ಮೈಸೂರು

ಸಂಸದ ಪ್ರತಾಪಸಿಂಹ ವಿರುದ್ಧ ದಸಂಸ ಪ್ರತಿಭಟನೆ
ಮೈಸೂರು

ಸಂಸದ ಪ್ರತಾಪಸಿಂಹ ವಿರುದ್ಧ ದಸಂಸ ಪ್ರತಿಭಟನೆ

November 19, 2021

ಮೈಸೂರು,ನ.18(ಆರ್‍ಕೆಬಿ)- ಪ್ರಚೋ ದನಾಕಾರಿ, ಸಂವಿಧಾನ ವಿರೋದಿ,ü ಕಾನೂನು ಬಾಹಿರ ಹೇಳಿಕೆ ನೀಡುವ ಮೂಲಕ ಸಂಸದ ಪ್ರತಾಪಸಿಂಹ ಸಮಾಜದಲ್ಲಿ ಶಾಂತಿ ಕದಡು ತ್ತಿದ್ದಾರೆ ಎಂದು ಆರೋಪಿಸಿ, ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಪ್ರತಾಪ್‍ಸಿಂಹ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಮಾಜದ ಶಾಂತಿ ಕದಡುವ ಇಂತಹ ಹೇಳಿಕೆ ನೀಡುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಂತಹ ಹೇಳಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು. ಸಂಗೀತ ನಿರ್ದೇಶಕ ಹಂಸ ಲೇಖ ಅವರು…

ನಾಳೆ ಮೈಸೂರಲ್ಲಿ ಬಿಜೆಪಿ ಜನಸ್ವರಾಜ್ ಯಾತ್ರೆ
ಮೈಸೂರು

ನಾಳೆ ಮೈಸೂರಲ್ಲಿ ಬಿಜೆಪಿ ಜನಸ್ವರಾಜ್ ಯಾತ್ರೆ

November 19, 2021

ಮೈಸೂರು, ನ.18(ಪಿಎಂ)- ರಾಜ್ಯದ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‍ನ 25 ಸ್ಥಾನಗಳಿಗೆ ಡಿ.10ರಂದು ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ರಾಜ್ಯದಲ್ಲಿ ಆರಂಭವಾಗಿರುವ ಜನಸ್ವರಾಜ್ ಯಾತ್ರೆಯು ನ.20ರಂದು ಮೈಸೂರಿ ನಲ್ಲಿ ನಡೆಯಲಿದೆ. ಮೈಸೂರು-ಚಾಮರಾಜನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ಪರಿಷತ್ ಸ್ಥಾನದ ಆಯ್ಕೆಗೂ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ 11 ಗಂಟೆಗೆ ಚಾಮರಾಜನಗರದಲ್ಲಿ ಜನಸ್ವರಾಜ್ ಯಾತ್ರೆ ನಡೆಯಲಿದ್ದು, ಮಧ್ಯಾಹ್ನ 3 ಗಂಟೆಗೆ ಮೈಸೂರಿನಲ್ಲಿ ಸಮಾವೇಶ ನಡೆಯಲಿದೆ. ನಾಲ್ಕು ತಂಡಗಳಲ್ಲಿ ರಾಜ್ಯಾದ್ಯಂತ ಬಿಜೆಪಿ ಜನ ಸ್ವರಾಜ್ ಯಾತ್ರೆ ನಡೆಸಲಿದೆ. ಈ…

