ಮೈಸೂರು

ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಧಿಕ ಸಂಖ್ಯೆಯಲ್ಲಿ ಯೋಗ ಪಟುಗಳ ಭಾಗಿಗೆ ಮನವಿ
ಮೈಸೂರು

ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಧಿಕ ಸಂಖ್ಯೆಯಲ್ಲಿ ಯೋಗ ಪಟುಗಳ ಭಾಗಿಗೆ ಮನವಿ

June 17, 2018

ಮೈಸೂರು: ಜೂನ್ 21ರಂದು ನಡೆಯಲಿರುವ ಅಂತಾ ರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯೋಗ ಪಟು ಗಳು ಭಾಗವಹಿಸಿ ಮೈಸೂರು ಮತ್ತೊಮ್ಮೆ ಗಿನ್ನಿಸ್ ದಾಖಲೆ ಪುಟ ಸೇರುವಂತೆ ಮಾಡಬೇಕೆಂದು ಹೋಟೆಲ್ ಮಾಲೀ ಕರ ಸಂಘದ ಅಧ್ಯಕ್ಷ ಸಿ.ನಾರಾಯಣ ಗೌಡ ಮನವಿ ಮಾಡಿದ್ದಾರೆ. ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಮೈಸೂರು ರೇಸ್ ಕೋರ್ಸ್ ಮೈದಾನದಲ್ಲಿ ನಡೆಯಲಿರುವ ವಿಶ್ವ ಯೋಗ ದಿನಾಚರಣೆಯನ್ನು ಮೈಸೂರು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಆಯುಷ್ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದು, ಮೈಸೂರು ಯೋಗ ಒಕ್ಕೂಟಗಳು, ಟ್ರಾವೆಲ್ ಅಸೋಸಿಯೇಷನ್ ಗಳು…

ಬೆಂಗಳೂರನ್ನು ಪ್ಲಾಸ್ಟಿಕ್, ತ್ಯಾಜ್ಯ ಮುಕ್ತಗೊಳಿಸಲು ಶೀಘ್ರ ಕ್ರಮ: ಹೆಚ್‍ಡಿಕೆ
ಮೈಸೂರು

ಬೆಂಗಳೂರನ್ನು ಪ್ಲಾಸ್ಟಿಕ್, ತ್ಯಾಜ್ಯ ಮುಕ್ತಗೊಳಿಸಲು ಶೀಘ್ರ ಕ್ರಮ: ಹೆಚ್‍ಡಿಕೆ

June 17, 2018

ಬೆಂಗಳೂರು: ಬೆಂಗಳೂರು ನಗರವನ್ನು ಪ್ಲಾಸ್ಟಿಕ್ ಹಾಗೂ ತ್ಯಾಜ್ಯ ಮುಕ್ತ ಗೊಳಿಸಲು ಬಿ-ಪ್ಯಾಕ್ ತಂಡದ ಅಭಿಪ್ರಾಯ ವನ್ನು ನಿಗದಿತ ಕಾಲಾವಧಿಯೊಳಗೆ ಅನುಷ್ಠಾನಗೊಳಿ ಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದ್ದಾರೆ. ಬಿ-ಪ್ಯಾಕ್ ಕಚೇರಿಗೆ ಭೇಟಿ ನೀಡಿದ ಅವರು, ಬೆಂಗಳೂರು ನಗರಾಭಿವೃದ್ಧಿ ಸಚಿವರು ಹಾಗೂ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಜೊತೆ ಚರ್ಚಿಸಿ, ವಿವಿಧ ಸಂಸ್ಥೆಗಳ ಸಭೆ ಕರೆದು, ಅವಶ್ಯವಿರುವ ಎಲ್ಲಾ ಯೋಜನೆಗಳನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು. ಬೆಂಗಳೂರು ಅಭಿವೃದ್ಧಿಗೆ…

