ಮೈಸೂರು

ವಿದ್ವತ್ ಮೇಲಿನ ಹಲ್ಲೆ ಪ್ರಕರಣ ನಲಪಾಡ್‍ಗೆ ಜಾಮೀನು 116 ದಿನಗಳ ಜೈಲು ವಾಸ ಅಂತ್ಯ
ಮೈಸೂರು

ವಿದ್ವತ್ ಮೇಲಿನ ಹಲ್ಲೆ ಪ್ರಕರಣ ನಲಪಾಡ್‍ಗೆ ಜಾಮೀನು 116 ದಿನಗಳ ಜೈಲು ವಾಸ ಅಂತ್ಯ

June 15, 2018

ಬೆಂಗಳೂರು: ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿ ಸಿದಂತೆ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮಹಮ್ಮದ್ ನಲ್ ಪಾಡ್‍ಗೆ ಹೈಕೋರ್ಟ್‍ನಿಂದ ಷರತ್ತುಬದ್ಧ ಜಾಮೀನು ದೊರೆತಿದೆ. ಕಳೆದ 116 ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ರುವ ನಲ್‍ಪಾಡ್‍ನ ಜಾಮೀನು ಅರ್ಜಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ನಾ ಇಂದು ಪ್ರಕಟಿಸಿದರು. ನ್ಯಾಯಾಲಯದ ಅನುಮತಿ ಇಲ್ಲದೆ ಬೆಂಗಳೂರು ಬಿಟ್ಟು ತೆರಳುವಂತಿಲ್ಲ, ಕೋರ್ಟ್ ವಶಕ್ಕೆ ಪಾಸ್ ಪೋರ್ಟ್ ನೀಡ ಬೇಕು. 2 ಲಕ್ಷ ಭದ್ರತಾ ಠೇವಣಿ , ಇಬ್ಬರ ಶ್ಯೂರಿಟಿ ಮತ್ತು…

ಸಣ್ಣಪುಟ್ಟ ಸಮಸ್ಯೆ ಹೊತ್ತು ಜನ ಬೆಂಗಳೂರಿಗೆ ಬಂದರೆ ಸ್ಥಳೀಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ
ಮೈಸೂರು

ಸಣ್ಣಪುಟ್ಟ ಸಮಸ್ಯೆ ಹೊತ್ತು ಜನ ಬೆಂಗಳೂರಿಗೆ ಬಂದರೆ ಸ್ಥಳೀಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ

June 15, 2018

ಬೆಂಗಳೂರು: ನಾಗರಿಕರು, ಸಮಸ್ಯೆಗಳ ಪರಿಹಾರಕ್ಕೆ ಅರ್ಜಿ ಹಿಡಿದುಕೊಂಡು ಬೆಂಗಳೂರಿಗೆ ಬರಲು ಕಾರಣರಾಗುವ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರದ ಇಲಾಖಾ ಪ್ರಧಾನ ಕಾರ್ಯದರ್ಶಿ ಅವರಿಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ಕಟ್ಟಾದೇಶ ಮಾಡಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿ ಕೊಂಡ ನಂತರ ವಿಧಾನಸೌಧದ ಸಮ್ಮೇ ಳನ ಸಭಾಂಗಣದಲ್ಲಿ ವಿವಿಧ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಹಾಗೂ ಕಾರ್ಯ ದರ್ಶಿಗಳೊಂದಿಗೆ ಸಮಾಲೋಚನೆ ನಡೆಸಿದ ಸಂದರ್ಭದಲ್ಲಿ ಸರ್ಕಾರದ ಆಡಳಿತ ಕುಸಿ ಯಲು ಕೆಳ ಹಂತದ ಅಧಿಕಾರಿಗಳೇ…

ಮೈಸೂರು-ಮಡಿಕೇರಿ ರೈಲು ಮಾರ್ಗ ಕುಶಾಲನಗರಕ್ಕೆ ಸೀಮಿತ: ಪರಿಸರವಾದಿಗಳ ಒತ್ತಡದ ಫಲಶ್ರುತಿ
ಕೊಡಗು, ಮೈಸೂರು

