ಮೈಸೂರು

ಗಂಗೋತ್ರಿ ಪಬ್ಲಿಕ್ ಶಾಲಾ ವಿದ್ಯಾರ್ಥಿಗಳಿಂದ ಸಾಧನೆ
ಮೈಸೂರು

ಗಂಗೋತ್ರಿ ಪಬ್ಲಿಕ್ ಶಾಲಾ ವಿದ್ಯಾರ್ಥಿಗಳಿಂದ ಸಾಧನೆ

July 22, 2018

ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆ, ಚದುರಂಗದಲ್ಲಿ ತೃತೀಯ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಮೈಸೂರು:  ಸಾರ್ವಜನಿಕ ಶಿಕ್ಷಣ ಇಲಾಖಾ ವತಿಯಿಂದ ಇತ್ತೀಚೆಗೆ ಮೈಸೂರಿನ ಗುರುಭವನದಲ್ಲಿ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಆ ಸ್ಪರ್ಧೆಯಲ್ಲಿ ವಿವಿಧ ಶಾಲೆಗಳಿಂದ 14 ರಿಂದ 17ನೇ ವಯೋಮಿತಿಯ ಬಾಲಕ ಮತ್ತು ಬಾಲಕಿಯರು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ನಗರದ ಬೋಗಾದಿ ಮುಖ್ಯ ರಸ್ತೆ, ಚರ್ಚ್ ಅಡ್ಡರಸ್ತೆ, ಮಾನಸ ಗಂಗೋತ್ರಿಯಲ್ಲಿರುವ ಗಂಗೋತ್ರಿ ಪ್ರೌಢಶಾಲೆ ಇಬ್ಬರು ವಿದ್ಯಾರ್ಥಿನಿಯರಾದ ದರ್ಶಿನಿ…

ಸುತ್ತೂರು ಜೆಎಸ್‍ಎಸ್ ಹಿರಿಯ ಪ್ರಾಥಮಿಕ ಶಾಲೆಗೆ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ
ಮೈಸೂರು

ಸುತ್ತೂರು ಜೆಎಸ್‍ಎಸ್ ಹಿರಿಯ ಪ್ರಾಥಮಿಕ ಶಾಲೆಗೆ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ

July 22, 2018

ಸುತ್ತೂರು:  ಸುತ್ತೂರು ಜೆಎಸ್‍ಎಸ್ ಶಾಲೆಯಲ್ಲಿ ಬಿಳಿಗೆರೆ ಹೋಬಳಿ ಮಟ್ಟದ ಕ್ರೀಡಾಕೂಟವು ನಡೆಯಿತು. ಕ್ರೀಡಾಕೂಟದಲ್ಲಿ ಜೆಎಸ್‍ಎಸ್ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ 50 ಬಾಲಕಿಯರು, 50 ಬಾಲಕರು ಆಟ ಮೇಲಾಟಗಳಲ್ಲಿ ಭಾಗವಹಿಸಿ ಸಮಗ್ರ ಪ್ರಶಸ್ತಿ ಪಡೆದಿದ್ದಾರೆ. ಬಾಲಕರ ವಿಭಾಗದಲ್ಲಿ ಅಶೋಕ ಪ್ರಭುಗೌಡ 7ನೇ ‘ಸಿ’-400 ಮೀ, 600 ಮೀ.,- ಪ್ರಥಮ, ರಾಹುಲ್ ಮೆಹತೊ 7ನೇ ‘ಬಿ’- ತಟ್ಟೆ ಎಸೆತ, ಗುಂಡು ಎಸೆತ, ಉದ್ದ ಜಿಗಿತ-ಪ್ರಥಮ, ಅಶೊಕ ಪ್ರಭುಗೌಡ ಮತ್ತು ತಂಡ 4ಘಿ100 ಮೀ ರಿಲೇ -ಪ್ರಥಮ ಸ್ಥಾನ ಗಳಿಸಿದ್ದಾರೆ….

ಜೈನ ಮುನಿಗಳಿಗೆ ಆತ್ಮೀಯ ಸ್ವಾಗತ
ಮೈಸೂರು

ಜೈನ ಮುನಿಗಳಿಗೆ ಆತ್ಮೀಯ ಸ್ವಾಗತ

July 22, 2018

ಮೈಸೂರು: ಸ್ಥಾನಕವಾಸಿ ಜೈನ ಸಂಘ ಮತ್ತು ಶ್ರೀ ಸುಮತಿನಾಥ ಜೈನ ಮೂರ್ತಿಪೂಜಕ ಸಂಘದ ಜೈನ ಮುನಿಗಳಾದ ಡಾ. ಶ್ರೀ ಸಮಕ್ತಿ ಮುನಿಜೀ ಮಹಾರಾಜ್, ಶ್ರೀ ಭವಂತ ಮುನಿಜೀ ಮಹಾರಾಜ್ ಮತ್ತು ಶ್ರೀ ಜಯವಂತ ಮುನಿಜೀ ಮಹಾರಾಜ್ ಅವರು ಚಾತುರ್ಮಾಸ ಪೂಜೆಗಾಗಿ ಇಂದು ಮೈಸೂರಿಗೆ ಆಗಮಿಸಿದರು. ಜುಲೈನಿಂದ ಅಕ್ಟೋಬರ್‍ವರೆಗೆ ನಡೆಯುವ ಚಾತುರ್ಮಾಸಕ್ಕಾಗಿ ಆಗಮಿಸಿದ ಜೈನಮುನಿ ಶ್ರೀಗಳನ್ನು ಮೈಸೂರಿನ ಫೌಂಟನ್ ಸರ್ಕಲ್ ಬಳಿ ಜೈನ ಸಂಘಟನೆಗಳ ಪದಾಧಿಕಾರಿಗಳು ಆತ್ಮೀಯವಾಗಿ ಬರಮಾಡಿಕೊಂಡು ಅಶೋಕ ರಸ್ತೆ ಮೂಲಕ ಮೆರವಣಿಗೆಯಲ್ಲಿ ಹಳ್ಳದಕೇರಿಯಲ್ಲಿರುವ ಶ್ರೀ ಸ್ಥಾನಿಕವಾಸಿ…

ಜು.28ಕ್ಕೆ ಮೈಸೂರುಲ್ಲಿ 5ನೇ ಉದ್ಯೋಗ ಮೇಳ
ಮೈಸೂರು

ಜು.28ಕ್ಕೆ ಮೈಸೂರುಲ್ಲಿ 5ನೇ ಉದ್ಯೋಗ ಮೇಳ

July 22, 2018

ಮೈಸೂರು:  ಶ್ರೀರಂಗಪಟ್ಟಣ ರಸ್ತೆಯಲ್ಲಿರುವ ಮಹಾರಾಜ ಶಿಕ್ಷಣ ಸಂಸ್ಥೆಯು ಮೈಸೂರಿನ ಮಹಾರಾಜ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿ ಆವರಣದಲ್ಲಿ ಜು.28ರಂದು ಬೆಳಿಗ್ಗೆ 8.30ರಿಂದ ಸಂಜೆ 5 ಗಂಟೆವರೆಗೆ 5ನೇ ಉದ್ಯೋಗ ಮೇಳ ಆಯೋಜಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಮುರಳಿ ತಿಳಿಸಿದರು. ನಾಲ್ಕು ಬಾರಿ ಯಶಸ್ವಿ ಉದ್ಯೊಗ ಮೇಳಗಳನ್ನು ನಡೆಸಿರುವ ಸಂಸ್ಥೆಯು ಕಳೆದ ಬಾರಿಯ ಉದ್ಯೋಗ ಮೇಳದಲ್ಲಿ 3 ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶ ಕಲ್ಪಿಸಿಕೊಟ್ಟಿದೆ. ಅದೇ ರೀತಿ ಈ ಬಾರಿಯೂ 3 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಕಲ್ಪಿಸಿಕೊಡುವ ಗುರಿ…

