ಮೈಸೂರು: ಇಂದಿರಾ ಕ್ಯಾಂಟೀನ್ ಗಾಜಿನ ಬಾಗಿಲು ಒಡೆದು ಬೆಲೆ ಬಾಳುವ ಸಾಮಗ್ರಿಗಳನ್ನು ಕದ್ದು ಪರಾರಿಯಾಗಿದ್ದ ಇಬ್ಬರು ಖದೀಮರನ್ನು ಉದಯಗಿರಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಗೌಸಿಯಾ ನಗರದ ಸದ್ದಾಂ(25), ಕೆ.ಎನ್.ಪುರದ ನಿವಾಸಿ ಮಹಮ್ಮದ್ ಸಾದಿಕ್ (28) ಬಂಧಿತರಾಗಿದ್ದು, ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜೂ.4 ರಂದು ರಾತ್ರಿ ಕ್ಯಾಂಟೀನ್‍ನ ಗಾಜಿನ ಬಾಗಿಲು ಒಡೆದು ಒಳ ನುಗ್ಗಿರುವ ಈ ಖದೀಮರು 8 ಸ್ಟೀಲ್ ನಲ್ಲಿ, 8 ಸ್ಟೀಲ್ ಸೌಟು, 4 ಸ್ಟೀಲ್ ಪಾತ್ರೆ ಹಾಗೂ 80 ಪ್ಲಾಸ್ಟಿಕ್ ತಟ್ಟೆಗಳನ್ನು ಕಳವು…
ಪಿಯು ಅತಿಥಿ ಉಪನ್ಯಾಸಕರ ನೇಮಕಾತಿಗೆ ಸೇವಾ ಹಿರಿತನ ಪರಿಗಣ ಸುವಂತ ಆಗ್ರಹ
June 25, 2018ಮೈಸೂರು: ಈ ಬಾರಿ ಸರ್ಕಾರಿ ಪಿಯು ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ನೇಮಕಾತಿ ಸಂಬಂಧ ಕಡ್ಡಾಯವಾಗಿ ಸೇವಾ ಹಿರಿತವನ್ನು ಪರಿಗಣಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ಸಂಘ ಕೈಗೊಂಡಿದೆ. ಮೈಸೂರಿನ ಜಿಲ್ಲಾ ನ್ಯಾಯಾಲಯದ ಎದುರಿನ ಪಾರ್ಕ್‍ನಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದೆ. ಈ ಬಾರಿ ಅತಿಥಿ ಉಪನ್ಯಾಸಕರಾಗಿ ನೇಮಕಾತಿಯಾಗುವ ಅತಿಥಿ ಉಪನ್ಯಾಸಕರಿಗೆ ಸೇವಾಭದ್ರತೆ ಒದಗಿಸಬೇಕು. ತಿಂಗಳಿಗೆ 30 ಸಾವಿರ ಗೌರವ ಸಂಭಾವನೆ ನಿಗದಿಗೊಳಿಸಬೇಕು, ಈ ವೇತನವನ್ನು ವರ್ಷ ಪೂರ್ತಿ…
ಎಸ್ಸಿ-ಎಸ್ಟಿ ನೌಕರರ ಮುಂಬಡ್ತಿ ಕಾಯ್ದೆ; ಸುಪ್ರೀಂಕೋರ್ಟ್ ಮೊರೆ ಹೋಗಲು ಅಹಿಂಸಾ ನಿರ್ಧಾರ
June 25, 2018ಮೈಸೂರು: ಎಸ್ಸಿ-ಎಸ್ಟಿ ಸರ್ಕಾರಿ ನೌಕರರಿಗೆ ಮುಂಬಡ್ತಿ ನೀಡುವ ಸಂಬಂಧ ವಿಶೇಷ ಕಾಯ್ದೆ ತಂದು ಅನುಷ್ಠಾನಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಅತೀ ಶೀಘ್ರದಲ್ಲೇ ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸಲಾಗುವುದು ಎಂದು ಅಹಿಂಸಾ ಸಂಘಟನೆಯ ಜಿಲ್ಲಾಧ್ಯಕ್ಷ ಎಂ.ಕೆ.ನಂಜಯ್ಯ ತಿಳಿಸಿದರು. ಈ ಬಗ್ಗೆ ದೂರವಾಣಿ ಮುಖೇನ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಮುಂಬಡ್ತಿ ವಿಶೇಷ ಕಾಯಿದೆ ಸಂಬಂಧ ಕಳೆದ 25 ವರ್ಷಗಳಿಂದ ಅಹಿಂಸಾ ಸಂಘಟನೆ ಕಾನೂನು ಹೋರಾಟ ನಡೆಸುತ್ತಿದೆ. ಅಲ್ಲದೆ, ಇದರ ವಿರುದ್ಧ 2017ರ ಫೆಬ್ರವರಿ ತಿಂಗಳಲ್ಲಿ ಬಿ.ಕೆ.ಪವಿತ್ರ ಪ್ರಕರಣದಲ್ಲಿ ಸುಪ್ರೀಂಕೋರ್ಟ್‍ನಲ್ಲಿ ನಮ್ಮ ಪರ…
