ಮೈಸೂರು

ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುವ ಹಾವಳಿಗೆ ಕಡಿವಾಣ ಹಾಕದ ಅಧಿಕಾರಿ ವರ್ಗ
ಮೈಸೂರು

ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುವ ಹಾವಳಿಗೆ ಕಡಿವಾಣ ಹಾಕದ ಅಧಿಕಾರಿ ವರ್ಗ

June 18, 2018

ಮೈಸೂರು:  ಮೈಸೂರಿನ ರಿಂಗ್‍ರಸ್ತೆ ಬದಿಯಲ್ಲಿ ಕಟ್ಟಡ ತ್ಯಾಜ್ಯದ ರಾಶಿ ಹೆಚ್ಚುತ್ತಿದ್ದರೂ ನಗರ ಪಾಲಿಕೆ ನಿರ್ಲಕ್ಷ್ಯ ವಹಿಸಿರುವ ಪರಿಣಾಮ ನಗರದ ಪ್ರಮುಖ ರಸ್ತೆಗಳೂ ಇದಕ್ಕೆ ಗುರಿಯಾಗುತ್ತಿವೆ. ಕೆಆರ್‍ಎಸ್ ರಸ್ತೆಯಲ್ಲಿ ಇಎಸ್‍ಐ ಆಸ್ಪತ್ರೆ ಹಾಗೂ ಶಿವಮ್ಮ ಮಹದೇವಪ್ಪ ಕಲ್ಯಾಣ ಮಂಟಪದ ನಡುವೆ ರಸ್ತೆ ಬದಿಯಲ್ಲಿ ಕಟ್ಟಡ ತ್ಯಾಜ್ಯವನ್ನು ಸುರಿಯಲಾಗಿದೆ. ಈ ರಸ್ತೆಯಲ್ಲಿ ಸದಾ ವಾಹನ ಸಂಚಾರವಿರುವ ಕಾರಣ ಯಾರೋ ಕಿಡಿಗೇಡಿಗಳು ರಾತ್ರಿ ವೇಳೆ ಕಟ್ಟಡ ತ್ಯಾಜ್ಯವನ್ನು ವಾಹನಗಳಲ್ಲಿ ತಂದು ಸುರಿದು ಹೋಗಿದ್ದಾರೆ. ಕೆಆರ್‍ಎಸ್‍ನಿಂದ ಮೈಸೂರಿಗೆ ಬರುವ ಪ್ರವಾಸಿಗರಿಗೆ ಸ್ವಚ್ಛ ನಗರದ…

ಇಂದಿನಿಂದ ಎರಡು ದಿನ  ಸಾವಯವ ಮಾವು ಮೇಳ
ಮೈಸೂರು

ಇಂದಿನಿಂದ ಎರಡು ದಿನ  ಸಾವಯವ ಮಾವು ಮೇಳ

June 18, 2018

ಮೈಸೂರು: ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಕೃಷಿ ಮಾರಾಟ ಅಧ್ಯಯನ ಸಂಸ್ಥೆ ಸಭಾಂಗಣದಲ್ಲಿ ಜೂ.18ರಿಂದ ಎರಡು ದಿನಗಳ `ಸಾವಯವ ಮಾವು ಮೇಳ ಮತ್ತು ಸಾವಯವ ಕೃಷಿ ತರಬೇತಿ ಕಾರ್ಯಾಗಾರ’ ನಡೆಯಲಿದೆ. ಮೈಸೂರು ಆಕಾಶವಾಣಿ , ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟ, ಕೃಷಿ ಮಾರಾಟ ಅಧ್ಯಯನ ಸಂಸ್ಥೆ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಪ್ರಾಂತೀಯ ಸಹಕಾರ ಸಾವಯವ ಒಕ್ಕೂಟಗಳ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 10.30ರಿಂದ ಸಂಜೆ 5.30ರವರೆಗೆ ನಡೆಯುವ ಸಾವಯವ…

