ಮೈಸೂರಲ್ಲಿ 120ಕಿ.ಮೀ. ಪೆರಿಪೆರಲ್ ರಸ್ತೆ ನಿರ್ಮಾಣಕ್ಕೆ ಚಿಂತನೆ
ಮೈಸೂರು

ಮೈಸೂರಲ್ಲಿ 120ಕಿ.ಮೀ. ಪೆರಿಪೆರಲ್ ರಸ್ತೆ ನಿರ್ಮಾಣಕ್ಕೆ ಚಿಂತನೆ

August 9, 2018

ಮೈಸೂರು: -ಮೈಸೂರು ನಗರದಲ್ಲಿ ವಾಹನ ಸಂಚಾರ ದಟ್ಟಣೆಯನ್ನು ತಪ್ಪಿಸುವ ಸಲುವಾಗಿ ಈಗಾಗಲೇ ಹೊರ ವರ್ತುಲ ರಸ್ತೆ (Outer Ring Road) ನಿರ್ಮಿಸಿ ಸಫಲವಾಗಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ವು ಇದೀಗ 120ಕಿ.ಮೀ. ಪೆರಿಪೆರಲ್ ರಸ್ತೆ ಯೋಜನೆ ಕೈಗೆತ್ತಿಕೊಳ್ಳಲು ಮುಂದಾಗಿದೆ.

ಪ್ರಸ್ತುತ ಇರುವ 42 ಕಿ.ಮೀ. ಉದ್ದದ ಹೊರ ವರ್ತುಲ ರಸ್ತೆಯು ಬೆಂಗಳೂರು ಹೆದ್ದಾರಿ, ಕೆಆರ್‍ಎಸ್ ರಸ್ತೆ, ಹುಣಸೂರು ಹೆದ್ದಾರಿ, ಬೋಗಾದಿ ರಸ್ತೆ, ಹೆಚ್.ಡಿ. ಕೋಟೆ ರಸ್ತೆ, ನಂಜನಗೂಡು ಹೆದ್ದಾರಿ, ತಿ.ನರಸೀಪುರ ರಸ್ತೆ, ಬನ್ನೂರು ರಸ್ತೆ ಹಾಗೂ ಮಹದೇವಪುರ ರಸ್ತೆಗಳಿಗೆ ಸಂಪರ್ಕ ಕಲ್ಪಿಸುತ್ತಿರುವುದರಿಂದ ಸರಕು ಸಾಗಾಣೆ ವಾಹನಗಳು ಈ ರಿಂಗ್ ರಸ್ತೆ ಯಲ್ಲಿ ಸಾಗುವುದರಿಂದ ಮೈಸೂರು ನಗರ ಪ್ರವೇಶಿಸುವ ಪ್ರಮೇಯವೇ ಇಲ್ಲ.

ಕಾರುಗಳು, ಪ್ರವಾಸಿಗರ ವಾಹನಗಳೂ ಸಹ ರಿಂಗ್ ರಸ್ತೆಯನ್ನು ಬಳಸುತ್ತಿರುವುದ ರಿಂದ ಮೈಸೂರು ನಗರದ ವಾಹನ ದಟ್ಟಣೆ ಸಮಸ್ಯೆ ಬಹುತೇಕ ನಿರ್ವಹಣೆಯಾಗಿದೆ. ನರ್ಮ್ ಯೋಜನೆಯಡಿ ಮುಡಾ ರಿಂಗ್ ರಸ್ತೆಯನ್ನು ಅಗಲೀಕರಿಸಿ ಅಭಿವೃದ್ಧಿಪಡಿಸಿದ್ದು, ನಿರ್ವಹಣೆಗಾಗಿ ರಾಷ್ಟ್ರೀಯ ಹೆದ್ದಾರಿಗೆ ಇತ್ತೀಚೆಗಷ್ಟೇ ಹಸ್ತಾಂತರಿಸಿದೆ.

