ಮೈಸೂರು: ಸಂದೇಶ್ ನಾಗರಾಜ್ ಅವರು ಜೆಡಿಎಸ್ ಪಕ್ಷ ಬಿಟ್ಟು ಈಗಾಗಲೇ ಮೂರು ವರ್ಷ ಕಳೆದಿದೆ. ನನ್ನನ್ನು ಅವರು ಸಂಪರ್ಕ ಮಾಡಿಲ್ಲ, ನಾನೂ ಮಾಡಲ್ಲ. ಸಂದೇಶ್ ನಾಗರಾಜ್ ಬೇರೆ ಯಾರ ಜೊತೆ ಸಂಪರ್ಕ ಇಟ್ಟುಕೊಂಡಿದ್ದಾರೋ ನನಗೆ ಗೊತ್ತಿಲ್ಲ. ಅವರು ಯಾರನ್ನು ಸಂಪರ್ಕಿಸಿದ್ದಾರೋ ಅದೂ ನನಗೆ ತಿಳಿದಿಲ್ಲ ಎಂದು ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು. ವಿಧಾನಪರಿಷತ್ ಚುನಾವಣೆ ಸಮರ ಕುರಿತು ಮಾತ ನಾಡಿದ ಅವರು, ಚುನಾವಣೆ ಗೆಲ್ಲುವುದರಲ್ಲಿ ಬಿಜೆಪಿಯಷ್ಟು ಅನುಭವ ನಮಗಿಲ್ಲ. ಯಾವುದೇ ಕೆಲಸ ಮಾಡದಿದ್ದರೂ ಜನರಿಂದ ಹೇಗೆ ಮತ ಪಡೆಯಬಹುದು ಎಂಬ…
ಜನ ರೊಚ್ಚಿಗೆದ್ದು ನಿಮ್ಮನ್ನು ತಿರಸ್ಕಾರ ಮಾಡುವ ಮುನ್ನ ಎಚ್ಚೆತ್ತುಕೊಳ್ಳಿ
November 23, 2021ಮೈಸೂರು, ನ.22(ಆರ್‍ಕೆಬಿ)- ಈ ಸರ್ಕಾರದಲ್ಲಿ ಕೇವಲ ಘೋಷಣೆಗಳಷ್ಟೆ. ಸರ್ಕಾರಕ್ಕೆ ಭೂಮಿ ಕಾಣುತ್ತಿಲ್ಲ. ಕೊಡಗಿನ ಜನರಿಗೆ ಈ ಈವರೆಗೂ ಪರಿಹಾರ ನೀಡಿಲ್ಲ. ರೈತರಿಗೆ ಪರಿಹಾರ ಕೊಡುವುದರಲ್ಲಿ ನೀತಿ ಸಂಹಿತೆ ಅಡ್ಡ ಬರುವುದಿಲ್ಲ. ಇದನ್ನು ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡು, ಅನುಮತಿ ಪಡೆದು ಪರಿಹಾರ ನೀಡಬಹುದು. ಸರ್ಕಾರದಲ್ಲಿ ಹಣ ಇಲ್ಲ ಎನ್ನುವುದು ಸುಳ್ಳು. ನನ್ನ ಪ್ರಕಾರ ಸರ್ಕಾರದಲ್ಲಿ ಹಣ ಇದೆ. ಎಲ್ಲದಕ್ಕೂ ಒಂದು ಮಿತಿ ಎಂಬುದಿದೆ. ಜನರು ರೊಚ್ಚಿಗೆದ್ದು ನಿಮ್ಮನ್ನು ತಿರಸ್ಕಾರ ಮಾಡುವ ಮುನ್ನ ಎಚ್ಚೆತ್ತುಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ…
ಯಾವುದೇ ಮಹಾತ್ಮರ ಜಯಂತಿಯನ್ನು ಒಂದೊಂದು ಜಾತಿಗೆ ಸೀಮಿತ ಮಾಡಬಾರದು
