ಮೈಸೂರು

ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಮತಯಾಚನೆ
ಮೈಸೂರು

ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಮತಯಾಚನೆ

May 1, 2018

ನಂಜನಗೂಡು: ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ತ್ಯಾಗರಾಜ ಕಾಲೋನಿ ಮತ್ತು ಈದಿಗಾ ಬಡಾವಣೆಯಲ್ಲಿ ಮತಯಾಚಿಸಿದರು. ಅವರು ಈ ಸಂದರ್ಭದಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ನುಡಿದಂತೆ ನಡೆದಿದ್ದು ಚುನಾವಣೆ ಸಮಯದಲ್ಲಿ ನೀಡಿದ್ದ 165 ಭರವಸೆ ಗಳಲ್ಲಿ 160 ಭರವಸೆಗಳನ್ನು ಪೂರೈಸಿದ್ದಾರೆ ಎಂದರು. ನಂಜನಗೂಡು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ದಾಖಲೆ ಪ್ರಮಾಣದ ಹಣ ಬಿಡುಗಡೆ ಮಾಡಿದರು. ನಗರದ ಎಲ್ಲಾ ವಾರ್ಡುಗಳ ಅಭಿವೃದ್ಧಿಗೆ ಕೋಟ್ಯಾಂತರ ರೂಗಳನ್ನು ಖರ್ಚುಮಾಡಿ ರಸ್ತೆ-ಚರಂಡಿ, ಮತ್ತು ಕುಡಿಯುವ ನೀರು ಮುಂತಾ ದವುಗಳಿಗೆ ಮೊದಲನೇ ಆದ್ಯತೆ ನೀಡುತ್ತಿರು…

ನಂಜನಗೂಡು ನ್ಯಾಯಾಲಯ ಆವರಣದಲ್ಲಿ ಶ್ರೀಗಂಧ ಕಳವಿಗೆ ಯತ್ನ
ಮೈಸೂರು

ನಂಜನಗೂಡು ನ್ಯಾಯಾಲಯ ಆವರಣದಲ್ಲಿ ಶ್ರೀಗಂಧ ಕಳವಿಗೆ ಯತ್ನ

May 1, 2018

ನಂಜನಗೂಡು: ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಬೆಳೆದಿದ್ದ ಬೆಲೆ ಬಾಳುವ ಶ್ರೀಗಂಧ ಕಳವಿಗೆ ಯತ್ನಿಸಿದ ಖದೀಮರು ಅರ್ಧ ಕೊಯ್ದು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಭಾನುವಾರ ಮಧ್ಯರಾತ್ರಿ ಕಳ್ಳರು ನ್ಯಾಯಾಲಯದ ಆವ ರಣದ ಕಾಂಪೌಂಡ್ ಪಕ್ಕದಲ್ಲಿದ್ದ ಮರವನ್ನು ಕೊಯ್ದು ಸಾಗಿಸಲು ಯತ್ನಿಸಿದ್ದಾರೆ. ಅಷ್ಟರಲ್ಲಿ ರಾತ್ರಿ ಪಾಳಿಯಲ್ಲಿದ್ದ ಕಾವಲುಗಾರರು ಎಚ್ಚೆತ್ತ ಪರಿಣಾಮ ಕಳ್ಳರು ಕಡಿದ ಮರದ ಕೊಂಬೆಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.