ಸಾಂಸ್ಕೃತಿಕ ನಗರಿಯಲ್ಲಿ ಹಳೇ ಕನ್ನಡ ಚಿತ್ರಗೀತೆಗಳ ಝೇಂಕಾರ
June 25, 2018ಮೈಸೂರು: ಸುಂದರ ಇಳಿ ಸಂಜೆಯಲಿ ಸಿಂಗಾರ ಗೊಂಡಿದ್ದ ವೇದಿಕೆಯಲ್ಲಿ ಜನಪ್ರಿಯ ಹಳೆಯ ಸುಮಧುರ ಕನ್ನಡ ಚಿತ್ರಗೀತೆಗಳ ಝೇಂಕಾರ ಕಲಾರಸಿಕರ ಮನಗೆದ್ದಿತು. ಜೆ.ಕೆ.ಮೈದಾನದ ಅಮೃತ ಮಹೋತ್ಸವ ಸಭಾಂಗಣದಲ್ಲಿ ಸಾಗರ್ ಸ್ಕಿನ್ ಕೇರ್ ಸೆಂಟರ್ ಭಾನುವಾರ ಆಯೋ ಜಿಸಿದ್ದ ಮ್ಯೂಸಿಕ್ ಲೆಜೆಂಡ್ಸ್ (ನಾ ಹಾಡಲು ನೀವು ಆಡಬೇಕು) ಸಂಗೀತ ಸಂಜೆ ಕಾರ್ಯ ಕ್ರಮದಲ್ಲಿ ಗಾಯಕರಾದ ಜಯಂತಿ ಭಟ್, ವೀಣಾ ಪಂಡಿತ್, ಸ್ಟ್ಯಾನ್ಲಿ ಪಾರ್ಕರ್, ಸ್ಟ್ಯಾನ್ಲಿ ಮರ್ಸರ್, ಎನ್.ರಶ್ಮಿ, ಎಸ್. ಬಾಲರಾಜ್, ಡಾ.ಸುರೇಂದ್ರನ್, ಮನು ಯಾದವ್, ಸುಪ್ರಿಯಾ ಲೋಹಿತ್ ಮತ್ತಿತರರ ಸುಮಧುರ…
ಗರ್ಭಿಣ ಮಹಿಳೆಯನ್ನು ತುಂಬಿ ಹರಿಯುತ್ತಿದ್ದ ನದಿಗೆ ನೂಕಿದ ದುರುಳ ಪತಿ!
June 25, 2018ಬೆಂಗಳೂರು: ಪ್ರೀತಿಸಿ ವಿವಾಹವಾಗಿದ್ದ ವ್ಯಕ್ತಿಯೊಬ್ಬ 6 ತಿಂಗಳ ಗರ್ಭಿಣಿ ಪತ್ನಿಯನ್ನು ತುಂಬಿ ಹರಿಯುತ್ತಿದ್ದ ತುಂಗಭದ್ರಾ ನದಿಗೆ ತಳ್ಳಿ ಹತ್ಯೆ ಮಾಡಲು ಯತ್ನ ನಡೆಸಿರುವ ಘಟನೆಯೊಂದು ಹಾವೇರಿ ಜಿಲ್ಲೆಯ ನೂತನ ತಾಲೂಕು ರಟ್ಟೀಹಳ್ಳಿಯಲ್ಲಿ ನಡೆದಿದ್ದು, ಅದೃಷ್ಟವಶಾತ್ ಮಹಿಳೆ ಬದುಕುಳಿದಿದ್ದಾಳೆ. ಗಂಡ ತಳ್ಳಿದ ಬಳಿಕ 1 ಕಿ.ಮೀ. ದೂರ ಕೊಚ್ಚಿ ಹೋದ ಮಹಿಳೆ, ನದಿಯಲ್ಲಿ ಅಚಾನಕ್ ಆಗಿ ಸಿಕ್ಕ ಬಂಡೆಯೊಂದನ್ನು ಹಿಡಿದು, ರಾತ್ರಿಯಿಡೀ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ ಆಕೆಯನ್ನು ಕಂಡ ಸಾರ್ವಜನಿಕರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ದುರುಳ…
ನೇಣು ಹಾಕಿಕೊಂಡು ಮಹಿಳೆ ಆತ್ಮಹತ್ಯೆ
