ಮೈಸೂರು

ಒಂದು ವರ್ಷ ನನ್ನ ಯಾರೂ ಟಚ್ ಮಾಡಲು ಸಾಧ್ಯವಿಲ್ಲ: ವಿರೋಧಿಗಳಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸಂದೇಶ
ಮೈಸೂರು

ಒಂದು ವರ್ಷ ನನ್ನ ಯಾರೂ ಟಚ್ ಮಾಡಲು ಸಾಧ್ಯವಿಲ್ಲ: ವಿರೋಧಿಗಳಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸಂದೇಶ

June 16, 2018

ಬೆಂಗಳೂರು:  ಮುಂದಿನ ಲೋಕಸಭಾ ಚುನಾವಣೆವರೆಗೆ ನನ್ನನ್ನು ಯಾರೂ ಟಚ್ ಮಾಡಲು ಸಾಧ್ಯ ವಿಲ್ಲ, ಅಲ್ಲಿಯವರೆಗೂ ಅಧಿಕಾರದಲ್ಲಿ ಇರು ತ್ತೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ಘೋಷಿಸಿದ್ದಾರೆ. ನಗರದಲ್ಲಿ 15ನೇ ರಾಜ್ಯಮಟ್ಟದ ಲೆಕ್ಕ ಪರಿಶೋಧಕರ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಹಳಷ್ಟು ಜನ ಕಾಲೆಳೆಯಲು ಇರುತ್ತಾರೆ ಎಂದು ಪರೋಕ್ಷ ವಾಗಿ ವಿರೋಧ ಪಕ್ಷದ ನಾಯಕರಿಗೆ ತಿರು ಗೇಟು ನೀಡಿದರು. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೇ ಸರ್ಕಾರದ ವಿರುದ್ಧ ಹಲವು ಚಟುವಟಿಕೆ ಗಳು ನಡೆಯುತ್ತಿವೆ, ನಾನು ಇದಕ್ಕೆ…

ಸಾಲ ಮನ್ನಾಕ್ಕೆ ಬದ್ಧ, ಆತಂಕ ಬೇಡ
ಮೈಸೂರು

ಸಾಲ ಮನ್ನಾಕ್ಕೆ ಬದ್ಧ, ಆತಂಕ ಬೇಡ

June 16, 2018

ಬೆಂಗಳೂರು: ಬ್ಯಾಂಕ್‍ಗಳಲ್ಲಿ ರೈತರು ಪಡೆದಿರುವ ಕೃಷಿ ಸಾಲ ಮನ್ನಾಕ್ಕೆ ಬದ್ಧವಾಗಿದ್ದು, ಯಾವುದೇ ಆತಂಕ ಬೇಡ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತೆ ಅಭಯ ನೀಡಿದ್ದಾರೆ. ತಮ್ಮ ಟ್ವಿಟರ್‍ನಲ್ಲಿ ಇಂದು ತಿಳಿಸಿರುವ ಅವರು, ವೈಜ್ಞಾನಿಕವಾಗಿ ರೈತರಿಗೆ ಹೆಚ್ಚು ಸೌಲಭ್ಯ ಸಿಗಬೇಕು, ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಶೀಘ್ರದಲ್ಲೇ ಸಾಲ ಮನ್ನಾ ಕುರಿತು ಘೋಷಣೆ ಮಾಡಲಾಗುವುದು ಎಂದಿದ್ದಾರೆ. ಬೇರೆ ಪಕ್ಷಗಳ ಮುಖಂಡರಂತೆ ಪಲಾಯನವಾದಿಯಲ್ಲ. ಚುನಾವಣೆ ವೇಳೆ ನೀಡಿದ್ದ ಭರವಸೆ ಈಡೇರಿಸಲು ಬದ್ಧ. ಅಧಿಕಾರಿಗಳ ಜತೆ ಚರ್ಚಿಸುತ್ತಿದ್ದು, ಬ್ಯಾಂಕ್‍ಗಳಲ್ಲಿ ರೈತರ ಸಾಲ ಕುರಿತು ಮಾಹಿತಿ…