ಪ್ರಸ್ತುತ ಇರುವ ರಿಂಗ್ ರಸ್ತೆ ಪ್ರಯೋ ಜನ ಅರಿತ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಬೆಳೆಯುತ್ತಿರುವ ನಗರದ ಜನಸಂಖ್ಯೆ ಮತ್ತು ವಾಹನಗಳ ಸಂಖ್ಯೆ ಗನುಗುಣವಾಗಿ ಮುಂದಿನ 25 ವರ್ಷ ಗಳನ್ನು ಗಮನದಲ್ಲಿರಿಸಿಕೊಂಡು ಈಗಿ ರುವ ರಿಂಗ್ ರಸ್ತೆಯಿಂದ ಸುಮಾರು 8 ಕಿ.ಮೀ. ಅಂತರದಲ್ಲಿ ಪೆರಿಪೆರಲ್ ರಸ್ತೆ ನಿರ್ಮಾಣ ಮಾಡುವ ಬೃಹತ್ ಯೋಜನೆಗೆ ತಯಾರಿ ನಡೆಸುತ್ತಿದೆ.

ಸುಮಾರು 120 ಕಿ.ಮೀ. ರಸ್ತೆ ನಿರ್ಮಿ ಸಲು ನೂರಾರು ಎಕರೆ ಭೂಮಿ ಬೇಕಾಗುತ್ತದೆ. ಅದನ್ನು ಸ್ವಾಧೀನಪಡಿಸಿಕೊಂಡು ಭೂಮಾಲೀಕರಿಗೆ ಪರಿಹಾರ ನೀಡಲು ಸಾವಿರ ರೂ.ಕೋಟಿ ಅಗತ್ಯವಿದೆಯಾದ್ದರಿಂದ ಅಷ್ಟೊಂದು ಹಣ ಪರಿಹಾರಕೊಟ್ಟು ಪೆರಿಪೆರಲ್ ರಸ್ತೆ ನಿರ್ಮಾಣಕ್ಕೆ ಬಂಡ ವಾಳ ಹೂಡುವುದರಿಂದ ಮುಡಾಗೆ ಆರ್ಥಿಕ ಹೊರೆಯಾಗಲಿದೆ.

ಆಂಧ್ರಪ್ರದೇಶ ಮಾದರಿ: ದುಬಾರಿ ಹಣ ವಿನಿಯೋಗಿಸುವುದನ್ನು ತಪ್ಪಿಸಲು ಆಂಧ್ರ ಪ್ರದೇಶ ಸರ್ಕಾರದ ಮಾದರಿ ಅಳವಡಿಸಲು ಮುಡಾ ಆಲೋಚಿಸಿದೆ.

ನೂತನ ರಾಜಧಾನಿ ನಿರ್ಮಾಣಕ್ಕೆ ಆಂಧ್ರ ಪ್ರದೇಶ ಸರ್ಕಾರ ಯೋಜಿಸಿರುವಂತೆ ರೈತರಿಂದ ಜಮೀನು ಪಡೆದು ರಸ್ತೆ ಅಭಿವೃದ್ಧಿ ಪಡಿಸಿ ರಸ್ತೆಯ ಇಕ್ಕೆಲಗಳಲ್ಲಿ 30 ಮೀ. ಜಾಗವನ್ನು ವಾಣಿಜ್ಯ ಕೇಂದ್ರ ಸ್ಥಾಪಿಸುವುದು. ಉಳಿದ ರೈತರ ಜಮೀನುಗಳನ್ನು ಸರ್ಕಾರವೇ ಪರಿವರ್ತನೆ ಮಾಡಿಸಿ, ಅದರ ಮಾಲೀಕರು ಬಯಸಿದಂತೆ ವಸತಿ ಅಥವಾ ವಾಣಿಜ್ಯ ಬಡಾವಣೆಗಳನ್ನಾಗಿ ಅಭಿವೃದ್ಧಿ ಮಾಡಿಕೊಡು ವುದು. ಯಾವುದೇ ಬಂಡವಾಳವಿಲ್ಲದೆ ಜಮೀನು ಬಡಾವಣೆಯಾಗಿ ರೂಪು ಗೊಳ್ಳುವುದರಿಂದ ಭೂ ಮಾಲೀಕರಿಗೆ ಲಾಭವಾಗುತ್ತದೆ. ಆದರೆ ರಸ್ತೆಗೆ ಬಳಸಿ ಕೊಂಡ ಜಾಗಕ್ಕೆ ಯಾವುದೇ ಪರಿಹಾರ ನೀಡುವುದಿಲ್ಲ. ರಸ್ತೆಯ ಇಕ್ಕೆಲಗಳ 30 ಮೀ. ಜಾಗದಲ್ಲಿ ಅಭಿವೃದ್ಧಿಪಡಿಸುವ ವಾಣಿಜ್ಯ ನಿವೇಶನಗಳನ್ನು ಮಾರಾಟ ಮಾಡಿಕೊಂಡು ಅದರಿಂದ ಬರುವ ಹಣದಲ್ಲಿ ಸರ್ಕಾರ ರೈತರ ಜಮೀನು ಅಭಿವೃದ್ಧಿ ಮಾಡಿಕೊ ಡುವ ಯೋಜನೆಗೆ ಆಂಧ್ರಪ್ರದೇಶದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂಬುದು ಮುಡಾ ಅಧಿಕಾರಿಗಳ ಅಭಿಮತ

