ಮೈಸೂರು

ಮಾಲ್‍ಗಳಲ್ಲಿ ದವಸ ಧಾನ್ಯದಂತಹ ಅಗತ್ಯ ವಸ್ತುಗಳ ಮಾರಾಟ ಖಂಡಿಸಿ ಮೈಸೂರು ಜಿಲ್ಲಾ ವಿತರಕರ ಸಂಘದಿಂದ ಪ್ರತಿಭಟನೆ
ಮೈಸೂರು

ಮಾಲ್‍ಗಳಲ್ಲಿ ದವಸ ಧಾನ್ಯದಂತಹ ಅಗತ್ಯ ವಸ್ತುಗಳ ಮಾರಾಟ ಖಂಡಿಸಿ ಮೈಸೂರು ಜಿಲ್ಲಾ ವಿತರಕರ ಸಂಘದಿಂದ ಪ್ರತಿಭಟನೆ

July 22, 2018

ಮೈಸೂರು:  ದವಸ ಧಾನ್ಯ ಸೇರಿದಂತೆ ಅಗತ್ಯ ವಸ್ತುಗಳನ್ನು ರಿಲಯನ್ಸ್ ಮತ್ತು ಮೆಟ್ರೋ ಕಂಪನಿಗಳ ಮಾರಾಟ ಮಳಿಗೆ ಸೇರಿದಂತೆ ಮಾಲ್‍ಗಳಲ್ಲಿ ಮಾರಾಟ ಮಾಡುತ್ತಿರುವುದನ್ನು ಖಂಡಿಸಿ ಮೈಸೂರಿನಲ್ಲಿ ಮೈಸೂರು ಜಿಲ್ಲಾ ವಿತರಕರ ಸಂಘದ ಸದಸ್ಯರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮೈಸೂರು ಅರಮನೆಯ ಉತ್ತರದ್ವಾರದಲ್ಲಿರುವ ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂಭಾಗದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ವರ್ತಕರು ಹಾಗೂ ಅಂಗಡಿಗಳ ಮಾಲೀಕರು ದೊಡ್ಡಗಡಿಯಾರ ವೃತ್ತ, ಚಿಕ್ಕಗಡಿಯಾರ ವೃತ್ತ, ಡಿ.ದೇವರಾಜ ಅರಸ್ ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ತಲುಪಿ ಧರಣಿ ನಡೆಸಿದರು. ಮೈಸೂರು,…

ನಿರ್ದಿಷ್ಟ ಗುರಿಯೊಂದಿಗೆ ಅಧ್ಯಯನ ಮಾಡಿ ಯಶಸ್ಸು ಸಾಧಿಸಿ ವಿದ್ಯಾರ್ಥಿಗಳಿಗೆ ಸಚಿವ ಜಿ.ಟಿ. ದೇವೇಗೌಡ ಕರೆ
ಮೈಸೂರು

ನಿರ್ದಿಷ್ಟ ಗುರಿಯೊಂದಿಗೆ ಅಧ್ಯಯನ ಮಾಡಿ ಯಶಸ್ಸು ಸಾಧಿಸಿ ವಿದ್ಯಾರ್ಥಿಗಳಿಗೆ ಸಚಿವ ಜಿ.ಟಿ. ದೇವೇಗೌಡ ಕರೆ

July 22, 2018

ಮೈಸೂರು: ಬದುಕಿನಲ್ಲಿ ಒಂದು ನಿರ್ದಿಷ್ಟ ಗುರಿ ಇಟ್ಟುಕೊಂಡು ಅಧ್ಯಯನ ಮಾಡಿ, ಯಶಸ್ಸು ಸಾಧಿಸಿ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡರು ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ. ಮೈಸೂರಿನ ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿರುವ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಏರ್ಪಡಿಸಿದ್ದ 40ನೇ ವರ್ಷದ ಸಂಭ್ರಮಾಚರಣೆ ಹಾಗೂ ಸಹಪಠ್ಯ ಚಟುವಟಿಕೆಗಳ ಸಮಾರಂಭ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ವಿದ್ಯಾರ್ಥಿಗಳ ಬದುಕು ಸುಂದರವಾಗಿರಬೇಕಾದರೆ ನಿಮ್ಮಲ್ಲಿ ಶಿಸ್ತು, ತಾಳ್ಮೆ ಗುಣ, ನಡವಳಿಕೆ ಇರಬೇಕು. ಜೊತೆಗೆ ವಿದ್ಯಾರ್ಥಿಗಳು ಪ್ರತಿಭಾವಂತರಾಗಿ ಉತ್ತಮ ಫಲಿತಾಂಶ ಪಡೆದು ಕಾಲೇಜಿಗೆ…