November 23, 2021ಮೈಸೂರು, ನ. 22- ಕೆ.ಆರ್. ಕ್ಷೇತ್ರದ ಬಿಜೆಪಿ ವತಿಯಿಂದ ಕನಕದಾಸರ ಜಯಂತಿ ಆಚರಿಸಲಾಯಿತು. ಶಾಸಕ ಎಸ್.ಎ.ರಾಮದಾಸ್ ಕನಕದಾಸರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಮಹಾತ್ಮರ ಜಯಂತಿಯನ್ನು ಒಂದೊಂದು ಜಾತಿಗೆ ಸೀಮಿತ ಮಾಡಬಾರದು. ಅವರು ಇಡೀ ಸಮಾಜದ ಆಸ್ತಿ. ಯಡಿಯೂರಪ್ಪ ನವರು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾ ರದ ವತಿಯಿಂದ ಕನಕ ಜಯಂತಿಯನ್ನು ರಾಜ್ಯಾದ್ಯಂತ ಆಚರಣೆ ಮಾಡಲಾಯಿತು. ಆಗ ನನಗೂ ಸಹ ಜಿಲ್ಲಾ ಮಂತ್ರಿಯಾಗಿ ಆಚರಣೆ ಮಾಡುವ ಸದವಕಾಶ ದೊರೆ ತಿದ್ದು ನನ್ನ ಪುಣ್ಯ. ಪರಮಾತ್ಮ ಕೃಷ್ಣ ಒಲಿಸಿ ಕೊಂಡ…
ಕಾಗಿನೆಲೆ ಶಾಖಾ ಮಠದಲ್ಲಿ ಕನಕದಾಸ ಜಯಂತಿ ಆಚರಣೆ
November 23, 2021ಮೈಸೂರು,ನ.22(ಎಂಟಿವೈ)- ಮೈಸೂ ರಿನ ಸಿದ್ಧಾರ್ಥನಗರದಲ್ಲಿರುವ ಕಾಗಿನೆಲೆ ಕನಕ ಗುರುಪೀಠದ ಶಾಖಾ ಮಠದಲ್ಲಿ ಸೋಮ ವಾರ ಭಕ್ತ ಕನಕದಾಸರ ಜಯಂತ್ಯುತ್ಸವ ವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕನಕದಾಸರ ಪ್ರತಿಮೆಗೆ ಕಾಗಿನೆಲೆ ಗುರು ಪೀಠದ ಶಾಖಾ ಮಠದ ಸ್ವಾಮೀಜಿ ಶ್ರೀ ಶಿವಾ ನಂದಪುರಿ ಸ್ವಾಮೀಜಿ, ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಸೇರಿದಂತೆ ಇನ್ನಿ ತರ ಗಣ್ಯರು ಪುಷ್ಪಾರ್ಚನೆ ಮೂಲಕ ಗೌರವ ಸಮರ್ಪಿಸಿದರು. ಇದೇ ವೇಳೆ ಶ್ರೀ ಶಿವಾನಂದಪುರಿ ಸ್ವಾಮೀಜಿ ಮಾತನಾಡಿ, ಪ್ರತಿವರ್ಷವೂ ಮೆರವಣಿಗೆ ಮೂಲಕ ಸಾವಿರಾರು ಜನ…
ಬಿಜೆಪಿ, ಜೆಡಿಎಸ್ ಕಚೇರಿಗಳಲ್ಲಿ ಕನಕದಾಸ ಜಯಂತಿ ಆಚರಣೆ
