ಮೈಸೂರು

ಗೌರಿ ಲಂಕೇಶ್ ಹತ್ಯೆ ಪ್ರಕರಣ: ಎಸ್‍ಐಟಿಯಿಂದ ಮತ್ತೋರ್ವ ಶಂಕಿತ ಆರೋಪಿ ಬಂಧನ
ಮೈಸೂರು

ಗೌರಿ ಲಂಕೇಶ್ ಹತ್ಯೆ ಪ್ರಕರಣ: ಎಸ್‍ಐಟಿಯಿಂದ ಮತ್ತೋರ್ವ ಶಂಕಿತ ಆರೋಪಿ ಬಂಧನ

July 21, 2018

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಎಸ್‍ಐಟಿ ಅಧಿಕಾರಿಗಳು ಮತ್ತೋರ್ವ ಶಂಕಿತ ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಮುಂಡಡ್ಕ ನಿವಾಸಿ ಮೋಹನ್ ನಾಯಕ್(30 ವರ್ಷ) ಎಂಬಾತನನ್ನು ತನಿಖಾ ತಂಡ (ಎಸ್‍ಐಟಿ) ಬಂಧಿಸಿದೆ ಎಂದು ತಿಳಿದುಬಂದಿದೆ. 2 ದಿನಗಳ ಹಿಂದೆಯೇ ಅಧಿಕಾರಿಗಳು ಈತನನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಮೋಹನ್ ನಾಯಕ್‍ನನ್ನು ಜುಲೈ 19ರಂದು ಮುಂಜಾನೆ 2 ಗಂಟೆ ಸುಮಾರಿಗೆ ಬೆಂಗಳೂರಿನಿಂದ…

ಶಿರೂರು ಶ್ರೀಗಳಿಗೆ ಒಳ್ಳೆಯ ಗುಣಗಳಿತ್ತು, ಜೊತೆಗೆ ಹೆಣ್ಣು, ಹೆಂಡದ ಚಟವೂ ಇತ್ತು: ಪೇಜಾವರ ಶ್ರೀ ವಿವರಣೆ
ಮೈಸೂರು

ಶಿರೂರು ಶ್ರೀಗಳಿಗೆ ಒಳ್ಳೆಯ ಗುಣಗಳಿತ್ತು, ಜೊತೆಗೆ ಹೆಣ್ಣು, ಹೆಂಡದ ಚಟವೂ ಇತ್ತು: ಪೇಜಾವರ ಶ್ರೀ ವಿವರಣೆ

July 21, 2018

ಉಡುಪಿ:  ನಿನ್ನೆ ಅನುಮಾನಾ ಸ್ಪದವಾಗಿ ಮೃತಪಟ್ಟ ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮಿಜಿಗೆ ಮಹಿಳೆಯರ ಚಟವಿತ್ತು ಮತ್ತು ಮದ್ಯಪಾನ ಮಾಡುತ್ತಿದ್ದರು ಎಂದು ಪೇಜಾವರ ಶ್ರೀಗಳು ಶುಕ್ರ ವಾರ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇಂದು ಉಡುಪಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಷ್ಠಮಠಗಳಲ್ಲಿನ ಹಿರಿಯ ಯತಿ ವಿಶ್ವೇಶತೀರ್ಥ ಶ್ರೀಗಳು, ಶಿರೂರು ಶ್ರೀಗಳ ನಿಗೂಢ ಸಾವಿನ ವಿಚಾರದಲ್ಲಿ ಅಷ್ಟ ಮಠಗಳ ಕಡೆಯಿಂದ ಯಾವುದೇ ತಪ್ಪುಗಳು ನಡೆದಿಲ್ಲ. ಅವರಿಗೆ ಕುಡಿಯುವ ಮತ್ತು ಮಹಿಳೆಯರ ಚಟವಿತ್ತು. ಹೆಣ್ಣು ಮತ್ತು ಹೆಂಡದ ಸಹವಾಸದಿಂದ ಸನ್ಯಾಸತ್ವಕ್ಕೆ…

ಜನರ ಆರೋಗ್ಯಕ್ಕೆ ಹಾನಿಕರವಾದ ಪರಿಸ್ಥಿತಿಯತ್ತ ಪಾಲಿಕೆ ಚಿತ್ತವಿಲ್ಲ
ಮೈಸೂರು

ಜನರ ಆರೋಗ್ಯಕ್ಕೆ ಹಾನಿಕರವಾದ ಪರಿಸ್ಥಿತಿಯತ್ತ ಪಾಲಿಕೆ ಚಿತ್ತವಿಲ್ಲ

July 21, 2018

ಮೈಸೂರು: ಒಂದೆಡೆ ಮೃತಪಟ್ಟ ಜಾನುವಾರುಗಳ ಕಳೇಬರ ಸೇರಿದಂತೆ ಕೊಳೆತು ನಾರುವ ನಿರುಪಯುಕ್ತ ವಸ್ತುಗಳ ರಾಶಿ ಮತ್ತೊಂದೆಡೆ ನದಿಯಂತೆ ರಸ್ತೆ ತುಂಬೆಲ್ಲಾ ಹರಿಯುತ್ತಿರುವ ಕೊಳಚೆ ನೀರು… ಇದರಿಂದ ಸುತ್ತಮುತ್ತಲಿನ ಪರಿಸರ ಕಲುಷಿತಗೊಂಡು ಪಕ್ಷಿ ಸಂಕುಲ ಸಂಕಷ್ಟಕ್ಕೀಡಾಗಿರುವುದಲ್ಲದೆ, ಸ್ಥಳೀಯರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಬಿಎಂಶ್ರೀ ನಗರದ ರೈಲ್ವೆ ಅಂಡರ್ ಬ್ರಿಡ್ಜ್ ಸಮೀಪದ ರಿಂಗ್ ರೋಡ್‍ನ ಸರ್ವೀಸ್ ರಸ್ತೆಯು ಕೊಳೆತ ತ್ಯಾಜ್ಯಗಳಿಂದ ತುಂಬಿದ್ದು, ಕಲುಷಿತ ವಾತಾವರಣ ನಿರ್ಮಾಣವಾಗಿದೆ. ಸ್ಥಳೀಯ ನಿವಾಸಿಗಳು ತಾವು ಸಾಕಿದ ಜಾನುವಾರುಗಳು ಮೃತಪಟ್ಟ ನಂತರ ರಸ್ತೆ ಬದಿಯಲ್ಲಿ…

ಎಂಜಿ ರಸ್ತೆ ಮಾರುಕಟ್ಟೆ ಬಳಿ ದುರ್ವಾಸನೆಯಿಂದ ಮುಕ್ತಿ `ಮಿತ್ರ’ನ ವರದಿ ಫಲಶ್ರುತಿ
ಮೈಸೂರು

ಎಂಜಿ ರಸ್ತೆ ಮಾರುಕಟ್ಟೆ ಬಳಿ ದುರ್ವಾಸನೆಯಿಂದ ಮುಕ್ತಿ `ಮಿತ್ರ’ನ ವರದಿ ಫಲಶ್ರುತಿ

July 21, 2018

ಮೈಸೂರು:  `ಮೈಸೂರು ಮಿತ್ರ’ನ ಆಶಯ ಫಲಪ್ರದವಾಗಿದ್ದು, ಎಂ.ಜಿ.ರಸ್ತೆಯ ಮಾರುಕಟ್ಟೆಯಲ್ಲಿದ್ದ ತ್ಯಾಜ್ಯವನ್ನು ನಗರಪಾಲಿಕೆ ವಿಲೇವಾರಿ ಮಾಡಿ ಸ್ವಚ್ಛಗೊಳಿಸುವ ಮೂಲಕ ಸಾರ್ವಜನಿಕರನ್ನು ದುರ್ವಾಸನೆ ಕಿರಿಕಿರಿಯಿಂದ ಪಾರು ಮಾಡಿದೆ. ಅಗ್ರಹಾರದಿಂದ ಮಾಲ್ ಆಫ್ ಮೈಸೂರು ಕಡೆಗೆ ಹೋಗುವ ಎಂ.ಜಿ.ರಸ್ತೆಯಲ್ಲಿರುವ ಮಾರುಕಟ್ಟೆಯ ಬಳಿ ಕೊಳೆತ ತರಕಾರಿಗಳು, ಬಾಳೆ ಎಲೆಗಳು ಹಾಗೂ ಪ್ಲಾಸ್ಟಿಕ್ ಸೇರಿದಂತೆ ಕಸದ ರಾಶಿ ಮುಕ್ತವಾಗಿ ಎಲ್ಲರನ್ನು ಸ್ವಾಗತಿಸಿದರೆ, ಮತ್ತೊಂದೆಡೆ ಚರಂಡಿಯಲ್ಲಿ ಪ್ಲಾಸ್ಟಿಕ್, ಕೊಳೆತ ತರಕಾರಿ ತ್ಯಾಜ್ಯಗಳಿಂದ ತುಂಬಿ ಹೋಗಿದ್ದು, ಮಳೆ ಬಂತೆಂದರೆ ದುರ್ವಾಸನೆ ಬೀರುತ್ತಿತ್ತು. ಈ ಕುರಿತು `ಮೈಸೂರು ಮಿತ್ರ’…

ವಿದ್ಯುನ್ಮಾನ ಮಾಧ್ಯಮಗಳು ತೀವ್ರ ಟೀಕೆಗೆ ಒಳಗಾಗಿವೆ: ಕನ್ನಡಪ್ರಭ, ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ವಿಷಾದ
ಮೈಸೂರು

ವಿದ್ಯುನ್ಮಾನ ಮಾಧ್ಯಮಗಳು ತೀವ್ರ ಟೀಕೆಗೆ ಒಳಗಾಗಿವೆ: ಕನ್ನಡಪ್ರಭ, ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ವಿಷಾದ

July 21, 2018

ಮೈಸೂರು: ಸುದ್ದಿ ವಾಹಿನಿಗಳು ಟಿ.ಆರ್.ಪಿ ವಿಧಾನಕ್ಕೆ ಬದಲಾಗಿ ಪರ್ಯಾಯ ವಿಧಾನ ಕಂಡುಕೊಳ್ಳಬೇಕಿದೆ ಎಂದು ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿಹೆಗಡೆ ಅಭಿಪ್ರಾಯಪಟ್ಟರು. ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ರಾಜೇಂದ್ರ ಕಲಾಮಂದಿರದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಲ್ಲಿ ಪ್ರಧಾನ ಭಾಷಣಕಾರರಾಗಿ ಅವರು ಮಾತನಾಡಿದರು. ಜನಕೇಂದ್ರೀತವಾಗುವ ಬದಲು ಹೆಚ್ಚು ವಾಣಿಜ್ಯ ಕೇಂದ್ರೀತವಾದ ಹಿನ್ನೆಲೆಯಲ್ಲಿ ಸಾಂಪ್ರದಾಯಕವಾಗಿ ನಡೆದು ಬಂದ ದೂರದರ್ಶನ ಹಾಗೂ ಮುದ್ರಣ ಮಾಧ್ಯಮದಲ್ಲಿ ಇದೀಗ ವಿಶ್ವಾಸಾರ್ಹತೆಯ ಕೊರತೆ ಮೂಡಿದೆ. ಸಂಪಾದಕೀಯ ಕೇಂದ್ರೀತ…

ಪತ್ರಕರ್ತರಿಗೆ ಜೀವ ವಿಮೆ, ತಾಲೂಕು ಮಟ್ಟದಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ
ಮೈಸೂರು

ಪತ್ರಕರ್ತರಿಗೆ ಜೀವ ವಿಮೆ, ತಾಲೂಕು ಮಟ್ಟದಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ

July 21, 2018

 ಉನ್ನತ ಶಿಕ್ಷಣ ಸಚಿವ ಜಿಟಿಡಿ ಭರವಸೆ ಮೈಸೂರಲ್ಲಿ ಪತ್ರಿಕಾ ದಿನಾಚರಣೆ ಎಂಟು ಮಂದಿ ಪತ್ರಕರ್ತರಿಗೆ ಸನ್ಮಾನ ಮೈಸೂರು: ಮಾಧ್ಯಮ ಕ್ಷೇತ್ರ ಸಮಾಜವನ್ನು ತಿದ್ದುವಂತಹ ಮಹತ್ವದ ಜವಾಬ್ದಾರಿ ಹೊಂದಿದ್ದು, ಈ ಕ್ಷೇತ್ರದಲ್ಲಿ ದುಡಿಯುವ ಪತ್ರಕರ್ತರಿಗೆ ಸರ್ಕಾರದಿಂದ ಜೀವ ವಿಮೆ ಜಾರಿಗೊಳಿಸಲು ಹಾಗೂ ಮೈಸೂರು ಜಿಲ್ಲೆಯ ತಾಲೂಕುಗಳಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ (ಜಿಟಿಡಿ) ಹೇಳಿದರು. ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ರಾಜೇಂದ್ರ ಕಲಾಮಂದಿರದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ…

ತುಂತುರು ಮಳೆ ನಡುವೆ ತರಾತುರಿಯಲ್ಲಿ ‘ಕಪಿಲೆ’ಗೆ ಸಿಎಂ ಬಾಗಿನ
ಮೈಸೂರು

ತುಂತುರು ಮಳೆ ನಡುವೆ ತರಾತುರಿಯಲ್ಲಿ ‘ಕಪಿಲೆ’ಗೆ ಸಿಎಂ ಬಾಗಿನ

July 21, 2018

ಹೆಚ್.ಡಿ.ಕೋಟೆ: ಪತ್ನಿ ಶ್ರೀಮತಿ ಅನಿತಾ ಅವರೊಂದಿಗೆ ಕಬಿನಿಗೆ ನಿಗಧಿತ ಸಮಯಕ್ಕಿಂತ ತಡವಾಗಿ ಬಂದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ತುಂತುರು ಮಳೆ ನಡುವೆ ತುಂಬಿದ ಕಪಿಲಾ ಜಲಾಶಯಕ್ಕೆ ಬಾಗಿನ ಅರ್ಪಿಸಿದರು. ಸುಮಾರು ಎರಡೂವರೆ ಗಂಟೆ ತಡವಾಗಿ ಬಂದ ಮುಖ್ಯಮಂತ್ರಿಗಳು, ಬಾಗಿನ ಅರ್ಪಿಸಿದ ನಂತರ ಜಲಾಶಯದಲ್ಲಿ ಕೆಲಸ ಮಾಡುವ ನೌಕರರಿಗೆ ಸಮವಸ್ತ್ರಗಳನ್ನು ನೀಡಿದರು. ಪತ್ರಕರ್ತರು ಮಾತನಾಡಿಸಲು ಮುಂದಾದಾಗ ಕೈಸನ್ನೆಯಲ್ಲಿ “ಏನೂ ಇಲ್ಲ” ಎಂದು ಹೇಳಿ ಸ್ವಲ್ಪ ಹೊತ್ತಿನಲ್ಲೇ ನಿರ್ಗಮಿಸಿದರು. ಜಲಸಂಪನ್ಮೂಲ ಸಚಿವ ಡಿ.ಕೆ.ಶಿವ ಕುಮಾರ್, ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇ ಗೌಡ,…

ನಂಜನಗೂಡು ಚಾಮುಂಡೇಶ್ವರಿ ದೇಗುಲದಲ್ಲಿ ಭಕ್ತ ಸಾಗರ
ಮೈಸೂರು

ನಂಜನಗೂಡು ಚಾಮುಂಡೇಶ್ವರಿ ದೇಗುಲದಲ್ಲಿ ಭಕ್ತ ಸಾಗರ

July 21, 2018

ನಂಜನಗೂಡು:  ಕಪಿಲಾ ನದಿ ದಡದಲ್ಲಿರುವ ಶ್ರೀ ಚಾಮುಂಡೇಶ್ವರಿ ಅಮ್ಮನವರ ದರ್ಶನಕ್ಕೆ ಅಷಾಡ ಪ್ರಥಮ ಶುಕ್ರವಾರವಾದ ಇಂದು ಸಾವಿರಾರು ಭಕ್ತಾದಿಗಳು ಸರದಿಯಲ್ಲಿ ಆಗಮಿಸಿ ದರ್ಶನ ಮಾಡಿ ಪುನೀತರಾದರು. ಬೆಳಿಗ್ಗೆಯಿಂದಲೇ ಹೆಂಗಳೆಯರು ಭಕ್ತಿ ಭಾವದಿಂದ ದೇಗುಲಕ್ಕೆ ಆಗಮಿಸಿದರು. ದೇಗುಲದಲ್ಲಿ ದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಶ್ರೀ ಚಾಮುಂಡೇಶ್ವರಿ ಮೂರ್ತಿಯನ್ನು ವಿಶೇಷವಾಗಿ ಹೂವಿನ ಅಲಂಕಾರ ಮಾಡಲಾಗಿತ್ತು. ಭಕ್ತರು ಹರಕೆ ತೀರಿಸಿದ್ದಲ್ಲದೇ ನಿಂಬೆಹಣ್ಣಿನ ಆರತಿ ಮಾಡಿದರು. ವಿವಿಧ ಸಂಘ ಸಂಸ್ಥೆಗಳು ಮತ್ತು ದೇಗುಲದ ವತಿಯಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಕಬಿನಿ ಜಲಾಶಯ ಭರ್ತಿಯಾದರೂ ನಾಲೆಗೆ ನೀರಿಲ್ಲ ಹುಳಿಮಾವು ರೈತರ ಆರೋಪ
ಮೈಸೂರು

ಕಬಿನಿ ಜಲಾಶಯ ಭರ್ತಿಯಾದರೂ ನಾಲೆಗೆ ನೀರಿಲ್ಲ ಹುಳಿಮಾವು ರೈತರ ಆರೋಪ

July 21, 2018

ಸುತ್ತೂರು: ಮುಂಗಾರು ಮಳೆ ಯಾಗಿ ಕಬಿನಿ ಜಲಾಶಯ ಭರ್ತಿಯಾಗಿದ್ದರೂ ರಾಂಪುರ ನಾಲೆಗೆ ಇನ್ನೂ ನೀರು ಹರಿಸಿಲ್ಲ ಎಂದು ರೈತರು ದೂರಿದ್ದಾರೆ. ವಾಡಿಕೆಯಂತೆ ಭತ್ತದ ಹೈನು ಫಸಲಿಗೆ ಜೂನ್ ತಿಂಗಳಲ್ಲೇ ನಾಲೆಗಳಿಗೆ ನೀರು ಹರಿಸುವ ಪ್ರಯತ್ನ ಮಾಡಿಲ್ಲ ಎಂದು ದೂರಿದ್ದಾರೆ. ನಾಲೆಯ ಕೆಲವು ಕಡೆ ಹೂಳು ಎತ್ತಿಸ ಬೇಕಾಗಿದೆ. ಅದೂ ಕೂಡ ನಡೆದಿಲ್ಲ. ನಂಜನಗೂಡು ತಾಲೂಕಿನ ಹುಳಿಮಾವು ಬಳಿ ಹಾದು ಹೋಗಿರುವ ರಾಂಪುರ ನಾಲೆಯಲ್ಲಿ ಹೂಳು ತೆಗೆದಿಲ್ಲ. ನೀರು ಜಮೀನು ಗಳಿಗೆ ತಲುಪದ ಸ್ಥಿತಿಯಿದೆ. ಹೂಳು ತೆಗೆಸಲು ಸಂಬಂಧಪಟ್ಟ…

ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ
ಮೈಸೂರು

ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ

July 21, 2018

ಹನಗೋಡು:  ಸಾಲಬಾಧೆಯಿಂದ ಯುವ ರೈತ ನೊಬ್ಬ ನೇಣು ಬಿಗಿದು ಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಹನಗೋಡು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮುತ್ತಣ್ಣರವರ ಪುತ್ರ ಪ್ರಶಾಂತ್ (29) ಆತ್ಮಹತ್ಯೆ ಮಾಡಿಕೊಂಡ ರೈತ. ಮೃತರಿಗೆ ಪತ್ನಿ, ಒಂದು ಹೆಣ್ಣು ಮಗು ಇದೆ. ಘಟನೆ ವಿವರ: ಮುತ್ತಣ್ಣ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಎಲ್ಲರೂ ಒಟ್ಟಿಗೆ ವಾಸವಿದ್ದರೆನ್ನಲಾಗಿದೆ. ಇರುವ ಒಟ್ಟು 12 ಎಕರೆ ಜಮೀನಿನಲ್ಲಿ ಶುಂಠಿ, ಬಾಳೆ ಬೆಳೆ ಬೆಳೆದಿದ್ದು, ಶುಂಠಿ ಬೆಳೆ ಕಳೆದ ವರ್ಷ ಕೈಕೊಟ್ಟಿತ್ತು, ಈ ಬಾರಿ…

1 1,477 1,478 1,479 1,480 1,481 1,611
Translate »