ಚುನಾವಣಾ ಪ್ರಚಾರ ವೇಳೆ ಗ್ಯಾಸ್ ಬಲೂನ್ ಸ್ಫೋಟ ತೀವ್ರ ಸುಟ್ಟ ಗಾಯಗಳಿಂದ ನರಳುತ್ತಿರುವ ಬಡ ಬಾಲಕ
ಮಂಡ್ಯ, ಮೈಸೂರು

ಚುನಾವಣಾ ಪ್ರಚಾರ ವೇಳೆ ಗ್ಯಾಸ್ ಬಲೂನ್ ಸ್ಫೋಟ ತೀವ್ರ ಸುಟ್ಟ ಗಾಯಗಳಿಂದ ನರಳುತ್ತಿರುವ ಬಡ ಬಾಲಕ

June 16, 2018

3 ತಿಂಗಳಾದರೂ ದೊರಕದ ಪರಿಹಾರ, ನೆರವಿನ ನಿರೀಕ್ಷೆಯಲ್ಲಿ ಬಡ ಕುಟುಂಬ ಮಂಡ್ಯ:  ಕಳೆದ ವಿಧಾನ ಸಭಾ ಚುನಾವಣೆ ವೇಳೆ ರಾಜಕಾರಣಿಗಳ ಪ್ರಚಾರದ ಭರಾಟೆಗೆ ಬಡ ಬಾಲಕನೊಬ್ಬನ ಬದುಕು ಬರಡಾಗಿದೆ. ತೀವ್ರ ಕಡು ಬಡತನದ ಈ ಕುಟುಂಬ ಗಾಯಾಳು ಬಾಲಕನನ್ನು ಉಳಿಸಿಕೊಳ್ಳಲು ಪರದಾಡುತ್ತಿದೆ. ನೆರವು ನೀಡುತ್ತೇವೆ ಎಂದಿದ್ದ, ದುರಂತಕ್ಕೆ ಕಾರಣರೂ ಆದ ಕಾಂಗ್ರೆಸ್ ನಾಯಕರು ಇತ್ತ ಸುಳಿದಿಲ್ಲ. ತೀವ್ರ ಸುಟ್ಟಗಾಯಗಳಿಂದ ಕಳೆದ ಮೂರು ತಿಂಗಳಿಂದ ನರಳುತ್ತ್ತಿರೋ ಈ ಬಾಲಕನ ಹೆಸರು ಮಾದೇಶ. ಏನಿದು ಪ್ರಕರಣ: ಕಳೆದ ಮಾರ್ಚ್ 23…

ಜಿಟಿಡಿಗೆ ಅಬಕಾರಿ, ಎಪಿಎಂಸಿ?
ಮೈಸೂರು

ಜಿಟಿಡಿಗೆ ಅಬಕಾರಿ, ಎಪಿಎಂಸಿ?

June 16, 2018

ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರ ಖಾತೆ ಬದಲಿಸಲು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಒಪ್ಪಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಉನ್ನತ ಶಿಕ್ಷಣ ಖಾತೆಯನ್ನು ತಾವೇ ವಹಿಸಿಕೊಂಡು ತಮ್ಮ ಬಳಿ ಇರುವ ಅಬಕಾರಿ ಖಾತೆ ಜೊತೆಗೆ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಖಾತೆಗಳನ್ನು ಮುಖ್ಯಮಂತ್ರಿಗಳು ಸೋಮವಾರ ಅಥವಾ ಮಂಗಳವಾರ ಜಿ.ಟಿ.ದೇವೇಗೌಡರಿಗೆ ನೀಡಲಿದ್ದಾರೆ ಎನ್ನಲಾಗಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ 30 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಭರ್ಜರಿ ಜಯ ಸಾಧಿಸಿದ್ದ ಜಿ.ಟಿ.ದೇವೇಗೌಡರಿಗೆ ಉನ್ನತ ಶಿಕ್ಷಣ ಖಾತೆ…

ಉನ್ನತ ಶಿಕ್ಷಣ ಇಲಾಖೆ ಸಲಹೆಗಾರರಾಗಿ ಪ್ರೊ.ಕೆ.ಎಸ್.ರಂಗಪ್ಪ?
ಮೈಸೂರು

ಉನ್ನತ ಶಿಕ್ಷಣ ಇಲಾಖೆ ಸಲಹೆಗಾರರಾಗಿ ಪ್ರೊ.ಕೆ.ಎಸ್.ರಂಗಪ್ಪ?