ಮಚ್ಚಿನಿಂದ ಕೊಚ್ಚಿ ಅಣ್ಣನ  ಮಾವನ ಕೊಂದ ತಮ್ಮನ ಸೆರೆ
ಮೈಸೂರು

ಮಚ್ಚಿನಿಂದ ಕೊಚ್ಚಿ ಅಣ್ಣನ  ಮಾವನ ಕೊಂದ ತಮ್ಮನ ಸೆರೆ

July 22, 2018

ಮೈಸೂರು:  ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ ಸಹೋದರನ ಮಾವನನ್ನು ಮಚ್ಚಿನಿಂದ ಕೊಚ್ಚಿ ಹತ್ಯೆಗೈದು ಅವರ ಪತ್ನಿ ಹಾಗೂ ಪುತ್ರಿಯನ್ನು ತೀವ್ರವಾಗಿ ಗಾಯಗೊಳಿಸಿರುವ ಘಟನೆ ಮೈಸೂರಿನ ಶಾಂತಿನಗರದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ. ಶಾಂತಿನಗರ 4ನೇ ಕ್ರಾಸ್ ನಿವಾಸಿ ಅಸ್ಲಂ ಪಾಷ(54) ಹತ್ಯೆಯಾದವರು. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿರುವ ಪತ್ನಿ ದಿಲ್ಶಾನ್ ಬಾನು ಹಾಗೂ ಪುತ್ರಿ ನಫೀಜಾರನ್ನು ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಉದಯಗಿರಿಯ ಶಾಂತಿನಗರ 6ನೇ ಕ್ರಾಸ್ ನಿವಾಸಿ ಸೈಯದ್ ಇರ್ಫಾನ್ ಮಚ್ಚಿನಿಂದ ಹಲ್ಲೆ ನಡೆಸಿ ಅಸ್ಲಂ ಪಾಷರನ್ನು ಹತ್ಯೆಗೈದು…

ವಾಯುವಿಹಾರಿ ಮಹಿಳೆ ಸರ ಕಿತ್ತುಕೊಂಡು  ಪರಾರಿಯಾದ ಖದೀಮ
ಮೈಸೂರು

ವಾಯುವಿಹಾರಿ ಮಹಿಳೆ ಸರ ಕಿತ್ತುಕೊಂಡು  ಪರಾರಿಯಾದ ಖದೀಮ

July 22, 2018

ಮೈಸೂರು: ವಾಯುವಿಹಾರಕ್ಕೆ ತೆರಳಿದ್ದ ಮಹಿಳೆಯ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಬೋಗಾದಿಯ ಬ್ಯಾಂಕರ್ಸ್ ಕಾಲೋನಿಯಲ್ಲಿ ಶುಕ್ರವಾರ ನಡೆದಿದೆ. ಇಲ್ಲಿನ ನಿವಾಸಿ ವಸಂತಕುಮಾರಿ (74) ಸರ ಕಳೆದುಕೊಂಡವರು. ಇವರು ಶುಕ್ರವಾರ ಬೆಳಿಗ್ಗೆ ವಾಯುವಿಹಾರಕ್ಕೆ ತೆರಳಿದ್ದು, ವಾಪಸ್ ಮನೆಗೆ ಹೋಗಲು ಅಂಗಡಿಯೊಂದರಲ್ಲಿ ಹಾಲನ್ನು ತೆಗೆದು ಕೊಂಡು ಬ್ಯಾಂಕರ್ಸ್ ಕಾಲೋನಿಯ 13ನೇ ಕ್ರಾಸ್‍ನಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಬೈಕ್‍ನಲ್ಲಿ ಬಂದ ಖದೀಮ, ವಸಂತ ಕುಮಾರಿ ಅವರ ಕತ್ತಿನಲ್ಲಿದ್ದ 68 ಗ್ರಾಂ ತೂಕದ ಸರವನ್ನು ಕಿತ್ತುಕೊಂಡು, ಅದೇ ರಸ್ತೆಯಲ್ಲಿ ಮುಂದೆ…

