ಮೈಸೂರು

ನಾಳೆ ಚಾಮುಂಡಿಬೆಟ್ಟ ಮಹಿಷಾಸುರ ಸನ್ನಿಧಿಯಲ್ಲಿ ಜಾತ್ಯಾತೀತ ಶಕ್ತಿಗಳ ಬಲವರ್ಧನೆ ಪ್ರಾರ್ಥನಾ ಕಾರ್ಯಕ್ರಮ
ಮೈಸೂರು

ನಾಳೆ ಚಾಮುಂಡಿಬೆಟ್ಟ ಮಹಿಷಾಸುರ ಸನ್ನಿಧಿಯಲ್ಲಿ ಜಾತ್ಯಾತೀತ ಶಕ್ತಿಗಳ ಬಲವರ್ಧನೆ ಪ್ರಾರ್ಥನಾ ಕಾರ್ಯಕ್ರಮ

June 9, 2018

ಮೈಸೂರು:  ಜಾತ್ಯಾತೀತ ಜಾಗೃತಿ ಅಭಿಯಾನಕ್ಕೆ ಸಂಕಲ್ಪ ಮಾಡುವ ಸಲುವಾಗಿ ಜೂ.10ರಂದು ಬೆಳಿಗ್ಗೆ 11ಕ್ಕೆ ಚಾಮುಂಡಿಬೆಟ್ಟದ ಮಹಿಷಾಸುರ ಪ್ರತಿಮೆ ಬಳಿ ಜಾತ್ಯಾತೀತ ಶಕ್ತಿಗಳ ಬಲವರ್ಧನೆಯ ಪ್ರಾರ್ಥನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಗತಿಪರ ಚಿಂತಕ ಪ್ರೊ.ಮಹೇಶ್‍ಚಂದ್ರಗುರು ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ಯಾತೀತ ಸಂಘಟನೆಗಳ ಒಕ್ಕೂಟದ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಿದ್ದು, `ಜಾತ್ಯಾತೀತ ಶಕ್ತಿಗಳು ಒಂದುಗೂಡೋಣ, ನಾಡಿನ, ದೇಶದ ಮಾನ-ಸ್ವಾಭಿಮಾನ ಉಳಿಸಿಸೋಣ’ ಎಂಬ ಘೋಷ ವಾಕ್ಯದಡಿ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ…

ಆಗಸ್ಟ್‍ನಲ್ಲಿ ‘ಮಾನಸ ಸರೋವರ’ ಬಿಡುಗಡೆ
ಮೈಸೂರು

ಆಗಸ್ಟ್‍ನಲ್ಲಿ ‘ಮಾನಸ ಸರೋವರ’ ಬಿಡುಗಡೆ

June 9, 2018

ಮೈಸೂರು: ಪ್ರಣಮಾಲಯ ಪಿಚ್ಚರ್ಸ್ ಬ್ಯಾನರ್‍ನಡಿ ನಿರ್ಮಾಣವಾಗಿರುವ `ಮಾನಸ ಸರೋವರ’ ಸಿನಿಮಾ ಆಗಸ್ಟ್ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ಹಾಗೂ ನಿರ್ದೇಶಕ ಬಾಲಸುಬ್ರಹ್ಮಣ್ಯಂ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಪ-ತಾಪದಿಂದ ಬದುಕಿನಲ್ಲಿ ಏನೆಲ್ಲ ದುಷ್ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದು ಸಿನಿಮಾದ ಕಥಾಹಂದರವಾಗಿದೆ. ಇದರೊಂದಿಗೆ ನವಿರಾದ ಪ್ರೇಮ ಕತೆಯನ್ನು ಕೂಡ ಚಿತ್ರ ಹೊಂದಿದೆ ಎಂದರು. ಚಿತ್ರದಲ್ಲಿ ವೆಂಕಟೇಶ್ ಪ್ರಸಾದ್ ನಾಯಕ ನಟರಾಗಿ ನಟಿಸುತ್ತಿದ್ದು, ರಕ್ಷಾ ಮತ್ತು ನೇತ್ರಾ ನಾಯಕಿಯರಾಗಿ ಅಭಿನಯಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ…

