ಮೈಸೂರು

ಹಣಕ್ಕಾಗಿ ಲಾರಿ ತಡೆದು ಬ್ಲಾಕ್‍ಮೇಲ್; ಆರೋಪ
ಮೈಸೂರು

ಹಣಕ್ಕಾಗಿ ಲಾರಿ ತಡೆದು ಬ್ಲಾಕ್‍ಮೇಲ್; ಆರೋಪ

July 20, 2018

ಮೈಸೂರು: ಕನ್ನಡ ಸಂಘಟನೆಯೊಂದರ ಅಧ್ಯಕ್ಷರೊಬ್ಬರು ತಮ್ಮ ಲಾರಿಯನ್ನು ಬಲವಂತವಾಗಿ ಕೊಂಡೊಯ್ದು ಅದನ್ನು ಮರಳು ಗುಡ್ಡೆ ಬಳಿ ನಿಲ್ಲಿಸಿ ಛಾಯಾಚಿತ್ರ ತೆಗೆದು, ಬಳಿಕ ಹಣಕ್ಕಾಗಿ ಬ್ಲಾಕ್‍ಮೇಲ್ ಮಾಡಿದ್ದಲ್ಲದೆ ನೀಡದಿದ್ದಾಗ ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿ ತಮ್ಮ ವಿರುದ್ಧ ಪ್ರಕರಣ ದಾಖಲಾಗುವಂತೆ ಮಾಡಿದ್ದಾರೆಂದು ಪಾಂಡವಪುರ ತಾಲೂಕು ಹೊಸ ಯರಗನಹಳ್ಳಿಯ ಎಚ್.ಎನ್. ಪ್ರದೀಪ್ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ದೂರಿದ್ದಾರೆ. ಜು.10ರಂದು ನಮ್ಮ ಲಾರಿ ಕೆ.ಆರ್.ನಗರ ಸಮೀಪದ ಮುಳ್ಳೂರು ಗ್ರಾಮದಲ್ಲಿ ಎಂ.ಸ್ಯಾಂಡ್ ಸಾಗಿಸುವಂತೆ ಕೇಳಿದರು. ಲಾರಿ ಚಾಲಕ ಇದಕ್ಕೆ ಒಪ್ಪದಿದ್ದಾಗ…

ಇಬ್ಬರು ಅಂತರ ರಾಜ್ಯ ಕಳ್ಳರ ಬಂಧನ 8 ಲಕ್ಷ ರೂ. ಬೆಲೆಯ ದ್ವಿಚಕ್ರ ವಾಹನ ವಶ
ಮೈಸೂರು

ಇಬ್ಬರು ಅಂತರ ರಾಜ್ಯ ಕಳ್ಳರ ಬಂಧನ 8 ಲಕ್ಷ ರೂ. ಬೆಲೆಯ ದ್ವಿಚಕ್ರ ವಾಹನ ವಶ

July 20, 2018

ಮೈಸೂರು:  ಇಬ್ಬರು ಅಂತರರಾಜ್ಯ ಕಳ್ಳರನ್ನು ಬಂಧಿಸಿರುವ ಎನ್.ಆರ್.ಠಾಣೆ ಪೊಲೀಸರು 8 ಲಕ್ಷ ರೂ. ಮೌಲ್ಯದ 7 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ವೈನಾಡಿನ ಮಾನಂದವಾಡಿ ನಿವಾಸಿಗಳಾದ ಸರ್ಫುದ್ದೀನ್(19) ಹಾಗೂ ವಿಷ್ಣು(19) ಬಂಧಿತರು. ಅವರಿಂದ 7 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳವು ಮಾಡಿದ್ದ ವಾಹನಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದಾಗ ಖದೀಮರು ಸಿಕ್ಕಿ ಬಿದ್ದರು. ಮೈಸೂರಿನ ಮಂಡಿ ಮೊಹಲ್ಲಾ ಲಷ್ಕರ ಮೊಹಲ್ಲಾ ಹಾಗೂ ಸುತ್ತಮುತ್ತಲಲ್ಲಿ ಬೈಕ್‍ಗಳನ್ನು ಕಳವು ಮಾಡಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿತು….