ಅಧ್ಯಯನ ತಂಡ ರಚನೆ: ಆಂಧ್ರ ಪ್ರದೇಶದ ಯೋಜನೆ ಮಾದರಿಯನ್ನು ಅಧ್ಯಯನ ನಡೆಸಿ ಸಾಧ್ಯಾಸಾಧ್ಯತೆ ಅರಿಯಲು ಮುಡಾ ಅಧ್ಯಕ್ಷರು, ಆಯುಕ್ತರ ನೇತೃತ್ವದಲ್ಲಿ ಅಧ್ಯಯನ ತಂಡವನ್ನು ರಚಿಸಲಾಗಿದೆ. ಸೂಪರಿಂಟೆಂಡಿಂಗ್ ಇಂಜಿನಿಯರ್, ಎಕ್ಸಿಕ್ಯೂಟಿವ್ ಇಂಜಿನಿ ಯರ್, ವಿಶೇಷ ಭೂಸ್ವಾಧೀನಾಧಿಕಾರಿ ಹಾಗೂ ನಗರ ಯೋಜಕ ಸದಸ್ಯ (Town Planner Member) ಅಧ್ಯಯನ ತಂಡದಲ್ಲಿದ್ದಾರೆ.

ಶೀಘ್ರ ಆಂಧ್ರಪ್ರದೇಶಕ್ಕೆ: ಈ ಅಧ್ಯಯನ ತಂಡವು ಶೀಘ್ರ ಆಂಧ್ರಪ್ರದೇಶಕ್ಕೆ ತೆರಳಿ ವಿಜಯವಾಡದಲ್ಲಿ ನೊಯ್ಡಾ-ನವ ದೆಹಲಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿ ವೃದ್ಧಿಗೆ ಯಾವುದೇ ಭೂಸ್ವಾಧೀನವಿಲ್ಲದೆ ನಡೆಸುತ್ತಿರುವ ಪ್ರಕ್ರಿಯೆಯನ್ನೂ ಅಧ್ಯ ಯನ ನಡೆಸುವ ಅಧಿಕಾರಿಗಳು ಅಲ್ಲಿನ ಯೋಜನಾ ಅನುಷ್ಠಾನ ಪ್ರಾಧಿಕಾರ ದಿಂದ ಮಾಹಿತಿ ಕಲೆ ಹಾಕಲಿದ್ದಾರೆ.

ಅಲ್ಲಿ ಅನುಸರಿಸುತ್ತಿರುವ ಮಾರ್ಗ, ತಾಂತ್ರಿಕ ಸಲಹೆ, ಅನುಸರಣೆ ಕ್ರಮ, ತಗಲುವ ವೆಚ್ಚ ಇತ್ಯಾದಿ ವಿಷಯಗಳನ್ನು ಅಧ್ಯಯನ ಮಾಡಿ ತಂಡವು ಸಮಗ್ರ ವರದಿ ಸಿದ್ಧಪಡಿಸಲಿದೆ. ಪ್ರಸ್ತಾವನೆಯನ್ನು ಮುಡಾ ಸಭೆಯಲ್ಲಿ ಮಂಡಿಸಿ ಅನು ಮೋದನೆ ಪಡೆದ ನಂತರ ಡಿಪಿಆರ್ ನೊಂದಿಗೆ ಸರ್ಕಾರಕ್ಕೆ ಪೆರಿಪೆರಲ್ ರಸ್ತೆ ಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು.

Translate »