ಮೈಸೂರು: ಮುಡಾ ನಿವೇಶನ ಖರೀದಿ ಹಾಗೂ ಪರಭಾರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ನಾಲ್ಕು ಮಂದಿ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ತಿಳಿಸಿದ್ದಾರೆ. ಮೈಸೂರಿನ 2 ನೇ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯದ ಆದೇಶದಂತೆ ಮಾಜಿ ಸಿಎಂ ಸಿದ್ದ ರಾಮಯ್ಯ, ಮುಡಾ ಮಾಜಿ ಅಧ್ಯಕ್ಷರಾದ ಸಿ. ಬಸವೇಗೌಡ, ಡಿ.ಧ್ರುವಕುಮಾರ್, ಆಯುಕ್ತ ಕಾಂತರಾಜು ವಿರುದ್ಧ, ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ (ಸಂಖ್ಯೆ 0049/2018) ದಾಖಲಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ….
ರಾಜ್ಯ ಮಟ್ಟದಲ್ಲಿ ದೋಸ್ತಿಗಳಾದರೂ ಸ್ಥಳೀಯ ಮಟ್ಟದಲ್ಲಿ ದುಷ್ಮನ್‍ಗಳಂತೆ ಕಾಂಗ್ರೆಸ್-ಜೆಡಿಎಸ್ ಕಚ್ಚಾಟ ಮೈಸೂರು ಜಿಪಂ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆಗೆ ಅಡ್ಡಿ
June 24, 2018ಮೈಸೂರು: ಮೈಸೂರು ಜಿಲ್ಲಾ ಪಂಚಾಯಿತಿಯ ಎರಡನೇ ಅವಧಿಯ ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆ ಸಂಬಂಧ ಶನಿವಾರ ನಿಗದಿಯಾಗಿದ್ದ ಚುನಾವಣೆ, ಕೋರಂ ಅಭಾವ ಸೇರಿದಂತೆ ಹಲವು ನಾಟಕೀಯ ಬೆಳೆವಣಿಗಳಿಗೆ ಸಾಕ್ಷಿಯಾಗಿ 10 ದಿನಗಳೊಳಗೆ ಚುನಾವಣೆ ನಡೆಸಲಾಗುವುದೆಂಬ ಅಧ್ಯಕ್ಷರ ಪ್ರಕಟಣೆಯೊಂದಿಗೆ ಅಂತ್ಯಗೊಂಡಿತು. ಯೋಜನೆ, ಹಣಕಾಸು ಮತ್ತು ಲೆಕ್ಕಪರಿಶೋಧನೆ ಸ್ಥಾಯಿ ಸಮಿತಿ ಹಾಗೂ ಸಾಮಾನ್ಯ ಸ್ಥಾಯಿ ಸಮಿತಿಯ ತಲಾ 6 ಸದಸ್ಯರ ಆಯ್ಕೆಗೆ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ, ಕೃಷಿ ಮತ್ತು ಕೈಗಾರಿಕಾ…
ಮೈಸೂರು ಜಿಪಂನಲ್ಲೂ ದೋಸ್ತಿ ಪ್ರಸ್ತಾಪ
June 24, 2018ಮೈಸೂರು: ರಾಜ್ಯ ಮೈತ್ರಿ ಸರ್ಕಾರದ ಮಾದರಿಯಲ್ಲಿ ಮೈಸೂರು ಜಿಲ್ಲಾ ಪಂಚಾಯಿತಿ ಆಡಳಿತದಲ್ಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಉಭಯ ಪಕ್ಷಗಳ ವರಿಷ್ಠರು ಮಾತುಕತೆ ನಡೆಸಲಿದ್ದಾರೆ ಎಂದು ಸಂಸದರೂ ಆದ ಕಾಂಗ್ರೆಸ್ ಮುಖಂಡ ಆರ್.