ಮೈಸೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅವರು ಆ.10 ಮತ್ತು 11ರಂದು ಮೈಸೂರು ಹಾಗೂ ಮಂಡ್ಯ ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದು, ರೈತರ ಜೊತೆ ಭತ್ತದ ನಾಟಿ ಹಾಗೂ ಚುಂಚನಕಟ್ಟೆ ಜಲಪಾತೋತ್ಸವ ಉದ್ಘಾಟನೆ ಕಾರ್ಯಕ್ರಮ ದಲ್ಲಿ ಭಾಗವಹಿಸಲಿದ್ದಾರೆ. ಬೆಂಗಳೂರಿನಿಂದ ಆ.10ರಂದು ಸಂಜೆ 7.30ಕ್ಕೆ ಹೊರಡಲಿರುವ ಮುಖ್ಯ ಮಂತ್ರಿಗಳು ರಸ್ತೆ ಮೂಲಕ ರಾತ್ರಿ 10 ಗಂಟೆಗೆ ಮೈಸೂರು ತಲುಪಿ ವಾಸ್ತವ್ಯ ಹೂಡಲಿದ್ದಾರೆ. ಆ.11ರಂದು ಬೆಳಿಗ್ಗೆ 8.45ಕ್ಕೆ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ರುವ ಸುತ್ತೂರು ಮಠಕ್ಕೆ ಮುಖ್ಯಮಂತ್ರಿ ಗಳು ಭೇಟಿ ನೀಡಲಿದ್ದು, ಅಲ್ಲಿಂದ 10…
ಕೆಎಸ್ಆರ್‌ಟಿಸಿ ಬಸ್ ಚಾಲಕರು, ನಿರ್ವಾಹಕರ ಮೇಲೆ ಪುಂಡರಿಂದ ಮಾರಣಾಂತಿಕ ಹಲ್ಲೆ
August 9, 2018ಮೈಸೂರು: ಪುಂಡರ ಗುಂಪೊಂದು ಕೆಎಸ್ಆರ್‌ಟಿಸಿ ಬಸ್ ಚಾಲಕ ಮತ್ತು ನಿರ್ವಾಹಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಶ್ರೀರಂಗಪಟ್ಟಣ ತಾಲೂಕು ಹಂಪಾಪುರ ಬಳಿ ಕಳೆದ ರಾತ್ರಿ ನಡೆದಿದೆ. ಮೈಸೂರಿನ ಸಾತಗಳ್ಳಿ ಕೆಎಸ್ಆರ್‌ಟಿಸಿ ಡಿಪೋಗೆ ಸೇರಿದ ಮೈಸೂರು ನಗರ ಸಾರಿಗೆ ಬಸ್ ಮಾರ್ಗ ಸಂಖ್ಯೆ 110ಬಿ/01ರ ಚಾಲಕ ಸ್ವಾಮಿಗೌಡ ಮತ್ತು ನಿರ್ವಾ ಹಕ ಮಾದೇಗೌಡ ಹಲ್ಲೆಗೊಳಗಾದವ ರಾಗಿದ್ದು, ಕಾವೇರಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೈಸೂರಿನಿಂದ ಹೆಬ್ಬಾಡಿಗೆ ತೆರಳುತ್ತಿದ್ದ ಈ ಬಸ್ ಕಳೆದ ರಾತ್ರಿ ಹಂಪಾಪುರ…
ಚಾಮುಂಡೇಶ್ವರಿ ದೇವಾಲಯದಲ್ಲಿ ಅಭಿಷೇಕ ಸೇವೆ ಶುಲ್ಕ 550 ರೂ.ಗೆ ಏರಿಕೆ
August 9, 2018ಮೈಸೂರು: ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಿಗೆ ಅಭಿಷೇಕ ಸೇವೆ ಶುಲ್ಕ 300 ರೂ.ನಿಂದ 550ರೂ.ಗೆ ಹೆಚ್ಚಳ ಮಾಡಿದ್ದು, ಇಬ್ಬರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ಕಲ್ಪಿಸಲು ದೇವಾಲಯ ಆಡಳಿತ ಮಂಡಳಿ ನಿರ್ಧರಿಸಿದೆ. ಚಾಮುಂಡಿ ಬೆಟ್ಟ ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿತಾಣವೂ ಆಗಿದೆ. ಹಾಗಾಗಿ ಪ್ರತಿ ನಿತ್ಯ ಸಾವಿರಾರು ಮಂದಿ ಇಲ್ಲಿಗೆ ಆಗಮಿಸುತ್ತಾರೆ. ದೇವಿಗೆ ಅಭಿಷೇಕಕ್ಕೆ ಈ ಹಿಂದೆ ಇದ್ದ 300 ರೂ ಶುಲ್ಕ ವನ್ನು 550 ರೂ.