ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜೀವ ವಿಮಾ ನಿಗಮ ಪ್ರತಿನಿಧಿಗಳ ಪ್ರತಿಭಟನೆ
ಮೈಸೂರು

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜೀವ ವಿಮಾ ನಿಗಮ ಪ್ರತಿನಿಧಿಗಳ ಪ್ರತಿಭಟನೆ

August 9, 2018

ಮೈಸೂರು: ವಿಮಾ ಕಂತಿನ ಮೇಲೆ ಜಿಎಸ್‍ಟಿ ವಿಧಿಸಿರುವುದನ್ನು ಹಿಂಪಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬುಧವಾರ ಅಖಿಲ ಭಾರತ ಜೀವ ವಿಮಾ ಪ್ರತಿನಿಧಿಗಳ ಸಂಘಟನೆಯ ಜಿಲ್ಲಾ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಮೈಸೂರಿನ ಬನ್ನಿಮಂಟಪದಲ್ಲಿರುವ ಭಾರತೀಯ ಜೀವ ವಿಮಾ(ಎಲ್‍ಐಸಿ) ನಿಗಮದ ಕಚೇರಿ ಬಳಿ ಇಂದು ಬೆಳಿಗ್ಗೆ ಪ್ರತಿಭಟನೆ ನಡೆಸಿದ ಎಲ್‍ಐಸಿ ಪ್ರತಿನಿಧಿಗಳು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ವಿಮೆ ಕಂತಿನ ಮೇಲೆ ಜಿಎಸ್‍ಟಿ ವಿಧಿಸಿರುವು ದನ್ನು ವಿರೋಧಿಸಿ ಅಖಿಲ ಭಾರತ ಜೀವ ವಿಮಾ ಪ್ರತಿನಿಧಿಗಳ ಸಂಘಟನೆ ಇಂದು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿತ್ತು.

ಕೇಂದ್ರ ಸರ್ಕಾರ ಕೂಡಲೇ ವಿಮಾ ಕಂತಿನ ಮೇಲೆ ವಿಧಿಸಿರುವ ಜಿಎಸ್‍ಟಿ ಹಿಂಪಡೆಯಬೇಕು. ವಿಮಾ ಪ್ರತಿನಿಧಿ ಗಳಿಗೆ ಕಲ್ಯಾಣನಿಧಿ, ಖಾತ್ರಿ ಪಿಂಚಣಿ ಹಾಗೂ ಮೆಡಿಕ್ಲೈಮ್ ಸೌಲಭ್ಯ ಒದಗಿಸಿ ಪ್ರತಿನಿಧಿಗಳಿಗೆ ಗುರುತಿನ ಚೀಟಿ ವಿತರಿಸ ಬೇಕು. ವಿಮೆ ನೇರ ಮಾರಾಟ ನಿಲ್ಲಿಸಬೇಕು. ಗ್ರಾಚ್ಯುಟಿ ಹೆಚ್ಚಿಸಿ, ಲೆಕ್ಕಿಸುವ ಗ್ರಾಚ್ಯುಟಿ ಕಾಯಿದೆ 1972 ತಿದ್ದುಪಡಿ ಆಗಬೇಕು. ಶಾಖೆಗಳಲ್ಲಿ ಉತ್ತಮ ಸೇವೆಯನ್ನು ಪಾಲಿಸಿ ದಾರರಿಗೆ ನೀಡಬೇಕು. ಕ್ಲಬ್ ಸದಸ್ಯರ ಆಯ್ಕೆ ಸಂದರ್ಶನ ನಿಲ್ಲಿಸಿ, ಏಕ್ಸ್‍ಗ್ರೇ ಷಿಯಾ ಪದ್ಧತಿ ತೆಗೆದು ಹಾಕಬೇಕು. ಜೀವನ್ ಸರಳ ಮಾದರಿಯಲ್ಲಿ ವೆಲ್ತ್ ಪ್ಲಸ್ ಪಾಲಿಸಿಗಳ ಮೆಚುರಿಟಿಯಲ್ಲಿ ಉಂಟಾದ ನಷ್ಟವನ್ನು ಪಾಲಿಸಿದಾರರಿಗೆ ನೀಡಬೇಕು. 2 ವರ್ಷದ ಪಾಲಿಸಿ ಅವಧಿ ನಂತರವು ಲ್ಯಾಪ್ಸ್‍ಗೊಂಡ ಪಾಲಿಸಿಗಳನ್ನು ಪುನರು ಜ್ಜೀವನಗೊಳಿಸಲು ಅವಕಾಶ ನೀಡಬೇಕು. ವಿಭಾಗೀಯ ಮಟ್ಟದ ಐಸಿಸಿಗೆ (ಔಪಚಾರಿಕ ಸಮಾಲೋಚನೆ ಸಭೆ) ನಮ್ಮ ಸಂಘಟನಾ ಮುಖಂಡರನ್ನು ಕರೆಯಬೇಕು. ಹೀಗೆ ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ದಕ್ಷಿಣ ವಲಯ ಅಧ್ಯಕ್ಷ ಎಲ್.ಮಂಜುನಾಥ್, ವಿಭಾಗೀಯ ಸಂಚಾಲಕ ಯೋಗೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಪ್ರದೀಪ್, ಸಹ ಕಾರ್ಯದರ್ಶಿ ಸೋಮಯ್ಯ, ಉಪಾ ಧ್ಯಕ್ಷ ಕೃಷ್ಣಮೂರ್ತಿ, ಎಲ್‍ಇಎಎಫ್‍ಐ ಅಧ್ಯಕ್ಷ ಎಸ್.ಶಿವನಾಗಪ್ಪ, ಕಾರ್ಯದರ್ಶಿ ಬಿ.ಪಶುಪತಿ, ಎಸ್.ಎಂ.ಬಸವಲಿಂಗಪ್ಪ, ಟಿ.ಎಸ್.ಸಿದ್ದಲಿಂಗ ಒಡೆಯರ್, ರಾಜ್ಯ ಸಮಿತಿ ಸದಸ್ಯರಾದ ಜಯರಾಮು, ಅರವಿಂದ್ ಕುಮಾರ್, ವಿಭಾಗೀಯ ಮುಖಂಡರಾದ ಎಸ್.ಎನ್.ಗುರುಸ್ವಾಮಿ, ಆರ್.ಬಿ.ಮುತ್ತುರಾಜ್ ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡಿದ್ದರು.

Translate »