ನಾಳೆ ಕೃತಿ ಬಿಡುಗಡೆ
ಮೈಸೂರು

ನಾಳೆ ಕೃತಿ ಬಿಡುಗಡೆ

June 9, 2018

ಮೈಸೂರು: ವಿಜಯಧ್ವನಿ ಪ್ರತಿಷ್ಠಾನದ ಪ್ರಥಮ ವರ್ಷದ ವಾರ್ಷಿಕೋತ್ಸವ, ಹುಬ್ಬಳ್ಳಿಯ ಕಾವ್ಯಮಿತ್ರ ಪ್ರಕಾಶನದ ಉದ್ಘಾಟನೆ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಜೂ.10ರಂದು ಜೆಎಲ್‍ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷೆ ಆರ್.ಸಿ.ರಾಜಲಕ್ಷ್ಮೀ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 2.30ಕ್ಕೆ ಸಾಹಿತಿ ಜಯಪ್ಪ ಹೊನ್ನಾಳಿ ಸಮಾರಂಭ ಉದ್ಘಾಟಿಸಲಿದ್ದು, ಕೌಟಿಲ್ಯ ವಿದ್ಯಾಸಂಸ್ಥೆಯ ಸಂಸ್ಥಾಪಕ ಕೌಟಿಲ್ಯ ರಘು ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕವಿ ನಿತೀನ್ ನೀಲಕಂಠೆ ಅವರ `ಕೂಲಿಂಗ್…

ವಿದೇಶಿಯನ ನೆರವಿಂದ ಅಂಗ ವೈಕಲ್ಯನಿಗೆ ಶಸ್ತ್ರ ಚಿಕಿತ್ಸೆ
ಮೈಸೂರು

ವಿದೇಶಿಯನ ನೆರವಿಂದ ಅಂಗ ವೈಕಲ್ಯನಿಗೆ ಶಸ್ತ್ರ ಚಿಕಿತ್ಸೆ

June 9, 2018

ಮೈಸೂರು:  ಅಂಗವೈಕಲ್ಯದಿಂದ ಬಳಲುತ್ತಿದ್ದ ಬಾಲಕನೊಬ್ಬನಿಗೆ ವಿದೇಶಿ ವ್ಯಕ್ತಿಯೊಬ್ಬರ ಆರ್ಥಿಕ ನೆರವಿನಿಂದ ಯಶಸ್ವಿ ಶಸ್ತ್ರ ಚಿಕಿತ್ಸೆ ನೆರವೇರಿಸಲಾಗಿದೆ ಎಂದು ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕರಾದ ಸ್ಟ್ಯಾನ್ಲಿ ಮತ್ತು ಪರಶು ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರು ಜಿಲ್ಲೆಯ ಯಡಿಯೂರು ತಾಲೂಕಿನ ಕೊಡವತ್ತಿ ಗ್ರಾಮದ ನಿವಾಸಿ ರಾಜು ಅವರ ಪುತ್ರ ವೆಂಕಟೇಶ್ ಅಂಗವೈಕಲ್ಯತೆಯಿಂದ ಬಳಲುತ್ತಿದ್ದ. ಹೊತ್ತಿನ ಊಟಕ್ಕೂ ಕಷ್ಟದ ಪರಿಸ್ಥಿತಿಯಲ್ಲಿದ್ದ ರಾಜು ಅವರು ನಮ್ಮ ಸಂಸ್ಥೆಗೆ ಶಿಕ್ಷಣ ಮತ್ತು ಆರೈಕೆಗಾಗಿ ದಾಖಲಿಸಿದ್ದರು ಎಂದು…

ದಲಿತ ಸಮುದಾಯದವರ ಭೂಮಿ ಕಬಳಿಕೆ ಆರೋಪ
ಮೈಸೂರು

ದಲಿತ ಸಮುದಾಯದವರ ಭೂಮಿ ಕಬಳಿಕೆ ಆರೋಪ

June 9, 2018

ಮೈಸೂರು:  ಮೈಸೂರು ನಗರದ ಯರಗನಹಳ್ಳಿ ಎಲ್ಲೆಯ ದಲಿತ ಸಮುದಾಯದವರ ಜಮೀನನ್ನು ಕೆಲವರು ಲಪಟಾಯಿಸಲು ಹೊರಟ್ಟಿದ್ದಾರೆ ಎಂದು ದಲಿತ ಅಭಿವೃದ್ಧಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಜಿ.ಎಂ.ಮಹದೇವ ಆರೋಪಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತ ಸಮುದಾಯದ ಚಿಕ್ಕಮಂಚ ಎಂಬುವವರ ಆಸ್ತಿಯನ್ನು ಕೆಲವರು ಲಪಟಾಯಿಸಲು ಪ್ರಯತ್ನಿಸುತ್ತಿದ್ದಾರೆ. ಚಿಕ್ಕಮಂಚರವರಿಗೆ ಪಿತ್ರಾರ್ಜಿತವಾಗಿ ಬಂದಿರುವ ಸರ್ವೆ ನಂ. 45/2 ಜಮೀನಿನಲ್ಲಿ ನಿವೃತ್ತ ಅಧಿಕಾರಿಯೊಬ್ಬರು ಅಕ್ರಮವಾಗಿ ಬಹುಮಹಡಿ ಕಟ್ಟಡ ಕಟ್ಟಲು ಪಾಯ ತೆಗೆಸಿದ್ದಾರೆ. ಸದರಿ ಸ್ಥಳದಲ್ಲಿ ನಾಳೆ (ಜೂ.9) ಚಿಕ್ಕಮಂಚ…