November 23, 2021ಮೈಸೂರು,ನ.22(ಎಂಟಿವೈ)-ಮೈಸೂರಿನ ವಿವಿಧ ರಾಜಕೀಯ ಪಕ್ಷಗಳ ಕಚೇರಿಯಲ್ಲಿ ಭಕ್ತ ಕನಕ ದಾಸರ ಜಯಂತ್ಯುತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಕನಕದಾಸರ ಭಾವಚಿತ್ರ, ಪ್ರತಿಮೆ ಪೂಜಿಸಿ, ಗೌರವ ಸಮರ್ಪಿಸಲಾಯಿತು. ಬಿಜೆಪಿ ಕಚೇರಿ: ಮೈಸೂರು ನಗರ ಬಿಜೆಪಿ ಹಿಂದು ಳಿದ ವರ್ಗಗಳ ಮೋರ್ಚಾದ ವತಿಯಿಂದ ಕನಕ ದಾಸರ ಜಯಂತಿಯನ್ನು ಆಚರಿಸಲಾಯಿತು. ಕಚೇ ರಿಯ ಸಭಾಂಗಣದಲ್ಲಿ ವಿಶೇಷವಾಗಿ ಅಲಂಕರಿಸಿದ್ದ ಕನಕದಾಸರ ಭಾವಚಿತ್ರಕ್ಕೆ ಮೇಯರ್ ಸುನಂದಾ ಪಾಲನೇತ್ರ ಪುಷ್ಪಾರ್ಚನೆ ಮಾಡಿದರು. ಇದೇ ವೇಳೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕೆ.ಎಸ್.ವಿಜಯಲಕ್ಷ್ಮೀ, ಕೇದಾರನಾಥದಲ್ಲಿ ಪ್ರತಿಷ್ಠಾಪಿಸಲಾದ ಶಂಕರಾ ಚಾರ್ಯರ ಮೂರ್ತಿ ಕೆತ್ತನೆ…
ಮೈಸೂರಲ್ಲಿ ಶ್ರದ್ಧಾಭಕ್ತಿಯಿಂದ ಕನಕದಾಸರ ಜಯಂತಿ ಆಚರಣೆ
November 23, 2021ಮೈಸೂರು,ನ.22(ಎಂಟಿವೈ)-ಮೈಸೂ ರಲ್ಲಿ ಸೋಮವಾರ ಎಲ್ಲೆಡೆ ಸಂತಶ್ರೇಷ್ಠ ಭಕ್ತ ಕನಕದಾಸರ ಜಯಂತ್ಯೋತ್ಸವ ವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಕನಕದಾಸರ ಭಾವಚಿತ್ರ, ಪ್ರತಿಮೆಯನ್ನು ಪೂಜಿಸಿ ಗೌರವ ಸಮರ್ಪಿಸಲಾಯಿತು. ಮೈಸೂರು ವಿವಿ ವಿಜ್ಞಾನ ಭವನದಲ್ಲಿ: ಮೈಸೂರು ವಿಶ್ವವಿದ್ಯಾನಿಲಯದ ವತಿ ಯಿಂದ ಮಾನಸಗಂಗೋತ್ರಿ ಆವರಣದಲ್ಲಿ ರುವ ವಿಜ್ಞಾನ ಭವನದಲ್ಲಿ ಸೋಮವಾರ ಕನಕದಾಸರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಮೈವಿವಿ ಕುಲಪತಿ ಪೆÇ್ರ.ಜಿ.ಹೇಮಂತಕುಮಾರ್, ಕನದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತ ನಾಡಿ, ಕನಕದಾಸರ ಕೊಡುಗೆಗಳನ್ನು ಚಿರ ಸ್ಥಾಯಿಗೊಳಿಸಲು 2007ರಲ್ಲಿ ಸ್ಥಾಪನೆ ಯಾದ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರವು ಸಂತ…
ನ.27ಕ್ಕೆ ಮೈಸೂರಲ್ಲಿ ಪ್ರಸಿದ್ಧ ನ್ಯಾಯವಾದಿ ಸಾಯಿ ದೀಪಕ್ ಅವರ `ಇಂಡಿಯಾ ದಟ್ ಈಸ್ ಭಾರತ್’ ಪುಸ್ತಕ ಬಿಡುಗಡೆ