ಗಗನಕ್ಕೇರುತ್ತಿದೆ ತರಕಾರಿ ಬೆಲೆ
ಮೈಸೂರು

ಗಗನಕ್ಕೇರುತ್ತಿದೆ ತರಕಾರಿ ಬೆಲೆ

November 19, 2021

ಮೈಸೂರು,ನ.18(ಎಸ್‍ಬಿಡಿ)- ಮಳೆ ಯಿಂದ ದಿನದಿಂದ ದಿನಕ್ಕೆ ತರಕಾರಿ ಬೆಲೆ ಏರಿಕೆಯಾಗುತ್ತಿದ್ದು, ಸಾಮಾನ್ಯ ರನ್ನು ಕಂಗಾಲಾಗಿಸಿದೆ. ಒಂದೂವರೆ ತಿಂಗಳಿಂದಲೂ ಮಳೆ ಯಾಗುತ್ತಿದ್ದು, 2 ವಾರಗಳಿಂದಂತೂ ಎಡಬಿಡದೆ ಸುರಿಯುತ್ತಿದೆ. ಇದರಿಂದ ರೈತರ ಬೆಳೆ ನಷ್ಟವಾಗಿರುವ ಪರಿಣಾಮ ತರಕಾರಿ ಬೆಲೆ ಗಗನಕ್ಕೇರುತ್ತಿದೆ. ಬಡ ಹಾಗೂ ಮಧ್ಯಮ ವರ್ಗದ ಜನರ ಬದು ಕಿಗೆ ಬರೆ ಎಳೆದಂತಾಗಿದೆ. ಮೂರು ಹೊತ್ತು ರುಚಿಕರವಾದ ಊಟ ಮಾಡುವುದಕ್ಕೂ ತಿಣುಕಾಡುವಂತಾಗಿದೆ. ಒಂದೆರಡು ರೀತಿಯ ತರಕಾರಿ, ಸೊಪ್ಪು ಕೊಳ್ಳುವುದಕ್ಕೆ ನೂರಾರು ರೂ. ಬೇಕೆಂದು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ. ನೂರರತ್ತ…

ಪೊಲೀಸ್ ಹುದ್ದೆಯಲ್ಲ, ಅದೊಂದು ಜವಾಬ್ದಾರಿ
ಮೈಸೂರು

ಪೊಲೀಸ್ ಹುದ್ದೆಯಲ್ಲ, ಅದೊಂದು ಜವಾಬ್ದಾರಿ

November 19, 2021

ಮೈಸೂರು, ನ.18(ಎಂಕೆ)- ಪೊಲೀಸ್ ಹುದ್ದೆ ಇರುವುದು ಸಮಾಜಕ್ಕೋಸ್ಕರ. ಇದು ಬರೀ ಹುದ್ದೆಯಲ್ಲ, ಜವಾಬ್ದಾರಿ ಎಂದು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಮಹಿಳಾ ಪೆÇಲೀಸ್ ಪ್ರಶಿ ಕ್ಷಣಾರ್ಥಿಗಳಿಗೆ ತಿಳಿಹೇಳಿದರು. ಮೈಸೂರಿನ ಜ್ಯೋತಿನಗರದಲ್ಲಿರುವ ಪೊಲೀಸ್ ತರಬೇತಿ ಶಾಲೆಯಲ್ಲಿ ಆಯೋಜಿಸಿದ್ದ ‘7ನೇ ತಂಡದ ಮಹಿಳಾ ಪೆÇಲೀಸ್ ಪ್ರಶಿಕ್ಷಣಾರ್ಥಿಗಳ ಬುನಾದಿ ತರಬೇತಿ’ಯ ಉದ್ಘಾಟನಾ ಸಮಾ ರಂಭದಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಪೊಲೀಸ್ ಹುದ್ದೆಯ ಮಹತ್ವ ತಿಳಿಸಿದ ಅವರು, ಹೆಚ್ಚೆಚ್ಚು ಜನರು ಪೊಲೀಸ್ ಹುದ್ದೆಗೆ ಸೇರಲು ಬರು ತ್ತಿದ್ದಾರೆ ಎಂದರೆ, ಹುದ್ದೆಯ ಮಹತ್ವ ಹೆಚ್ಚಾ ಗಿದೆ…