ಧ್ರುವನಾರಾಯಣ್ ತಿಳಿಸಿದರು. ಮೈಸೂರಿನ ಜಲದರ್ಶಿನಿ ಅತಿಥಿಗೃಹದ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಮೈಸೂರು ಜಿಪಂ ಕಾಂಗ್ರೆಸ್ ಸದಸ್ಯರ ತುರ್ತು ಸಭೆಯಲ್ಲಿ ಪಾಲ್ಗೊಂಡು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ ರಾತ್ರಿ ದೂರವಾಣಿ ಮೂಲಕ ಪ್ರವಾಸೋದ್ಯಮ ಸಚಿವರೂ ಆದ ಜೆಡಿಎಸ್ ಮುಖಂಡ ಸಾ.ರಾ.ಮಹೇಶ್ ಅವರೊಂದಿಗೆ…
ಮೆಟ್ರೊಪೋಲ್‍ನಿಂದ ಹಿನಕಲ್‍ವರೆಗೂ ರಸ್ತೆ ಡಾಂಬರೀಕರಣವಾಗಿದೆ ರಾಷ್ಟ್ರೀಯ ಹೆದ್ದಾರಿ ಎಇಇ ಹೆಚ್.ಪಿ. ಚಂದ್ರಪ್ಪ ಸ್ಪಷ್ಟನೆ
June 24, 2018ಮೈಸೂರು: ಜಲ ದರ್ಶಿನಿ ಬಳಿ ಹುಣಸೂರು ರಸ್ತೆ ತಿರುವು ನೇರಗೊಳಿಸಲು ಮಂಜೂರಾದ ಕೇಂದ್ರ ರಸ್ತೆ ಅನುದಾನದಲ್ಲೇ ಮೆಟ್ರೊಪೋಲ್ ಸರ್ಕಲ್‍ನಿಂದ ಹಿನಕಲ್‍ವರೆಗೆ 5.45 ಕಿ.ಮೀ. ಡಾಂಬರೀಕರಣಗೊಳಿಸಿ ಅಭಿವೃದ್ಧಿಗೊಳಿ ಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿಗಳ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಹೆಚ್.ಪಿ.ಚಂದ್ರಪ್ಪ ತಿಳಿಸಿದ್ದಾರೆ. ಈ ಕುರಿತು ‘ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅವರು, ಜಲದರ್ಶಿನಿ ಅತಿಥಿ ಗೃಹದಿಂದ ಪಡುವಾರಹಳ್ಳಿಯ ಮೂಳೆ ಆಸ್ಪತ್ರೆ ಕ್ರಾಸ್‍ವರೆಗೆ ಹುಣಸೂರು ರಸ್ತೆಯ ಅಪ ಘಾತ ತಿರುವನ್ನು ನೇರಗೊಳಿಸಲೆಂದು ಸೆಂಟ್ರಲ್ ರೋಡ್ ಫಂಡ್ ಅಡಿ 2016ರ ನವೆಂಬರ್ 2ರಂದು 12…
ಮೈಸೂರು ಪಾಲಿಕೆ ವಾರ್ಡ್ ಮೀಸಲಾತಿ ಪುನರ್ ಪರಿಶೀಲನೆಗೆ ಮಾಜಿ ಮೇಯರ್ ಆಗ್ರಹ
June 24, 2018ಮೈಸೂರು: ಮೈಸೂರು ನಗರ ಪಾಲಿಕೆಯ ವಾರ್ಡ್‍ಗಳಿಗೆ ರಾಜ್ಯ ಸರ್ಕಾರ ಹೊರಡಿಸಿರುವ ಮೀಸಲಾತಿಯ ಅಧಿಸೂಚನೆ ಅವೈಜ್ಞಾನಿಕವಾಗಿದ್ದು, ಕೂಡಲೇ ಮೀಸಲಾತಿ ಪಟ್ಟಿಯನ್ನು ಪುನರ್ ಪರಿಶೀಲಿಸಿ ವಾಸ್ತವತೆಗೆ ಅನುಗುಣವಾದ ಅಧಿಸೂಚನೆ ಹೊರಡಿಸುವಂತೆ ಮಾಜಿ ಮೇಯರ್ ಬಿ.ಎಲ್.ಭೈರಪ್ಪ ಒತ್ತಾಯಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ರಾಜ್ಯ ಸರ್ಕಾರ ಮೈಸೂರು ನಗರ ಪಾಲಿಕೆಯ ಎಲ್ಲಾ ವಾರ್ಡ್‍ಗಳನ್ನು ಪುನರ್ ವಿಂಗಡಣೆ ಮಾಡಿದೆ. ಅಲ್ಲದೆ ಎಲ್ಲಾ ವಾರ್ಡ್‍ಗಳಿಗೂ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದೆ. ಇದು ಅವೈಜ್ಞಾನಿಕ ಮೀಸಲಾತಿಯಾಗಿದ್ದು, ಹಲವು ವಾರ್ಡ್‍ಗಳಲ್ಲಿ ಸಾಮಾಜಿಕ…