June 16, 2018

ಮೈಸೂರು:  ಮೈಸೂರು ವಿಶ್ವ ವಿದ್ಯಾ ನಿಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಅವರನ್ನು ಉನ್ನತ ಶಿಕ್ಷಣ ಇಲಾಖೆಯ ಸಲಹೆ ಗಾರರನ್ನಾಗಿ ರಾಜ್ಯ ಸರ್ಕಾರ ನೇಮಿಸಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸಂಪುಟದ ಸಚಿವರೂ ಆಗಿರುವ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡರಿಗೆ ಉನ್ನತ ಶಿಕ್ಷಣ ಖಾತೆ ನೀಡಿದ್ದರೂ, ಅವರು ಈ ಜವಾಬ್ದಾರಿ ವಹಿಸಿ ಕೊಂಡಿಲ್ಲ. ನಾನು ರೈತರು, ಸಾಮಾನ್ಯ ಜನ ರೊಂದಿಗೆ ಬೆಳೆದು ಬಂದಿದ್ದು, ಅವರೊಂದಿಗಿದ್ದು ಕೆಲಸ ಮಾಡಬಹುದಾದ ಖಾತೆಯನ್ನು ನೀಡಬೇಕೆಂದು…

ದಕ್ಷಿಣ ಕೊಡಗಿನ ಹಲವೆಡೆ  ಸಾರಿಗೆ ಬಸ್ ಸಂಚಾರ ಸ್ಥಗಿತ
ಮೈಸೂರು

ದಕ್ಷಿಣ ಕೊಡಗಿನ ಹಲವೆಡೆ  ಸಾರಿಗೆ ಬಸ್ ಸಂಚಾರ ಸ್ಥಗಿತ

June 16, 2018

ಮೈಸೂರು/ತಿತಿಮತಿ: ಒಂದು ವಾರದಿಂದ ಸುರಿ ಯುತ್ತಿರುವ ಧಾರಾಕಾರ ಮಳೆಯಿಂದಾಗಿ ರಸ್ತೆ ಹಾಗೂ ಸೇತುವೆಗಳು ಕೊಚ್ಚಿ ಹೋಗಿ ರುವ ಹಿನ್ನೆಲೆಯಲ್ಲಿ ಮೈಸೂರಿನಿಂದ ದಕ್ಷಿಣ ಕೊಡಗಿನ ವಿವಿಧೆಡೆಗೆ ಸಾರಿಗೆ ಬಸ್‍ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಮೈಸೂರು ಗ್ರಾಮಾಂತರ ಬಸ್ ನಿಲ್ದಾಣ ದಿಂದ ಪ್ರತಿದಿನ ವಿರಾಜಪೇಟೆ, ಗೋಣಿಕೊಪ್ಪ, ಬಾಳೆಲೆ, ಪೊನ್ನಂಪೇಟೆ, ಕುಟ್ಟ ಸೇರಿದಂತೆ ದಕ್ಷಿಣ ಕೊಡಗಿನ ವಿವಿಧೆಡೆಗೆ ಸುಮಾರು 50ರಿಂದ 60 ಬಸ್‍ಗಳು ಸಂಚರಿಸುತ್ತಿದ್ದವು. ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಗೆ ತಿತಿಮತಿ, ಕುಟ್ಟ, ಗೋಣಿಕೊಪ್ಪ ಸೇರಿದಂತೆ ವಿವಿಧೆಡೆ ಗುಡ್ಡ ಕುಸಿದಿದ್ದು, ಹಲವೆಡೆ…