ಪರಿಸರ ಸಂರಕ್ಷಣೆ ಜೊತೆಗೆ ಉತ್ತಮ ಫಲಿತಾಂಶದತ್ತ ಗಮನಹರಿಸಲು ಕಿವಿಮಾತು
ಮೈಸೂರು

ಪರಿಸರ ಸಂರಕ್ಷಣೆ ಜೊತೆಗೆ ಉತ್ತಮ ಫಲಿತಾಂಶದತ್ತ ಗಮನಹರಿಸಲು ಕಿವಿಮಾತು

July 22, 2018

ಮೈಸೂರು:  ಮೈಸೂರಿನ ಡಿ.ಬನುಮಯ್ಯ ಶಾಲೆಯ ವಿದ್ಯಾರ್ಥಿಗಳೊಂದಿಗೆ ಶನಿವಾರ ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್, `ಬಲಿಷ್ಠ ಭಾರತ-ಹಸಿರು ಭಾರತ’ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಂವಾದ ನಡೆಸಿ, ಪರಿಸರ ಸಂರಕ್ಷಣೆಯೊಂದಿಗೆ ಹತ್ತನೇ ತರಗತಿಯ ಫಲಿತಾಂಶ ಉತ್ತಮಗೊಳಿಸಲು ಪೂರ್ವ ತಯಾರಿಯ ಬಗ್ಗೆ ಸಲಹೆ ನೀಡಿದರು. ಕೆ.ಆರ್.ಕ್ಷೇತ್ರದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶ ಸುಧಾರಿಸುವುದರೊಂದಿಗೆ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ `ಬಲಿಷ್ಠ ಭಾರತ-ಹಸಿರು ಭಾರತ’ ಕಾರ್ಯಕ್ರಮದಡಿ ಪ್ರತಿ ಶನಿವಾರ ಸರ್ಕಾರಿ ಪ್ರೌಡಶಾಲೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸುತ್ತಿರುವ ಶಾಸಕ ಎಸ್.ಎ.ರಾಮದಾಸ್, ಇಂದು ಡಿ.ಬನುಮಯ್ಯ ಶಾಲೆಯ ವಿದ್ಯಾರ್ಥಿಗಳೊಂದಿಗೆ ನಾಲ್ಕನೆ ಕಾರ್ಯಕ್ರಮದಲ್ಲಿ…

ಮೈಸೂರು ಮಹಾರಾಣಿ ಕಾಲೇಜಲ್ಲಿ ಶಾಸಕ  ನಾಗೇಂದ್ರ ನೇತೃತ್ವದಲ್ಲಿ ಸ್ವಚ್ಛತೆ
ಮೈಸೂರು

ಮೈಸೂರು ಮಹಾರಾಣಿ ಕಾಲೇಜಲ್ಲಿ ಶಾಸಕ  ನಾಗೇಂದ್ರ ನೇತೃತ್ವದಲ್ಲಿ ಸ್ವಚ್ಛತೆ

July 22, 2018

ಮೈಸೂರು: ಮೈಸೂರಿನ ಮಹಾರಾಣಿ ವಿಜ್ಞಾನ-ಕಲಾ ಕಾಲೇಜಿನಲ್ಲಿ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅವರು ಮೈಸೂರು ಮಹಾನಗರ ಪಾಲಿಕೆ, ಕಾಲೇಜಿನ ಅಧ್ಯಾಪಕ ವೃಂದ, ವಿದ್ಯಾರ್ಥಿಗಳೊಂದಿಗೆ ಶ್ರಮದಾನ ಮಾಡುವುದರ ಮೂಲಕ ಮಹಾರಾಣಿ ಕಾಲೇಜಿನ ಕಸ ಮುಕ್ತಗೊಳಿಸುವ ಅಭಿಯಾನಕ್ಕೆ ನಾಂದಿ ಹಾಡಿದರು. ಶಾಸಕ ಎಲ್.ನಾಗೇಂದ್ರ, ಮೇಯರ್ ಭಾಗ್ಯವತಿ, ನಗರ ಪಾಲಿಕೆ ಆಯುಕ್ತ ಜಗದೀಶ್, ಆರೋಗ್ಯಾಧಿಕಾರಿ ನಾಗರಾಜ್, ಕಾಲೇಜಿನ ಜಂಟಿ ನಿರ್ದೇಶಕ ಉದಯಶಂಕರ್ ಹಾಗೂ ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿ ಕಸ ಗುಡಿಸಿ, ಅಲ್ಲಲ್ಲಿ ಬಿದ್ದಿದ್ದ ಕಸ-ಕಡ್ಡಿಗಳನ್ನು ತೆಗೆಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು….