ಮಿಲಿಯನ್ ಐಸಿಯು ಉಪಕ್ರಮದ ಮೂಲಕ ಕೆ.ಆರ್.ಆಸ್ಪತ್ರೆ ಮೂಲ ಸೌಕರ್ಯ ಮೇಲ್ದರ್ಜೆಗೆ
ಮೈಸೂರು

ಮಿಲಿಯನ್ ಐಸಿಯು ಉಪಕ್ರಮದ ಮೂಲಕ ಕೆ.ಆರ್.ಆಸ್ಪತ್ರೆ ಮೂಲ ಸೌಕರ್ಯ ಮೇಲ್ದರ್ಜೆಗೆ

November 19, 2021

ಮೈಸೂರು, ನ. 18- ಮೈಸೂರಿನ ಕೆ.ಆರ್. ಆಸ್ಪತ್ರೆಯು ಕ್ರಿಟಿಕಲ್ ಕೇರ್ ಮೂಲ ಸೌಕರ್ಯವನ್ನು ಡೋಝಿ ಯಿಂದ (ಆozee) ಮಿಲಿಯನ್ ಐಸಿಯು ಉಪಕ್ರಮದ ಮೂಲಕ ಮೇಲ್ದರ್ಜೆಗೇರಿಸಲ್ಪಟ್ಟಿದ್ದು, ಮುಂದಿನ 3 ತಿಂಗಳಲ್ಲಿ ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಕ್ರಿಟಿಕಲ್ ಕೇರ್ ವ್ಯವಸ್ಥೆ ಮಾಡಲು ಅನುಕೂಲವಾಗುವಂತೆ 35 ಸಾಮಾನ್ಯ ಹಾಸಿಗೆಗಳನ್ನು ಸ್ಟೆಪ್‍ಡೌನ್ ಐಸಿಯುಗಳಾಗಿ ನವೀಕರಿಸಲಾಗಿದೆ ಎಂದು ಕೆ.ಆರ್.ಆಸ್ಪತ್ರೆಯ ಅರವಳಿಕೆ ವಿಭಾಗದ ಡಾ. ಹೆಚ್.ಜಿ. ಮಂಜುನಾಥ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ಆರ್. ಆಸ್ಪತ್ರೆಯಲ್ಲಿ ಡೋಝಿ 24×7 ಸೆಂಟ್ರಲ್ ಮಾನಿಟರಿಂಗ್ ಸೆಲ್ ಅನ್ನು ಸ್ಥಾಪಿಸಿದ್ದು,…

ಬಿಟ್ ಕಾಯಿನ್ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿಗಳಾದ  ಸಿದ್ದರಾಮಯ್ಯ, ಕುಮಾರಸ್ವಾಮಿ ಹಿಟ್ ಅಂಡ್ ರನ್ ಹೇಳಿಕೆ
ಮೈಸೂರು

ಬಿಟ್ ಕಾಯಿನ್ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ ಹಿಟ್ ಅಂಡ್ ರನ್ ಹೇಳಿಕೆ

November 19, 2021

ಮೈಸೂರು, ನ.18 (ಎಂಟಿವೈ)- ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದ ಹಿಟ್ ಅಂಡ್ ರನ್‍ನಂತೆ ಹೇಳಿಕೆ ನೀಡುತ್ತಿರುವ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿ ಪ್ರಕರಣ ಸಾಬೀತು ಮಾಡುವ ದಾಖಲೆ, ಸಾಕ್ಷ್ಯಾಧಾರ ನೀಡುವಂತೆ ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್ ಸವಾಲು ಹಾಕಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಯಿ ಚಪಲಕ್ಕೆ ಮಾತನಾಡಬಾರದು. ವಿರೋಧ ಪಕ್ಷಗಳ ನಾಯಕರಲ್ಲಿ ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆ, ಸಾಕ್ಷ್ಯಾಧಾರವಿದ್ದರೆ ಅದನ್ನು ನನ್ನ ಕೈಗೆ ನೀಡಲಿ. ಆಗ ನಾನೇ…