ಗೆ ಕಳೆದ ಒಂದೂವರೆ ತಿಂಗಳ ಹಿಂದೆಯೇ ಹೆಚ್ಚಿಸಲಾಗಿದೆ. ಒಬ್ಬರಿಗೆ ಇದ್ದ ಪ್ರವೇಶವನ್ನು ಇಬ್ಬರಿಗೆ…
ಮೈಸೂರಲ್ಲಿ 120ಕಿ.ಮೀ. ಪೆರಿಪೆರಲ್ ರಸ್ತೆ ನಿರ್ಮಾಣಕ್ಕೆ ಚಿಂತನೆ
August 9, 2018ಮೈಸೂರು: -ಮೈಸೂರು ನಗರದಲ್ಲಿ ವಾಹನ ಸಂಚಾರ ದಟ್ಟಣೆಯನ್ನು ತಪ್ಪಿಸುವ ಸಲುವಾಗಿ ಈಗಾಗಲೇ ಹೊರ ವರ್ತುಲ ರಸ್ತೆ (Outer Ring Road) ನಿರ್ಮಿಸಿ ಸಫಲವಾಗಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ವು ಇದೀಗ 120ಕಿ.ಮೀ. ಪೆರಿಪೆರಲ್ ರಸ್ತೆ ಯೋಜನೆ ಕೈಗೆತ್ತಿಕೊಳ್ಳಲು ಮುಂದಾಗಿದೆ. ಪ್ರಸ್ತುತ ಇರುವ 42 ಕಿ.ಮೀ. ಉದ್ದದ ಹೊರ ವರ್ತುಲ ರಸ್ತೆಯು ಬೆಂಗಳೂರು ಹೆದ್ದಾರಿ, ಕೆಆರ್‍ಎಸ್ ರಸ್ತೆ, ಹುಣಸೂರು ಹೆದ್ದಾರಿ, ಬೋಗಾದಿ ರಸ್ತೆ, ಹೆಚ್.ಡಿ. ಕೋಟೆ ರಸ್ತೆ, ನಂಜನಗೂಡು ಹೆದ್ದಾರಿ, ತಿ.ನರಸೀಪುರ ರಸ್ತೆ, ಬನ್ನೂರು ರಸ್ತೆ ಹಾಗೂ ಮಹದೇವಪುರ ರಸ್ತೆಗಳಿಗೆ…
ಕಾವೇರಿ ನೀರಾವರಿ ನಿಗಮ ಹೊರ ಗುತ್ತಿಗೆ ನೌಕರರ ಪ್ರತಿಭಟನೆ
August 9, 2018ಮೈಸೂರು: ಖಾಯಂ ಮಾಡಿ ಇಎಸ್‍ಐ, ಪಿಎಫ್ ಸೌಲಭ್ಯ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಬುಧವಾರ ಮೈಸೂರಿನ ಮಂಜುನಾಥ ಪುರದಲ್ಲಿನ ಕಾವೇರಿ ನೀರಾವರಿ ನಿಗಮದ ಕಚೇರಿಯ ಮುಂದೆ ಬುಧವಾರ ನೀರುಗಂಟಿಗಳು ಸೇರಿದಂತೆ ಹೊರ ಗುತ್ತಿಗೆ ನೌಕರರು ಬೃಹತ್ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾ ಮಂಡಲದ ನೇತೃತ್ವದಲ್ಲಿ ಇಂದು ನಡೆದ ಪ್ರತಿಭಟನೆಯಲ್ಲಿ ವರುಣಾ ನಾಲಾ ಸೇರಿದಂತೆ ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯ ವಿವಿಧ ಕಚೇರಿಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೀರುಗಂಟಿಗಳು,…
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜೀವ ವಿಮಾ ನಿಗಮ ಪ್ರತಿನಿಧಿಗಳ ಪ್ರತಿಭಟನೆ