ವಿಶ್ವ ಯೋಗದ ದಿನದ ಅಂತಿಮ ತಾಲೀಮಿನಲ್ಲಿ 10 ಸಾವಿರಕ್ಕೂ ಹೆಚ್ಚು ಯೋಗಪಟುಗಳು ಭಾಗಿ
ಮೈಸೂರು

ವಿಶ್ವ ಯೋಗದ ದಿನದ ಅಂತಿಮ ತಾಲೀಮಿನಲ್ಲಿ 10 ಸಾವಿರಕ್ಕೂ ಹೆಚ್ಚು ಯೋಗಪಟುಗಳು ಭಾಗಿ

June 18, 2018

 ಜೂ.21ರಂದು ಒಂದು ಲಕ್ಷ ಯೋಗಪಟುಗಳಿಂದ ಬೃಹತ್ ಯೋಗ ಪ್ರದರ್ಶನ ಮೈಸೂರಿನ ರೇಸ್‍ಕೋರ್ಸ್ ಆವರಣದಲ್ಲಿ ನಡೆದ ತಾಲೀಮಿನಲ್ಲಿ ಸಚಿವರು, ಶಾಸಕರು ಭಾಗಿ ಮೈಸೂರು: ವಿಶ್ವ ಯೋಗದ ದಿನದ ಹಿನ್ನೆಲೆಯಲ್ಲಿ ಭಾನುವಾರ ಮೈಸೂರಿನ ರೇಸ್‍ಕೋರ್ಸ್ ಆವರಣದಲ್ಲಿ ನಡೆದ ಅಂತಿಮ ತಾಲೀಮಿನಲ್ಲಿ ವಿವಿಧ ಯೋಗ ಸಂಸ್ಥೆಗಳು ಹಾಗು ಶಾಲಾ-ಕಾಲೇಜುಗಳ ಸುಮಾರು 10 ಸಾವಿರಕ್ಕೂ ಹೆಚ್ಚು ಯೋಗಪಟುಗಳು ಪಾಲ್ಗೊಂಡಿದ್ದರು. ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಆಯುಷ್ ಇಲಾಖೆ, ನೆಹರು ಯುವ ಕೇಂದ್ರ, ಎಸ್‍ಪಿವೈಎಸ್‍ಎಸ್, ಜಿಎಸ್‍ಎಸ್ ಯೋಗಿಕ್ ಫೌಂಡೇಶನ್, ಪತಂಜಲಿ ಸಂಸ್ಥೆ, ಮೈಸೂರು ಯೋಗ ಒಕ್ಕೂಟ,…

ಅನೇಕ ವಿಮರ್ಶಕರು ಪಕ್ಷಪಾತಿಗಳಾಗುತ್ತಿದ್ದಾರೆ ಸಾಹಿತಿ ಡಾ. ದೊಡ್ಡರಂಗೇಗೌಡ ವಿಷಾದ
ಮೈಸೂರು

ಅನೇಕ ವಿಮರ್ಶಕರು ಪಕ್ಷಪಾತಿಗಳಾಗುತ್ತಿದ್ದಾರೆ ಸಾಹಿತಿ ಡಾ. ದೊಡ್ಡರಂಗೇಗೌಡ ವಿಷಾದ

June 18, 2018

ಮೈಸೂರು: ವಿಮರ್ಶಕರಲ್ಲಿ ಇಂದು ಬಹುತೇಕರು ಸಹೃದಯತೆ ಮರೆತು ಪಕ್ಷಪಾತಿಗಳಾಗುತ್ತಿದ್ದಾರೆ ಎಂದು ಹಿರಿಯ ಸಾಹಿತಿ ಪದ್ಮಶ್ರೀ ಪುರಸ್ಕೃತ ಡಾ.ದೊಡ್ಡರಂಗೇಗೌಡ ವಿಷಾದಿಸಿದರು. ಮೈಸೂರಿನ ಜೆಎಲ್‍ಬಿ ರಸ್ತೆಯ ಇನ್ಸ್‍ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಹೇಮಗಂಗಾ ಕಾವ್ಯ ಬಳಗದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು ಗೀತೆ ರಚಿಸಿದ್ದ `ಪರಸಂಗದ ಗೆಂಡೆತಿಮ್ಮ’ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಪತ್ರಿಕೆಗಳಲ್ಲಿ ಹಾಡುಗಳಿಗೆ ಸಂಬಂಧಿಸಿದಂತೆ ವಿಮರ್ಶೆಗಳು ಪ್ರಕಟಗೊಂಡಿದ್ದವು. ಆ ವಿಮರ್ಶೆಗಳನ್ನು ಓದಿದವರು ಸಿನಿಮಾ ನೋಡುವ ನಿರ್ಧಾರವನ್ನೇ ಕೈಬಿಡುತ್ತಿದ್ದರು. ಆ ರೀತಿಯ…