ಕೆ.ಆರ್.ಕ್ಷೇತ್ರದ ನಾಗರಿಕ ಸಮಸ್ಯೆಗಳ ನೀಲನಕ್ಷೆ ಸಿದ್ಧಪಡಿಸಿ
ಮೈಸೂರು

ಕೆ.ಆರ್.ಕ್ಷೇತ್ರದ ನಾಗರಿಕ ಸಮಸ್ಯೆಗಳ ನೀಲನಕ್ಷೆ ಸಿದ್ಧಪಡಿಸಿ

June 17, 2018

ವಿವಿಧ ಇಲಾಖೆ ಅಧಿಕಾರಿಗಳಿಗೆ ಶಾಸಕ ರಾಮದಾಸ್ ಸೂಚನೆ ಜೂ.22ರಿಂದ ವಾರ್ಡ್‍ವಾರು ಪಾದಯಾತ್ರೆ ಮೂಲಕ ಸಮಸ್ಯೆಗೆ ಪರಿಹಾರ ಮೈಸೂರು: ಮೈಸೂರಿನ ಕೃಷ್ಣರಾಜ ಕ್ಷೇತ್ರದ ನೀರು ಸರಬರಾಜು, ಒಳಚರಂಡಿ, ರಸ್ತೆ ಸೇರಿದಂತೆ ವಿವಿಧ ನಾಗರಿಕ ಮೂಲ ಸಮಸ್ಯೆ ಬಗ್ಗೆ ವಾರ್ಡ್‍ವಾರು ನೀಲನಕ್ಷೆ ತಯಾರಿಸುವಂತೆ ಶಾಸಕ ಎಸ್.ಎ.ರಾಮದಾಸ್, ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವಿದ್ಯಾರಣ್ಯಪುರಂನಲ್ಲಿರುವ ತಮ್ಮ ಕಚೇರಿಯಲ್ಲಿ ಕೆ.ಆರ್.ಕ್ಷೇತ್ರದಲ್ಲಿ ಮುಂದಿನ ಒಂದು ವರ್ಷದ ಅವಧಿಯಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳ ಕುರಿತಂತೆ ನಗರ ಪಾಲಿಕೆ, ವಾಣಿವಿಲಾಸ ನೀರು ಸರಬರಾಜು, ಒಳಚರಂಡಿ, ಅರಣ್ಯ, ತೋಟಗಾರಿಕಾ,…

ನಾಲ್ಕು ಕೃತಿಗಳ ಬಿಡುಗಡೆಸಾಮಾಜಿಕ ಜಾಲ ತಾಣಗಳಿಂದ  ಪುಸ್ತಕ ಸಂಸ್ಕೃತಿಗೆ ಸಂಚಕಾರ: ನಿವೃತ್ತ ಪ್ರಾಧ್ಯಾಪಕ ಡಾ.ಎನ್.ಎಸ್.ತಾರಾನಥ್ ವಿಷಾದ
ಮೈಸೂರು

ನಾಲ್ಕು ಕೃತಿಗಳ ಬಿಡುಗಡೆಸಾಮಾಜಿಕ ಜಾಲ ತಾಣಗಳಿಂದ  ಪುಸ್ತಕ ಸಂಸ್ಕೃತಿಗೆ ಸಂಚಕಾರ: ನಿವೃತ್ತ ಪ್ರಾಧ್ಯಾಪಕ ಡಾ.ಎನ್.ಎಸ್.ತಾರಾನಥ್ ವಿಷಾದ

June 17, 2018

ಮೈಸೂರು: ಇಂದು ಸಾಮಾಜಿಕ ಜಾಲ ತಾಣಗಳ ಭರಾಟೆಯಲ್ಲಿ ಪುಸ್ತಕ ಸಂಸ್ಕೃತಿ ಕ್ಷಿಣಿಸುತ್ತಿದ್ದು, ಇಂತಹ ಸಂದಿಗ್ಧ ಪರಿಸ್ಥಿತಿ ನಿವಾರಿಸಿ, ಪುಸ್ತಕ ಸಂಸ್ಕೃತಿ ವೃದ್ಧಿಗೆ ಒತ್ತು ನೀಡಬೇಕಿದೆ ಎಂದು ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಡಾ.ಎನ್.ಎಸ್.ತಾರಾನಾಥ್ ಹೇಳಿದರು. ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆ ಆವರಣದ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಂವಹನ ಪ್ರಕಾಶನ ಹೊರತಂದಿರುವ ಡಿ.ನಾಗೇಂದ್ರಪ್ಪ ಅವರ `ತಿರುಳ್ಗನ್ನಡ ತಿರುಕ ಉತ್ತಂಗಿ ಚನ್ನಪ್ಪ’, `ಕರುನಾಡ ಸಿರಿ’, ಡಾ.ರಾಮೇಗೌಡ (ರಾಗೌ) ಅವರ `ಬಿಎಂಶ್ರೀ’…