ಜೂಜಾಟ: 10 ಮಂದಿ ಬಂಧನ
ಮೈಸೂರು

ಜೂಜಾಟ: 10 ಮಂದಿ ಬಂಧನ

July 22, 2018

ಮೈಸೂರು: ಜೂಜಾಡುತ್ತಿದ್ದ ಅಡ್ಡೆಯ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, 10 ಮಂದಿ ಯನ್ನು ಬಂಧಿಸಿ, 12.580 ರೂ. ನಗದು ವಶಪಡಿಸಿಕೊಂಡಿದ್ದಾರೆ. ಹಿನಕಲ್ ನಿವಾಸಿಗಳಾದ ಮಹೇಶ್ ಬಿನ್ ಶಂಕರಪ್ಪ(26), ಮನು ಬಿನ್ ಶ್ರೀನಿ ವಾಸ(23), ರಾಮು ಬಿನ್ ಬಸವ ರಾಜು (30), ಹೇಮಂತ್ ಬಿನ್ ಸ್ವಾಮಿ (19), ಸೋಮನಾಯಕ ಬಿನ್ ಚಂದ್ರ ನಾಯಕ (24), ಟಿ.ಮಹೇಶ ಬಿನ್ ತಿಮ್ಮ ನಾಯಕ (23), ಕಿರಣ್ ಬಿನ್ ಗೋವಿಂದ ನಾಯಕ(22), ದೇವ ಬಿನ್ ಶಿವಲಿಂಗ (23), ರಾಕೇಶ್ ಬಿನ್ ಸ್ವಾಮಿ…

ಕೆಆರ್‌ಎಸ್‌ ಜಲಾಶಯಕ್ಕೆ ಸಿಎಂ ಕುಮಾರಸ್ವಾಮಿ ಬಾಗಿನ ಸಮರ್ಪಣೆ
ಮಂಡ್ಯ, ಮೈಸೂರು

ಕೆಆರ್‌ಎಸ್‌ ಜಲಾಶಯಕ್ಕೆ ಸಿಎಂ ಕುಮಾರಸ್ವಾಮಿ ಬಾಗಿನ ಸಮರ್ಪಣೆ

July 21, 2018

ಮೈಸೂರು: ನಾಲ್ಕು ವರ್ಷಗಳ ನಂತರ ತುಂಬಿ ತುಳುಕುತ್ತಿರುವ ಕೃಷ್ಣರಾಜ ಸಾಗರ (ಕೆಆರ್‌ಎಸ್‌) ಜಲಾಶಯಕ್ಕೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಸಂಜೆ ತಮ್ಮ ಸಚಿವ ಸಹೊದ್ಯೋಗಿಗಳು ಹಾಗೂ ಶಾಸಕರೊಂದಿಗೆ ಸಾಂಪ್ರದಾಯಿಕವಾಗಿ ಬಾಗಿನ ಸಮರ್ಪಣೆ ಮಾಡಿದರು. ಕಬಿನಿ ಜಲಾಶಯಕ್ಕೆ ಬಾಗಿನ ಸಮರ್ಪಿಸಿದ ನಂತರ ಸಂಜೆ 4 ಗಂಟೆಗೆ ಹೆಲಿಕಾಪ್ಟರ್‍ನಲ್ಲಿ ಕೆಆರ್‌ಎಸ್‌ ಹೆಲಿಪ್ಯಾಡ್‍ಗೆ ಬಂದಿಳಿದ ಕುಮಾರಸ್ವಾಮಿ ಅವರು, ಸಂಜೆ 4.30 ಗಂಟೆಗೆ ಗೋಧೂಳಿ ಶುಭಲಗ್ನದಲ್ಲಿ ಪತ್ನಿ ಶ್ರೀಮತಿ ಅನಿತಾ ಅವರೊಂದಿಗೆ ಕೆಆರ್‌ಎಸ್‌ನ ಕಾವೇರಿ ಮಾತೆಗೆ ಬಾಗಿನ ಸಮರ್ಪಿಸಿದರು. ಶ್ರೀರಂಗಪಟ್ಟಣದ ಖ್ಯಾತ…