ರಾಜ್ಯದ ಎಸ್ಸಿ, ಎಸ್ಟಿ ನೌಕರರ ಬಡ್ತಿ ಮೀಸಲಾತಿ ವಿಧೇಯಕಕ್ಕೆ ರಾಷ್ಟ್ರಪತಿ ಅಂಕಿತ
ಮೈಸೂರು

ರಾಜ್ಯದ ಎಸ್ಸಿ, ಎಸ್ಟಿ ನೌಕರರ ಬಡ್ತಿ ಮೀಸಲಾತಿ ವಿಧೇಯಕಕ್ಕೆ ರಾಷ್ಟ್ರಪತಿ ಅಂಕಿತ

June 16, 2018

ಬೆಂಗಳೂರು: ಕರ್ನಾ ಟಕ ಸರಕಾರದ ಬಡ್ತಿ ಮೀಸಲಾತಿ ವಿಧೇಯಕಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಂಕಿತ ಹಾಕಿ ರುವುದಾಗಿ ವರದಿಯಾಗಿದೆ. ಮುಂಬಡ್ತಿ ಪಡೆದಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡದ ಸರಕಾರಿ ಅಧಿಕಾರಿಗಳಿಗೆ ಇದು ಅತ್ಯಂತ ಸಿಹಿ ಸುದ್ದಿಯಾಗಿದೆ. 2017ರ ಡಿಸೆಂಬರ್ 16ರಂದು ರಾಜ್ಯ ಸರಕಾರ ರಾಷ್ಟ್ರಪತಿಯವರಿಗೆ ಎಸ್‍ಸಿ/ಎಸ್‍ಟಿ ನೌಕರರ ಬಡ್ತಿ ಮೀಸಲಾತಿ ವಿಧೇಯಕವನ್ನು ಕಳುಹಿಸಿಕೊಟ್ಟಿತ್ತು. ಈ ವಿಧೇಯಕವನ್ನು ಅಂದಿನ ಸಿಎಂ ಸಿದ್ಧರಾಮಯ್ಯ ನೇತೃತ್ವದ ಸರಕಾರ ಉಭಯ ಸದನಗಳಲ್ಲಿ ಅಂಗೀಕರಿ ಸಿತ್ತು. ಇದೀಗ ಅದಕ್ಕೆ ರಾಷ್ಟ್ರಪತಿ ಸಹಿ ಹಾಕಿದ್ದಾರೆ….

ಎಚ್‍ಡಿಕೆ ವಚನಭ್ರಷ್ಟ, ಯಾವತ್ತೂ  ರೈತರ ಸಾಲ ಮನ್ನಾ ಮಾಡಲ್ಲ: ಜಗದೀಶ್ ಶೆಟ್ಟರ್
ಮೈಸೂರು

ಎಚ್‍ಡಿಕೆ ವಚನಭ್ರಷ್ಟ, ಯಾವತ್ತೂ  ರೈತರ ಸಾಲ ಮನ್ನಾ ಮಾಡಲ್ಲ: ಜಗದೀಶ್ ಶೆಟ್ಟರ್

June 16, 2018

ಹುಬ್ಬಳ್ಳಿ:  ರೈತರ ಸಾಲ ಮನ್ನಾ ವಿಚಾರ ದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ತಾವು ಒಬ್ಬ ವಚನಭ್ರಷ್ಟ ಎಂಬು ದನ್ನು ಮತ್ತೆ ಸಾಬೀತು ಪಡಿಸಲಿದ್ದಾರೆ ಎಂದು ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಶುಕ್ರವಾರ ಹೇಳಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಮಾಜಿ ಸಿಎಂ, ಕುಮಾರಸ್ವಾಮಿ ಒಬ್ಬ ವಚನಭ್ರಷ್ಟ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅವರು ಯಾವತ್ತೂ ರೈತರ ಸಾಲ ಮನ್ನಾ ಮಾಡಲ್ಲ. ಸಮ್ಮಿಶ್ರ ಸರ್ಕಾ ರದಲ್ಲಿ ಅವರ ಪಾತ್ರ ಅತ್ಯಂತ ಕಡಿಮೆ ಮತ್ತು ರಾಜ್ಯದ ಆರ್ಥಿಕ…