ಬ್ಲಾಕ್ ಮೇಲ್ ತಂತ್ರದ ಲಾರಿ ಮುಷ್ಕರಕ್ಕೆ ನಮ್ಮ ಬೆಂಬಲವಿಲ್ಲ ಮೈಸೂರು ಡಿಸ್ಟ್ರಿಕ್ಟ್ ಟ್ರಕ್ಕರ್ಸ್ ಅಸೋಷಿಯೇಷನ್ ಸ್ಪಷ್ಟನೆ
ಮೈಸೂರು

ಬ್ಲಾಕ್ ಮೇಲ್ ತಂತ್ರದ ಲಾರಿ ಮುಷ್ಕರಕ್ಕೆ ನಮ್ಮ ಬೆಂಬಲವಿಲ್ಲ ಮೈಸೂರು ಡಿಸ್ಟ್ರಿಕ್ಟ್ ಟ್ರಕ್ಕರ್ಸ್ ಅಸೋಷಿಯೇಷನ್ ಸ್ಪಷ್ಟನೆ

July 20, 2018

ಮೈಸೂರು:  ಅಖಿಲ ಭಾರತ ಮೋಟಾರ್ ಟ್ರಾನ್ಸ್‍ಪೋರ್ಟ್ ಕಾಂಗ್ರೆಸ್ ಜು.20ರ ಶುಕ್ರವಾರದಿಂದ ದೇಶಾದ್ಯಂತ ಕರೆ ನೀಡಿರುವ ಅನಿರ್ಧಿಷ್ಟ ಅವಧಿಯ ಲಾರಿ ಮುಷ್ಕರಕ್ಕೆ ನಮ್ಮ ಬೆಂಬಲ ಇಲ್ಲ. ನಮ್ಮ ಲಾರಿಗಳು ಎಂದಿನಂತೆ ಸಂಚರಿಸುತ್ತವೆ ಎಂದು ಮೈಸೂರು ಡಿಸ್ಟ್ರಿಕ್ ಟ್ರಕ್ಕರ್ಸ್ ಅಸೋಸಿಯೇಷನ್ ತಿಳಿಸಿದೆ. ಸಂಘದ ಮೈಸೂರು ಜಿಲ್ಲಾಧ್ಯಕ್ಷ ಎನ್.ಶ್ರೀನಿವಾಸರಾವ್ ಗುರುವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಜೊತೆಗೆ ಬೆಂಗಳೂರು ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಷನ್, ನವದೆಹಲಿ ಆಲ್ ಇಂಡಿಯನ್ ಕಾನ್ಫಿಡರೇಷನ್ ಆಫ್ ಗೂಡ್ಸ್…

ಇಂದು ಮೈಸೂರು ವಿವಿ ಕೆ-ಸೆಟ್ ಫಲಿತಾಂಶ: ಪರೀಕ್ಷೆಗೆ ಹಾಜರಾಗಿದ್ದವರು 63,068 ಮಂದಿ, ಸಹಾಯಕ ಪ್ರಾಧ್ಯಾಪಕರಾಗಲು ಅರ್ಹರು 4,295 ಜನ
ಮೈಸೂರು

ಇಂದು ಮೈಸೂರು ವಿವಿ ಕೆ-ಸೆಟ್ ಫಲಿತಾಂಶ: ಪರೀಕ್ಷೆಗೆ ಹಾಜರಾಗಿದ್ದವರು 63,068 ಮಂದಿ, ಸಹಾಯಕ ಪ್ರಾಧ್ಯಾಪಕರಾಗಲು ಅರ್ಹರು 4,295 ಜನ

July 20, 2018

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ 2017ರ ಡಿ.31ರಂದು ನಡೆಸಿದ್ದ ಕೆ-ಸೆಟ್ (ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ) ಪರೀಕ್ಷೆ ಫಲಿತಾಂಶ ಮೈಸೂರು ವಿವಿಯ ಕೆ-ಸೆಟ್ ಕೇಂದ್ರದ ವೆಬ್‍ಸೈಟ್‍ನಲ್ಲಿ ನಾಳೆ (ಶುಕ್ರವಾರ) ಪ್ರಕಟಗೊಳ್ಳಲಿದೆ. ಪರೀಕ್ಷೆ ಬರೆಯಲು ನೋಂದಾಯಿಸಿದ್ದ 73,608 ಅಭ್ಯರ್ಥಿಗಳ ಪೈಕಿ 63,068 ಮಂದಿ ಪರೀಕ್ಷೆ ಎದುರಿಸಿದ್ದರು. ಇವರಲ್ಲಿ 4,295 ಅಭ್ಯರ್ಥಿಗಳು ಸಹಾಯಕ ಪ್ರಾಧ್ಯಾಪಕರಾಗಲು ಅರ್ಹತೆ ಗಳಿಸಿದ್ದಾರೆ. ಮೈಸೂರು ವಿವಿ ಕ್ರಾಫರ್ಡ್ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮೈಸೂರು ವಿವಿ ಹಂಗಾಮಿ ಕುಲಪತಿಗಳೂ ಆದ ವಿವಿಯ ಕೆ-ಸೆಟ್…

