ಮೈಸೂರು,ನ.21(ಪಿಎಂ)-ದಲಿತ, ರೈತ ಮತ್ತು ಜನ ಪರ ವಿರೋಧಿಗಳ ಪಾರಂಪರಿಕ ಕ್ರೌರ್ಯ, ದೌರ್ಜನ್ಯ ಮತ್ತು ಅಸಮಾನತೆ ಕಿಂಚಿತ್ತೂ ಕಡಿಮೆಯಾದಂತೆ ತೋರುತ್ತಿಲ್ಲ. ಹೀಗಾಗಿ ನಮಗೆ ತಾಯ್ನಾಡು ಎಂಬುದು ಇಲ್ಲಿಲ್ಲ ಎಂಬ ಹಿನ್ನೆಲೆಯಲ್ಲಿ ಸಾಂಸ್ಕøತಿಕ ಚಳವಳಿ ಪ್ರಾರಂಭವಾಗಬೇಕಿದೆ ಎಂದು ಪ್ರಗತಿಪರ ಚಿಂತಕ ಡಾ.ಎಸ್.ತುಕಾರಾಂ ಅಭಿಪ್ರಾಯಪಟ್ಟರು. ಮೈಸೂರಿನ ಜೆಎಲ್‍ಬಿ ರಸ್ತೆಯ ಇಂಜಿನಿಯರ್ ಗಳ ಸಂಸ್ಥೆ ಸಭಾಂಗಣದಲ್ಲಿ ದಲಿತ ಸಂಘರ್ಷ ಸಮಿತಿ (ಸಂಯೋಜಕ) ಮೈಸೂರು ವತಿಯಿಂದ `ಸಂವಿ ಧಾನದ ಆಶಯಗಳು ಮತ್ತು ದಲಿತರ ಮುಂದಿರುವ ಸವಾಲುಗಳು’ ಕುರಿತು ಭಾನುವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಅವರು…
ಚಾಮುಂಡಿಬೆಟ್ಟದ ನಂದಿಗೆ ವಿಜೃಂಭಣೆ ಮಹಾಭಿಷೇಕ
November 22, 2021ಮೈಸೂರು, ನ.21(ಎಂಟಿವೈ)- ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟದ ನಂದಿಗೆ ಮಹಾಭಿಷೇಕ ಹಾಗೂ ವಿಶೇಷ ಪೂಜಾ ಮಹೋತ್ಸವ ಭಾನುವಾರ ವಿಜೃಂಭಣೆಯಿಂದ ನೆರವೇರಿತು. ಲೋಕ ಕಲ್ಯಾಣಕ್ಕಾಗಿ ಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್ ವತಿಯಿಂದ ಭಾನುವಾರ ಬೆಳಗ್ಗೆ ಆಯೋಜಿಸಿದ್ದ 16ನೇ ವರ್ಷದ ಮಸ್ತಕಾಭಿಷೇಕದಲ್ಲಿ ನೂರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು. ಬೆಟ್ಟ ಹತ್ತುವವರಿಂದಲೇ ಸ್ಥಾಪಿತಗೊಂಡಿರುವ ಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್ ಸದಸ್ಯರು ನಡೆಸಿದ ಮಹಾಭಿಷೇಕ ಹಾಗೂ ವಿಶೇಷ ಪೂಜಾ ಮಹೋತ್ಸವದಲ್ಲಿ ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ, ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ…
ಕೃಷಿ ತಿದ್ದುಪಡಿ ಕಾಯ್ದೆ ಹಿಂದಕ್ಕೆ: ಪ್ರತಿಕ್ರಿಯಿಸಲು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ನಕಾರ