ಬನ್ನೂರು ಈಗ ಬಿಜೆಪಿ ಭದ್ರಕೋಟೆ: ಶಂಕರ್
ಮೈಸೂರು

ಬನ್ನೂರು ಈಗ ಬಿಜೆಪಿ ಭದ್ರಕೋಟೆ: ಶಂಕರ್

May 1, 2018

ಬನ್ನೂರು: ಜೆಡಿಎಸ್ ಭದ್ರ ಕೋಟೆಯಾಗಿದ್ದ ಬನ್ನೂರು ಹೋಬಳಿ ಮಾಜಿ ಶಾಸಕಿ ಜೆ.ಸುನೀತಾ ವೀರಪ್ಪಗೌಡ ನೇತೃತ್ವದಲ್ಲಿ ಬಿಜೆಪಿಮಯ ಆಗಿದ್ದು, ವಿಧಾನ ಸಭಾ ಚುನಾವಣೆಯಲ್ಲಿ ಇಲ್ಲಿನ ಮತದಾರರು ಕಮಲವನ್ನು ಆಯ್ಕೆ ಮಾಡಲಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಎಸ್.ಶಂಕರ್ ಹೇಳಿದರು. ತಾಲೂಕಿನ ಬನ್ನೂರು ಪಟ್ಟಣದ ಶ್ರೀ ಶಿವಪಾರ್ವತಿ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಮುಖಂಡರಾದ ಬೀಡನಹಳ್ಳಿ ಗ್ರಾಮದ ಯೋಗಾನಂದ, ಮರೀಗೌಡ, ಸಂತೋಷ, ಹೊಂಬಾಳೆ, ವೆಂಕಟೇಗೌಡ ಹಾಗೂ ಇನ್ನಿತರರನ್ನು ಬಿಜೆಪಿ ಸೇರ್ಪಡೆ ಮಾಡಿಕೊಂಡು ಮಾತನಾಡಿ, ಬನ್ನೂರು ಹೋಬಳಿಯಲ್ಲಿ ಜೆಡಿಎಸ್ ಪ್ರಾಬಲ್ಯ ಕುಗ್ಗಿದ್ದು, ಬಿಜೆಪಿ ಸಂಘಟನೆ…

ಕಾಂಗ್ರೆಸ್, ಬಿಜೆಪಿ ದೂರವಿಟ್ಟು ಜೆಡಿಎಸ್ ಸರ್ಕಾರ ರಚನೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ವಿಶ್ವಾಸ
ಮೈಸೂರು

ಕಾಂಗ್ರೆಸ್, ಬಿಜೆಪಿ ದೂರವಿಟ್ಟು ಜೆಡಿಎಸ್ ಸರ್ಕಾರ ರಚನೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ವಿಶ್ವಾಸ

April 30, 2018

ಮೈಸೂರು: ಈ ಚುನಾವಣೆಯಲ್ಲಿ ಜೆಡಿಎಸ್‍ಗೆ ಬಹುಮತ ಬರಬಹುದು ಅಥವಾ ಬರದೇ ಇರ ಬಹುದು. ಆದರೆ, ಕಾಂಗ್ರೆಸ್ ಮತ್ತು ಬಿಜೆಪಿ ಯನ್ನು ದೂರವಿಟ್ಟು ನಾವೇ ಸರ್ಕಾರ ರಚಿಸು ತ್ತೇವೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮತ ನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್‍ಗೆ ಪೂರಕವಾದ ವಾತಾವರಣವಿದೆ. ಈ ಚುನಾವಣೆಯಲ್ಲಿ ನಮ್ಮ ಪಕ್ಷ ಹೆಚ್ಚಿನ ಸ್ಥಾನಗಳಿಸಲಿದೆ. ಕಾಂಗ್ರೆಸ್ ಬಿಜೆಪಿಗಿಂತಲೂ ಹೆಚ್ಚಿನ ಸೀಟು ನಮಗೆ ಸಿಗಲಿದೆ. ಜೆಡಿ ಎಸ್‍ಗೆ ಬಹುಮತ ಲಭಿಸದಿದ್ದರೂ,…

ಅರಣ್ಯ ಹಕ್ಕು ಕಾಯ್ದೆ ಅಸಮರ್ಪಕ ಅನುಷ್ಠಾನ: ಬುಡಕಟ್ಟು ಸಮುದಾಯದಿಂದ ಚುನಾವಣೆ ಬಹಿಷ್ಕಾರ ಎಚ್ಚರಿಕೆ
ಮೈಸೂರು

ಅರಣ್ಯ ಹಕ್ಕು ಕಾಯ್ದೆ ಅಸಮರ್ಪಕ ಅನುಷ್ಠಾನ: ಬುಡಕಟ್ಟು ಸಮುದಾಯದಿಂದ ಚುನಾವಣೆ ಬಹಿಷ್ಕಾರ ಎಚ್ಚರಿಕೆ