ಮೈಸೂರಲ್ಲಿ ವಾಣಿಜ್ಯ ಮಳಿಗೆ, ಹಳೆ ಮನೆ ಕುಸಿತ:  ಅದೃಷ್ಟವಶಾತ್ ಯಾವುದೇ ಪ್ರಾಣಪಾಯವಿಲ್ಲ
ಮೈಸೂರು

ಮೈಸೂರಲ್ಲಿ ವಾಣಿಜ್ಯ ಮಳಿಗೆ, ಹಳೆ ಮನೆ ಕುಸಿತ: ಅದೃಷ್ಟವಶಾತ್ ಯಾವುದೇ ಪ್ರಾಣಪಾಯವಿಲ್ಲ

November 18, 2021

ಮೈಸೂರು, ನ.17(ಎಸ್‍ಪಿಎನ್)- ಮೈಸೂರಿನಲ್ಲಿ ಬುಧವಾರ ಸುರಿದ ಧಾರಾಕಾರ ಮಳೆಗೆ ಪಾಳು ಬಿದ್ದಿದ್ದ ವಾಣಿಜ್ಯ ಮಳಿಗೆ ಹಾಗೂ ಮನೆಯೊಂದು ಕುಸಿದು ಬಿದ್ದಿದ್ದು, ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ. ನಗರದ ಅಶೋಕ ರಸ್ತೆಯಲ್ಲಿರುವ ಸೆಂಟ್ ಫಿಲೋ ಮಿನಾ ಚರ್ಚ್ ವ್ಯಾಪ್ತಿಗೆ ಬರುವ (ಸಿಸಿಬಿ ಕಚೇರಿ ಎದುರು) ಪಾಳುಬಿದ್ದ ವಾಣಿಜ್ಯ ಮಳಿಗೆ ಹಾಗೂ ಅಗ್ರಹಾರ ಖಿಲ್ಲೆ ಮೊಹಲ್ಲಾದ ಉತ್ತರಾದಿ ಮಠದ ರಸ್ತೆಯಲ್ಲಿ ಮನೆಯೊಂದು ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅಗ್ರಹಾರ ಖಲ್ಲೆ ಮೊಹಲ್ಲಾದ ಉತ್ತರಾದಿ ಮಠದ ರಸ್ತೆಯಲ್ಲಿ ಕುಸಿದು ಬಿದ್ದ ಮನೆಯೊಳಗೆ…

ದೇಶ ಕಟ್ಟುವ ಜವಾಬ್ದಾರಿ ನಿಭಾಯಿಸಬೇಕು ಚಲನಚಿತ್ರ ನಿರ್ದೇಶಕ ಡಾ.ನಾಗತಿಹಳ್ಳಿ ಚಂದ್ರಶೇಖರ್
ಮೈಸೂರು

ದೇಶ ಕಟ್ಟುವ ಜವಾಬ್ದಾರಿ ನಿಭಾಯಿಸಬೇಕು ಚಲನಚಿತ್ರ ನಿರ್ದೇಶಕ ಡಾ.ನಾಗತಿಹಳ್ಳಿ ಚಂದ್ರಶೇಖರ್

November 18, 2021

ಮೈಸೂರು,ನ.17(ಪಿಎಂ)-ದೇಶವನ್ನು ಛಿದ್ರಗೊಳಿಸುವ, ಮನುಷ್ಯ ಮನುಷ್ಯರ ನಡುವೆ ಗೋಡೆ ಕಟ್ಟುವ ಶಕ್ತಿಗಳು ಜಾಗೃತ ವಾಗಿರುವ ಈ ದಿನಗಳಲ್ಲಿ ಯುವ ಜನತೆ ದೇಶ ಕಟ್ಟುವ ಜವಾಬ್ದಾರಿ ನಿಭಾಯಿಸ ಬೇಕಿದೆ ಎಂದು ಚಲನಚಿತ್ರ ನಿರ್ದೇಶಕ ಡಾ.ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು. ಮೇಲ್ನೋಟಕ್ಕೆ ಕಾಣದೇ ಇದ್ದರೂ ದೇಶ ಕಟ್ಟುವ ಕೆಲಸವನ್ನು ಇಂತಹ ಯುವ ಜನೋತ್ಸವ ಮಾಡುತ್ತವೆ. ಸಾಮೂ ಹಿಕವಾಗಿ ಬೆಳೆಯಲು ಇಂತಹ ಉತ್ಸವ ಮುಖ್ಯ. ಇದು ಸೋದರತ್ವ, ಸಮಾನತೆ, ಸಾಮರಸ್ಯ ಬೆಳೆಸಲಿದೆ. ಅಂದರೆ ವೈವಿ ಧ್ಯತೆಯಲ್ಲಿ ಒಟ್ಟಿಗೆ ದೇಶ ಕಟ್ಟಲು ಉತ್ಸವಗಳು ಅಗತ್ಯ ಎಂದರು….