ಮೈತ್ರಿ ಸರ್ಕಾರದ ವೈಫಲ್ಯ: ಜೂ. 30ಕ್ಕೆ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ
ಮೈಸೂರು

ಮೈತ್ರಿ ಸರ್ಕಾರದ ವೈಫಲ್ಯ: ಜೂ. 30ಕ್ಕೆ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

June 16, 2018

ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾ ರದ ವೈಫಲ್ಯ ಮುಂದಿಟ್ಟುಕೊಂಡು ಬಿಜೆಪಿ ಇದೇ 30 ರಂದು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ. ರೈತರ ಸಾಲ ಮನ್ನಾ, ರೈತರ ಆತ್ಮಹತ್ಯೆ ತಡೆಯುವಲ್ಲಿ ವಿಫಲತೆ ಸೇರಿದಂತೆ ಸರ್ಕಾರದ ಮಂದ ಧೋರಣೆಯನ್ನು ವಿರೋಧಿಸಿ ಹೋರಾ ಟಕ್ಕೆ ನಿರ್ಧರಿಸಿದೆ. ರೈತ ಮೋರ್ಚಾ ನೇತೃತ್ವದಲ್ಲಿ ಜೂ.30ರಿಂದ ಜುಲೈ 15ರವರೆಗೆ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿಭಟನೆ ನಡೆಸಲಿದೆ. ದಕ್ಷಿಣ ಕರ್ನಾಟಕ, ಮಧ್ಯ ಕರ್ನಾಟಕ, ಮುಂಬೈ ಕರ್ನಾಟಕ, ಕರಾವಳಿ ಹಾಗೂ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಸಂಚರಿಸಲಿರುವ ಈ ತಂಡವು…

ಆಡಳಿತದಲ್ಲಿ ಕನ್ನಡ ಬಳಕೆಗೆ 316 ಆದೇಶ ಹೊರಡಿಸಿದರೂ ನಿರೀಕ್ಷಿತ ಫಲ ದೊರೆತಿಲ್ಲ
ಮೈಸೂರು

ಆಡಳಿತದಲ್ಲಿ ಕನ್ನಡ ಬಳಕೆಗೆ 316 ಆದೇಶ ಹೊರಡಿಸಿದರೂ ನಿರೀಕ್ಷಿತ ಫಲ ದೊರೆತಿಲ್ಲ

June 16, 2018

 ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ವಿಷಾಧ  ಆಡಳಿತ ತರಬೇತಿ ಸಂಸ್ಥೆ, ದಸರಾ ವಸ್ತು ಪ್ರದರ್ಶನ ಕಚೇರಿಯಲ್ಲಿ ಕನ್ನಡ ಬಳಕೆ ಸಂಬಂಧ ಪರಿಶೀಲನೆ ಮೈಸೂರು:  ಆಡಳಿತದಲ್ಲಿ ಕನ್ನಡ ಭಾಷೆ ಕಡ್ಡಾಯ ಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಇದು ವರೆಗೂ 316 ಆದೇಶಗಳನ್ನು ಹೊರಡಿ ಸಿದ್ದರೂ ಕೆಲವು ಇಲಾಖೆ ಕಚೇರಿಗಳಲ್ಲಿ ಅನ್ಯ ಭಾಷೆಗಳ ವ್ಯಾಮೋಹದಿಂದ, ಕನ್ನಡವನ್ನು ಕಡೆಗಣಿಸುವ ವರ್ತನೆಗಳು ನಡೆಯುತ್ತಿವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ವಿಷಾದಿಸಿದ್ದಾರೆ. ಆಡಳಿತದಲ್ಲಿ ಕನ್ನಡ ಅನುಷ್ಠಾನದ ಪ್ರಗತಿ ಕುರಿತು ಶುಕ್ರವಾರ…

1 1,545 1,546 1,547 1,548 1,549 1,611
Translate »