ಮೈಸೂರಲ್ಲಿ ಪ್ರೊ.ಕೆ.ರಾಮದಾಸ್ ಸ್ಮರಣೆ ರಾಮರಾಜ್ಯ ಪರಿಕಲ್ಪನೆಯಿಂದ ದೇಶ ಕಟ್ಟಲು ಸಾಧ್ಯ ಹಿರಿಯ ರಂಗಕರ್ಮಿ ಪ್ರಸನ್ನ ಅಭಿಮತ
ಮೈಸೂರು

ಮೈಸೂರಲ್ಲಿ ಪ್ರೊ.ಕೆ.ರಾಮದಾಸ್ ಸ್ಮರಣೆ ರಾಮರಾಜ್ಯ ಪರಿಕಲ್ಪನೆಯಿಂದ ದೇಶ ಕಟ್ಟಲು ಸಾಧ್ಯ ಹಿರಿಯ ರಂಗಕರ್ಮಿ ಪ್ರಸನ್ನ ಅಭಿಮತ

June 18, 2018

ಮೈಸೂರು:  `ರಾಮರಾಜ್ಯ ಪರಿಕಲ್ಪನೆ’ಯಿಂದ ದೇಶದಲ್ಲಿ ಕೋಮು ಸೌಹಾರ್ದತೆ ನೆಲೆಸಲು ಹಾಗೂ ದೇಶ ಕಟ್ಟಲು ಸಾಧ್ಯವಿದೆ ಎಂದು ಹಿರಿಯ ರಂಗಕರ್ಮಿ ಪ್ರಸನ್ನ ಪ್ರತಿಪಾದಿಸಿದರು.ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ದೇಸಿರಂಗ ಸಾಂಸ್ಕøತಿಕ ಸಂಸ್ಥೆ ವತಿಯಿಂದ ಪ್ರಗತಿಪರ ಚಿಂತಕ ಪ್ರೊ.ಕೆ.ರಾಮದಾಸ್ ಸ್ಮರಣಾರ್ಥ ಭಾನುವಾರ ಹಮ್ಮಿಕೊಂಡಿದ್ದ ಸಂವಾದ, ಪುಸ್ತಕ ಬಿಡುಗಡೆ ಸಮಾರಂಭವನ್ನು ಡೊಳ್ಳು ಭಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜವಾದ, ಅಂಬೇಡ್ಕರ್ ವಾದ ಎಲ್ಲವನ್ನೂ ರಾಮಾಯಣದಲ್ಲಿ ನೋಡಲು ಸಾಧ್ಯವಿದೆ. ರಾಮಾಯಣ ಮಹಾಕಾವ್ಯ ರೂಪಕವಾಗಿದ್ದು ಈ ಹಿನ್ನೆಲೆಯಲ್ಲಿ ನಾವು ಅರ್ಥೈಸಿಕೊಳ್ಳುವುದರ ಆಧಾರದಲ್ಲಿ ಅದರ ಅರ್ಥ…

ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ
ಮೈಸೂರು

ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ

June 18, 2018

ಮೈಸೂರು: ಮೈಸೂರಿನ ಕೃಷ್ಣಮೂರ್ತಿಪುರಂ ಸರ್ಕಾರಿ ಮಿಶ್ರಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿರಣ್ಮಯಿ ಪ್ರತಿಷ್ಠಾನ ಆಯೋಜಿಸಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಮತ್ತು ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ ವಿತರಣಾ ಕಾರ್ಯಕ್ರಮ ನಡೆಯಿತು. ಕಲಾವಿದ ಹೆಚ್.ವಿ.ಮುರಳೀಧರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಬಡತನದಿಂದಾಗಿ ಬಾಲಕಾರ್ಮಿಕರಾಗಿ ದುಡಿಯುತ್ತಿರುವ ಮಕ್ಕಳನ್ನು ಗುರುತಿಸಿ ಶಿಕ್ಷಣ ಕೊಡಿಸಿ ಮುಖ್ಯವಾಹಿನಿಗೆ ತರುವ ಅಗತ್ಯವಿದೆ ಎಂದು ಹೇಳಿದರು. ಬಾಲಕಾರ್ಮಿಕರು ಎಂದರೆ ಯಾರು? ಇವರ ಶೋಷಣೆ ತಡೆಯುವುದು ಹೇಗೆ? ಎಲ್ಲಿಗೆ ದೂರು ನೀಡಬೇಕು? ಬಾಲಕಾರ್ಮಿಕ ನಿಷೇಧ ಕಾಯಿದೆ ಏನು…

