಮೈಸೂರಲ್ಲಿ ದಸರಾ ವಸ್ತು ಪ್ರದರ್ಶನ

November 26, 2021

ಮೈಸೂರು,ನ.25(ಆರ್‍ಕೆ)-ಕೋವಿಡ್ ಸೋಂಕಿನ ಭೀತಿಯಿಂದ ಕಳೆದ 2 ವರ್ಷ ಗಳಿಂದ ಬಂದ್ ಆಗಿದ್ದ ಮೈಸೂರು ದಸರಾ ವಸ್ತುಪ್ರದರ್ಶನ ನಾಳೆ(ನ.26)ಯಿಂದ ಆರಂಭವಾಗಲಿದೆ. ಮೈಸೂರಿನ ದೊಡ್ಡಕೆರೆ ಮೈದಾನದ ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಶುಕ್ರವಾರ ಸಂಜೆ 6 ಗಂಟೆಗೆ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ್‍ಕುಮಾರ್‍ಗೌಡ ಉಪಸ್ಥಿತಿಯಲ್ಲಿ ಸಾಂಪ್ರದಾಯಿಕ ವಾಗಿ 66 ದಿನಗಳ ವಸ್ತು ಪ್ರದ ರ್ಶನಕ್ಕೆ ಚಾಲನೆ ದೊರೆಯಲಿದೆ. ವಸ್ತು ಪ್ರದರ್ಶನದಲ್ಲಿ ಒಟ್ಟು 142 ಮಳಿಗೆಗಳನ್ನು ತೆರೆಯಲಿದ್ದು, ಈಗಾಗಲೇ 100ಕ್ಕೂ ಅಧಿಕ ವಿವಿಧ ಮಳಿಗೆಗಳು ಸಿದ್ಧವಾಗಿವೆ. ಮೂರ್ನಾಲ್ಕು ದಿನಗಳಲ್ಲಿ…

ಡಾ.ತಿಮ್ಮಯ್ಯ ನಾಮಪತ್ರ ಅಂಗೀಕಾರ
ಮೈಸೂರು

ಡಾ.ತಿಮ್ಮಯ್ಯ ನಾಮಪತ್ರ ಅಂಗೀಕಾರ

November 26, 2021

ಮೈಸೂರು,ನ.25(ಆರ್‍ಕೆಬಿ)-ಮೈಸೂರು-ಚಾಮ ರಾಜನಗರ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‍ಗೆ ನಡೆಯಲಿರುವ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಡಾ.ಡಿ.ತಿಮ್ಮಯ್ಯ ಅವರ ನಾಮ ಪತ್ರ ಗುರುವಾರ ಅಂಗೀಕಾರವಾಯಿತು. ತಿಮ್ಮಯ್ಯ ಅವರ ನಾಮಪತ್ರಕ್ಕೆ ಬಿಜೆಪಿ ಸಲ್ಲಿಸಿದ್ದ ಆಕ್ಷೇ ಪಣೆಗಳನ್ನು ತಳ್ಳಿಹಾಕಿದ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು, ತಿಮ್ಮಯ್ಯ ಅವರ ನಾಮಪತ್ರ ಕ್ರಮಬದ್ಧವಾಗಿದೆ ಎಂದು ಘೋಷಿಸಿದರು. ತಮ್ಮ ನಾಮಪತ್ರದ ಜೊತೆ ಸಲ್ಲಿಸಿದ್ದ ಪ್ರಮಾಣ ಪತ್ರಗಳಲ್ಲಿನ ಲೋಪಗಳನ್ನು ಎತ್ತಿಹಿಡಿದು ಬಿಜೆಪಿ ಸಲ್ಲಿಸಿದ್ದ ಆಕ್ಷೇಪಣೆಗಳಿಂದಾಗಿ ಕಳೆದ ಎರಡು ದಿನಗಳಿಂದ ಆತಂಕದಲ್ಲಿದ್ದ ಡಾ.ಡಿ.ತಿಮ್ಮಯ್ಯ ನಿಟ್ಟುಸಿರು ಬಿಟ್ಟಿದ್ದಾರೆ. ಬುಧವಾರ…