ಮೈಸೂರು-ಮಡಿಕೇರಿ ರೈಲು ಮಾರ್ಗ ಕುಶಾಲನಗರಕ್ಕೆ ಸೀಮಿತ: ಪರಿಸರವಾದಿಗಳ ಒತ್ತಡದ ಫಲಶ್ರುತಿ

June 15, 2018

ಮೈಸೂರು:  ಪರಿಸರವಾದಿಗಳು, ಗ್ರೀನ್ ಗ್ರೂಪ್ಸ್ ಮತ್ತು ಜನಪ್ರತಿನಿಧಿಗಳು ಒತ್ತಡಕ್ಕೆ ಮಣಿದ ಭಾರತೀಯ ರೈಲು ಮಂಡಳಿಯು ಮೈಸೂರು-ಮಡಿಕೇರಿ ರೈಲು ಮಾರ್ಗವನ್ನು ಕುಶಾಲನಗರಕ್ಕೆ ಸೀಮಿತಗೊಳಿಸಲು ನಿರ್ಧರಿಸಿದೆ.ಮಡಿಕೇರಿ ಭಾಗದ ದಟ್ಟ ಅರಣ್ಯ ಪ್ರದೇಶದ ಮರಗಳು ನಾಶವಾಗುವುದನ್ನು ಮನಗಂಡು ರೈಲು ಮಾರ್ಗ ಯೋಜನೆಯನ್ನು ಕುಶಾಲನಗರಕ್ಕೆ ಸೀಮಿತಗೊಳಿಸಲು ಮುಂದಾಗಿರುವ ರೈಲ್ವೇ ಇಲಾಖೆಯು, ನೈಸರ್ಗಿಕ ಸಂಪತ್ತು ಉಳಿಸುವ ನಿರ್ಧಾರ ಕೈಗೊಂಡಿದೆ. ಈ ಕುರಿತು ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯೆ ನೀಡಿದ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಕುಶಾಲನಗರ ಈಗಾಗಲೇ ಅಭಿವೃದ್ಧಿಯಾಗಿದೆ. ಇನ್ನೂ ವಿಸ್ತಾರವಾಗಿ ಮಡಿಕೇರಿಯಂತೆಯೇ ಬೆಳೆಯುವ ಎಲ್ಲಾ…

ಮೈಸೂರಲ್ಲಿ ಸದ್ಯದಲ್ಲೇ ಉದ್ಯಮ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆ
ಮೈಸೂರು

ಮೈಸೂರಲ್ಲಿ ಸದ್ಯದಲ್ಲೇ ಉದ್ಯಮ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆ

June 15, 2018

ಭಾರತೀಯ ಕೈಗಾರಿಕೆಗಳ ಒಕ್ಕೂಟದ ಅಧ್ಯಕ್ಷ ಡಾ. ಮುತ್ತುಕುಮಾರ್ ಭರವಸೆ ಮೈಸೂರು ಕೈಗಾರಿಕಾ ಸಂಘದಿಂದ ಅಭಿನಂದನೆ ಕೈಗಾರಿಕಾ ವಲಯದಲ್ಲಿ ವಸತಿ ಸಮುಚ್ಛಯ ನಿರ್ಮಾಣ ತಡೆಗೆ ಮನವಿ ಮೈಸೂರು:  ಕೇಂದ್ರ ಸರ್ಕಾರ, ಭಾರತೀಯ ಕೈಗಾರಿಕೆಗಳ ಒಕ್ಕೂ ಟಕ್ಕೆ 15 ಕೋಟಿ ರೂ. ಬಿಡುಗಡೆ ಮಾಡಿದ್ದು, ಶೀಘ್ರದಲ್ಲಿಯೇ ಮೈಸೂರಿನಲ್ಲಿ ಕೌಶಲ್ಯಾಭಿ ವೃದ್ಧಿ ಕೇಂದ್ರ ಸ್ಥಾಪನೆಗೆ ಕ್ರಮ ಕೈಗೊಳ್ಳುವು ದಾಗಿ ಭಾರತೀಯ ಕೈಗಾರಿಕೆಗಳ ಒಕ್ಕೂಟದ (ಸಿಐಐ) ಅಧ್ಯಕ್ಷ ಡಾ.ಎನ್.ಮುತ್ತುಕುಮಾರ್ ಭರವಸೆ ನೀಡಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ರಾಣಿಬಹದ್ದೂರ್ ಸಭಾಂಗಣದಲ್ಲಿ ಮೈಸೂರು ಕೈಗಾರಿಕೆಗಳ ಸಂಘ ಗುರುವಾರ…