ಐದು ವರ್ಷ ನಾವೇ ಅಧಿಕಾರದಲ್ಲಿರುತ್ತೇವೆ: ಹೆಚ್.ಡಿ.ರೇವಣ್ಣ ವಿಶ್ವಾಸ
ಮೈಸೂರು

ಐದು ವರ್ಷ ನಾವೇ ಅಧಿಕಾರದಲ್ಲಿರುತ್ತೇವೆ: ಹೆಚ್.ಡಿ.ರೇವಣ್ಣ ವಿಶ್ವಾಸ

June 18, 2018

ಹುಬ್ಬಳ್ಳಿ: ಐದು ವರ್ಷಗಳ ಕಾಲ ನಾವೇ ಅಧಿಕಾರದಲ್ಲಿರುತ್ತೇವೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ದೃಢವಾಗಿ ಹೇಳಿದರು. ನಗರದಲ್ಲಿಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ನಾವು ಸಂಪೂರ್ಣ ಐದು ವರ್ಷಗಳೂ ಅಧಿಕಾರದಲ್ಲಿ ಮುಂದುವರೆಯುತ್ತೇವೆ ಎಳ್ಳಷ್ಟೂ ಶಂಕೆ ಬೇಡ ಎಂದು ಅವರು ನುಡಿದರು. ನನಗೆ ಸೂಪರ್ ಸಿ.ಎಂ. ಎಂದು ಪಟ್ಟಕಟ್ಟಿ ಪುಕ್ಕಟೆ ಪ್ರಚಾರ ನೀಡಲಾಗುತ್ತಿದೆ ಎಂದು ಅವರು ನಗುತ್ತಲೇ ನುಡಿದ ಅವರು, ನಾನು ಲೋಕೋಪಯೋಗಿ ಇಲಾಖೆ ಕೆಲಸಗಳನ್ನು ಮಾತ್ರ ಮಾಡಿರುವೆ. ಅದನ್ನು ಹೊರತುಪಡಿಸಿ…

ಮೈಸೂರಲ್ಲಿ ಪರಿಸರ ಜಾಗೃತಿ ಸಮಾವೇಶ
ಮೈಸೂರು

ಮೈಸೂರಲ್ಲಿ ಪರಿಸರ ಜಾಗೃತಿ ಸಮಾವೇಶ

June 18, 2018

ಮೈಸೂರು: ನಾವು ಸೇವಿಸುವ ಗಾಳಿ, ನೀರು, ಆಹಾರ ಗುಣಮಟ್ಟದಿಂದ ಕೂಡಿರ ಬೇಕಾದರೆ, ರಾಸಾಯನಿಕ ಮುಕ್ತ ಹಾಗೂ ನಮ್ಮ ಸುತ್ತಮುತ್ತಲಿನ ಪರಿಸರ ಶುದ್ಧ ಹಸಿರು ವಲಯವಾಗಿರಬೇಕು ಎಂದು ಕರ್ನಾಟಕ ರಾಜ್ಯ ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷ ಟಿ.ಮಹದೇವಸ್ವಾಮಿ ಅಭಿಪ್ರಾಯಪಟ್ಟರು. ಮೈಸೂರು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಪಕ್ಕದಲ್ಲಿರುವ ಜಿಲ್ಲಾ ಕಸಾಪ ಸಭಾಂಗಣದಲ್ಲಿ ಭಾರತೀಯ ಸಾಂಸ್ಕೃತಿಕ ವಿಕಾಸ ವೇದಿಕೆ ಹಾಗೂ ಕರ್ನಾಟಕ ರಾಜ್ಯ ಪರಿಸರ ಜಾಗೃತಿ ವೇದಿಕೆ ಸಂಯುಕ್ತಾಶ್ರಯದಲ್ಲಿ ನಡೆದ `ಪರಿಸರ ಜಾಗೃತಿ ಸಮಾವೇಶ ಮತ್ತು ಸ್ಮರಣೀಯರ ನುಡಿನಮನ’ ಕಾರ್ಯಕ್ರಮದಲ್ಲಿ…