ಸುಯೋಗ್ ಆಸ್ಪತ್ರೆಯಲ್ಲಿ ನರರೋಗ ವಿಭಾಗ ಆರಂಭ
ಮೈಸೂರು

ಸುಯೋಗ್ ಆಸ್ಪತ್ರೆಯಲ್ಲಿ ನರರೋಗ ವಿಭಾಗ ಆರಂಭ

June 17, 2018

ಮೈಸೂರು:  ಮೈಸೂರಿನ ರಾಮಕೃಷ್ಣನಗರದಲ್ಲಿರುವ ಸುಯೋಗ್ ಆಸ್ಪತ್ರೆಯಲ್ಲಿ ಬ್ರೈನ್ ಸಂಸ್ಥೆಯ ಸಹಯೋಗದಲ್ಲಿ ನರರೋಗ ವಿಭಾಗವನ್ನು ಆರಂಭಿಸಲಾಗಿದ್ದು, ವಿವಿಧ ನರರೋಗಕ್ಕೆ ಸಂಬಂಧಿಸಿದಂತೆ ಅತ್ಯಾಧುನಿಕ ವಿಧಾನದ ಮೂಲಕ ಚಿಕಿತ್ಸೆ ನೀಡಲಾಗುವುದು ಎಂದು ಬ್ರೈನ್ಸ್ ಸಂಸ್ಥೆಯ ಅಧ್ಯಕ್ಷ ಡಾ.ಎನ್.ಕೆ.ವೆಂಕಟರಮಣ ತಿಳಿಸಿದ್ದಾರೆ. ಸುಯೋಗ್ ಆಸ್ಪತ್ರೆಯಲ್ಲಿ ಶನಿವಾರ ಹೊಸದಾಗಿ ಆರಂಭಿಸಲಾಗಿರುವ ನರರೋಗ ವಿಭಾಗವನ್ನು ಉದ್ಘಾಟಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಯೋಗ್ ಆಸ್ಪತ್ರೆಯಲ್ಲಿ ಮೆದುಳು, ಮೆದುಳಿನ ಬಳ್ಳಿ ಹಾಗೂ ನರಮಂಡಲಕ್ಕೆ ಸಂಬಂಧಿಸಿದ ಬಹುತೇಕ ಎಲ್ಲ ಸಮಸ್ಯೆಗಳಿಗೆ ಒಂದೇ ಸೂರಿನಡಿ ಚಿಕಿತ್ಸೆ ನೀಡುವುದಕ್ಕಾಗಿ ಪ್ರತ್ಯೇಕ ವಿಭಾಗವನ್ನು ಆರಂಭಿಸಲಾಗಿದೆ….

ಮೈಸೂರಿನ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ :ಕಡಿಮೆ ಬೆಲೆಯ ಸಿಎನ್‍ಸಿ ಕಟಿಂಗ್ ಯಂತ್ರ ಆವಿಷ್ಕಾರ
ಮೈಸೂರು

ಮೈಸೂರಿನ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ :ಕಡಿಮೆ ಬೆಲೆಯ ಸಿಎನ್‍ಸಿ ಕಟಿಂಗ್ ಯಂತ್ರ ಆವಿಷ್ಕಾರ

June 17, 2018

ಮೈಸೂರು:  ಮೈಸೂರಿನ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ (ವಿವಿಸಿಇ) ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಪ್ರದರ್ಶನ ಮತ್ತು ಸ್ಪರ್ಧೆಯಲ್ಲಿ ಸಾಧನೆ ಮೆರೆದಿದ್ದಾರೆ. ಬೆಂಗಳೂರಿನ ದಯಾನಂದಸಾಗರ ಕಾಲೇಜಿನಲ್ಲಿ ನಡೆದ ಪ್ರದರ್ಶನ ಮತ್ತು ಸ್ಪರ್ಧೆಯಲ್ಲಿ ಮೈಸೂರಿನ ವಿವಿಸಿಇ ವಿದ್ಯಾರ್ಥಿಗಳಾದ ಎಸ್‍ವಿ.ಗುಣರಾಮನ್, ಡಿ.ಸಂದೀಪ್, ವಿ.ಮನೀಶ್ ಭಂಡಾರಿ, ಬಿ.ಆರ್.ಸಂಜಯ್ ಆವಿಷ್ಕರಿಸಿದ ಅಗ್ಗದ ಸಿಎನ್‍ಸಿ ಲೇಸರ್ ಕಟಿಂಗ್ ಯಂತ್ರ ಪ್ರಥಮ ಬಹುಮಾನ ಪಡೆದುಕೊಂಡಿದೆ. ರಾಜ್ಯಮಟ್ಟದ ಪ್ರದರ್ಶನದಲ್ಲಿ 120ಕ್ಕೂ ಹೆಚ್ಚು ಇಂಜಿನಿಯರಿಂಗ್ ಕಾಲೇಜುಗಳು ಭಾಗವಹಿಸಿದ್ದವು. ಸಾಮಾನ್ಯವಾಗಿ ಮರ, ಪ್ಲಾಸ್ಟಿಕ್ ಇನ್ನಿತರ ವಸ್ತುಗಳನ್ನು ಕತ್ತರಿಸುವ,…