ಪರಿಣಾಮಕಾರಿ ಕಲಿಕೆಗೆ ಮನಸ್ಸಿನ ನಿಯಂತ್ರಣ ಅತ್ಯಗತ್ಯ
ಮೈಸೂರು

ಪರಿಣಾಮಕಾರಿ ಕಲಿಕೆಗೆ ಮನಸ್ಸಿನ ನಿಯಂತ್ರಣ ಅತ್ಯಗತ್ಯ

November 25, 2021

ಮೈಸೂರು,ನ.೨೪(ಪಿಎಂ)- ಭಗವದ್ಗೀತೆಯ ೧೫ನೇ ಅಧ್ಯಾಯದಲ್ಲಿ ಮನಸ್ಸು ನಮ್ಮ ೬ನೇ ಇಂದ್ರಿಯ ಎಂದು ಉಲ್ಲೇಖಿಸಿದ್ದು, ಪರಿಣಾಮಕಾರಿ ಕಲಿಕೆಗೆ ಮನಸ್ಸಿನ ನಿಯಂತ್ರಣ ಅತ್ಯಗತ್ಯ ಎಂದು ಬಳ್ಳಾರಿಯ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾನಿಲಯ ವಿಶ್ರಾಂತ ಕುಲಪತಿ ಪ್ರೊ.ಮಂಜಪ್ಪ ಡಿ.ಹೊಸಮನೆ ಹೇಳಿದರು. ಮುಕ್ತ ವಿವಿಯ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಕಾಲೇಜು ಸಹಾಯಕ ಪ್ರಾಧ್ಯಾ ಪಕರ ಹುದ್ದೆಗಳ ನೇಮಕಾತಿ ಪರೀಕ್ಷೆ ಸಂಬAಧ ಮುಕ್ತ ವಿವಿಯಲ್ಲಿ ಹಮ್ಮಿಕೊಂಡಿರುವ ಉಚಿತ ತರಬೇತಿ ಶಿಬಿರಕ್ಕೆ ಮೈಸೂರಿನ ಮುಕ್ತ ಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ಚಾಲನೆ ನೀಡಿ, ಮಾತನಾಡಿದರು….

ರಂಗ ಕಾರ್ಯಾಗಾರ ಪೂರ್ಣ: ಇಂದು, ನಾಳೆ ಶಿಬಿರಾರ್ಥಿಗಳಿಂದ ನಾಟಕ ಪ್ರದರ್ಶನ
ಮೈಸೂರು

ರಂಗ ಕಾರ್ಯಾಗಾರ ಪೂರ್ಣ: ಇಂದು, ನಾಳೆ ಶಿಬಿರಾರ್ಥಿಗಳಿಂದ ನಾಟಕ ಪ್ರದರ್ಶನ

November 25, 2021

ಮೈಸೂರು, ನ.೨೪(ಎಂಟಿವೈ)- ರಂಗ ದಿಗ್ಗಜರಾದ ಸುಬ್ಬಯ್ಯ ನಾಯ್ಡು ಹಾಗೂ ಪದ್ಮಶ್ರೀ ನಾಗರತ್ನಮ್ಮ ಅವರ ಹೆಸರಿನಲ್ಲಿ ಹವ್ಯಾಸಿ ರಂಗಕರ್ಮಿಗಳಿಗೆ ಆಯೋಜಿಸಿದ್ದ ರಂಗ ಕಾರ್ಯಾ ಗಾರ ಪೂರ್ಣಗೊಂಡಿದ್ದು, ನ.೨೫, ೨೬ರಂದು ಶಿಬಿರಾರ್ಥಿಗಳಿಂದ ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದ್ದಾರೆ. ರಂಗಾಯಣದ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಂಗಾಯಣದ ಭೂಮಿಗೀತದಲ್ಲಿ ನ.೨೫ರಂದು ಸಂಜೆ ೬.೩೦ಕ್ಕೆ ಸುಬ್ಬಯ್ಯ ನಾಯ್ಡು ರಂಗ ಕಾರ್ಯಾಗಾರದ ಶಿಬಿರಾರ್ಥಿ ಗಳು ಸಾರಾ ಅಬೂಬಕರ್ ಅವರ `ಚಂದ್ರಗಿರಿಯ ತೀರದಲ್ಲಿ’ ನಾಟಕವನ್ನು ಪ್ರದರ್ಶಿಸಲಿದ್ದಾರೆ. ಎಸ್.ರಾಮು ನಿರ್ದೇಶನದಲ್ಲಿ…