April 30, 2018

ಮೈಸೂರು: ಅರಣ್ಯ ಹಕ್ಕು ಕಾಯ್ದೆಯ ಸಮರ್ಪಕ ಅನುಷ್ಠಾನ ಗೊಳಿಸದೇ ಅರಣ್ಯವಾಸಿಗಳನ್ನು ಶೋಷಣೆ ಮಾಡಲಾಗುತ್ತಿರುವ ಹಿನ್ನೆಲೆಯಲ್ಲಿ ವಿಧಾನಸಭಾ ಚುನಾವಣೆಯ ಮತದಾನ ವನ್ನು ಆದಿವಾಸಿ ಸಮುದಾಯಗಳು ಒಕ್ಕೊರಲಿನಿಂದ ಬಹಿಷ್ಕಾರ ಮಾಡುತ್ತಿವೆ ಎಂದು ಅರಣ್ಯವಾಸಿ ಬುಡಕಟ್ಟು ಸಮು ದಾಯಗಳ ಒಕ್ಕೂಟ ಪ್ರಕಟಿಸಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಸಂಚಾಲಕ ಬಾಬು, ಅರಣ್ಯವಾಸಿ ಬುಡಕಟ್ಟು ಸಮು ದಾಯಗಳನ್ನು ಓಟ್ ಬ್ಯಾಂಕ್ ಆಗಿ ಬಳಸಿ ಕೊಳ್ಳಲಾಗುತ್ತಿದ್ದು, ನಮ್ಮ ಸಮು ದಾಯಕ್ಕೆ ಸೌಲಭ್ಯ ಮಾತ್ರ ಮರೀಚಿಕೆ ಯಾಗಿದೆ. ಈ…

ಮೈಸೂರಲ್ಲಿ ವೃದ್ಧೆ ಅನುಮಾನಾಸ್ಪದ ಸಾವು
ಮೈಸೂರು

ಮೈಸೂರಲ್ಲಿ ವೃದ್ಧೆ ಅನುಮಾನಾಸ್ಪದ ಸಾವು

April 30, 2018

ಮೈಸೂರು: ವೃದ್ಧೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೈಸೂರಿನ ಹೆಬ್ಬಾಳು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹೆಬ್ಬಾಳು 2ನೇ ಹಂತ ಮಂಚೇಗೌಡನಕೊಪ್ಪಲಿನ ನಿವಾಸಿ ಚಂದ್ರಮ್ಮ(70) ಶನಿವಾರ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಇಲ್ಲಿನ ಕಾವೇರಿ ವೃತ್ತದ ಬಳಿ ಇರುವ ಕಟ್ಟಡದಲ್ಲಿ ಚಂದ್ರಮ್ಮ ತಮ್ಮ ಪತಿ ಪುರುಷೋತ್ತಮ್ ಅವರೊಂದಿಗೆ ವಾಸವಾಗಿ ದ್ದರು. ಇದೇ ಕಟ್ಟಡದ ಮತ್ತೊಂದು ಭಾಗದಲ್ಲಿ ಅವರ ಸೊಸೆ ಗೀತಾ ಅವರು ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದಾರೆ. ಶನಿವಾರ ಗೀತಾ ಅವರು ಸೂರ್ಯ ಬೇಕರಿಯ ಬಳಿ ಇರುವ ತಾಯಿಯ ಮನೆಗೆ ಹೋಗಿದ್ದರು. ಸಂಜೆ…

ಅಲ್ಪಸಂಖ್ಯಾತರಿಗೆ ಕಾಂಗ್ರೆಸ್‍ನಿಂದ ಮೋಸ ಹುಣಸೂರಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಟೀಕೆ
ಮೈಸೂರು

ಅಲ್ಪಸಂಖ್ಯಾತರಿಗೆ ಕಾಂಗ್ರೆಸ್‍ನಿಂದ ಮೋಸ ಹುಣಸೂರಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಟೀಕೆ

April 30, 2018

ಹುಣಸೂರು: ಅಲ್ಪ ಸಂಖ್ಯಾತರಿಗೆ ಮೋಸ ಮಾಡಿದ ಕಾಂಗ್ರೆಸ್ ಮುಸ್ಲಿಂ ಸಮುದಾಯದ ರಕ್ತದಿಂದ ಕೈಯನ್ನು ತೊಳೆದು ಕೊಂಡಿದೆ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಟೀಕಿಸಿದ್ದಾರೆ. ಪಟ್ಟಣದ ಹಳೇ ಅಂಚೆ ಕಚೇರಿ ರಸ್ತೆಯಲ್ಲಿ ರುವ ಸುಮನ್ ಫಂಕ್ಷನ್ ಹಾಲ್‍ನಲ್ಲಿ ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತರ ಸಮಾ ವೇಶದಲ್ಲಿ ಜೆಡಿಎಸ್ ಅಭ್ಯರ್ಥಿ ಹೆಚ್. ವಿಶ್ವನಾಥ್ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್‍ನಲ್ಲಿ ಮುಸ್ಲಿಮರಿಗೆ ಉಸಿರು ಗಟ್ಟಿದ ವಾತಾವರಣವಿದೆ. ಅಲ್ಪಸಂಖ್ಯಾತರ ವಿಷಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಒಂದೇ. ಈ…

ಬಿಜೆಪಿ ಅಭ್ಯರ್ಥಿ ಶಂಕರ್ ಬೆಂಬಲಿಸಿ ನಾಮಪತ್ರ ಹಿಂದಕ್ಕೆ: ಮಹೇಶ್‍ಕುಮಾರ್
ಮೈಸೂರು

ಬಿಜೆಪಿ ಅಭ್ಯರ್ಥಿ ಶಂಕರ್ ಬೆಂಬಲಿಸಿ ನಾಮಪತ್ರ ಹಿಂದಕ್ಕೆ: ಮಹೇಶ್‍ಕುಮಾರ್

April 30, 2018

ತಿ.ನರಸೀಪುರ: ಬಿಜೆಪಿ ಅಭ್ಯರ್ಥಿ ಎಸ್.ಶಂಕರ್ ಅವರನ್ನು ಬೆಂಬಲಿಸಿ ಜೆಡಿಎಸ್ ಬಂಡಾಯ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಸ್. ಮಹೇಶ್‍ಕುಮಾರ್ ಅವರು ಶುಕ್ರವಾರ ನಾಮಪತ್ರವನ್ನು ಹಿಂದಕ್ಕೆ ಪಡೆದಿದ್ದೇನೆ ಎಂದು ತಿಳಿಸಿದರು. ಪಟ್ಟಣದ ತಾಲೂಕು ಕಚೇರಿ ಕಟ್ಟಡ ಮಿನಿ ವಿಧಾನಸೌಧದಲ್ಲಿರುವ ಚುನಾವಣಾ ಧಿಕಾರಿಗಳ ಕಚೇರಿಯಲ್ಲಿ ಉಮೇದು ವಾರಿಕೆಯನ್ನು ಹಿಂಪಡೆದ ನಂತರ ಪಟ್ಟಣದ ವಿವೇಕಾನಂದನಗರದ ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿ, ಜಾತ್ಯಾತೀತ ಜನತಾದಳ ಪಕ್ಷದ ಸಂಘಟನೆಗೆ ನಿಷ್ಠೆಯಿಂದ ದುಡಿದು ಕಾರ್ಯಕರ್ತರನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ಪ್ರಾಮಾಣ ಕವಾಗಿ ಮಾಡಿ ದರೂ ಪಕ್ಷದ…