ಗುಡ್ಡ ಕುಸಿದು ಬೆಂಗಳೂರು-ಮಂಗಳೂರು ರೈಲುಸಂಚಾರ ಕೆಲ ಕಾಲ ಸ್ಥಗಿತ
ಮೈಸೂರು

ಗುಡ್ಡ ಕುಸಿದು ಬೆಂಗಳೂರು-ಮಂಗಳೂರು ರೈಲುಸಂಚಾರ ಕೆಲ ಕಾಲ ಸ್ಥಗಿತ

June 15, 2018

ಮೈಸೂರು: ಬುಧವಾರ ಸುರಿದ ಭಾರೀ ಮಳೆಯಿಂದಾಗಿ ಸುಬ್ರಹ್ಮಣ್ಯ-ಶಿರಿವಾಗಿರಿ ರೈಲ್ವೆ ನಿಲ್ದಾಣಗಳ ಮಧ್ಯೆ ಇಂದು ಬೆಳಿಗ್ಗೆ ಗುಡ್ಡ ಕುಸಿದು ರೈಲು ಸಂಚಾರ ಸ್ಥಗಿತಗೊಳಿಸಲಾಯಿತು. ಕಾರವಾರ-ಯಶವಂತಪುರ ಎಕ್ಸ್‍ಪ್ರೆಸ್ ರೈಲು ಸುಬ್ರಹ್ಮಣ್ಯ ಸ್ಟೇಷನ್‍ಗೆ ಆಗಮಿಸಿದ ವೇಳೆ ಗುಡ್ಡ ಕುಸಿದ ಕಾರಣ ಈ ರೈಲು ಸಂಚಾರವನ್ನು ಇಂದು ರದ್ದುಗೊಳಿಸಲಾಯಿತು. ಪ್ರಯಾಣ ಕರ ಟಿಕೆಟ್ ದರವನ್ನು ಹಿಂದಿರುಗಿಸಲಾಯಿತು. ಮಂಗಳೂರಿಗೆ ವಾಪಸ್ ತೆರಳಲು ಸಿದ್ಧರಿದ್ದ ಪ್ರಯಾಣಿಕರಿಗೆ ರೈಲಿನಲ್ಲಿ ತೆರಳಲು ಅವಕಾಶ ಕಲ್ಪಿಸಲಾಯಿತು. ಪ್ರಯಾಣಿಕರಿಗಾಗಿ ಆಹಾರ ಪೊಟ್ಟಣ, ಕಾಫಿ, ಟೀ ಮತ್ತು ನೀರಿನ ಬಾಟಲಿಗಳನ್ನು ವಿತರಿಸಲಾಯಿತು. ಯಶವಂತಪುರ-ಮಂಗಳೂರು…

`ಆರೋಗ್ಯ ಕರ್ನಾಟಕ’ ಸಾರ್ವತ್ರಿಕ ವೈದ್ಯಕೀಯ ಯೋಜನೆ ಟಿ.ನರಸೀಪರದಲ್ಲಿ ಪ್ರಾಯೋಗಿಕ ಜಾರಿ
ಮೈಸೂರು

`ಆರೋಗ್ಯ ಕರ್ನಾಟಕ’ ಸಾರ್ವತ್ರಿಕ ವೈದ್ಯಕೀಯ ಯೋಜನೆ ಟಿ.ನರಸೀಪರದಲ್ಲಿ ಪ್ರಾಯೋಗಿಕ ಜಾರಿ

June 15, 2018

ಮೈಸೂರು:  ಸಹಕಾರ ಸಂಘ ಗಳ ಸದಸ್ಯರಿಗೆ ಆರೋಗ್ಯ ಭಾಗ್ಯ ಕಲ್ಪಿಸಿದ `ಯಶಸ್ವಿನಿ ಯೋಜನೆ’ ಸೇರಿದಂತೆ ವಿವಿಧ ವೈದ್ಯಕೀಯ ಸೌಲಭ್ಯ ಯೋಜನೆಗಳನ್ನು ವಿಲೀನಗೊಳಿಸಿ `ಆರೋಗ್ಯ ಕರ್ನಾಟಕ’ ಯೋಜನೆ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿ ನಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ‘ಆರೋಗ್ಯ ಕರ್ನಾಟಕ: ಸಾರ್ವತ್ರಿಕ ಆರೋಗ್ಯ ರಕ್ಷಣಾ ಯೋಜನೆ’ಯಡಿ ತಿ.ನರಸೀಪುರ ತಾಲೂಕಿನಲ್ಲಿ ಸುಮಾರು 8 ಸಾವಿರ ಹೆಲ್ತ್ ಕಾರ್ಡ್ ವಿತರಣೆ ಮಾಡ ಲಾಗಿದೆ. ಎಲ್ಲಾ ಜಿಲ್ಲೆಗಳ ಒಂದೊಂದು ತಾಲೂಕಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಅನುಷ್ಠಾನಗೊಳಿ ಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ರಾಜ್ಯಾದ್ಯಂತ ವಿಸ್ತರಿ…