ನಾಳೆ ಮೈಸೂರು ವಿವಿ ಹಿರಿಯ ವಿದ್ಯಾರ್ಥಿಗಳ ಜಾಗತಿಕ ಸಮಾವೇಶ
ಮೈಸೂರು

ನಾಳೆ ಮೈಸೂರು ವಿವಿ ಹಿರಿಯ ವಿದ್ಯಾರ್ಥಿಗಳ ಜಾಗತಿಕ ಸಮಾವೇಶ

November 25, 2021

ಮೈಸೂರು, ನ.೨೪(ಎಂಟಿವೈ)-ಮೈಸೂರು ವಿಶ್ವವಿದ್ಯಾನಿಲಯದ ರಾಣ ಬಹ ದ್ದೂರ್ ಸಭಾಂಗಣದಲ್ಲಿ ನ.೨೬ರಂದು ಸಂಜೆ ೪ಕ್ಕೆ ಮೈಸೂರು ವಿವಿ ಹಿರಿಯ ವಿದ್ಯಾರ್ಥಿ ಗಳ ಜಾಗತಿಕ ಸಮಾವೇಶ ಹಾಗೂ ವಿಶಿಷ್ಟ ಹಿರಿಯ ವಿದ್ಯಾರ್ಥಿ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗಿದೆ. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ವಸಂತಕುಮಾರ್ ತಿಮಕಾಪುರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದು, ಮೈಸೂರು ವಿಶ್ವವಿದ್ಯಾನಿಲಯದ ಹಿರಿಯ ವಿದ್ಯಾರ್ಥಿಗಳ ಸಂಘದ ಸಮಾವೇಶ ದಲ್ಲಿ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ, ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್, ರಾಜವಂಶಸ್ಥೆ…

ಜನರ ತೀರ್ಪಿಗೆ ತಲೆ ಬಾಗುವೆ ಕಸಾಪ ಚುನಾವಣೆಯ ಪರಾಜಿತ ಅಭ್ಯರ್ಥಿ ನಾಗರಾಜು
ಮೈಸೂರು

ಜನರ ತೀರ್ಪಿಗೆ ತಲೆ ಬಾಗುವೆ ಕಸಾಪ ಚುನಾವಣೆಯ ಪರಾಜಿತ ಅಭ್ಯರ್ಥಿ ನಾಗರಾಜು

November 25, 2021

ಮೈಸೂರು, ನ.೨೪(ಎಂಟಿವೈ)-ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಸ್ಥಾನದ ಚುನಾವಣೆ ಯಲ್ಲಿ ಜನರು ಕೊಟ್ಟ ತೀರ್ಮಾನವನ್ನು ತಲೆಬಾಗಿ ಸ್ವೀಕರಿಸಿ, ನೂತನ ಅಧ್ಯಕ್ಷ ಮಡ್ಡಿಕೆರೆ ಗೋಪಾಲರೊಂದಿಗೆ ಕೈಜೋಡಿಸಿ ಕನ್ನಡದ ಕೆಲಸ ಮಾಡುತ್ತೇನೆ ಎಂದು ಪರಾಜಿತ ಅಭ್ಯರ್ಥಿ ಕೆ.ಎಸ್.ನಾಗರಾಜು ತಿಳಿಸಿದರು. ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕಳೆದ ೫ ವರ್ಷಗಳ ಅವಧಿಯಲ್ಲಿ ಜಿಲ್ಲಾ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ದ್ದೇನೆ. ಆ ಅವಧಿಯಲ್ಲಿ ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರ ಮಾರ್ಗದರ್ಶನ ಮತ್ತು ಇಚ್ಛೆಯಂತೆ ೪೦೦ಕ್ಕೂ…