ರಂಜಾನ್ ವೇಳೆ ಸಹಬಾಳ್ವೆಯ  ಸಂದೇಶ ಸಾರಿದ ಕೌಟಿಲ್ಯ ವಿದ್ಯಾಲಯ
ಮೈಸೂರು

ರಂಜಾನ್ ವೇಳೆ ಸಹಬಾಳ್ವೆಯ  ಸಂದೇಶ ಸಾರಿದ ಕೌಟಿಲ್ಯ ವಿದ್ಯಾಲಯ

June 17, 2018

ಮೈಸೂರು:  ಮಾನವೀಯ ದೌರ್ಬಲ್ಯಗಳಿಂದ ಮನುಷ್ಯನನ್ನು ಮುಕ್ತಗೊಳಿಸಿ, ದೇಹ ಮತ್ತು ಆತ್ಮವನ್ನು ಪವಿತ್ರಗೊಳಿಸುವಂತಹ ರಂಜಾನ್ ಹಬ್ಬ ಎಂದೇ ಜನಪ್ರಿಯವಾಗಿರುವ ಈದ್-ಉಲ್-ಫಿತರ್ ನಗರದ ಕೌಟಿಲ್ಯ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಂದಲೇ ಆಚರಿಸಲ್ಪಟ್ಟಿತು. ಪವಿತ್ರ ಕುರಾನಿನ ಪಠಣೆ ಮಾಡಿ ರಂಜಾನ್ ಆಚರಣೆಯ ಅರಿವು ಮತ್ತು ಆಚರಣೆಯ ಉದ್ದೇಶದ ಬಗ್ಗೆ ತಿಳಿಸಲಾಯಿತು. ವಿದ್ಯಾಲಯದ ಅಧ್ಯಕ್ಷರಾದ ಆರ್.ರಘು ಮಾತನಾಡುತ್ತ ‘ಮನುಷ್ಯ ಮನುಷ್ಯನನ್ನು ಪ್ರೀತಿಸುವ, ಒಬ್ಬರ ವಿಚಾರವನ್ನು ಇನ್ನೊಬ್ಬರ ಜೊತೆ ಹಂಚಿಕೊಂಡು ಎಲ್ಲರೂ ಸಹಬಾಳ್ವೆ ನಡೆಸಬೇಕು. ಇಂತಹ ಸಂದೇಶ ಸಾರುವ ಪವಿತ್ರ ಹಬ್ಬವೇ ರಂಜಾನ್’ ಎಂದು ತಿಳಿಸಿದರು. ಮಕ್ಕಳೆಲ್ಲರೂ…