ಇಂದು ಮೋದಿ, ಗಡ್ಕರಿ ಭೇಟಿಯಾಗಲಿರುವ ಸಿಎಂ ಕುಮಾರಸ್ವಾಮಿ
ದೇಶ-ವಿದೇಶ, ಮೈಸೂರು

ಇಂದು ಮೋದಿ, ಗಡ್ಕರಿ ಭೇಟಿಯಾಗಲಿರುವ ಸಿಎಂ ಕುಮಾರಸ್ವಾಮಿ

June 18, 2018

ನವದೆಹಲಿ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ನಾಳೆ (ಜೂ.18) ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವ ರನ್ನು ಭೇಟಿ ಮಾಡಲಿದ್ದಾರೆ. ಮುಖ್ಯ ಮಂತ್ರಿಗಳ ಪ್ರಧಾನಿ ಭೇಟಿಗೆ ನಾಳೆ ಸಂಜೆ 4.30ಕ್ಕೆ ಸಮಯ ನಿಗದಿಯಾಗಿದೆ. ಈ ವೇಳೆ ರಾಜ್ಯದ ಹಲವಾರು ಯೋಜನೆ ಗಳ ಬಗ್ಗೆ ಮೋದಿ ಅವರ ಸಹಕಾರವನ್ನು ಕುಮಾರಸ್ವಾಮಿ ಕೋರಲಿದ್ದಾರೆ. ಕಾವೇರಿ ನಿರ್ವಹಣಾ ಮಂಡಳಿ ರಚನೆ ಹಾಗೂ ರಾಜ್ಯಕ್ಕೆ ಕಲ್ಲಿದ್ದಲು ಪೂರೈಕೆ ಕುರಿತು ಗಡ್ಕರಿ ಅವರ ಜೊತೆ ಚರ್ಚಿಸಲಿದ್ದಾರೆ.

ಯೋಗಿಕ್ ಪ್ರೋಗ್ರಾಮ್ ಕ್ಯಾಂಪ್
ಮೈಸೂರು

ಯೋಗಿಕ್ ಪ್ರೋಗ್ರಾಮ್ ಕ್ಯಾಂಪ್

June 18, 2018

ಮೈಸೂರು: ವಿರ್‍ವಿಧ ಅಕಾಡೆಮಿ, ಶ್ರೀಪರಮಹಂಸ ಮಹಾ ವಿದ್ಯಾಲಯ ಟ್ರಸ್ಟ್ ಹಾಗೂ ಸ್ವಾಮಿ ವಿವೇಕಾನಂದ ಕೇಂದ್ರ, ಕನ್ಯಾಕುಮಾರಿ ಸಂಯುಕ್ತಾಶ್ರಯದಲ್ಲಿ ಅಂತಾ ರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಉಚಿತ 10 ದಿನಗಳ ಫಿಟ್ ಅಂಡ್‍ಸ್ಲಿಮ್ ಸ್ವಿಚುಯಲ್ ಯೋಗಿಕ್ ಪ್ರೋಗ್ರಾಮ್ ಕ್ಯಾಂಪ್ ಆಯೋಜಿಸಲಾಗಿದೆ. ಜೂ. 21ರಿಂದ 30ರವರೆಗೆ ಪ್ರತಿ ದಿನ ಬೆಳಿಗ್ಗೆ 6.30ರಿಂದ 7.30ರವರೆಗೆ ಹಾಗೂ ಸಂಜೆ 7ರಿಂದ 8ಗಂಟೆ ವರೆಗೆ ಸರಸ್ವತಿಪುರಂನ ಎಸ್‍ಬಿಐ ಮುಂಭಾಗದಲ್ಲಿರುವ ವಿರ್‍ವಿಧ ಅಕಾಡೆಮಿಯಲ್ಲಿ ನಡೆಯಲಿದೆ. ಮಾಹಿತಿಗಾಗಿ ಮೊ. 9035506790, 8618126067 ಸಂಪರ್ಕಿಸಿ.

1 1,541 1,542 1,543 1,544 1,545 1,611
Translate »