ವಸತಿ, ವಾಣಿಜ್ಯ ಕಟ್ಟಡಗಳ ನಕ್ಷೆ ಅನುಮೋದನೆಗೆ ಸರಳ ವಿಧಾನ
ಮೈಸೂರು

ವಸತಿ, ವಾಣಿಜ್ಯ ಕಟ್ಟಡಗಳ ನಕ್ಷೆ ಅನುಮೋದನೆಗೆ ಸರಳ ವಿಧಾನ

July 20, 2018

ಏಕಗವಾಕ್ಷಿ ಇಲ್ಲವೇ ಆನ್‍ಲೈನ್ ಮೂಲಕ 30 ದಿನದಲ್ಲಿ ಅನುಮತಿ  ಸಂಬಂಧಪಟ್ಟ ದಾಖಲಾತಿಗಳ ಒದಗಿಸಬೇಕಷ್ಟೆ 30×40 ನಿವೇಶನಕ್ಕೆ ತಕ್ಷಣ ಅನುಮತಿ; 40×60ಕ್ಕೆ ನಂತರ ವಿಸ್ತರಣೆ ರೇರಾ ಜಾರಿ ನಂತರ 924 ನಿರ್ಮಾಣ ಸಂಸ್ಥೆ ಕಪ್ಪು ಪಟ್ಟಿಗೆ ಸೇರ್ಪಡೆ ಬೆಂಗಳೂರು: ವಸತಿ ಹಾಗೂ ವಾಣಿಜ್ಯ ಕಟ್ಟಡಗಳ ನಕ್ಷೆಯೊಂದಿಗೆ ಮನೆಯಿಂದಲೇ ಅರ್ಜಿ ಸಲ್ಲಿಸಿ ಅನುಮತಿ ಪಡೆಯುವ ಮಹತ್ವ ಯೋಜನೆಯನ್ನು ಸರ್ಕಾರ ಅನುಷ್ಠಾನಕ್ಕೆ ತಂದಿದೆ. ಇದರೊಂದಿಗೆ ಬಡಾವಣೆ ಹಾಗೂ ವಸತಿ ಸಮುಚ್ಛಯ ನಿರ್ಮಿಸಿಕೊಡುವ ಹೆಸರಿ ನಲ್ಲಿ ಗ್ರಾಹಕರನ್ನು ವಂಚಿಸುತ್ತಿದ್ದ 924 ನಿರ್ಮಾಣ ಸಂಸ್ಥೆಗಳನ್ನು…

ಮೈಸೂರಲ್ಲಿ ಗಾಂಜಾ ಸಾಗಿಸುತ್ತಿದ್ದ ಮಂಗಳೂರಿನ ಇಬ್ಬರ ಸೆರೆ
ಮೈಸೂರು

ಮೈಸೂರಲ್ಲಿ ಗಾಂಜಾ ಸಾಗಿಸುತ್ತಿದ್ದ ಮಂಗಳೂರಿನ ಇಬ್ಬರ ಸೆರೆ

July 20, 2018

ಮೈಸೂರು: ಗಾಂಜಾ ಸಾಗಿಸುತ್ತಿದ್ದ ಮಂಗಳೂರಿನ ಇಬ್ಬರನ್ನು ಮೈಸೂರಿನ ಆಲನಹಳ್ಳಿ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಪ್ರವೀಣ್ ಪೂಜಾರಿ ಮತ್ತು ಗಿರೀಶ್ ಬಂಧಿತ ಆರೋಪಿಗಳಾಗಿದ್ದು, ಅವರಿಂದ 700 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಬುಧವಾರ ಬೆಳಿಗ್ಗೆ 8 ಗಂಟೆಗೆ ರೆನಾಲ್ಟ್ ಡಸ್ಟರ್ (ಕೆಎ19, ಎಂಸಿ 7183) ಕಾರಿನಲ್ಲಿ ಮಂಗಳೂರಿನಿಂದ ಮೈಸೂರಿಗೆ ಬಂದಿದ್ದ ಪ್ರವೀಣ್ ಪೂಜಾರಿ, ಗಿರೀಶ್ ಹಾಗೂ ರೋಹಿತ್ ಎಂಬುವರು, ಮೈಸೂರಿನಲ್ಲಿ ವ್ಯಕ್ತಿಯೊಬ್ಬರಿಂದ 12,000 ರೂ. ಕೊಟ್ಟು 700 ಗ್ರಾಂ ಗಾಂಜಾ ಖರೀದಿಸಿದ್ದರು. ಖಚಿತ ಮಾಹಿತಿ ಆಧರಿಸಿ ಮಫ್ತಿಯಲ್ಲಿ ಬೈಕ್‍ಗಳ…