ನಾಳೆ ಸೀಡ್‍ಬಾಲ್ ಬಿತ್ತನೆ ಕಾರ್ಯ
ಮೈಸೂರು

ನಾಳೆ ಸೀಡ್‍ಬಾಲ್ ಬಿತ್ತನೆ ಕಾರ್ಯ

June 9, 2018

ಮೈಸೂರು: ಕರ್ನಾಟಕ ನವೋದಯ ವಿದ್ಯಾಲಯಗಳು ಹಾಗೂ ನವೋದಯ ವಿದ್ಯಾಸಂಸ್ಥೆಗಳ ಹಳೇ ವಿದ್ಯಾರ್ಥಿಗಳ ಸಂಘ ಹಾಗೂ ಅರಣ್ಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜೂ.10ರಂದು ಕೋಟಿ ಸೀಡ್‍ಬಾಲ್ ತಯಾರಿಕಾ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಮಂಡ್ಯ ನವೋದಯ ಶಾಲೆಯ ಹಳೇ ವಿದ್ಯಾರ್ಥಿ ಹೆಚ್.ಎನ್.ಭರತ್‍ಕುಮಾರ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿರುವ ಒಟ್ಟು 28 ನವೋದಯ ವಿದ್ಯಾಲಯಗಳಲ್ಲಿ ಏಕಕಾಲದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಅದರಂತೆ ಮೈಸೂರಿನ ಡಿಎಂಜಿ ಹಳ್ಳಿಯಲ್ಲಿರುವ ನವೋದಯ ಶಾಲೆಯ…

ದಿ ಮೈಸೂರು ಕೋ-ಆಪರೇಟಿವ್ ಬ್ಯಾಂಕ್ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ
ಮೈಸೂರು

ದಿ ಮೈಸೂರು ಕೋ-ಆಪರೇಟಿವ್ ಬ್ಯಾಂಕ್ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ

June 9, 2018

ಮೈಸೂರು: ದಿ ಮೈಸೂರು ಕೋ-ಆಪರೇಟಿವ್ ಬ್ಯಾಂಕ್ ವತಿಯಿಂದ ಬ್ಯಾಂಕಿನ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಂದಿನಿಂದ ಜೂ.10ರವರೆಗೆ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಸದಸ್ಯರು ಈ ಸೌಲಭ್ಯ ಪಡೆದುಕೊಳ್ಳಬಹುದು. ಮೈಸೂರಿನ ಗಾಂಧಿಚೌಕದಲ್ಲಿರುವ ಬ್ಯಾಂಕಿನ ಮುಖ್ಯ ಕಚೇರಿ ಆವರಣದಲ್ಲಿ ಏರ್ಪಡಿಸಿರುವ ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಕಣ ್ಣನ ತಪಾಸಣೆ ಹಾಗೂ ಬಿಪಿ, ಶುಗರ್, ಇಸಿಜಿ, ಇಸಿಹೆಚ್‍ಓ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಅನ್ನಪೂರ್ಣ ಕಣ ್ಣನ ಆಸ್ಪತ್ರೆ ಮತ್ತು ಸುಯೋಗ್ ಆಸ್ಪತ್ರೆಯ ಸಹಯೋಗದಲ್ಲಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮಕ್ಕೆ ಶುಕ್ರವಾರ…

‘ಕಾಲಾ’ ಪ್ರದರ್ಶನ ಖಂಡಿಸಿ ಪ್ರತಿಭಟನೆ
ಮೈಸೂರು

‘ಕಾಲಾ’ ಪ್ರದರ್ಶನ ಖಂಡಿಸಿ ಪ್ರತಿಭಟನೆ

June 9, 2018

ಮೈಸೂರು:  ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ನಟ ರಜನಿಕಾಂತ್ ವಿವಾದಾತ್ಮಕ ಹೇಳಿಕೆ ನೀಡಿದ್ದರೂ ಮೈಸೂರಿನ ಕೆಲ ಚಿತ್ರಮಂದಿರಗಳಲ್ಲಿ ರಜನಿಕಾಂತ್ ಅಭಿನಯದ ಕಾಲಾ ಚಿತ್ರ ಪ್ರದರ್ಶನ ನಡೆಸಲಾಗುತ್ತಿದೆ. ಇದು ಖಂಡನೀಯ ಎಂದು ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಐನಕ್ಸ್ ಚಿತ್ರಮಂದಿರ ಒಳಗೊಂಡ ಮಾಲ್ ಆಫ್ ಮೈಸೂರ್ ಬಳಿ ಪ್ರತಿಭಟನೆ ನಡೆಸಿದರು. ವೇದಿಕೆ ಅಧ್ಯಕ್ಷ ಅರವಿಂದ ಶರ್ಮ, ಕನ್ನಡ ಕ್ರಾಂತಿ ದಳದ ಯುವ ಘಟಕದ ಅಧ್ಯಕ್ಷ ತೇಜಸ್ವಿ ಕುಮಾರ್, ರೈತ ಹಿತ ಜಾಗೃತಿ ವೇದಿಕೆ ಅಧ್ಯಕ್ಷ ರಾಜೇಶ್‍ಗಡಿ,…