ಚಾಮುಂಡೇಶ್ವರಿ ದರ್ಶನ ಪಡೆದ ಮುಖ್ಯಮಂತ್ರಿ ಕುಮಾರಸ್ವಾಮಿ, ಅವರ ಸಚಿವ ಸಹೋದ್ಯೋಗಿಗಳು
ಮೈಸೂರು

ಚಾಮುಂಡೇಶ್ವರಿ ದರ್ಶನ ಪಡೆದ ಮುಖ್ಯಮಂತ್ರಿ ಕುಮಾರಸ್ವಾಮಿ, ಅವರ ಸಚಿವ ಸಹೋದ್ಯೋಗಿಗಳು

July 21, 2018

ಮೈಸೂರು: ಆಷಾಢ ಮಾಸದ ಮೊದಲ ಶುಕ್ರವಾರವಾದ ಇಂದು ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ. ಹಾಗಾಗಿ ಅಪಾರ ಸಂಖ್ಯೆಯ ಭಕ್ತರು ನಾಡ ದೇವಿಯ ದರ್ಶನ ಪಡೆದು, ಪುನೀತರಾದರು. ಮುಂಜಾನೆ 3 ಗಂಟೆಯಿಂದಲೇ ವಿಶೇಷ ಪೂಜಾ ಕೈಂಕರ್ಯ ಗಳು ಆರಂಭವಾದವು. ಪ್ರಧಾನ ಆಗಮಿಕ ಡಾ.ಎನ್.ಶಶಿಶೇಖರ್ ದೀಕ್ಷಿತ್ ಹಾಗೂ ದೇವಿ ಪ್ರಸಾದ್ ನೇತೃತ್ವದಲ್ಲಿ ನಾಡದೇವಿಗೆ ಮಹನ್ಯಾಸಪೂರ್ವ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಕುಂಕುಮಾರ್ಚನೆ, ತ್ರಿಪದಿ, ಸಹಸ್ರ ನಾಮಾರ್ಚನೆ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ಜರುಗಿದವು. ಮಹಾಮಂಗಳಾ ರತಿ ನಂತರ 5.30ಕ್ಕೆ ಭಕ್ತರಿಗೆ ದೇವಿ ದರ್ಶನಕ್ಕೆ…

ಮುಖ್ಯಮಂತ್ರಿಗಾಗಿ 7 ಗಂಟೆಗಳ ಕಾಲ ಮೈಸೂರು-ಬೆಂಗಳೂರು ಹೆದ್ದಾರಿ ಬಂದ್
ಮೈಸೂರು

ಮುಖ್ಯಮಂತ್ರಿಗಾಗಿ 7 ಗಂಟೆಗಳ ಕಾಲ ಮೈಸೂರು-ಬೆಂಗಳೂರು ಹೆದ್ದಾರಿ ಬಂದ್

July 21, 2018

ಮಂಡ್ಯ: ಮಂಡ್ಯ ನಗರ ದಲ್ಲಿ ಇಂದು ಆಯೋಜಿಸಿದ್ದ ಜೆಡಿಎಸ್ ಕೃತಜ್ಞತಾ ಸಮಾವೇಶದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಪಾಲ್ಗೊಂಡ ಹಿನ್ನೆಲೆಯಲ್ಲಿ ಮೈಸೂರು-ಬೆಂಗಳೂರು ಹೆದ್ದಾರಿಯನ್ನು ಬರೋಬ್ಬರಿ 7 ಗಂಟೆಗಳ ಕಾಲ ಬಂದ್ ಮಾಡಿದ ಪರಿಣಾಮ ಲಕ್ಷಾಂತರ ಮಂದಿ ಪರ ದಾಡಬೇಕಾಯಿತು. ರಾಜ್ಯದ ರಾಜಧಾನಿ ಬೆಂಗಳೂರು ಮತ್ತು ಸಾಂಸ್ಕೃತಿಕ ನಗರಿ ಮೈಸೂರು ನಡುವೆ ಸಾವಿರಾರು ವಾಹನಗಳು ಪ್ರತಿ ನಿತ್ಯ ಸಂಚರಿಸುತ್ತಿದ್ದು, ಲಕ್ಷಾಂತರ ಮಂದಿ ಪ್ರಯಾಣಿಸುತ್ತಾರೆ. ಇಂದಿನ ಹೆದ್ದಾರಿ ಬಂದ್‍ನಿಂದಾಗಿ ಬೆಂಗಳೂರು ಮತ್ತು ಮೈಸೂರು ನಡುವಿನ ಸಂಚಾರ ಅಸ್ತವ್ಯಸ್ಥ ಗೊಂಡು ಒಂದು ರೀತಿಯಲ್ಲಿ…

1 1,476 1,477 1,478 1,479 1,480 1,611
Translate »