ಮೈಸೂರು ಜಿಲ್ಲೆಯಲ್ಲಿ ೭ ಮಂದಿ ಕೊರೊನಾ ಸೋಂಕಿತರು ಗುಣಮುಖ
ಮೈಸೂರು

ಮೈಸೂರು ಜಿಲ್ಲೆಯಲ್ಲಿ ೭ ಮಂದಿ ಕೊರೊನಾ ಸೋಂಕಿತರು ಗುಣಮುಖ

November 25, 2021

ಮೈಸೂರು, ನ.೨೪(ಎಸ್‌ಪಿಎನ್)- ಮೈಸೂರು ಜಿಲ್ಲೆಯಲ್ಲಿ ಬುಧವಾರಕ್ಕೆ ೨೪೦ ಕೊರೊನಾ ಸಕ್ರಿಯ ಪ್ರಕರಣಗಳಿದ್ದು, ರಾಜ್ಯದಲ್ಲಿ ಒಟ್ಟು ೬,೪೧೨ ಸಕ್ರಿಯ ಪ್ರಕರಣಗಳಿವೆ. ಇಂದು ಮೈಸೂರು ಜಿಲ್ಲೆಯಲ್ಲಿ ೩೦ ಮಂದಿಗೆ ಕೊರೊನಾ ಪತ್ತೆಯಾಗಿದ್ದು, ರಾಜ್ಯದಲ್ಲಿ ೨೫೪ ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೆ ಜಿಲ್ಲೆಯಲ್ಲಿ ೧,೭೯,೬೩೦ ಜನರಲ್ಲಿ ಕೊರೊನಾ ಪತ್ತೆಯಾಗಿದ್ದು, ೧,೭೬,೯೬೧ ಮಂದಿ ಗುಣಮುಖರಾಗಿದ್ದಾರೆ. ಮೈಸೂರಲ್ಲಿ ಒಟ್ಟಾರೆ ೨,೪೨೯ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿಂದು ೩ ಮಂದಿ ಸಾವನ್ನಪ್ಪಿದ್ದು, ಒಟ್ಟು ೩೮,೧೮೫ ಮಂದಿ ಸಾವನ್ನಪ್ಪಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ೭ ಮಂದಿ ಸೋಂಕಿತರು ಗುಣಮುಖ ರಾಗಿದ್ದು, ರಾಜ್ಯದಲ್ಲಿ ೫೪೬…

Judicial Abuse: Land Justice Board Secretary, Non-bailable warrant issued to members
ಮೈಸೂರು

Judicial Abuse: Land Justice Board Secretary, Non-bailable warrant issued to members

November 25, 2021

ಮೈಸೂರು,ನ.೨೪-ಮೈಸೂರು ತಾಲೂಕು ಭೂ ನ್ಯಾಯ ಮಂಡಳಿ ಕಾರ್ಯದರ್ಶಿ ಯಾಗಿದ್ದ ಹಿಂದಿನ ತಹಸೀಲ್ದಾರ್ ರಮೇಶ್ ಬಾಬು, ಸದಸ್ಯರಾದ ಚಾಮುಂಡಯ್ಯ, ರವಿಕುಮಾರ್, ಸತೀಶ್‌ಕುಮಾರ್ ಮತ್ತು ಚಿಕ್ಕಣ್ಣೇಗೌಡ ಅವರಿಗೆ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಹೈಕೋರ್ಟ್ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ. ವಿವರ: ಮೈಸೂರು ತಾಲೂಕು ಕಳಸ್ತವಾಡಿ ಗ್ರಾಮದ ಸರ್ವೆ ನಂ.೨೩೯ರ ೧೧ ಎಕರೆ ೧೭ ಗುಂಟೆ ಜಮೀನು ಟಿ.ಎಸ್.ಕಲಾಧರ್ ಉಪಾಧ್ಯಾಯ ಎಂಬುವರ ಹೆಸರಿನಲ್ಲಿದ್ದು, ಈ ಜಮೀನಿನಲ್ಲಿ ತಾವು ಬೇಸಾಯ ಮಾಡುತ್ತಿರುವುದಾಗಿ ಅದೇ ಗ್ರಾಮದ ಸಿದ್ದಯ್ಯ ಬಿನ್ ಕರಿಯಯ್ಯ ಎಂಬುವರು ೧೯೭೯ರಲ್ಲಿ ಫಾರಂ…