ಮೈಸೂರು ಜಿಲ್ಲಾ ಪತ್ರಕರ್ತರ ಕ್ರೀಡಾಕೂಟಕ್ಕೆ ಚಾಲನೆ
ಮೈಸೂರು

ಮೈಸೂರು ಜಿಲ್ಲಾ ಪತ್ರಕರ್ತರ ಕ್ರೀಡಾಕೂಟಕ್ಕೆ ಚಾಲನೆ

June 17, 2018

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಫುಟ್‍ಬಾಲ್ ಮೈದಾನದಲ್ಲಿ ಶನಿವಾರ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಿಂದ 2 ದಿನಗಳ ಪತ್ರಕರ್ತರ ಕ್ರೀಡಾಕೂಟಕ್ಕೆ ರಾಷ್ಟ್ರೀಯ ಕ್ರೀಡಾಪಟುಗಳಾದ ಶೂಟರ್ ರಕ್ಷಿತಶಾಸ್ತ್ರಿ, ವಾಲಿಬಾಲ್ ಆಟಗಾರ್ತಿ ಕುಮಾರಿ ಹನಿ, ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಸದಾ ಒತ್ತಡದಲ್ಲಿ ಕೆಲಸ ಮಾಡುವ ಪತ್ರಕರ್ತರಿಗೆ ಕ್ರೀಡಾಕೂಟ ಆಯೋಜಿಸಿರುವುದು ಉತ್ತಮವಾಗಿದೆ. ಪತ್ರಕರ್ತರು ಆರೋಗ್ಯದ ಕಡೆಗೆ ಗಮನಹರಿಸಬೇಕು. ಬೆಳಿಗ್ಗೆ ಸಮಯದಲ್ಲಿ ವಾಯುವಿಹಾರ, ವ್ಯಾಯಾಮ ಮಾಡಬೇಕು ಎಂದು ಕಿವಿಮಾತು ಹೇಳಿದರು. ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ ಮಾತನಾಡಿ,…

ಇಬ್ಬರು ಖದೀಮರ ಸೆರೆ: 12.80 ಲಕ್ಷ ಮೌಲ್ಯದ ಚಿನ್ನಾಭರಣ ವಶ
ಮೈಸೂರು

ಇಬ್ಬರು ಖದೀಮರ ಸೆರೆ: 12.80 ಲಕ್ಷ ಮೌಲ್ಯದ ಚಿನ್ನಾಭರಣ ವಶ

June 17, 2018

ಮೈಸೂರು: ಮೈಸೂರು ನಗರದಲ್ಲಿ ನಡೆದಿದ್ದ 9 ಮನೆ ಕಳ್ಳತನ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 12,80,000 ರೂ. ಮೌಲ್ಯದ 427 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮಂಡ್ಯ ಜಿಲ್ಲೆ, ಚಿಕ್ಕೇಗೌಡನದೊಡ್ಡಿ ಗ್ರಾಮದ ಸೈಯ್ಯದ್ ಅಹಮದ್ ಮಗ ಸೈಯ್ಯದ್ ಇಮ್ರಾನ್(24) ಹಾಗೂ ರಾಮನಗರ ಜಿಲ್ಲೆ, ಚನ್ನಪಟ್ಟಣದ ನವಾಜ್ ಮಗ ಸೈಯ್ಯದ್ ಖಾಲೀದ್(30) ಬಂಧಿತ ಆರೋಪಿಗಳು. ಜೂನ್ 14 ರಂದು ಮೈಸೂರಿನ ಅಶೋಕ ರಸ್ತೆಯ ಆಭರಣ ಅಂಗಡಿಗಳಲ್ಲಿ ಕಳವು ಮಾಲನ್ನು ಮಾರಾಟ ಮಾಡಲು ಹೊಂಚು…

ಕೆಎಸ್‍ಟಿಡಿಸಿ: ವಿವಿಧ ಪ್ರವಾಸ
ಮೈಸೂರು

ಕೆಎಸ್‍ಟಿಡಿಸಿ: ವಿವಿಧ ಪ್ರವಾಸ

June 17, 2018

ಮೈಸೂರು:  ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಮೈಸೂರು ಘಟಕದಿಂದ 2 ಹಾಗೂ 3 ದಿನಗಳ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತಿರುಪತಿ ಮಂಗಾಪುರ ಮತ್ತು ತಿರುಮಲ ದರ್ಶನ ಎರಡು ದಿನ ಪ್ರವಾಸ, ತಿರುಪತಿ ತಿರುಮಲ ಮಂಗಾಪುರ ಮತ್ತು ಸ್ಥಳೀಯ ದೇವಸ್ಥಾನ ಹಾಗೂ ಕಾಳಹಸ್ತಿ ದರ್ಶನ ಮೂರು ದಿನ ಪ್ರವಾಸ ಹಾಗೂ ಜೋಗ ಜಲಪಾತ ಮತ್ತು ಸಿಗಂದೂರು ದೇವಸ್ಥಾನ ಪ್ರವಾಸವನ್ನು ಮೂರು ದಿನ ಹಮ್ಮಿಕೊಳ್ಳಲಾಗಿದೆ. ಪ್ರವೇಶ ದರ ಮತ್ತು ಹೆಚ್ಚಿನ ಮಾಹಿತಿಗೆ ಜೆ.ಎಲ್.ಬಿ. ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಪ್ರವಾಸೋದ್ಯಮ…

1 1,543 1,544 1,545 1,546 1,547 1,611
Translate »