August 9, 2018ಮೈಸೂರು: ವಿಮಾ ಕಂತಿನ ಮೇಲೆ ಜಿಎಸ್‍ಟಿ ವಿಧಿಸಿರುವುದನ್ನು ಹಿಂಪಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬುಧವಾರ ಅಖಿಲ ಭಾರತ ಜೀವ ವಿಮಾ ಪ್ರತಿನಿಧಿಗಳ ಸಂಘಟನೆಯ ಜಿಲ್ಲಾ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮೈಸೂರಿನ ಬನ್ನಿಮಂಟಪದಲ್ಲಿರುವ ಭಾರತೀಯ ಜೀವ ವಿಮಾ(ಎಲ್‍ಐಸಿ) ನಿಗಮದ ಕಚೇರಿ ಬಳಿ ಇಂದು ಬೆಳಿಗ್ಗೆ ಪ್ರತಿಭಟನೆ ನಡೆಸಿದ ಎಲ್‍ಐಸಿ ಪ್ರತಿನಿಧಿಗಳು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ವಿಮೆ ಕಂತಿನ ಮೇಲೆ ಜಿಎಸ್‍ಟಿ ವಿಧಿಸಿರುವು ದನ್ನು ವಿರೋಧಿಸಿ ಅಖಿಲ ಭಾರತ ಜೀವ ವಿಮಾ ಪ್ರತಿನಿಧಿಗಳ…
ಕೌಟಿಲ್ಯ ವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸ ಉತ್ತಮ ಪುಸ್ತಕಗಳು ವ್ಯಕ್ತಿತ್ವ ವಿಕಸನದ ಭಂಡಾರ
August 9, 2018ಮೈಸೂರು: ವಿದ್ಯಾರ್ಥಿಗಳು ಸ್ವಪ್ರಯತ್ನದಿಂದ ಸರ್ವತೋಮುಖ ಏಳ್ಗೆ ಸಾಧಿಸಬಲ್ಲ ಒಬ್ಬ ವ್ಯಕ್ತಿಯಾಗಿ ಬೆಳೆಯಬಹುದು. ಅದಕ್ಕೆ ಪುಸ್ತಕದ ಜ್ಞಾನದ ಅರಿವಿನ ಅವಶ್ಯಕತೆ ಬಹಳ ಪ್ರಮುಖವಾದದ್ದು. ಆ ನಿಟ್ಟಿನಲ್ಲಿ ಮೈಸೂರಿನಲ್ಲೇ ರಚಿತವಾದ ಶ್ರೀ ಸ್ವಾಮಿಜಗದಾತ್ಮಾನಂದರ “ಬದುಕಲು ಕಲಿಯಿರಿ” ಪುಸ್ತಕ ಬಹಳಷ್ಟು ಪ್ರಭಾವವನ್ನು ಬೀರುತ್ತದೆ, ಆ ಪುಸ್ತಕ ಕುರಿತು ನೀಡುತ್ತಿರುವ ಉಪನ್ಯಾಸ ಮಕ್ಕಳ ಭವಿಷ್ಯಕ್ಕೆ ಪೂರಕವಾಗಲಿದೆ ಎಂದು ಬದುಕಲು ಕಲಿಯಿರಿ ಬಳಗದ ಅಧ್ಯಕ್ಷರೂ ಆದ ಮಾಜಿ ವಿಧಾನ ಪರಿಷತ್ ಸದಸ್ಯ ಡಿ.ಮಾದೇಗೌಡರು ತಿಳಿಸಿದರು. ಅವರು ನಗರದ ಕೌಟಿಲ್ಯ ವಿದ್ಯಾಲಯದಲ್ಲಿ ಇಂದು ಏರ್ಪಡಿಸಲಾಗಿದ್ದ ‘ಬದುಕಲು…
ಇಬ್ಬರು ಖತರ್ನಾಕ್ ಕಳ್ಳರಿಂದ 50ಕ್ಕೂ ಹೆಚ್ಚು ಬೈಕ್ ವಶ: ನಕಲಿ ಕೀ ಬಳಸಿ ಪಾರ್ಕಿಂಗ್ ಲಾಟ್‍ನಿಂದ ವಾಹನ ಎಗರಿಸುತ್ತಿದ್ದರು