ಕಳಲೆಯಲ್ಲಿ ಬಿಜೆಪಿ ಅಭ್ಯರ್ಥಿ ಹರ್ಷವರ್ಧನ್ ಪ್ರಚಾರ
ಮೈಸೂರು

ಕಳಲೆಯಲ್ಲಿ ಬಿಜೆಪಿ ಅಭ್ಯರ್ಥಿ ಹರ್ಷವರ್ಧನ್ ಪ್ರಚಾರ

April 30, 2018

ನಂಜನಗೂಡು: ಶಾಸಕ ಕಳಲೆ ಕೇಶವಮೂರ್ತಿ ತವರೂರಾದ ಕಳಲೆಯಲ್ಲಿ ಕಳೆದ ಉಪ ಚುನಾವಣೆ ಯಲ್ಲಿ ಬಿಜೆಪಿಗಿಂತ ಹೆಚ್ಚಿನ ಮತವನ್ನು ಕಾಂಗ್ರೆಸ್ ಪಡೆದಿತ್ತು. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಕೋಟೆಗೆ ಬಿಜೆಪಿ ಅಭ್ಯರ್ಥಿ ಹರ್ಷವರ್ಧನ್ ಪ್ರವೇಶಿಸಿ, ಮತ ಬೇಟೆ ಆರಂಭಿಸಿದ್ದಾರೆ. ಭಾನುವಾರ ಕಳಲೆ ಜಿಪಂ ವ್ಯಾಪ್ತಿಯ ಕಳಲೆ, ಕೆರೆಹುಂಡಿ, ಏಚಗುಂಡ್ಲ, ನವಿ ಲೂರು, ಹೊಸಪುರ, ಮುದ್ದಳ್ಳಿ, ಸಿಂಧುವಳ್ಳಿ, ಸಿಂಧುವಳ್ಳಿಪುರ, ಎಲಚಗೆರೆ, ಕೂಗಲೂರು, ಸಿದ್ದಯ್ಯನಹುಂಡಿ, ಕಸುವಿನ ಹಳ್ಳಿ, ಲಕ್ಷಣಾಪುರ, ಸೂರಳ್ಳಿ, ಬ್ಯಾಳಾರು ಹುಂಡಿ ಗ್ರಾಮಗಳಿಗೆ ಭೆಟಿ ನೀಡಿ ಹರ್ಷವರ್ಧನ್ ಮತಯಾಚಿಸಿದರು. ಪ್ರತಿ…

ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಮೇಘನಾ ರಾಜ್-ಚಿರಂಜೀವಿ ಸರ್ಜಾ ವಿವಾಹ
ಮೈಸೂರು

ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಮೇಘನಾ ರಾಜ್-ಚಿರಂಜೀವಿ ಸರ್ಜಾ ವಿವಾಹ

April 30, 2018

ಬೆಂಗಳೂರು: ಇತ್ತೀಚೆ ಗಷ್ಟೇ ನಿಶ್ಚಿತಾರ್ಥ ನಡೆದಿದ್ದ ಮೇಘನಾ ರಾಜ್-ಚಿರಂಜೀವಿ ಸರ್ಜಾ ಜೋಡಿಯ ವಿವಾಹ ಏ.29 ರಂದು ಕ್ರೈಸ್ತ ಸಂಪ್ರ ದಾಯದ ಪ್ರಕಾರ ನಡೆದಿದೆ. ಬೆಂಗ ಳೂರಿನ ಹೊಸೂರು ರಸ್ತೆಯಲ್ಲಿ ರುವ ಸೇಂಟ್ ಆಂಥೋನೀಸ್ ಚರ್ಚ್‍ನಲ್ಲಿ ವಿವಾಹ ನೆರವೇರಿದೆ. ಚರ್ಚ್ ಫಾದರ್ ಸಮ್ಮುಖದಲ್ಲಿ ಮೇಘನಾರಾಜ್ ಹಾಗೂ ಚಿರಂ ಜೀವಿ ಸರ್ಜಾ ಬೈಬಲ್ ಮುಟ್ಟಿ ವಧು-ವರರು ಮದುವೆಗೆ ಸಂಪೂರ್ಣ ಒಪ್ಪಿಗೆ ನೀಡಿದರು. ನಂತರ ಮೇಘನಾ ಚಿರು ಪರಸ್ಪರ ರಿಂಗ್ ತೊಡಿಸಿದ್ದಾರೆ. ಎರಡೂ ಕುಟುಂಬಗಳಿಗೆ ಸಿನಿಮಾ ನಂಟಿರುವುದರಿಂದ ಅನೇಕ ತಾರೆಯರು ಈ…

1 1,596 1,597 1,598 1,599 1,600 1,611
Translate »