June 25, 2018ಮೈಸೂರು: ಜೀವನದಲ್ಲಿ ಜಿಗುಪ್ಸೆಗೊಂಡ ಮಹಿಳೆಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ನಜರ್‍ಬಾದ್‍ನಲ್ಲಿ ಶನಿವಾರ ರಾತ್ರಿ ಸಂಭವಿಸಿದೆ. ರಘುನಾಯ್ಕರ್ ಪತ್ನಿ ಶ್ರೀಮತಿ ಶೋಭಾ(27) ನೇಣಿಗೆ ಶರಣಾದವರು. ಮೂಲತಃ ಹೆಚ್.ಡಿ.ಕೋಟೆ ತಾಲೂಕು ಗಂಗಡಹೊಸಹಳ್ಳಿಯವರಾದ ಶೋಭಾರನ್ನು 8 ವರ್ಷಗಳ ಹಿಂದೆ ರಘುನಾಯ್ಕ ಜೊತೆ ಮದುವೆ ಮಾಡಿಕೊಡಲಾಗಿತ್ತು. ಸುಮಂಗಲಿ ಸಿಲ್ಕ್ಸ್‍ನಲ್ಲಿ ಕೆಲಸ ಮಾಡುತ್ತಿದ್ದ ಆಕೆ ಮಾನಸಿಕ ಖಿನ್ನತೆಗೊಳಗಾಗಿದ್ದರು ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಇಂದು ಬೆಳಿಗ್ಗೆ ಸ್ಥಳಕ್ಕೆ ಧಾವಿಸಿದ ನಜರ್‍ಬಾದ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡು…
ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ ಕಾಮುಕನ ಬಂಧನ
June 25, 2018ಮೈಸೂರು: ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ್ದ ಯುವಕನನ್ನು ಕುವೆಂಪು ನಗರ ಠಾಣೆ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ರಾಮಕೃಷ್ಣನಗರದ ನಿವಾಸಿ ಗಣೇಶ್ ಅವರ ಪುತ್ರ ರವಿಕುಮಾರ್(25) ಬಂಧಿತ ಯುವಕ. ಈತ ಅಪ್ರಾಪ್ತೆಗೆ ದೂರದ ಸಂಬಂಧಿಯಾಗಿದ್ದು, ಆಕೆಗೆ ಆಮಿಷವೊಡ್ಡಿ ಅತ್ಯಾಚಾರ ವೆಸಗಿ, ಪರಾರಿಯಾಗಿದ್ದ ಎನ್ನಲಾಗಿದೆ. ಈ ಸಂಬಂಧ ಯುವತಿಯ ಪೋಷಕರು ಲಕ್ಷ್ಮೀಪುರಂ ಠಾಣೆಗೆ ದೂರು ನೀಡಿದ್ದರು. ಆದರೆ, ಕೃತ್ಯ ನಡೆದಿದ್ದು, ರಾಮಕೃಷ್ಣ ನಗರದ ಯುವಕನ ಮನೆಯಲ್ಲಾದ್ದರಿಂದ ಪ್ರಕರಣವನ್ನು ಲಕ್ಷ್ಮೀಪುರಂ ಠಾಣೆ ಪೊಲೀಸರು, ಕುವೆಂಪುನಗರ ಠಾಣೆಗೆ ವರ್ಗಾಯಿಸಿದ್ದರು. ತನಿಖೆ ನಡೆಸಿ,…
ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ವಿರುದ್ಧ ಕಾನೂನು ಸಮರ: ಸಿಎಂ ಹೆಚ್.ಡಿ.ಕುಮಾರಸ್ವಾಮಿ ನಿರ್ಧಾರ
June 24, 2018ಬೆಂಗಳೂರು: ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚಿಸುವ ಮೂಲಕ ರಾಜ್ಯದ ಹಿತಕ್ಕೆ ಧಕ್ಕೆ ಆಗಿದ್ದು, ನಮ್ಮ ಹಕ್ಕನ್ನು ಕೇಂದ್ರ ಸರ್ಕಾರ ಕಿತ್ತುಕೊಂಡಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಇಂದಿಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡಳಿಯ ರಚನಾ ಮಾರ್ಗ ಸೂಚಿಯಲ್ಲೇ ಲೋಪ-ದೋಷ ಇವೆ. ಇದನ್ನು ಸರಿಪಡಿಸುವಂತೆ ನಾನೇ ಖುದ್ದಾಗಿ ಪ್ರಧಾನಿ ನರೇಂದ್ರ ಮೋದಿ, ನೀರಾವರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿರುವುದಲ್ಲದೆ, ಪತ್ರವನ್ನೂ ನೀಡಲಾಗಿದೆ. ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿ ಸಲು ನೀರಾವರಿ…
‘ಸಿಂಹ’ ಘರ್ಜನೆ ಫಲ: ಮೈಸೂರು ಜಲದರ್ಶಿನಿ ಬಳಿ ಹುಣಸೂರು ರಸ್ತೆ ಭಾಗಶಃ ನೇರಗೊಳಿಸುವ ತ್ವರಿತ ಕಾಮಗಾರಿ ಆರಂಭ
June 24, 2018ಮೈಸೂರು: ಮೈಸೂರಿನ ಜಲದರ್ಶಿನಿ ಬಳಿ ಅಪಘಾತ ವಲಯ ಎನಿಸಿದ್ದ ಹುಣಸೂರು ರಸ್ತೆ ತಿರುವನ್ನು ಭಾಗಶಃ ನೇರಗೊಳಿಸುವ ತ್ವರಿತ ಕಾಮಗಾರಿ ಈಗ ಆರಂಭವಾಗಿದೆ. ತಿರುವನ್ನು ನೇರಗೊಳಿಸಿ ಅಪಘಾತಗಳನ್ನು ತಪ್ಪಿಸಬೇಕೆಂಬ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ ಅಧಿಕಾರಿ ಗಳು 12 ಕೋಟಿ ರೂ. ಕೇಂದ್ರ ರಸ್ತೆ ನಿಧಿಯಡಿ ಯೋಜನೆ ರೂಪಿಸಿದ್ದ ರಾದರೂ, ಕಡೆಗೆ ಕೇವಲ ರಸ್ತೆ ಅಗಲೀಕರಣ ಗೊಳಿಸಿ, ಡಾಂಬ ರೀಕರಣ ಮಾಡಿ ಸುಮ್ಮನಾಗಿದ್ದರು. ರಸ್ತೆ ನೇರಗೊಳಿಸಿಲ್ಲ, ಇಕ್ಕೆಲಗಳಲ್ಲಿ ಪಾದಚಾರಿ ರಸ್ತೆಗೆ ಜಾಗವನ್ನೂ ಬಿಟ್ಟಿಲ್ಲ. ಇದರಿಂದ ಇಲ್ಲಿರುವ ಮಹಾರಾಣಿ ಕಾಮರ್ಸ್ ಕಾಲೇಜು…
ತಲಚೇರಿ-ಮೈಸೂರು ರೈಲು ಮಾರ್ಗ ಯೋಜನೆ: ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಸ್ಥಾನದಿಂದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ತೆಗೆದು ಹಾಕುವಂತೆ
June 24, 2018ಕೊಡಗು ಮೂಲಕ ವಿನಾಶಕಾರಿ ತಲಚೇರಿ-ಮೈಸೂರು ರೈಲ್ವೆ ಮಾರ್ಗ ಯೋಜನೆ ಅನುಷ್ಠಾನಕ್ಕೆ ಸರ್ಕಾರದ ಮೇಲೆ ವೇಣುಗೋಪಾಲ್ ಒತ್ತಡ: ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿಗೆ ಪತ್ರ ಬರೆದ ಕರ್ನಲ್ (ನಿವೃತ್ತ) ಸಿ.ಪಿ.ಮುತ್ತಣ್ಣ ಮಡಿಕೇರಿ/ಮೈಸೂರು: ಕೊಡಗು ಮೂಲಕ ವಿವಾದಿತ ತಲಚೇರಿ-ಮೈಸೂರು ರೈಲ್ವೆ ಮಾರ್ಗ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹೊಣೆ ಹೊತ್ತಿರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಆ ಸ್ಥಾನದಿಂದ ತೆಗೆದು ಹಾಕ ಬೇಕೆಂದು ಕೊಡಗು ವನ್ಯಜೀವಿ…