ಮುಂದುವರೆದ ಇನ್ಫೋಸಿಸ್ ಗಾರ್ಡ್‍ನ್ ಕಾರ್ಮಿಕರ ಪ್ರತಿಭಟನೆ
ಮೈಸೂರು

ಮುಂದುವರೆದ ಇನ್ಫೋಸಿಸ್ ಗಾರ್ಡ್‍ನ್ ಕಾರ್ಮಿಕರ ಪ್ರತಿಭಟನೆ

June 9, 2018

ಮೈಸೂರು:  ಇನ್ಫೋಸಿಸ್ ಸಂಸ್ಥೆ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಇನ್ಫೋಸಿಸ್ ಗಾರ್ಡನ್ ಕಾರ್ಮಿಕರು ಎಐಟಿಯುಸಿ ಆಶ್ರಯದಲ್ಲಿ ಗುರುವಾರ ಆರಂಭಿಸಿದ ಪ್ರತಿಭಟನೆ ಶುಕ್ರವಾರವೂ ಮುಂದುವರೆಯಿತು. ಸಂಸ್ಥೆಯ 4ನೇ ಗೇಟ್ ಎದುರು ಜಮಾಯಿಸಿದ ನೂರಾರು ಕಾರ್ಮಿಕರು, ಗುತ್ತಿಗೆ ಬದಲಿಸುವ ನೆಪದಲ್ಲಿ ನಮ್ಮನ್ನು ಕೆಲಸದಿಂದ ತೆಗೆಯುವ ಪ್ರಯತ್ನವನ್ನು ಸಂಸ್ಥೆ ನಡೆಸುತ್ತಿದೆ. 10, 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನಮಗೆ ಈಗ ಇದ್ದಕ್ಕಿದ್ದಂತೆ ರಾಜೀನಾಮೆ ಕೊಡಲು ಒತ್ತಾಯ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಹಿಳೆಯರು ಹಾಗೂ ಪುರುಷರು ಸೇರಿದಂತೆ 80ಕ್ಕೂ…

ಕೊಟ್ಟ ಮಾತಿನಂತೆ ಕುಮಾರಸ್ವಾಮಿಯವರು ನನ್ನನ್ನು ಮಂತ್ರಿ ಮಾಡಿದರು: ಸಾರಾ
ಮೈಸೂರು

ಕೊಟ್ಟ ಮಾತಿನಂತೆ ಕುಮಾರಸ್ವಾಮಿಯವರು ನನ್ನನ್ನು ಮಂತ್ರಿ ಮಾಡಿದರು: ಸಾರಾ

June 9, 2018

ಕೆ.ಆರ್.ನಗರ:  ನನ್ನ ನೆಚ್ಚಿನ ನಾಯಕರಾದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕೆ.ಆರ್.ನಗರ ತಾಲೂಕಿನ ಜನತೆಗೆ ಚುನಾವಣೆ ಸಂದರ್ಭ ದಲ್ಲಿ ನೀಡಿದ ಆಶ್ವಾಸನೆಯಂತೆ ನನ್ನನ್ನು ಸಚಿವನನ್ನಾಗಿ ಮಾಡಿ ಪ್ರವಾಸೋ ದ್ಯಮ ಮತ್ತು ರೇಷ್ಮೆ ಖಾತೆಯನ್ನು ನೀಡಿದ್ದು, ಅವರ ಆಶಯದಂತೆ ಈ ರಾಜ್ಯದ ಜನತೆಗೆ ಮತ್ತು ಸರ್ಕಾರಕ್ಕೆ ಹೆಸರು ತರುವ ರೀತಿ ಯಲ್ಲಿ ಕಾರ್ಯನಿರ್ವಹಿಸುತ್ತೇನೆ ಎಂದು ನೂತನ ಸಚಿವ ಸಾ.ರಾ.ಮಹೇಶ್ ಹೇಳಿದರು. ಸಚಿವರಾಗಿ ನೇಮಕಗೊಂಡ ನಂತರ ಪ್ರಥಮ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ ಸಾ.ರಾ.ಮಹೇಶ್ ತಾಲೂಕಿನ ಜೆಡಿಎಸ್ ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತ ಸ್ವೀಕರಿಸಿ, ನಂತರ…

1 1,563 1,564 1,565 1,566 1,567 1,611
Translate »