ಇಂದು ಶಿಕ್ಷಕರ ಕೌನ್ಸಿಲಿಂಗ್
ಮೈಸೂರು

ಇಂದು ಶಿಕ್ಷಕರ ಕೌನ್ಸಿಲಿಂಗ್

July 20, 2018

ಮೈಸೂರು: ಇತ್ತೀಚೆಗೆ ನಡೆದ ಸಿಆರ್‍ಪಿ, ಬಿಆರ್‍ಪಿ (ಪ್ರಾಥಮಿಕ ಮತ್ತು ಪ್ರೌಢ), ಇಸಿಒ (ಪ್ರಾಥಮಿಕ ಮತ್ತು ಪ್ರೌಢ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅರ್ಹತೆ ಗಳಿಸಿ ಆಯ್ಕೆ ಪಟ್ಟಿಯಲ್ಲಿರುವ ಶಿಕ್ಷಕರುಗಳಿಗೆ ನಾಳೆ (ಜು.20) ಬೆಳಿಗ್ಗೆ 10 ಗಂಟೆಗೆ ಡಿ.ಸುಬ್ಬಯ್ಯ ರಸ್ತೆಯಲ್ಲಿರುವ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ ಯಲ್ಲಿ ಕೌನ್ಸಿಲಿಂಗ್ ನಡೆಸಲಾಗುವುದು. ಮಧ್ಯಾಹ್ನ 2.30 ಗಂಟೆಗೆ ಸಿಆರ್‍ಪಿ, ಬಿಆರ್‍ಪಿ (ಪ್ರಾಥಮಿಕ ಮತ್ತು ಪ್ರೌಢ), ಇಸಿಒ (ಪ್ರಾಥಮಿಕ ಮತ್ತು ಪ್ರೌಢ) ಅವರಿಗೆ ಹೊರ ಹೋಗುವ ಕೌನ್ಸಿಲಿಂಗ್ ಹಮ್ಮಿಕೊಳ್ಳಲಾಗಿದೆ. ಅರ್ಹತಾ ಪಟ್ಟಿಯನ್ನು ಆಯಾ…

ದಲಿತ ನೌಕರರ ಕ್ಷೇಮಾಭಿವೃದ್ಧಿ ಸಂಘ ಅಸ್ತಿತ್ವಕ್ಕೆ
ಮೈಸೂರು

ದಲಿತ ನೌಕರರ ಕ್ಷೇಮಾಭಿವೃದ್ಧಿ ಸಂಘ ಅಸ್ತಿತ್ವಕ್ಕೆ

July 20, 2018

ಮೈಸೂರು:  ದಲಿತ ನೌಕರರ ಹಿತ ಕಾಪಾಡುವ ನಿಟ್ಟಿನಲ್ಲಿ ಮೈಸೂರಿನಲ್ಲಿ ರೀಡ್ ಅಂಡ್ ಟೇಲರ್ ದಲಿತ ನೌಕರರ ಕ್ಷೇಮಾಭಿವೃದ್ಧಿ ಸಂಘವನ್ನು ರಚಿಸಲಾಗಿದ್ದು, ದಲಿತರ ಅನಾರೋಗ್ಯ, ನಿವೃತ್ತಿ, ಅಪಘಾತ, ಸಾವು ಸಂಭವಿಸಿದಾಗ ಸಹಾಯ ಹಸ್ತ ಚಾಚುವುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರ ಸೇರಿದಂತೆ ಹಲವಾರು ಉದ್ದೇಶಗಳನ್ನು ಈ ಸಂಘವು ಹೊಂದಿದೆ ಎಂದು ಸಂಘದ ಗೌರವಾಧ್ಯಕ್ಷ ಗೋವಿಂದ ಸ್ವಾಮಿ ತಿಳಿಸಿದರು. ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘವನ್ನು ನೋಂದಣಿಯಾಗಿದ್ದು, ಪದಾಧಿಕಾರಿಗಳಾಗಿ ಎಂ.ರವಿ (ಅಧ್ಯಕ್ಷ), ಜೇಸುದಾಸ್, ನಾಗೇಂದ್ರಮೂರ್ತಿ (ಉಪಾಧ್ಯಕ್ಷರು), ನಾಗೇಂದ್ರ (ಪ್ರಧಾನಕಾರ್ಯ…