ಶೀಘ್ರ ಬೆಂಗಳೂರು-ಮೈಸೂರು ನಡುವೆ ಹೆಲಿಟ್ಯಾಕ್ಸಿ ಸೇವೆ
June 24, 2018ಮೈಸೂರು: ಮುಂಬೈ ಮತ್ತು ತಿರುವನಂತಪುರಂ ಮೂಲದ ತುಂಬಿ ಎವಿಯೇಷನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ತನ್ನ ಜನಪ್ರಿಯ ಹೆಲಿಟ್ಯಾಕ್ಸಿ ಸೇವೆಯನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್) ದಿಂದ ಮೈಸೂರು, ಮಡಿಕೇರಿ ಮತ್ತು ಚಿಕ್ಕಮಗಳೂರಿಗೆ ವಿಸ್ತರಿಸಲು ಉದ್ದೇಶಿಸಿದೆ. ಸಂಸ್ಥೆಯು ಈಗಾಗಲೇ ತನ್ನ ಹೆಲಿಟ್ಯಾಕ್ಸಿ ಸೇವೆಯನ್ನು ಮಾಹಿತಿ ತಂತ್ರಜ್ಞಾನ ಕಂಪನಿಗಳನ್ನು ಗಮನದಲ್ಲಿಟ್ಟುಕೊಂಡು ಕೆಐಎಎಲ್‍ನಿಂದ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಗೆ ಆರಂಭಿಸಿದೆ. ಈ ಸೇವೆಯನ್ನು ವಿವಿಧ ಕಂಪನಿಗಳು ತನ್ನ ಸಿಇಓಗಳು ಮತ್ತು ವಿದೇಶಿ ಸಂದರ್ಶಕರು ಗಂಟೆಗಟ್ಟಲೆ ರಸ್ತೆಗಳಲ್ಲಿ ಸಂಚಾರ ದಟ್ಟಣೆಯಿಂದ ಸಮಯ…
ಎನ್.ಆರ್.ಕ್ಷೇತ್ರದಲ್ಲಿ 100 ಹಾಸಿಗೆ ಆಸ್ಪತ್ರೆ, ಸಂಪರ್ಕ ರಸ್ತೆ ನಿರ್ಮಾಣಕ್ಕೆ ಕ್ರಮ
June 24, 2018ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಶಾಸಕ ತನ್ವೀರ್ ಸೇಠ್ ಪ್ರಕಟ ನರ್ಮ್ ಮನೆ ನಿರ್ಮಾಣದ ಅವ್ಯವಹಾರ ಸಂಬಂಧ ತನಿಖೆಗೆ ಆಗ್ರಹ ಕಸ ನಿರ್ವಹಣೆಯಲ್ಲಿ ಕಾಣದ ಕೈಗಳ ಕೈವಾಡ ಶಂಕೆ ಮೈಸೂರು: ಮೈಸೂರಿನ ಎನ್.ಆರ್.ಕ್ಷೇತ್ರದ ಜನರ ಅನುಕೂಲಕ್ಕಾಗಿ 100 ಹಾಸಿಗೆಯ ಆಸ್ಪತ್ರೆ, ವಿವಿಧ ಬಡಾವಣೆಗಳಿಗೆ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಎಂದು ಶಾಸಕ ತನ್ವೀರ್ ಸೇಠ್ ತಿಳಿಸಿದ್ದಾರೆ. ಮೈಸೂರಿನ ನಜರ್‍ಬಾದ್‍ನಲ್ಲಿರುವ ಲೋಕೋಪಯೋಗಿ ಇಲಾಖೆ ಅತಿಥಿ ಗೃಹದಲ್ಲಿ ಶನಿವಾರ ಎನ್.ಆರ್.ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ…
ಹೇಳಿದ್ದನ್ನಷ್ಟೇ ಮಾಡುವ ಅಧಿಕಾರಿಗಳು ನಮಗೆ ಬೇಕಿಲ್ಲ!