November 23, 2021ಮೈಸೂರು,ನ.22-ಸುಪ್ರಿಂಕೋರ್ಟ್ ವಕೀಲ ಜೆ.ಸಾಯಿ ದೀಪಕ್ ಅವರ `ಇಂಡಿಯಾ ದಟ್ ಈಸ್ ಭಾರತ್’ ಪುಸ್ತಕ ನ.27ರಂದು ಮೈಸೂರಿನಲ್ಲಿ ಬಿಡುಗಡೆಯಾಗಲಿದೆ. ಮಂಥನ ಮೈಸೂರು ಸಂಸ್ಥೆ ವತಿಯಿಂದ ಮಾನಸಗಂಗೋತ್ರಿ ವಿಜ್ಞಾನ ಭವನದಲ್ಲಿ ಅಂದು ಸಂಜೆ 5 ಗಂಟೆಗೆ ಆಯೋಜಿಸಿ ರುವ ಕಾರ್ಯಕ್ರಮದಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪುಸ್ತಕ ಬಿಡುಗಡೆ ಮಾಡಲಿದ್ದು, ನಂತರ ಲೇಖಕ ಜೆ.ಸಾಯಿ ದೀಪಕ್ ಅವರೊಂದಿಗೆ ಸಂವಾದ ನಡೆಯಲಿದೆ. ಸಾಯಿ ದೀಪಕ್, ಅಣ್ಣಾ ವಿಶ್ವವಿದ್ಯಾನಿಲಯದಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಪದವಿ, ಖಾರಗ್‍ಪುರ ಐಐಟಿಯಿಂದ ಕಾನೂನು ಪದವಿ ಪಡೆದಿದ್ದಾರೆ. ಇಂಜಿನಿಯರಿಂಗ್…
ಹಾಸನ ಜಿಲ್ಲಾ ಬಳಗಕ್ಕೆ ಮುಡಾದಿಂದ ಸಿಎ ನಿವೇಶನ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ
November 23, 2021ಮೈಸೂರು,ನ.22(ಪಿಎಂ)-ಮೈಸೂರಿನ ಹಾಸನ ಜಿಲ್ಲಾ ಬಳಗಕ್ಕೆ ಮೈಸೂರು ನಗರಾ ಭಿವೃದ್ಧಿ ಪ್ರಾಧಿಕಾರದಿಂದ ನಾಗರಿಕ ಸೌಕರ್ಯ (ಸಿಎ) ನಿವೇಶನ ಕಲ್ಪಿಸಿ ಕೊಡುವ ಪ್ರಾಮಾ ಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಎಲ್.ನಾಗೇಂದ್ರ ತಿಳಿಸಿದರಲ್ಲದೆ, ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲೇ ನಿವೇಶನ ಲಭ್ಯವಾದರೆ, ತಮ್ಮ ಶಾಸಕರ ನಿಧಿಯಿಂದ ಅನುದಾನ ಕಲ್ಪಿಸುವ ಭರವಸೆಯನ್ನೂ ನೀಡಿದರು. ಮೈಸೂರಿನ ಜೆಎಲ್‍ಬಿ ರಸ್ತೆಯ ಇಂಜಿ ನಿಯರ್‍ಗಳ ಸಂಸ್ಥೆ ಸಭಾಂಗಣದಲ್ಲಿ ಹಾಸನ ಜಿಲ್ಲಾ ಬಳಗದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಬಳಗದ ಸರ್ವ ಸದಸ್ಯರ ಸಭೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ…