ಕೆಆರ್‌ಎಸ್‌ನಲ್ಲಿ ಕಾವೇರಿ ಕಲರ್‍ಫುಲ್ ಕಲರವ
ಮಂಡ್ಯ, ಮೈಸೂರು

ಕೆಆರ್‌ಎಸ್‌ನಲ್ಲಿ ಕಾವೇರಿ ಕಲರ್‍ಫುಲ್ ಕಲರವ

July 19, 2018

ಅಣೆಕಟ್ಟೆಯಿಂದ ಭೋರ್ಗರೆಯುತ್ತಿರುವ ನೀರಿಗೆ ಬಣ್ಣ ಬಣ್ಣದ 500 ಎಲ್‍ಇಡಿ ಬಲ್ಬ್‍ಗಳ ಮೆರಗು ಮೈಸೂರು: ಮೈದುಂಬಿದ ಕಾವೇರಿಗೀಗ ಬಣ್ಣದ ಓಕುಳಿ. ವಿಶ್ವ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಕೃಷ್ಣರಾಜ ಸಾಗರ ಅಣೆ ಕಟ್ಟೆಯ ಸೌಂದರ್ಯವನ್ನು ವೀಕ್ಷಿಸಲು ಈಗ ಎರಡು ಕಣ್ಣು ಸಾಲದು. ಕಾವೇರಿ ಕಣಿವೆಯಲ್ಲಿ ಸಮೃದ್ಧವಾಗಿ ಮಳೆ ಯಾಗಿರುವುದರಿಂದ ನಾಲ್ಕು ವರ್ಷಗಳ ನಂತರ ಇದೀಗ ಕೆಆರ್‌ಎಸ್‌ ಜಲಾಶಯ ತುಂಬಿ ತುಳು ಕುತ್ತಿರುವುದರಿಂದ ಹೆಚ್ಚುವರಿ ನೀರನ್ನು ಹೊರ ಬಿಡುತ್ತಿದ್ದು, ಅಣೆಕಟ್ಟೆ ಬಳಿ ಭೋರ್ಗರೆದು ಹರಿ ಯುತ್ತಿರುವ ಕಾವೇರಿಯ ಪ್ರಕೃತಿ ಸೌಂದರ್ಯ ವನ್ನು…

ಮೈತ್ರಿ ಸರ್ಕಾರದಲ್ಲಿ ಸಿದ್ದರಾಮಯ್ಯ ಪತ್ರಕ್ಕಿಲ್ಲ ಕಿಮ್ಮತ್ತು
ಮೈಸೂರು

ಮೈತ್ರಿ ಸರ್ಕಾರದಲ್ಲಿ ಸಿದ್ದರಾಮಯ್ಯ ಪತ್ರಕ್ಕಿಲ್ಲ ಕಿಮ್ಮತ್ತು

July 19, 2018

ಬೆಂಗಳೂರು: ಸರ್ಕಾರಕ್ಕೆ ಶಿಫಾರಸ್ಸು ಪತ್ರ ಬರೆದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖಭಂಗಕ್ಕೆ ಒಳಗಾಗುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಇಳಿಸದೆ, ಅನ್ನಭಾಗ್ಯ ಯೋಜನೆಯಡಿ ಪ್ರತಿ ಯುನಿಟ್‍ಗೆ ಅಕ್ಕಿ ಪ್ರಮಾಣವನ್ನು ಐದು ಕೆ.ಜಿ.ಗೆ ಬದಲು ಏಳು ಕೆ.ಜಿ.ಗೆ ಹೆಚ್ಚಳ ಮಾಡದೆ, ಈಗ ಸಿದ್ದರಾಮಯ್ಯ ಸರ್ಕಾರ ನೇಮಕ ಮಾಡಿದ್ದ ರಾಜ್ಯದ ಎಲ್ಲ ವಿಶ್ವ ವಿದ್ಯಾಲಯಗಳ ನಾಮನಿರ್ದೇಶಿತ ಸಿಂಡಿ ಕೇಟ್ ಸದಸ್ಯರನ್ನು ಕಿತ್ತೊಗೆದಿದೆ. ಮೈಸೂರು, ಬೆಂಗಳೂರು, ಕರ್ನಾಟಕ ಸೇರಿದಂತೆ ರಾಜ್ಯದ 16 ವಿಶ್ವವಿದ್ಯಾಲಯ ಗಳ ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯರ ನೇಮಕಾತಿ ರದ್ದುಗೊಳಿಸಿ…

1 1,479 1,480 1,481 1,482 1,483 1,611
Translate »