ಶಾಸಕ ಬಿ.ಹರ್ಷವರ್ಧನ್‍ಗೆ ಶ್ರೀ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದಲ್ಲಿ ಅವ್ಯವಸ್ಥೆ, ಅವ್ಯವಹಾರ ದಿವ್ಯ ದರ್ಶನ
ಮೈಸೂರು

ಶಾಸಕ ಬಿ.ಹರ್ಷವರ್ಧನ್‍ಗೆ ಶ್ರೀ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದಲ್ಲಿ ಅವ್ಯವಸ್ಥೆ, ಅವ್ಯವಹಾರ ದಿವ್ಯ ದರ್ಶನ

June 15, 2018

ನಂಜನಗೂಡು:  ಇಲ್ಲಿನ ಪ್ರಸಿದ್ಧ ಶ್ರೀ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನ ಒಳ ಮತ್ತು ಹೊರಗಡೆ ಪರಿಸರ, ಭಕ್ತಾದಿಗಳ ಸೌಕರ್ಯ, ಇನ್ನಿತರ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು ನೂತನ ಶಾಸಕ ಬಿ.ಹರ್ಷವರ್ಧನ್ ಅನಿರೀಕ್ಷಿತ ಭೇಟಿ ನೀಡಿದ್ದು, ದೇವಾ ಲಯದ ಸುತ್ತ ಅವ್ಯವಸ್ಥೆಗಳ ಅಗರ, ಹೆಜ್ಜೆ-ಹೆಜ್ಜೆಗೂ ಸಮಸ್ಯೆಗಳ ಸರಮಾಲೆ, ಅತಿಥಿ ಗೃಹದಲ್ಲಿ ಅವ್ಯವ ಹಾರ ದರ್ಶನವಾಯಿತು. ಇವುಗಳನ್ನು ಶೀಘ್ರದಲ್ಲೇ ಸರಿಪಡಿಸಬೇಕೆಂದು ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿಗೆ ಅವರು ಆದೇಶಿಸಿದರು. ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಪ್ರತಿ ವರ್ಷ ಭಕ್ತಾದಿಗಳಿಂದ ಕೋಟ್ಯಾಂತರ ರೂ.ಗಳ ಆದಾಯ ಬಂದು ರಾಜ್ಯದಲ್ಲೆ ಮುಜರಾಯಿ ದೇವಸ್ಥಾನ…

ಉಚಿತ ಬಸ್ ಪಾಸ್‍ಗಾಗಿ ಜೂ.19ರಂದು ರಾಜ್ಯಾದ್ಯಂತ ವಿದ್ಯಾರ್ಥಿಗಳ ಪ್ರತಿಭಟನೆ
ಮೈಸೂರು

ಉಚಿತ ಬಸ್ ಪಾಸ್‍ಗಾಗಿ ಜೂ.19ರಂದು ರಾಜ್ಯಾದ್ಯಂತ ವಿದ್ಯಾರ್ಥಿಗಳ ಪ್ರತಿಭಟನೆ

June 15, 2018

ಮೈಸೂರು: ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಶೀಘ್ರ ಆದೇಶ ಹೊರಡಿಸಬೇಕೆಂದು ಆಗ್ರಹಿಸಿ ಜೂ.19ರಂದು ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಪ್ರತಿಭಟನೆ ನಡೆಸುತ್ತಿದ್ದು, ಅಂದು ರಾಜ್ಯ, ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಐಡಿಎಸ್‍ಓ ಜಿಲ್ಲಾಧ್ಯಕ್ಷ ಬಸವರಾಜು ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಡಿಎಸ್‍ಓ, ಎಐಡಿವೈಓ ಹಾಗೂ ಎಐಎಂಎಸ್‍ಎಸ್ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಗಳು ತಮ್ಮ ಆಕ್ರೋಶ ವ್ಯಕ್ತಪಡಿಸಲಿದ್ದಾರೆ….