ವಿಶ್ವ ಸಾಹಿತ್ಯ ಕ್ಷೇತ್ರದಲ್ಲಿ ಕಾಳಿದಾಸರ `ಅಭಿಜ್ಞಾನ ಶಾಕುಂತಲ’ ಇತರೆ ನಾಟಕಗಳಿಗೆ ಅಗ್ರಪಂಕ್ತಿ ಇದೆ
ಮೈಸೂರು

ವಿಶ್ವ ಸಾಹಿತ್ಯ ಕ್ಷೇತ್ರದಲ್ಲಿ ಕಾಳಿದಾಸರ `ಅಭಿಜ್ಞಾನ ಶಾಕುಂತಲ’ ಇತರೆ ನಾಟಕಗಳಿಗೆ ಅಗ್ರಪಂಕ್ತಿ ಇದೆ

July 22, 2018

ಹಿರಿಯ ಸಾಹಿತಿ ಡಾ.ಸಿಪಿಕೆ ಅಭಿಮತ ಡಾ.ಕೆ.ಕೃಷ್ಣ ಮೂರ್ತಿ ಸಂಸ್ಮರಣೆ ಹಾಗೂ ಕಾಳಿದಾಸನ ನಾಟಕಗಳು ಮರುಮುದ್ರಣ ಕೃತಿ ಬಿಡುಗಡೆ ಮೈಸೂರು: ವಿಶ್ವ ಸಾಹಿತ್ಯ ಕ್ಷೇತ್ರದಲ್ಲಿ ಕಾಳಿದಾಸರ `ಅಭಿಜ್ಞಾನ ಶಾಕುಂತಲ’ ಸೇರಿದಂತೆ ಹಲವು ನಾಟಕಗಳು ಅಗ್ರಪಂಕ್ತಿ ಪಡೆದಿವೆ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಅಭಿಪ್ರಾಯಪಟ್ಟರು. ಮೈಸೂರು ಅರಮನೆ ಉತ್ತರ ದ್ವಾರದ ಪಕ್ಕದಲ್ಲಿರುವ ಕಸಾಪ ಸಭಾಂಗಣದಲ್ಲಿ ಡಾ.ಕೆ.ಕೃಷ್ಣಮೂರ್ತಿ ಸಂಶೋಧನಾ ಪ್ರತಿಷ್ಠಾನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ 95ನೇ ವರ್ಷದ ಸಂಸ್ಮರಣಾ ಕಾರ್ಯಕ್ರಮದ ಅಂಗವಾಗಿ `ಡಾ.ಕೆ.ಕೃಷ್ಣಮೂರ್ತಿ-ಸಂಸ್ಮರಣೆ ಹಾಗೂ ಕಾಳಿದಾಸನ ನಾಟಕಗಳು’…

ಆಹಾರ ಇಲಾಖೆ ಉಪನಿರ್ದೇಶಕ  ಡಾ.ಕಾ.ರಾಮೇಶ್ವರಪ್ಪ ಕರೆದಿದ್ದ ಸಭೆ ರದ್ದು: ಮೈಸೂರು ಡಿಸಿ ಕಚೇರಿಯಲ್ಲಿ ಹೈಡ್ರಾಮ
ಮೈಸೂರು

ಆಹಾರ ಇಲಾಖೆ ಉಪನಿರ್ದೇಶಕ  ಡಾ.ಕಾ.ರಾಮೇಶ್ವರಪ್ಪ ಕರೆದಿದ್ದ ಸಭೆ ರದ್ದು: ಮೈಸೂರು ಡಿಸಿ ಕಚೇರಿಯಲ್ಲಿ ಹೈಡ್ರಾಮ