ಬೈಕ್‍ಗೆ ಕಾರು ಡಿಕ್ಕಿ: ಸಹೋದರರ ದುರ್ಮರಣ
November 23, 2021ಮೈಸೂರು, ನ. 22(ಆರ್‍ಕೆ)- ಕಾರೊಂದು ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಸಹೋದರರಿಬ್ಬರು ದುರ್ಮರಣಕ್ಕೀಡಾದ ಘಟನೆ, ಮೈಸೂರು ತಾಲೂಕು ಹೊಸಕೋಟೆ ಸಮೀಪದ ಸಾಗರಕಟ್ಟೆ ಸೇತುವೆ ಮೇಲೆ ಭಾನುವಾರ ರಾತ್ರಿ ಸಂಭವಿಸಿದೆ. ಮೈಸೂರು ತಾಲೂಕು, ಇಲವಾಲ ಹೋಬಳಿ, ಹೊಸಕೋಟೆ ಗ್ರಾಮದ ಮಹದೇವು ಅವರ ಪುತ್ರರಾದ ವಿಷ್ಣು(22) ಹಾಗೂ ವಿಶ್ವ(20) ಅಪಘಾತದಲ್ಲಿ ಸಾವನ್ನಪ್ಪಿದವರು. ಹೊಸಕೋಟೆಯಿಂದ ಕೆಆರ್ ನಗರ ಕಡೆಗೆ ಹೀರೋ ಹೋಂಡಾ ಪ್ಯಾಷನ್ ಪ್ರೋ ಬೈಕ್‍ನಲ್ಲಿ ಸಹೋದರರು ಹೋಗುತ್ತಿದ್ದಾಗ ಎದುರಿನಿಂದ ವೇಗವಾಗಿ ಬಂದ ಹುಂಡೈ ಐ10 ಕಾರು, ಸಾಗರಕಟ್ಟೆ ಸೇತುವೆ ಮೇಲೆ…
ಶಿಥಿಲಾವಸ್ಥೆಯಲ್ಲಿರುವ ಕೆಆರ್, ಚೆಲುವಾಂಬ ಆಸ್ಪತ್ರೆಗಳ ಕಟ್ಟಡ ದುರಸ್ತಿಗೆ ಚಿಂತನೆ
November 23, 2021ಮೈಸೂರು, ನ. 22(ಆರ್‍ಕೆ)- ಶಿಥಿಲಾ ವಸ್ಥೆಯಲ್ಲಿರುವ ಮೈಸೂರಿನ ಕೃಷ್ಣ ರಾಜೇಂದ್ರ (ಕೆಆರ್) ಹಾಗೂ ಚೆಲು ವಾಂಬ ಆಸ್ಪತ್ರೆಗಳ ಪಾರಂಪರಿಕ ಕಟ್ಟಡ ಗಳ ದುರಸ್ತಿ ಮಾಡಿ ಸಂರಕ್ಷಿಸಲು ಆಡಳಿತ ಮಂಡಳಿಯು ಮುಂದಾಗಿದೆ. ಕಳೆದ ಹಲವು ದಿನಗಳಿಂದ ನಿರಂತರ ವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈ ಪಾರಂಪರಿಕ ಕಟ್ಟಡಗಳ ಛಾವಣಿ ಸೋರ ತೊಡಗಿರುವುದಲ್ಲದೆ, ಸೀಲಿಂಗ್‍ನ ಪ್ಲಾಸ್ಟರ್ ಕಳಚಿ ಬೀಳುತ್ತಿದ್ದು, ಒಳಚರಂಡಿ ವ್ಯವ ಸ್ಥೆಯೂ ಹಾಳಾಗಿರುವುದರಿಂದ ಸದಾ ರೋಗಿಗಳಿಂದ ತುಂಬಿ ತುಳುಕುತ್ತಿರುವ ಆಸ್ಪತ್ರೆ ಕಟ್ಟಡಗಳನ್ನು ಪಾರಂಪರಿಕ ವಿನ್ಯಾಸ ಉಳಿಸಿಕೊಂಡು ಪುನರುಜ್ಜೀವನಗೊಳಿ ಸಲು ಪ್ರಕ್ರಿಯೆ…