November 21, 2021ಮೈಸೂರು, ನ.20(ಎಂಟಿವೈ)- ರೈತರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಮೂರು ಕೃಷಿ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಹಿಂಪಡೆದಿರುವ ಕುರಿತು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿ ಸಲು ನಿರಾಕರಿಸಿದರು. ವಿಧಾನಪರಿಷತ್ ಚುನಾವಣೆ ಹಾಗೂ ಜನಸ್ವರಾಜ್ ಯಾತ್ರೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಶನಿವಾರ ಮೈಸೂರಿಗೆ ಆಗಮಿಸಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಜೊತೆ ಸುದ್ದಿಗೋಷ್ಠಿ ಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಸಚಿವದ್ವಯರು ಮಾತನಾಡಿದ ನಂತರ ಕೃಷಿ ಕಾಯ್ದೆಯ…
ಕೇಂದ್ರ ಜಾರಿಗೊಳಿಸಿದ ರಾಷ್ಟ್ರೀಯ ಶಿಕ್ಷಣ ನೀತಿ ಸಂವಿಧಾನ ವಿರೋಧಿ
November 21, 2021ಮೈಸೂರು,ನ.20(ಪಿಎಂ)-ಕೇಂದ್ರ ಪಟ್ಟಿ, ರಾಜ್ಯ ಪಟ್ಟಿ ಮತ್ತು ಸಮವರ್ತಿ ಪಟ್ಟಿ ವ್ಯವಸ್ಥೆ ನಮ್ಮ ಸಂವಿಧಾನದಲ್ಲಿದೆ. ಅದರಂತೆ ಶಿಕ್ಷಣ ಕ್ಷೇತ್ರ ಸಮವರ್ತಿ ಪಟ್ಟಿ ವ್ಯಾಪ್ತಿಯಲ್ಲಿದೆ. ಹಾಗಾಗಿ ರಾಜ್ಯ ಸರ್ಕಾರಗಳೊಂದಿಗೆ ಚರ್ಚಿ ಸದೇ ಏಕಾಏಕಿ ಕೇಂದ್ರ ಸರ್ಕಾರ ಜಾರಿ ಗೊಳಿಸಿರುವ ನೂತನ ಶಿಕ್ಷಣ ನೀತಿ (ಎನ್‍ಇಪಿ -2020) ಸಂವಿಧಾನದ ಆಶಯಕ್ಕೆ ವಿರುದ್ಧ ವಾಗಿದೆ ಎಂದು ರಾಜ್ಯ ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಹೆಚ್.ಎಸ್.ನಾಗ ಮೋಹನ್‍ದಾಸ್ ಅಭಿಪ್ರಾಯಪಟ್ಟರು. ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಇಂಜಿನಿಯರ್‍ಗಳ ಸಂಸ್ಥೆ ಸಭಾಂಗಣ ದಲ್ಲಿ ಮಾನವ ಬಂಧುತ್ವ ವೇದಿಕೆ-ಕರ್ನಾ ಟಕ ವತಿಯಿಂದ…
ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ
November 21, 2021ಮೈಸೂರು,ನ.20(ಎಂಟಿವೈ)- ಮಾಜಿ ಪ್ರಧಾನಿ ಇಂದಿರಾಗಾಂಧಿ ಆದರ್ಶ ಮತ್ತು ಸ್ಫೂರ್ತಿಯ ಸಂಕೇತ. ಜವಾಹರಲಾಲ್ ನೆಹರು ಮೊದಲ ಪ್ರಧಾನಿಯಾಗಿದ್ದರೂ ಅವರ ಅವಧಿಯಲ್ಲಿ ಜಾರಿಗೆ ತರಲು ಉದ್ದೇಶಿ ಸಿದ್ದ ಶೇ.75ರಷ್ಟು ಯೋಜನೆ ಪೂರ್ಣಗೊಳಿ ಸಿದ ಕೀರ್ತಿ ಇಂದಿರಾಗಾಂಧಿ ಅವರಿಗೆ ಸಲ್ಲು ತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು. ಮೈಸೂರು ನಗರ ಹಾಗೂ ಗ್ರಾಮಾಂ ತರ ಕಾಂಗ್ರೆಸ್ ಸಮಿತಿ ವತಿಯಿಂದ ಶನಿ ವಾರ ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಸದಸ್ಯತ್ವ ನೋಂದಣಿ ಅಭಿ ಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂದಿರಾಗಾಂಧಿ…
ವಿಶ್ವದಲ್ಲೇ ಭಾರತೀಯ ಆಹಾರ ಪದ್ಧತಿ ಶ್ರೇಷ್ಠ
November 21, 2021ಮೈಸೂರು,ನ.20(ಆರ್‍ಕೆ)-ವಿಶ್ವದಲ್ಲೇ ಭಾರತೀಯ ಆಹಾರ ಪದ್ಧತಿ ಶ್ರೇಷ್ಠ ವಾದುದು ಎಂದು ಕುವೆಂಪು ವಿಶ್ವವಿದ್ಯಾ ನಿಲಯದ ವಿಶ್ರಾಂತ ಕುಲಪತಿ ಡಾ. ಚಿದಾ ನಂದಗೌಡ ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರವು ಮೈಸೂರಿನ ಬೃಂದಾವನ ಬಡಾವಣೆಯಲ್ಲಿರುವ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಕಾಲೇಜಿನಲ್ಲಿ 6ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಆಹಾರ ಮೇಳ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಭಾರತೀಯ ಪಾರಂಪರಿಕ ಆಹಾರ ಪದ್ಧತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಉತ್ಕøಷ್ಟ ಆಹಾರ ಪದ್ಧತಿ ಮರೆತು ಇತ್ತೀ ಚಿನ ದಿನಗಳಲ್ಲಿ ಪಾಶ್ಚಿಮಾತ್ಯ ಪದ್ಧತಿ…
ಪರಿಷತ್ ಚುನಾವಣೆಗೆ ಸ್ಪರ್ಧಿಸಲು ವಾಟಾಳ್ ನಿರ್ಧಾರ
November 21, 2021ಮೈಸೂರು,ನ.20(ಎಂಟಿವೈ)-ಮೈಸೂರು-ಚಾಮರಾಜ ನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‍ನ ದ್ವಿಸದಸ್ಯತ್ವ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವುದಾಗಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ. ಮೈಸೂರಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತ ನಾಡಿದ ಅವರು, ಕರ್ನಾಟಕ ವಿಧಾನಪರಿಷತ್‍ನ ಪಕ್ಷೇತರ ಅಭ್ಯರ್ಥಿಯಾಗಿ ನ.23ರಂದು ಮಧ್ಯಾಹ್ನ 12.30ಕ್ಕೆ ನಾಮಪತ್ರ ಸಲ್ಲಿಸುತ್ತಿದ್ದೇನೆ. ಕಳೆದ ಹಲವು ವರ್ಷಗಳಿಂದ ಕನ್ನಡದ ಭಾಷೆ ಉಳಿವಿಗಾಗಿ, ನಾಡು, ನುಡಿ, ಜಲ ಸಂರಕ್ಷಣೆಗಾಗಿ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಈ ಹಿನ್ನೆಲೆ ಯಲ್ಲಿ ನನ್ನ ಒಡನಾಟ ಇರುವ…
ಜ್ಞಾನ, ಅನುಭವ ವಿಸ್ತಾರಕ್ಕೆ ಎನ್‍ಎಸ್‍ಎಸ್ ಉತ್ತಮ ವೇದಿಕೆ
