ನಾಳೆ ಚಾಮುಂಡಿಬೆಟ್ಟ ಮಹಿಷಾಸುರ ಸನ್ನಿಧಿಯಲ್ಲಿ ಜಾತ್ಯಾತೀತ ಶಕ್ತಿಗಳ ಬಲವರ್ಧನೆ ಪ್ರಾರ್ಥನಾ ಕಾರ್ಯಕ್ರಮ
ಮೈಸೂರು

ನಾಳೆ ಚಾಮುಂಡಿಬೆಟ್ಟ ಮಹಿಷಾಸುರ ಸನ್ನಿಧಿಯಲ್ಲಿ ಜಾತ್ಯಾತೀತ ಶಕ್ತಿಗಳ ಬಲವರ್ಧನೆ ಪ್ರಾರ್ಥನಾ ಕಾರ್ಯಕ್ರಮ

June 9, 2018

ಮೈಸೂರು:  ಜಾತ್ಯಾತೀತ ಜಾಗೃತಿ ಅಭಿಯಾನಕ್ಕೆ ಸಂಕಲ್ಪ ಮಾಡುವ ಸಲುವಾಗಿ ಜೂ.10ರಂದು ಬೆಳಿಗ್ಗೆ 11ಕ್ಕೆ ಚಾಮುಂಡಿಬೆಟ್ಟದ ಮಹಿಷಾಸುರ ಪ್ರತಿಮೆ ಬಳಿ ಜಾತ್ಯಾತೀತ ಶಕ್ತಿಗಳ ಬಲವರ್ಧನೆಯ ಪ್ರಾರ್ಥನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಗತಿಪರ ಚಿಂತಕ ಪ್ರೊ.ಮಹೇಶ್‍ಚಂದ್ರಗುರು ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ಯಾತೀತ ಸಂಘಟನೆಗಳ ಒಕ್ಕೂಟದ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಿದ್ದು, `ಜಾತ್ಯಾತೀತ ಶಕ್ತಿಗಳು ಒಂದುಗೂಡೋಣ, ನಾಡಿನ, ದೇಶದ ಮಾನ-ಸ್ವಾಭಿಮಾನ ಉಳಿಸಿಸೋಣ’ ಎಂಬ ಘೋಷ ವಾಕ್ಯದಡಿ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ಚಿಂತಕರಾದ ಜ್ಞಾನಪ್ರಕಾಶ ಸ್ವಾಮೀಜಿ, ಪ್ರೊ.ಕೆ.ಎಸ್.ಭಗವಾನ್, ಪ್ರೊ.ಅರವಿಂದ ಮಾಲಗತ್ತಿ, ಪ್ರೊ.ಇ.ಸಿ.ರಾಮಚಂದ್ರೇಗೌಡ, ಪ್ರೊ.ಶಬೀರ್ ಮುಸ್ತಾಫ, ಪ್ರೊ.ನಂಜರಾಜ ಅರಸ್, ಶಾಂತರಾಜು, ಪ್ರೊ.ಟಿ.ಎಂ.ಮಹೇಶ್, ಬನ್ನೂರು ಕೆ.ರಾಜು, ಪ್ರೊ.ಷಣ್ಮುಗಮ್, ಡಾ.ಸೌಭಾಗ್ಯವತಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದರು.

ಹಿಂದೂತ್ವ ರಾಜಕಾರಣದಿಂದ ದೇಶಕ್ಕೆ ಬಹುದೊಡ್ಡ ಗಂಡಾಂತರವಿದ್ದು, ಇದರ ವಿರುದ್ಧ ಹೋರಾಡಲು ಜಾತ್ಯಾತೀತ ಶಕ್ತಿಗಳು ಒಗ್ಗೂಡಬೇಕಿದೆ. ಈ ನಿಟ್ಟಿನಲ್ಲಿ ಸಂಘಟಿತರಾಗಿ ಬಲ ಪ್ರದರ್ಶನಗೊಳಿಸಲು ಈ ಪ್ರಾರ್ಥನೆ ಆಯೋಜಿಸಲಾಗಿದೆ ಎಂದರು. ಲೇಖಕರಾದ ಬನ್ನೂರು ಕೆ.ರಾಜು, ಸಿದ್ದಸ್ವಾಮಿ, ಮಹದೇವಮೂರ್ತಿ, ಉಮೇಶ್, ರಾಜಣ್ಣ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »