ಮೈಸೂರು

ದೊಡ್ಡೇಬಾಗಿಲು ಗ್ರಾ.ಪಂ ಉಪಾಧ್ಯಕ್ಷರಾಗಿ ಶ್ರೀನಿವಾಸಮೂರ್ತಿ
ಮೈಸೂರು

ದೊಡ್ಡೇಬಾಗಿಲು ಗ್ರಾ.ಪಂ ಉಪಾಧ್ಯಕ್ಷರಾಗಿ ಶ್ರೀನಿವಾಸಮೂರ್ತಿ

July 21, 2018

ತಿ.ನರಸೀಪುರ:  ತಾಲೂಕಿನ ದೊಡ್ಡೇಬಾಗಿಲು ಗ್ರಾಮ ಪಂಚಾ ಯಿತಿ ಉಪಾಧ್ಯಕ್ಷರಾಗಿ ಶ್ರೀನಿವಾಸಮೂರ್ತಿ ಅವಿರೋಧವಾಗಿ ಆಯ್ಕೆಯಾದರು. ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಹಿಂದಿನ ಉಪಾಧ್ಯಕ್ಷೆ ಮಂಜುಳ ಷಡಕ್ಷರಿ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ನೂತನ ಉಪಾಧ್ಯಕ್ಷರ ಆಯ್ಕೆಗೆ ಶುಕ್ರವಾರ ಚುನಾವಣೆ ನಡೆಯಿತು. ಸಾಮಾನ್ಯಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀನಿವಾಸಮೂರ್ತಿ ಅವರೊಬ್ಬರೇ ನಾಮಪತ್ರವನ್ನು ಸಲ್ಲಿಸಿದ್ದ ರಿಂದ ಅವಿರೋಧ ಆಯ್ಕೆಗೊಂಡರು. 21 ಗ್ರಾ.ಪಂ ಸದಸ್ಯರಲ್ಲಿ 20 ಮಂದಿ ಸಭೆಗೆ ಹಾಜರಾಗಿ ನೂತನ ಉಪಾಧ್ಯಕ್ಷರ ಆಯ್ಕೆಗೆ ಅನುಮೋದನೆ ನೀಡಿದರು. ಚುನಾವಣಾಧಿಕಾರಿಯಾಗಿ ಸಿಡಿಪಿಓ ಬಿ.ಎನ್.ಬಸವರಾಜು, ಸಹಾಯಕ ಚುನಾವಣಾಧಿಕಾರಿಯಾಗಿ ಪಿಡಿಓ…

ಮಹಿಳಾ ಸಾಧಕರ ವಿಚಾರದಲ್ಲಿ ಮಹಿಳೆಯರಿಗೆ ನಿರಾಸಕ್ತಿ
ಮೈಸೂರು

ಮಹಿಳಾ ಸಾಧಕರ ವಿಚಾರದಲ್ಲಿ ಮಹಿಳೆಯರಿಗೆ ನಿರಾಸಕ್ತಿ

July 21, 2018

ಮೈಸೂರು: ಸ್ವಾತಂತ್ರ್ಯ ಬಂದ ನಂತರ ಮಹಿಳೆಯರ ಸಾಮಾಜಿಕ ಸ್ಥಿತಿ-ಗತಿಗಳು ಸಾಕಷ್ಟು ಸುಧಾರಿಸಿದೆ. ಆದರೆ, ಮಹಿಳಾ ಸಾಧಕರ ಕಾರ್ಯಕ್ರಮಗಳಿಗೆ ಮಹಿಳೆಯರೇ ಹೆಚ್ಚು ಭಾಗವಹಿಸುತ್ತಿಲ್ಲ ಎಂದು ಕಾದಂಬರಿಗಾರ್ತಿ ಮಂಗಳಾ ಸತ್ಯನ್ ಬೇಸರ ವ್ಯಕ್ತಪಡಿಸಿದರು. ಮೈಸೂರು ಅರಮನೆ ಉತ್ತರ ದ್ವಾರದಲ್ಲಿರುವ ಕಸಾಪ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಸಾಹಿತ್ಯ ಕಲಾ ಕೂಟದ ಸಹಯೋಗದೊಂದಿಗೆ `ಸಾಹಿತ್ಯ ಸಂಜೆ’ ಶೀರ್ಷಿಕೆಯಡಿ ಆಯೋಜಿಸಿದ್ದ `ಕಾದಂಬರಿಗಾರ್ತಿ ತ್ರಿವೇಣಿ ಬದುಕು-ಬರಹ’ ವಿಚಾರ ಸಂಕಿರಣವನ್ನು ಉದ್ಘಾಟಿಸಿ, ಅವರು ಮಾತನಾಡಿದರು. ತ್ರಿವೇಣಿ ಅವರ ಬದುಕು-ಬರಹದ ಬಗ್ಗೆ ವಿಚಾರ…

ಹಾಸ್ಟೆಲ್‍ನಲ್ಲಿ ಬ್ಯಾಟರಿ, ಯುಪಿಎಸ್ ಕದ್ದ ಖದೀಮನ ಬಂಧನ
ಮೈಸೂರು

ಹಾಸ್ಟೆಲ್‍ನಲ್ಲಿ ಬ್ಯಾಟರಿ, ಯುಪಿಎಸ್ ಕದ್ದ ಖದೀಮನ ಬಂಧನ

July 21, 2018

ಮೈಸೂರು: ವಿದ್ಯಾರ್ಥಿನಿಲಯದ ಯುಪಿಎಸ್ ಮತ್ತು ಬ್ಯಾಟರಿ ಕಳವು ಮಾಡಿದ್ದ ಖದೀಮನನ್ನು ಆಲನಹಳ್ಳಿ ಪೊಲೀಸರು ಬಂಧಿಸಿ, 10 ಸಾವಿರ ರೂ. ಮೌಲ್ಯದ ಬ್ಯಾಟರಿ, ಯುಪಿಎಸ್ ವಶಪಡಿಸಿಕೊಂಡಿದ್ದಾರೆ. ಮೈಸೂರು ಗೌಸಿಯಾನಗರದ ಫಾರಂ ಕಾಲೋನಿ ನಿವಾಸಿ ಇಮ್ರಾನ್ @ ಟಮಾಟೋ ಬಿನ್ ರಬ್ಬಾನಿ(23) ಬಂಧಿತ ಆರೋಪಿ. ಈತ ಜು.12ರಂದು ಸರ್ದಾರ್ ವಲ್ಲಭ ಬಾಯ್ ಪಟೇಲ್ ನಗರದ ವಿದ್ಯಾರ್ಥಿನಿಲಯದಲ್ಲಿ ಯುಪಿಎಸ್ ಮತ್ತು ಬ್ಯಾಟರಿಗಳನ್ನು ಕಳವು ಮಾಡಿದ್ದ. ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿತ್ತು. ತನಿಖೆ ಕೈಗೊಂಡ ಆಲನಹಳ್ಳಿ ಪೊಲೀಸರು,…

ಆಷಾಢ ಶುಕ್ರವಾರ: ಚಾಮುಂಡಿಬೆಟ್ಟದಲ್ಲಿ ವಿಶೇಷ ವ್ಯವಸ್ಥೆ
ಮೈಸೂರು

ಆಷಾಢ ಶುಕ್ರವಾರ: ಚಾಮುಂಡಿಬೆಟ್ಟದಲ್ಲಿ ವಿಶೇಷ ವ್ಯವಸ್ಥೆ

July 20, 2018

 ಚಾಮುಂಡೇಶ್ವರಿ ದರ್ಶನಕ್ಕೆ ಭಕ್ತ ಸಾಗರ ನಿರೀಕ್ಷೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮೈಸೂರು: ಆಷಾಢ ಮಾಸದ ಮೊದಲ ಶುಕ್ರವಾರ ನಾಳೆ(ಜು.20) ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾ ಲಯದಲ್ಲಿ ನಡೆಯುವ ವಿಶೇಷ ಪೂಜೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಅಪಾರ ಸಂಖ್ಯೆಯ ಭಕ್ತರು ಬೆಟ್ಟಕ್ಕೆ ದೇವಿ ದರ್ಶನಕ್ಕೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಪ್ರತ್ಯೇಕ ನಾಲ್ಕು ಸಾಲುಗಳು: ದೇವಾಲಯ ಪ್ರವೇಶಿಸಲು ನಾಲ್ಕು ಸಾಲುಗಳ ವ್ಯವಸ್ಥೆ ಮಾಡಲಾ ಗಿದೆ. ಧರ್ಮ ದರ್ಶನ, 50 ರೂ. ಟಿಕೆಟ್ ಪಡೆದ ವರಿಗೆ, 300 ರೂ.ಗಳ ಅಭಿಷೇಕದ…

ಉಡುಪಿಯ ಶಿರೂರು ಶ್ರೀಗಳು ವಿಧಿವಶ
ಮೈಸೂರು

ಉಡುಪಿಯ ಶಿರೂರು ಶ್ರೀಗಳು ವಿಧಿವಶ

July 20, 2018

 ದೇಹದಲ್ಲಿ ವಿಷಕಾರಿ ಅಂಶ ಪತ್ತೆ ಪೊಲೀಸರಿಂದ ತನಿಖೆ ಆರಂಭ ಮಠ ಮೂರು ದಿನ ಪೊಲೀಸರ ವಶಕ್ಕೆ  ಸಾರ್ವಜನಿಕರಿಗೆ ಪ್ರವೇಶಕ್ಕೆ ನಿರ್ಬಂಧ  ಮೂಲ ಮಠದಲ್ಲಿ ಶ್ರೀಗಳ ಅಂತ್ಯಕ್ರಿಯೆ  ಮೂವರು ಶ್ರೀಗಳಿಂದ ಅಂತಿಮ ದರ್ಶನ ಅಂತಿಮ ದರ್ಶನಕ್ಕೆ ಪೇಜಾವರ ಶ್ರೀಗಳ ನಕಾರ ಉಡುಪಿ:  ಉಡುಪಿ ಅಷ್ಟ ಮಠಗಳಲ್ಲಿ ಒಂದಾದ ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರು ಅನಾರೋಗ್ಯದಿಂದ ಇಂದು ವಿಧಿವಶರಾದರು. ಹಠಾತ್ತನೇ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಬುಧವಾರ ಮಣಿಪಾಲದ ಕಸ್ತೂರಿಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶ್ರೀಗಳ ಹೊಟ್ಟೆಯಲ್ಲಿ ತೀವ್ರ ರಕ್ತಸ್ರಾವವಾಗಿದ್ದು,…

ಆನ್‍ಲೈನ್ ಮೂಲಕ ಮೈಸೂರು  ವಿವಿ ಹಾಸ್ಟೆಲ್‍ಗಳಿಗೆ ಪ್ರವೇಶ
ಮೈಸೂರು

ಆನ್‍ಲೈನ್ ಮೂಲಕ ಮೈಸೂರು  ವಿವಿ ಹಾಸ್ಟೆಲ್‍ಗಳಿಗೆ ಪ್ರವೇಶ

July 20, 2018

ಮೈಸೂರು: ಪದವಿ ಹಾಗೂ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿನಿಲಯಗಳ ಪ್ರವೇಶಾತಿಗೆ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಆನ್‍ಲೈನ್ ಪ್ರಕ್ರಿಯೆ ಮೂಲಕ ನಿರ್ವಹಿಸಲು ಮೈಸೂರು ವಿಶ್ವವಿದ್ಯಾನಿಲಯ ಮುಂದಾಗಿದೆ. ಮೈಸೂರು ವಿವಿಯ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕ ಡಾ.ಕೆ.ಬಿ.ಪ್ರವೀಣ್ ಗುರುವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ವಿವಿ ವ್ಯಾಪ್ತಿಯಲ್ಲಿ ಮಂಡ್ಯ, ಹಾಸನ ಸೇರಿದಂತೆ ಒಟ್ಟು 20 ವಿದ್ಯಾರ್ಥಿನಿಲಯಗಳಿದ್ದು, 1.20 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಇವರು ಈ ಸಾಲಿನಿಂದ ಆನ್‍ಲೈನ್‍ನಲ್ಲಿ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಸಲ್ಲಿಸಬೇಕು. ದ್ವಿತೀಯ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಜು.20ರಿಂದ…

ಮೈಸೂರು ಡಿಸಿ ನೇರ ಫೋನ್ ಇನ್; 16 ದೂರು ದಾಖಲು
ಮೈಸೂರು

ಮೈಸೂರು ಡಿಸಿ ನೇರ ಫೋನ್ ಇನ್; 16 ದೂರು ದಾಖಲು

July 20, 2018

ಸ್ಮಶಾನವಿಲ್ಲ, ಬೀದಿನಾಯಿ ಕಾಟ ತಪ್ಪಿಸಿ, ಗ್ರಾಪಂ ಕಟ್ಟಡ ಸರಿ ಮಾಡಿ, ಕೆರೆ, ಆಟದ ಮೈದಾನ ಒತ್ತುವರಿ ತೆರವು ಮಾಡಿಸಿ… ಮೈಸೂರು:  ಐದು ತಿಂಗಳ ಬಳಿಕ ಗುರುವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕ ಕುಂದುಕೊರತೆಗಳನ್ನು ಒಳಗೊಂಡು ಫೋನ್ ಇನ್ ಕಾರ್ಯಕ್ರಮದಲ್ಲಿ ಸ್ಮಶಾನವಿಲ್ಲ.. ಬೀದಿ ನಾಯಿ ಕಾಟ, ಗ್ರಾಪಂ ಕಟ್ಟಡ ಶಿಥಿಲ, ಕೆರೆ ಮತ್ತು ಆಟದ ಮೈದಾನಗಳ ಒತ್ತುವರಿ ಸೇರಿದಂತೆ ಒಟ್ಟು 16 ದೂರುಗಳು ಕೇಳಿಬಂದವು. ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅಧ್ಯಕ್ಷತೆಯಲ್ಲಿ ಜಿಪಂ ಸಿಇಓ ಪಿ.ಶಿವಶಂಕರ್, ಅಪರ ಜಿಲ್ಲಾಧಿಕಾರಿ…

ಎಸ್‍ಸಿ, ಎಸ್‍ಟಿ ನೌಕರರ ಬಡ್ತಿ ಮೀಸಲಾತಿ ಸಂಬಂಧಿತ ಕಾಯ್ದೆ ಅನುಷ್ಠಾನಕ್ಕೆ ಆಗ್ರಹಿಸಿ ಮೈಸೂರಲ್ಲಿ ಭಾರೀ ಪ್ರತಿಭಟನೆ
ಮೈಸೂರು

ಎಸ್‍ಸಿ, ಎಸ್‍ಟಿ ನೌಕರರ ಬಡ್ತಿ ಮೀಸಲಾತಿ ಸಂಬಂಧಿತ ಕಾಯ್ದೆ ಅನುಷ್ಠಾನಕ್ಕೆ ಆಗ್ರಹಿಸಿ ಮೈಸೂರಲ್ಲಿ ಭಾರೀ ಪ್ರತಿಭಟನೆ

July 20, 2018

ಮೈಸೂರು: ಪರಿಶಿಷ್ಟ ಜಾತಿ ಮತ್ತು ಪಂಗಡದ ಸರ್ಕಾರಿ ಅಧಿಕಾರಿ ಹಾಗೂ ನೌಕರರ ಬಡ್ತಿ ಹಾಗೂ ಜೇಷ್ಠತೆ ಸಂರಕ್ಷಿಸುವ ಕಾಯ್ದೆ ಅನುಷ್ಠಾನಕ್ಕೆ ಆಗ್ರಹಿಸಿ ಮೈಸೂರಿನಲ್ಲಿ ಗುರುವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಎಸ್‍ಸಿ-ಎಸ್‍ಟಿ ಅಧಿಕಾರಿಗಳ ಹಾಗೂ ನೌಕರರ ಬಡ್ತಿ, ಜೇಷ್ಠತೆ ಸಂರಕ್ಷಿಸುವ ಕಾಯ್ದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದರೂ ರಾಜ್ಯ ಮೈತ್ರಿ ಸರ್ಕಾರ ಕಾಯ್ದೆ ಅನುಷ್ಠಾನಗೊಳಿಸದೇ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಬಡ್ತಿ ಮೀಸಲಾತಿ ಎಸ್‍ಸಿ-ಎಸ್‍ಟಿ ಹಿತರಕ್ಷಣಾ ಸಮಿತಿಯ ಮೈಸೂರು ವಿಭಾಗದ ನೇತೃತ್ವದಲ್ಲಿ ರಾಜ್ಯ ಸರ್ಕಾರಿ…