ತ.ನಾಡು ಸಾರಿಗೆ ಬಸ್ ಪ್ರಪಾತಕ್ಕೆ ಉರುಳಿ 8 ಮಂದಿ ಸಾವು: ಊಟಿ ಬಳಿ ದುರ್ಘಟನೆ
ಮೈಸೂರು

ತ.ನಾಡು ಸಾರಿಗೆ ಬಸ್ ಪ್ರಪಾತಕ್ಕೆ ಉರುಳಿ 8 ಮಂದಿ ಸಾವು: ಊಟಿ ಬಳಿ ದುರ್ಘಟನೆ

June 15, 2018

ಊಟಿ: ಮಳೆಯ ನಡುವೆ ಚಲಿಸುತ್ತಿದ್ದ ತಮಿಳುನಾಡು ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ 200 ಅಡಿ ಆಳದ ಪ್ರಪಾತಕ್ಕೆ ಉಳಿಬಿದ್ದ ಬಿದ್ದ ಪರಿಣಾಮ 13 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 25ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಭೀಕರ ಘಟನೆ ಊಟಿ ಬಳಿ ಕುನ್ನೂರು ರಸ್ತೆಯಲ್ಲಿ ಗುರುವಾರ ಬೆಳಗ್ಗೆ ಸಂಬವಿಸಿದೆ. ಊಟಿ ಬಸ್ ನಿಲ್ದಾಣದಿಂದ ಕುನ್ನೂರಿಗೆ ಇಂದು ಬೆಳಗ್ಗೆ 11.30ಕ್ಕೆ 40 ಪ್ರಯಾಣಿಕರನ್ನು ಹೊತ್ತು ಪ್ರಯಾಣ ಆರಂಭಿಸಿತ್ತು. ಊಟಿ ಬಸ್ ನಿಲ್ದಾಣದಿಂದ 10 ಕಿ.ಮಿ ದೂರವಷ್ಟೇ ತೆರಳಿದ್ದ ತಮಿಳುನಾಡು…

ಕೆಸರು ಗದ್ದೆಯಂತಾಗಿರುವ ರಸ್ತೆ
ಮೈಸೂರು

ಕೆಸರು ಗದ್ದೆಯಂತಾಗಿರುವ ರಸ್ತೆ

June 15, 2018

ಕಟ್ಟೆಮಳಲವಾಡಿ:  ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ರಸ್ತೆ ಕೆಸರು ಗದ್ದೆಯಂತಾಗಿದೆ. ಹುಣಸೂರು ತಾಲೂಕು ಕಟ್ಟೆಮಳಲವಾಡಿ ಗ್ರಾಮದ ಜಿ.ಟಿ. ಬಡಾವಣೆಯ ರಸ್ತೆಯ ಕಥೆ ಇದು. ಬಡಾವಣೆಯ ಪ್ರಾರಂಭದಿಂ ದಲೇ ಈ ಸಮಸ್ಯೆ ಎದುರಾಗಿದ್ದು ಬೈಕ್ ಸವಾರರು ದೂರದಲ್ಲಿಯೇ ನಿಲ್ಲಿಸಿ ಚರಂಡಿ ಅಂಚಿನಲ್ಲಿ ಸಾಗಬೇಕಿದೆ ಶಾಲೆ, ಕಾನ್ವೆಂಟ್‍ಗೆ ಹೋಗುವ ಮಕ್ಕಳು ಹಾಗೂ ಗ್ರಾಮಸ್ಥರಿಗೆ ಹೋಗಲು ಬಹಳ ತೊಂದರೆಯಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ದುರಸ್ತಿ ಮಾಡಿಸಿದರೆ ನಿವಾಸಿಗಳಿಗೆ ತಿರುಗಾಡಲು ಅನುಕೂಲವಾಗುತ್ತದೆ ಎಂದು ಬಡಾವಣೆಯ ನಿವಾಸಿಗಳು ತಿಳಿಸಿದ್ದಾರೆ. ಜಿ.ಟಿ.ಬಡಾವಣೆ…

1 1,547 1,548 1,549 1,550 1,551 1,611
Translate »