August 9, 2018ಮೈಸೂರು: ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಖತರ್ನಾಕ್ ಖದೀಮರನ್ನು ಮೈಸೂರಿನ ವಿಜಯನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರಿಂದ 50ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವಿಚಾರಣೆ ಮುಂದುವರೆಸಿರುವ ಪೊಲೀಸರಿಗೆ ಬೇರೆ ಬೇರೆ ಕಡೆಯಲ್ಲಿ ಕಳವಾಗಿದ್ದ ಇನ್ನೂ ಹಲವು ಬೈಕುಗಳು ಪತ್ತೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಬೈಕುಗಳನ್ನು ನಕಲಿ ಕೀ ಬಳಸಿ ಎಗರಿಸುವ ಚಾಲಾಕಿ ಖದೀಮರು ಗ್ರಾಮಾಂತರ ಪ್ರದೇಶಗಳಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂಬ ಮಾಹಿತಿಯ ಆಧಾರದಲ್ಲಿ ಪೊಲೀಸರು…
ತಂದೆಗೆ ‘ಲಿವರ್’ ನೀಡಲು ಮುಂದಾಗಿರುವ ಮಗ
August 9, 2018ಮೈಸೂರ: ಅಪ್ಪ ಆರೋಗ್ಯವಾಗಿದ್ದಾಗಲೇ ಸರಿಯಾಗಿ ಊಟೋಪಚಾರ ಮಾಡದ ಜನರಿರುವ ಮಧ್ಯೆಯೇ ಲಿವರ್ ಸಮಸ್ಯೆಯಿಂದ ಬಳಲು ತ್ತಿರುವ ಅಪ್ಪನ ಪ್ರಾಣವನ್ನು ಉಳಿಸಲು ಪುತ್ರನೇ ತನ್ನ ಲಿವರ್ ನೀಡಲು ಮುಂದಾಗುವ ಮೂಲಕ ಕರ್ಣನ ದಾನಶೂರತೆ ಮೆರೆದಿದ್ದಾರೆ. ನಗರದ ವೀರನಗೆರೆಯ ನಿವಾಸಿ, ಚಿನ್ನ- ಬೆಳ್ಳಿ ವ್ಯಾಪಾರಿ ಅಶೋಕ್ ಜೈನ್(78) ಎಂಬುವರ ಪುತ್ರ ಪ್ರೀತೇಶ್ ಜೈನ್ ತಂದೆ ಯನ್ನು ಉಳಿಸಲು ಲಿವರ್ ನೀಡಲು ಮುಂದಾಗಿದ್ದಾರೆ. ಕಳೆದ 8 ವರ್ಷದಿಂದ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಅಶೋಕ್ ಜೈನ್ ಅವರು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ…
ರೈತರ 49 ಸಾವಿರ ಕೋಟಿ ಸಾಲ ಮನ್ನಾ ಮಾಡಿದರೂ ಸಿಎಂ ಕುಮಾರಸ್ವಾಮಿ ಅವರಿಗೆ ಮನ್ನಣೆ ಸಿಕ್ಕಿಲ್ಲ
August 8, 2018ಚುಂಚನಕಟ್ಟೆ: ಈವರೆಗೆ ರಾಜ್ಯದ ಯಾವ ಮುಖ್ಯಮಂತ್ರಿಗಳು ಮಾಡಲು ಸಾಧ್ಯವಾಗದಿದ್ದನ್ನು ಹೆಚ್.ಡಿ.ಕುಮಾರಸ್ವಾಮಿ ಮಾಡಿದ್ದಾರೆ. ಅವರು 49 ಸಾವಿರ ಕೋಟಿ ರೈತರ ಸಾಲಮನ್ನಾ ಮಾಡಿದರು. ಇಷ್ಟಾದರೂ ಅವರನ್ನು ಅಭಿನಂದಿಸುವ ಕೆಲಸ ಆಗುತ್ತಿಲ್ಲ. ಇದಕ್ಕೆ ಜಾತಿ ವ್ಯವಸ್ಥೆಯೇ ಕಾರಣ ಎಂದು ಸಚಿವ ಸಾ.ರಾ.ಮಹೇಶ್ ವಿಷಾದಿಸಿದರು. ತಾಲೂಕಿನ ಲಾಳಂದೇವನಹಳ್ಳಿ ಗ್ರಾಮದ ಬಳಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಇಷ್ಟು ದೊಡ್ಡ ಮಟ್ಟದ ಸಾಲಮನ್ನಾ ಮಾಡಿದರೂ, ಮಹಿಳಾ ಸ್ವ-ಸಹಾಯ ಸಂಘ, ನೇಕಾರರು ಮತ್ತು ಮೀನುಗಾರರು ಪಡೆದಂತಹ ಸಾಲಮನ್ನಾ ಮಾಡುವಂತೆ ಒತ್ತಡ…