ಕಿರಣ್ ಸಿಡ್ಲೆಹಳ್ಳಿಗೆ ಮುಕ್ತಕ ಸಾಹಿತ್ಯ ಪ್ರಶಸ್ತಿ ಪ್ರದಾನ
ಮೈಸೂರು

ಕಿರಣ್ ಸಿಡ್ಲೆಹಳ್ಳಿಗೆ ಮುಕ್ತಕ ಸಾಹಿತ್ಯ ಪ್ರಶಸ್ತಿ ಪ್ರದಾನ

November 25, 2021

ಮೈಸೂರು,ನ.೨೪(ಎಂಟಿವೈ)-ಮೈಸೂರಿನ ರೋಟರಿ ಸಭಾಂಗಣದಲ್ಲಿ ನ.೨೬ರಂದು ಸಂಜೆ.೬.೩೦ಕ್ಕೆ ರೋಟರಿ ಮುಕ್ತಕ ಸಾಹಿತ್ಯ ಪ್ರಶಸ್ತಿಯನ್ನು ತುಮಕೂರಿನ ಸಿಡ್ಲೆಹಳ್ಳಿ ನಿವಾಸಿ ಶಿಕ್ಷಕ ಕಿರಣ್ ಸಿಡ್ಲೆಹಳ್ಳಿ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಟ್ರಸ್ಟ್ ಅಧ್ಯಕ್ಷ ರಾಜಶೇಖರ ಕದಂಬ ತಿಳಿಸಿದ್ದಾರೆ. ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಟರಿ ಮೈಸೂರು ಉತ್ತರ ಹಾಗೂ ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಟ್ರಸ್ಟ್ ನೀಡುವ ರೋಟರಿ ಮುಕ್ತಕ ಸಾಹಿತ್ಯ ಪ್ರಶಸ್ತಿಯನ್ನು ವೃತ್ತಿಯಲ್ಲಿ ಶಿಕ್ಷಕರಾಗಿರುವ ಕಿರಣ್ ಪ್ರವೃತ್ತಿಯಲ್ಲಿ ಕವಿಯಾಗಿ, ಸಾಹಿತಿಯಾಗಿ ಅನೇಕ…

ಬಿಜೆಪಿಯ ರಘು ಕೌಟಿಲ್ಯ, ಕಾಂಗ್ರೆಸ್‌ನ ಡಾ.ತಿಮ್ಮಯ್ಯ, ಜೆಡಿಎಸ್‌ನ ಸಿ.ಎನ್.ಮಂಜೇಗೌಡ ನಾಮಪತ್ರ ಸಲ್ಲಿಕೆ
ಮೈಸೂರು

ಬಿಜೆಪಿಯ ರಘು ಕೌಟಿಲ್ಯ, ಕಾಂಗ್ರೆಸ್‌ನ ಡಾ.ತಿಮ್ಮಯ್ಯ, ಜೆಡಿಎಸ್‌ನ ಸಿ.ಎನ್.ಮಂಜೇಗೌಡ ನಾಮಪತ್ರ ಸಲ್ಲಿಕೆ

November 24, 2021

ವಿಧಾನ ಪರಿಷತ್ ಚುನಾವಣೆ: ಮೈಸೂರು-ಚಾಮರಾಜನಗರ ಕ್ಷೇತ್ರ ವಾಟಾಳ್ ಸೇರಿ ಒಟ್ಟಾರೆ ಎಂಟು ಮಂದಿಯಿAದ ೧೪ ಉಮೇದುವಾರಿಕೆ ಮೈಸೂರು, ನ.೨೩(ಆರ್‌ಕೆಬಿ)- ಸ್ಥಳೀಯ ಸಂಸ್ಥೆಗಳಿAದ ಮೈಸೂರು-ಚಾಮರಾಜನಗರ ವಿಧಾನಪರಿಷತ್‌ನ ದ್ವಿಸದಸ್ಯ ಕ್ಷೇತ್ರಕ್ಕೆ ಡಿ.೧೦ರಂದು ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಮಂಗಳವಾರ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಒಟ್ಟು ೮ ಮಂದಿ ೧೪ ಉಮೇದು ವಾರಿಕೆ ಸಲ್ಲಿಸಿದರು. ಕಾಂಗ್ರೆಸ್‌ನಿAದ ಡಾ.ಡಿ.ತಿಮ್ಮಯ್ಯ (ಮೂರು ಸೆಟ್), ಬಿಜೆಪಿಯಿಂದ ರಘು ಆರ್ ಕೌಟಿಲ್ಯ (ಮೂರು ಸೆಟ್), ಜೆಡಿಎಸ್‌ನಿಂದ ಸಿ.ಎನ್.ಮಂಜೇಗೌಡ (ಎರಡು ಸೆಟ್) ಸೇರಿದಂತೆ ೮…

1 138 139 140 141 142 1,611
Translate »