ಮೈಸೂರಲ್ಲಿ ಚಿನ್ನಾಭರಣ ದೋಚಿದ್ದ ಪ್ರಕರಣ ತುಮಕೂರಲ್ಲಿ ಬಂಧಿತ ಖದೀಮರ ಗುರುತಿಸಿದ  ಆಭರಣ ಕಳೆದುಕೊಂಡ ಮಹಿಳೆ
ಮೈಸೂರು

ಮೈಸೂರಲ್ಲಿ ಚಿನ್ನಾಭರಣ ದೋಚಿದ್ದ ಪ್ರಕರಣ ತುಮಕೂರಲ್ಲಿ ಬಂಧಿತ ಖದೀಮರ ಗುರುತಿಸಿದ ಆಭರಣ ಕಳೆದುಕೊಂಡ ಮಹಿಳೆ

July 20, 2018

ಮೈಸೂರು: ಪಾಲಿಕೆ ಅಧಿಕಾರಿಗಳ ಸೋಗಿನಲ್ಲಿ ಮನೆ ಅಳತೆ ಮಾಡುವ ನಾಟಕವಾಡಿ ಒಂಟಿ ಮಹಿಳೆ ಇದ್ದ ಮನೆಯಲ್ಲಿ ಚಿನ್ನಾಭರಣ ದೋಚಿದ್ದ ಮೂವರು ಖದೀಮರನ್ನು ತುಮಕೂರು ತಿಲಕ್‍ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ವಿಚಾರಣೆ ಮಾಡಿದಾಗ ಅವರು ಮೈಸೂರಿನ ಕುವೆಂಪು ನಗರ ‘ಎನ್’ ಬ್ಲಾಕ್‍ನಲ್ಲಿರುವ ಕೆ.ಜೆ.ಲೀಲಾವತಿ ಎಂಬುವರ ಮನೆಯಲ್ಲಿ ಕಾರ್ಪೊರೇಷನ್ ಅಧಿಕಾರಿಗಳೆಂದು ಹೇಳಿಕೊಂಡು ಮನೆ ಅಳತೆ ಮಾಡುವ ನೆಪದಲ್ಲಿ ಲಕ್ಷಾಂತರ ರೂ. ಬೆಲೆಯ ಚಿನ್ನಾಭರಣ ದೋಚಿದ್ದ ವಿಚಾರ ಬಾಯ್ಬಿಟ್ಟಿದ್ದರು. ತುಮಕೂರು ಪೊಲೀಸರು ಆರೋಪಿಗಳ ಫೋಟೋ ತೆಗೆದುಕೊಂಡು ಬುಧವಾರ ಮೈಸೂರಿಗೆ ಬಂದು…

ಜು.22ರಂದು ಎವಿಎಸ್‍ಎಸ್  ಸಹಕಾರ ಸಂಘದ ವಾರ್ಷಿಕೋತ್ಸವ
ಮೈಸೂರು

ಜು.22ರಂದು ಎವಿಎಸ್‍ಎಸ್  ಸಹಕಾರ ಸಂಘದ ವಾರ್ಷಿಕೋತ್ಸವ

July 20, 2018

ಮೈಸೂರು: ಅಂಬೇಡ್ಕರ್ ವಿವಿಧೋದ್ದೇಶ ಸೇವಾ ಸಂಸ್ಥೆ, ಸಹಕಾರ ಸಂಘದ ವಾರ್ಷಿಕೋತ್ಸವದ ಅಂಗವಾಗಿ ಸಂಸ್ಥೆಯ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಜು.22ರಂದು ಬೆಳಿಗ್ಗೆ ಕಲಾಮಂದಿರದಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದಾರೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ತುಂಬಲ ರಾಮಣ್ಣ ತಿಳಿಸಿದರು. ಸಹಕಾರ ಸಂಘದ ಸದಸ್ಯತ್ವ ಅಭಿಯಾನಕ್ಕೆ ಸಂಸದ ಆರ್.ಧ್ರುವನಾರಾಯಣ್, ಅಂತರ್ಜಾಲಕ್ಕೆ ಶಾಸಕ ಸತೀಶ್ ಜಾರಕಿಹೊಳಿ ಚಲನೆ ನೀಡುವರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಅಧ್ಯಕ್ಷತೆ ವಹಿಸುವರು. ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಪ್ರತಿಭಾ…

1 1,478 1,479 1,480 1,481 1,482 1,611
Translate »