November 21, 2021ಮೈಸೂರು, ನ.20(ಎಸ್‍ಪಿಎನ್)- ಜ್ಞಾನ ಮತ್ತು ಅನುಭವಗಳ ವಿಸ್ತಾರಕ್ಕೆ ಎನ್‍ಎಸ್‍ಎಸ್ ಉತ್ತಮ ವೇದಿಕೆ. ಯುವ ಸಮುದಾಯ ಸೇವಾ ಮನೋಭಾವ ಮೈಗೂಡಿಸಿಕೊಂಡರೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ ಎಂದು ಎನ್‍ಎಸ್‍ಎಸ್ ನಿವೃತ್ತ ಸಂಯೋಜನಾಧಿಕಾರಿ ಡಾ.ಬಿ.ಕೆ.ಶಿವಣ್ಣ ಅಭಿಪ್ರಾಯಪಟ್ಟರು. ಸರಸ್ವತಿಪುರಂನಲ್ಲಿರುವ ಮೈಸೂರು ವಿವಿ ಎನ್‍ಎಸ್‍ಎಸ್ ಭವನದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ನ.14 ರಿಂದ 20ರವರೆಗೆ ಆಯೋಜಿಸಲಾಗಿದ್ದ `ರಾಷ್ಟ್ರೀಯ ಭಾವೈಕ್ಯತಾ ಶಿಬಿರ’ದ ಮುಕ್ತಾಯ ಸಮಾರಂಭ ದಲ್ಲಿ ಭಾಗವಹಿಸಿ ಮಾತನಾಡಿದರು. ವಿವಿಧ ಜಾತಿ, ಮತ ಮತ್ತು…
ಕನ್ನಡ, ಸಾಹಿತ್ಯ ಚಟುವಟಿಕೆಗೆ ಉತ್ತೇಜನೆ: ಪಾರದರ್ಶಕ ಪರಿಷತ್ತು ಕನಸು
November 21, 2021ಮೈಸೂರು, ನ.20 (ಪಿಎಂ)- ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗುಂಪುಗಾರಿಕೆಯಿಂದ ಮೌಲ್ಯ ಕಳೆದುಕೊಂಡಿದ್ದು, ಗುಂಪುಗಾರಿಕೆ ಒಡೆದು ಹಾಕಿ, ಪರಿಷತ್ ಅನ್ನು ಪಾರದರ್ಶಕವಾಗಿ ಕಟ್ಟುವ ಉದ್ದೇಶದಿಂದ ಕಸಾಪ ಜಿಲ್ಲಾ ಸ್ಥಾನಕ್ಕೆ ಸ್ಪರ್ಧಿಸಿದ್ದು, ಮತದಾರ ಬಂಧುಗಳು ತಮ್ಮನ್ನು ಬೆಂಬಲಿಸಬೇಕೆಂದು ಹಿರಿಯ ಸಾಹಿತಿ ಬನ್ನೂರು ಕೆ.ರಾಜು ಕೋರಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪರಿಷತ್ ಆಗಿ ಉಳಿದಿಲ್ಲ. ಅದೊಂದು ಅಂಗಡಿಯಾಗಿದೆ. ಒಂದು ಅವಧಿ ಯಲ್ಲಿ ನೀನು ವ್ಯಾಪಾರ ಮಾಡು,…
ಮೈಸೂರಲ್ಲಿ ಶ್ರದ್ಧಾ-ಭಕ್ತಿಯ ‘ಪುತ್ತರಿ ನಮ್ಮೆ’
November 21, 2021ಮೈಸೂರು, ನ.20 (ಎಂಕೆ)- ಮೈಸೂರಿನಲ್ಲಿ ಧಾನ್ಯ ಲಕ್ಷ್ಮಿಯನ್ನು ಮನೆ ತುಂಬಿಸಿಕೊಳ್ಳುವ ಕೊಡವರ ಸುಗ್ಗಿ ಹಬ್ಬ ‘ಪುತ್ತರಿ ನಮ್ಮೆ’ ಶ್ರದ್ಧಾ-ಭಕ್ತಿಯಿಂದ ನೆರವೇರಿತು. ನಗರದ ವಿಜಯನಗರ ಒಂದನೇ ಹಂತದಲ್ಲಿರುವ ಕೊಡವ ಸಮಾಜ ಸಮುದಾಯ ಭವನದಲ್ಲಿ ಮೊದಲ ಬಾರಿಗೆ ನಡೆದ ಕೊಡವ ಸಾಂಸ್ಕøತಿಕ ಸುಗ್ಗಿ ಹಬ್ಬ ನೋಡುಗರ ಕಣ್ಮನ ಸೆಳೆಯಿತು. ಕೊಡವರ ಆರಾಧ್ಯ ದೈವ ಇಗ್ಗುತಪ್ಪ ಹಾಗೂ ತಾಯಿ ಕಾವೇರಮ್ಮನಿಗೆ ನಮಿಸಿ, ಬೆಳೆದು ನಿಂತ ಕದಿರು ತೆಗೆದು(ಹೊಸ ಭತ್ತದ ಪೈರು) ಗಾಳಿ ಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದರು. ಇದಕ್ಕೂ ಮುನ್ನ ಕೊಡವ…