July 22, 2018

ಮೈಸೂರು:  ನಂಜನಗೂಡು ಎಪಿಎಂಸಿ ಗೋದಾಮಿನಲ್ಲಿ ಪಡಿತರ ನಾಪತ್ತೆ ಪ್ರಕರಣ ಸಂಬಂಧ ಹೊರಡಿಸಿದ್ದ ಆಹಾರ ಮತ್ತು ನಾಗರಿಕ ಸರ ರಾಜು ಇಲಾಖೆ ಹಿರಿಯ ಉಪ ನಿರ್ದೇಶಕ ಡಾ. ಕಾ.ರಾಮೇ ಶ್ವರಪ್ಪ ಅಮಾನತು ಆದೇಶಕ್ಕೆ ಕೆಎಟಿ ತಡೆ ಯಾಜ್ಞೆ ನೀಡಿದೆ. ಸರ್ಕಾರದ ಅಮಾನತು ಆದೇಶದ ವಿರುದ್ಧ ಡಾ. ರಾಮೇಶ್ವರಪ್ಪ ಕೆಎಟಿ ಮೊರೆ ಹೋಗಿ ಶುಕ್ರ ವಾರ ತಡೆಯಾಜ್ಞೆ ತಂದಿದ್ದರು. ಇಲಾಖೆ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತಡೆಯಾಜ್ಞೆ ವಿಷಯ ತಾರದೆ ಡಾ. ರಾಮೇಶ್ವರಪ್ಪ ಅವರು ತಮ್ಮ ಕಚೇರಿಗೆ ಆಗಮಿಸಿ…

ರಾಜ್ಯವೆಲ್ಲಾ ಸುತ್ತಿದರು ಕ್ಷೇತ್ರದ ಜನರ ಸೇವೆ ಮಾಡಲು ಮರೆಯಲ್ಲ
ಮೈಸೂರು

ರಾಜ್ಯವೆಲ್ಲಾ ಸುತ್ತಿದರು ಕ್ಷೇತ್ರದ ಜನರ ಸೇವೆ ಮಾಡಲು ಮರೆಯಲ್ಲ

July 22, 2018

ಮೈಸೂರು:  ನಮ್ಮಲ್ಲಿ ಒಡಕಿಲ್ಲ, ಒಂದೇ ಮನಸ್ಸಿನಿಂದ ಜನರ ಸೇವೆಯನ್ನು ಮಾಡುತ್ತಿದ್ದೇವೆ. ನಾನು ಕರ್ನಾ ಟಕವನ್ನೆಲ್ಲಾ ಸುತ್ತಿದರೂ ಕ್ಷೇತ್ರದ ಜನರ ಸೇವೆಗೆ ಆದ್ಯತೆ ನೀಡುತ್ತೇನೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದರು. ವಿಜಯನಗರ 3ನೇಹಂತದಲ್ಲಿರುವ ಸಂಗಮ ವೃತ್ತದಲ್ಲಿ ವಿಜಯಗರ ಒಕ್ಕಲಿಗರ ವೇದಿಕೆ ವತಿಯಿಂದ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ, ಗಣ್ಯರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಜಯನಗರ ಮೂರನೇ ಹಂತದ ಸಮಸ್ಯೆಗಳು ಗೊತ್ತಿದೆ. ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು,…

ರೈಲ್ವೆ ಗೂಡ್ಸ್‍ಶೆಡ್‍ನಿಂದ ರಿಂಗ್ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ಆಗ್ರಹ ಮುಷ್ಕರ
ಮೈಸೂರು

ರೈಲ್ವೆ ಗೂಡ್ಸ್‍ಶೆಡ್‍ನಿಂದ ರಿಂಗ್ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ಆಗ್ರಹ ಮುಷ್ಕರ

July 22, 2018

ಮೈಸೂರು: ಮೈಸೂರಿನ ರೈಲ್ವೆ ಗೂಡ್ಸ್‍ಶೆಡ್‍ನಿಂದ ರಿಂಗ್ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಪಡಿಸಲು ಅನುಮತಿ ನೀಡುವವರೆವಿಗೂ ಮುಷ್ಕರ ಕೈಬಿಡುವುದಿಲ್ಲವೆಂದು ರೈಲ್ವೆ ಗೂಡ್ಸ್‍ಶೆಡ್ ಲಾರಿ ಮಾಲೀಕರ ಸಂಘ ಇಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರಿಗೆ ಸ್ಪಷ್ಟಪಡಿಸಿದೆ. ಲಾರಿ ಮುಷ್ಕರದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಇಂದು ಲಾರಿ ಮಾಲೀಕರ ಸಂಘಟನೆಗಳ ಸಭೆ ಕರೆದಿದ್ದರು. ಈ ಸಭೆಯಲ್ಲಿ ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಕೋದಂಡರಾಮು, ಚಾಮರಾಜನಗರ-ಮೈಸೂರು ಜಿಲ್ಲಾ ಲಾರಿ ಮಾಲೀಕರ ಸಂಘದ ಉಪಾಧ್ಯಕ್ಷ ಎವಿಆರ್ ವೆಂಕಟೇಶ್, ರೈಲ್ವೆ ಗೂಡ್ಸ್‍ಶೆಡ್ ಲಾರಿ ಮಾಲೀಕರ…