ಗ್ರಾಮ, ಕೃಷಿ ಉಳಿಯದೇ ದೇಶ ಉಳಿಯದು;  ಯುವ ಜನತೆ ಗ್ರಾಮಮುಖಿಗಳಾಗಬೇಕು
ಮೈಸೂರು

ಗ್ರಾಮ, ಕೃಷಿ ಉಳಿಯದೇ ದೇಶ ಉಳಿಯದು; ಯುವ ಜನತೆ ಗ್ರಾಮಮುಖಿಗಳಾಗಬೇಕು

November 18, 2021

ಮೈಸೂರು,ನ.17(ಪಿಎಂ)-ಭಾರತವೆಂಬ ಬೃಹತ್ ವೃಕ್ಷಕ್ಕೆ ಹಳ್ಳಿಗಳೇ ತಾಯಿ ಬೇರು. ಹಳ್ಳಿಗಳು ಮತ್ತು ಕೃಷಿ ಸಂಸ್ಕøತಿ ಇಲ್ಲದೇ ದೇಶ ಉಳಿಯಲು ಸಾಧ್ಯವಿಲ್ಲ. ಇದನ್ನು ಅರಿತು ನಮ್ಮ ಯುವ ಜನತೆ ಗ್ರಾಮಮುಖಿ ಗಳಾಗಬೇಕು ಎಂದು ಸಾಹಿತಿಯೂ ಆದ ಖ್ಯಾತ ಚಲನಚಿತ್ರ ನಿರ್ದೇಶಕ ಡಾ.ನಾಗತಿ ಹಳ್ಳಿ ಚಂದ್ರಶೇಖರ್ ಅಭಿಪ್ರಾಯಪಟ್ಟರು. ಮೈಸೂರಿನ ಮುಕ್ತ ಗಂಗೋತ್ರಿಯ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ಬಾಗಲ ಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ 3 ದಿನಗಳ ಕಾಲ ಹಮ್ಮಿಕೊಂಡಿರುವ ವಿವಿ ವ್ಯಾಪ್ತಿಯ ಅಂತರ ಕಾಲೇಜುಗಳ 12ನೇ ಯುವ ಜನೋತ್ಸವ…

ಮಳೆಗೆ ಮುನ್ನ ಆಗಸದಲ್ಲೊಂದು ಕೌತುಕತೆ!
ಮೈಸೂರು

ಮಳೆಗೆ ಮುನ್ನ ಆಗಸದಲ್ಲೊಂದು ಕೌತುಕತೆ!

November 18, 2021

ಮೈಸೂರು,ನ.17(ಎಂಕೆ)-ನೀಲಿ ಆಕಾಶದಲ್ಲಿ ಕೆಂಬಣ್ಣದ ಮೇಘ ಮಾಲೆ, ಕೆಲ ಹೊತ್ತಲ್ಲೆ ಸುರಿಸಿತು ಭಾರೀ ಮಳೆ… ಮುಸ್ಸಂಜೆ ವೇಳೆಯಲ್ಲಿ ಕ್ಯಾಮರಾ ಕಣ್ಣಿಗೆ ಕಂಡದ್ದು ಮನಮೋಹಕ ದೃಶ್ಯ…! ಹಲವಾರು ದಿನಗಳಿಂದ ಮೈಸೂರಿನಲ್ಲಿ ಸುರಿಯುತ್ತಿರುವ ಮಳೆ ಬುಧವಾರವೂ ಮುಂದುವರೆದಿದ್ದು, ಮಳೆ ಆರಂಭಕ್ಕೂ ಮುನ್ನ ಆಕಾಶದಲ್ಲಿ ಕಂಡ ಕೆಂಬಣ್ಣ ನೋಡುಗರ ಕಣ್ಮನ ಸೆಳೆಯಿತು. ಮಳೆಗಾಲದಲ್ಲಿ ಆಗಾಗ ಕಾಣುವ ‘ಕಾಮನಬಿಲ್ಲು’, ಧ್ರುವ ಪ್ರದೇಶಗಳಲ್ಲಿ ಕಾಣುವ ‘ಆರೋರ’(ಆಗಸದಲ್ಲಿ ಕಾಣಬರುವ ವರ್ಣರಂಜಿತ ಬೆಳಕು) ನೋಡುವುದೇ ಆನಂದ. ಸೂರ್ಯನ ಬೆಳಕಿಗೆ ಏಳು ಬಣ್ಣಗಳಿದ್ದು, ಮೋಡಗಳಿಂದ ಸುರಿಯುವ ಮಳೆ ನೀರು ಬಣ್ಣಗಳನ್ನು…

1 144 145 146 147 148 1,611
Translate »