June 24, 2018ಶಾಸಕ ತನ್ವೀರ್ ಸೇಠ್ ಖಡಕ್ ನುಡಿ ಸಮಸ್ಯೆ ಪತ್ತೆ ಮಾಡಿ ಪರಿಹರಿಸುವವರು ನಮಗೆ ಬೇಕಿದೆ ಮೈಸೂರು: ಜನರ ಸಮಸ್ಯೆಗಳ ಪತ್ತೆ ಮಾಡಿ ಅದಕ್ಕೆ ಪರಿಹಾರ ಕಂಡು ಹಿಡಿಯುವ ಮನೋಭಾವದ ಅಧಿಕಾರಿಗಳಿಗೆ ಪ್ರೋತ್ಸಾಹ ನೀಡುತ್ತೇನೆ. ಕೇವಲ ಹೇಳಿದ್ದನ್ನು ಮಾತ್ರ ಮಾಡುವ ಅಧಿಕಾರಿಗಳನ್ನು ಸಹಿಸುವುದಿಲ್ಲ. ಕಾಮಗಾರಿ ನಡೆಯದೆ ಇದ್ದರೂ ಬಿಲ್ ಪಾವತಿಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಶಾಸಕ ತನ್ವೀರ್ ಸೇಠ್ ಎಚ್ಚರಿಕೆ ನೀಡಿದ್ದಾರೆ. ಮೈಸೂರಿನ ನಜರ್‍ಬಾದ್‍ನಲ್ಲಿರುವ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದಲ್ಲಿ ಶನಿವಾರ ಎನ್.ಆರ್.ಕ್ಷೇತ್ರದ ಅಭಿವೃದ್ಧಿ ಕುರಿತಂತೆ ನಗರ…
ಸ್ವಾಮಿ ವಿವೇಕಾನಂದರ ಆದರ್ಶ ಯುವಕರಿಗೆ ದಾರಿದೀಪ
June 24, 2018ದಲಿತ ಚಿಂತಕ ಪ್ರೊ.ಬಿ.ಕೃಷ್ಣಪ್ಪ ಜನ್ಮ ದಿನದ ಕಾರ್ಯಕ್ರಮದಲ್ಲಿ ಮೈಸೂರು ರಾಮಕೃಷ್ಣಾಶ್ರಮದ ಸ್ವಾಮಿ ಮೋಕ್ಷಾನಂದ ಜೀ ಅಭಿಮತ ಮೈಸೂರು: ಯುವಕರು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಂಡು ತಮ್ಮ ಮುಂದಿನ ಜೀವನ ರೂಪಿಸಿಕೊಳ್ಳಬೇಕು ಎಂದು ಮೈಸೂರು ರಾಮಕೃಷ್ಣಾಶ್ರಮದ ಸ್ವಾಮಿ ಮೋಕ್ಷಾನಂದ ಮಹಾರಾಜ್ ಅಭಿಪ್ರಾಯಪಟ್ಟರು. ಹೆಬ್ಬಾಳದ ಡಾ.ಬಿ.ಆರ್.ಅಂಬೇಡ್ಕರ್ ಜನ ಸಮುದಾಯದ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ದಲಿತ ಚಿಂತಕ ಪ್ರೊ.ಬಿ.ಕೃಷ್ಣಪ್ಪ ಅವರ 80 ನೇ ಜನುಮ ದಿನದ ಅಂಗವಾಗಿ ಸಾಮಾಜಿಕ ಸಮತಾ ದಿನಾಚರಣೆ, ಪೌರಕಾರ್ಮಿಕರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ…
ರಾಷ್ಟ್ರೀಯ ಪಂಚಕರ್ಮ ಕಾರ್ಯಾಗಾರಕ್ಕೆ ಚಾಲನೆ
June 24, 2018ಮೈಸೂರು: ಜೆಎಸ್‍ಎಸ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾ ಲಯ ಮತ್ತು ಆಸ್ಪತ್ರೆ, ಪಂಚಕರ್ಮ ಸ್ನಾತಕೋತ್ತರ ವಿಭಾಗದವರು ಹಮ್ಮಿಕೊಂಡಿದ್ದ 6 ದಿನಗಳ ರಾಷ್ಟ್ರೀಯ ಪಂಚಕರ್ಮ ಕಾರ್ಯಾಗಾರ (ಎಲ್‍ಎಂಇ)ವನ್ನು ಕಾಲೇಜಿನ ಸಭಾಂಗಣದಲ್ಲಿ ಉದ್ಘಾಟಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರ ಮೈಸೂರಿನ ಉಪನಿರ್ದೇಶಕ ಡಾ. ಲಕ್ಷ್ಮೀ ನಾರಾಯಣ ಶೆಣೈ ನಂತರ ಮಾತನಾಡುತ್ತಾ, ಆಯುರ್ವೇದದಲ್ಲಿ ಜಾಗತಿಕ ಮಟ್ಟದ ಸಂಶೋಧನೆ ಹಾಗೂ ಅಂಕಿ-ಅಂಶಗಳ ಸಂಶೋಧನಾತ್ಮಕ ಪುರಾವೆಗಳ ಅಗತ್ಯಗಳ ಕುರಿತು ವಿವರಿಸಿದರು. ಮುಂಬರುವ ದಿನಗಳಲ್ಲಿ ಆಶಾ ಕಾರ್ಯಕರ್ತರಿಗೆ ಆಯುರ್ವೇದದ ಮೂಲಭೂತ ಚಿಕಿತ್ಸೆಗಳ ಅರಿವು ಮೂಡಿಸಲು…