ಹುಲ್ಲಹಳ್ಳಿಯಲ್ಲಿ ನಾಳೆ ಬೀಜ ನೆಡುವ ಹಬ್ಬ
ಮೈಸೂರು

ಹುಲ್ಲಹಳ್ಳಿಯಲ್ಲಿ ನಾಳೆ ಬೀಜ ನೆಡುವ ಹಬ್ಬ

July 22, 2018

ಮೈಸೂರು:  ಕೋಟಿ ವೃಕ್ಷ ಪ್ರತಿಷ್ಠಾನದ ವತಿಯಿಂದ ಜು.22ರಂದು ನಂಜನಗೂಡಿನ ಹುಲ್ಲಹಳ್ಳಿ ಗ್ರಾಮದಲ್ಲಿ ಬೀಜ ನೆಡುವ ಹಬ್ಬ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಶ್ರೀಕಾಂತ್ ಭಟ್ ತಿಳಿಸಿದರು. ಹುಲ್ಲಹಳ್ಳಿಯಲ್ಲಿ ಸಾವಿರ ಗಿಡ ನೆಡುವ ಕಾರ್ಯಕ್ರಮಕ್ಕೆ ಅಂದು ಮಧ್ಯಾಹ್ನ 2.30ಕ್ಕೆ ಚಾಲನೆ ನೀಡಲಾಗುವುದು. ಮುಂದಿನ ದಿನಗಳಲ್ಲಿ ಕೋಟಿ ಗಿಡ ನೆಡುವ ಗುರಿ ಹೊಂದಲಾಗಿದೆ. ಪ್ರತಿಷ್ಠಾನದ ವತಿಯಿಂದ ಪ್ರತಿ ಭಾನುವಾರ ಸಸ್ಯ ಬೆಳೆಸುವ ಚಟುವಟಿಕೆ ನಡೆಯುತ್ತಿದ್ದು, ಸಂಸ್ಥೆಯಿಂದ ಉತ್ಪಾದಿಸಿದ ಗಿಡಗಳನ್ನು ಬೇಡಿಕೆ ಬಂದಲ್ಲಿ ಉಚಿತವಾಗಿ ವಿತರಿಸಲಾಗುವುದು. ಈಗಾಗಲೇ 3 ಸಾವಿರ ಗಿಡಗಳನ್ನು…

ವಾಟಾಳು ಮಠದ ಶ್ರೀಗಳಿಗೆ ಸನ್ಮಾನ
ಮೈಸೂರು

ವಾಟಾಳು ಮಠದ ಶ್ರೀಗಳಿಗೆ ಸನ್ಮಾನ

July 22, 2018

ಮೈಸೂರು:  ಗೌರವ ಡಾಕ್ಟರೇಟ್ ಪದವಿ ಪಡೆದಿರುವ ತಿ.ನರಸೀಪುರ ತಾಲೂಕಿನ ವಾಟಾಳು ಸೂರ್ಯ ಸಿಂಹಾಸನ ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಕರ್ನಾಟಕ ಇತಿಹಾಸ್ ಸಾಂಸ್ಕೃತಿಕ ಕಲಾ ಸಂಸ್ಥೆಯು ಶನಿವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸನ್ಮಾನಿಸಿತು. ಈ ಸಂದರ್ಭಧಲ್ಲಿ ಮಾತನಾಡಿದ ಶ್ರೀಗಳು, ಸಂಸ್ಥೆಯು, ಮಠದ ಸಂಪ್ರದಾಯ, ಪರಂಪರೆಯಂತೆ ಜಾತಿ, ಮತ, ಬೇಧವಿಲ್ಲದೆ ಎಲ್ಲರನ್ನೂ ಸಮ ಭಾವನೆಯಿಂದ ಪೋಷಿಸುತ್ತಿದೆ. ನೊಂದವರು ಮತ್ತು ಅಬಲರಿಗೆ ಊಟ, ವಸತಿ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಮಠ ನೀಡಿರುವ ಸೇವೆಯನ್ನು ಪರಿಗಣಿಸಿ…

1 1,475 1,476 1,477 1,478 1,479 1,611
Translate »