ಮೈಸೂರು

ಸಿಂಪಲ್ಲಾಗಿ ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋಪಾಲರಾವ್ ನಾಮಪತ್ರ ಸಲ್ಲಿಕೆ
ಮೈಸೂರು

ಸಿಂಪಲ್ಲಾಗಿ ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋಪಾಲರಾವ್ ನಾಮಪತ್ರ ಸಲ್ಲಿಕೆ

April 24, 2018

ಮೈಸೂರು: ಹೈವೋ ಲ್ಟೇಜ್ ಹಾಗೂ ಪ್ರತಿಷ್ಠಿತ ಕ್ಷೇತ್ರವೆನಿಸಿರುವ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಆರ್.ಗೋಪಾಲ್ ರಾವ್ ಸೋಮವಾರ ಮೈಸೂರಿನ ಮಿನಿ ವಿಧಾನ ಸೌಧದಲ್ಲಿರುವ ತಾಲೂಕು ಕಚೇರಿಯಲ್ಲಿ ಪಕ್ಷದ ಬಿ-ಫಾರಂನೊಂದಿಗೆ ಉಮೇದುವಾರಿಕೆ ಸಲ್ಲಿಸಿದರು. ಪೂರ್ವಾಹ್ನ ಇಂದು ಬೆಂಬಲಿಗರೊಂ ದಿಗೆ ಮಿನಿ ವಿಧಾನಸೌಧಕ್ಕೆ ತೆರಳಿ ಚುನಾ ವಣಾಧಿಕಾರಿ ಬಿ.ವೆಂಕಟೇಶ್ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಅವರ ಪತ್ನಿ ಪುಷ್ಪಾ ರಾವ್, ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಚಾಮುಂ ಡೇಶ್ವರಿ ಕ್ಷೇತ್ರ ಬಿಜೆಪಿ ಅಧ್ಯಕ್ಷ ಅರುಣ್ ಕುಮಾರ್‍ಗೌಡ,…

ಪಾದಯಾತ್ರೆ ಮೂಲಕ ರಾಮದಾಸ್ ಮತಯಾಚನೆ
ಮೈಸೂರು

ಪಾದಯಾತ್ರೆ ಮೂಲಕ ರಾಮದಾಸ್ ಮತಯಾಚನೆ

April 24, 2018

ಮೈಸೂರು: ಮೈಸೂರಿನ ಕೆ.ಆರ್.ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಎಸ್.ಎ.ರಾಮ ದಾಸ್ ಅವರು ಸೋಮವಾರ ಆಲನಹಳ್ಳಿ ಹಾಗೂ ಸಿದ್ದಾರ್ಥ ಬಡಾವಣೆಯಲ್ಲಿ ಪಾದ ಯಾತ್ರೆ ನಡೆಸಿ, ಮತಯಾಚನೆ ಮಾಡಿದರು. ಆಲನಹಳ್ಳಿಯಿಂದ ತಮ್ಮ ಬೆಂಬಲಿಗ ರೊಂದಿಗೆ ಪಾದಯಾತ್ರೆ ಆರಂಭಿಸಿದ ಎಸ್.ಎ. ರಾಮದಾಸ್, ಮನೆ ಮನೆಗೆ ತೆರಳಿ ಮತ ಯಾಚಿಸಿದರು. ಮನೆ ಬಾಗಿಲಿಗೆ ಬಂದ ರಾಮದಾಸ್ ಅವರನ್ನು ಉಪಚರಿಸುವುದರೊಂದಿಗೆ ತಮ್ಮ ತಮ್ಮ ಬಡಾವಣೆಯಲ್ಲಿ ರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು. ಈ ವೇಳೆ ಮಾತನಾಡಿದ ಎಸ್.ಎ. ರಾಮದಾಸ್, ಆಲನಹಳ್ಳಿ ಬಡಾವಣೆಯ…

ಚಾಮುಂಡೇಶ್ವರಿ, ವರುಣಾ ಮಾದರಿ ಕ್ಷೇತ್ರ ಮಾಡುವೆ: ಸಿಎಂ
ಮೈಸೂರು

ಚಾಮುಂಡೇಶ್ವರಿ, ವರುಣಾ ಮಾದರಿ ಕ್ಷೇತ್ರ ಮಾಡುವೆ: ಸಿಎಂ

April 24, 2018

ಮೈಸೂರು, ಏ.23(ಎಂಟಿವೈ)- ಸಂವಿ ಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಕೊಡುಗೆ ನೀಡಿರುವ ಸಂವಿಧಾನ ಶ್ರೇಷ್ಠ ಸಂವಿಧಾನವಾಗಿದ್ದು, ಅದನ್ನು ಬದಲಿಸು ವುದಾಗಿ ಹೇಳಿಕೆ ನೀಡುವವರಿಗೆ ಜನರೇ ತಕ್ಕ ಪಾಠ ಕಲಿಸಬೇಕು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ವರುಣಾ ವಿಧಾನಸಭಾ ಕ್ಷೇತ್ರದ ಹೊಸ ಹೋಟೆ, ಆಲತ್ತೂರು, ಹದಿನಾರು, ಹದಿ ನಾರು ಮೊಳೆ, ಕೆಂಪಿಸಿದ್ದನಹುಂಡಿ, ತಾಂಡವಪುರ, ಹಳ್ಳಿದಿಡ್ಡಿ, ಗೊದ್ದನಪುರ, ರಾಂಪುರಗಳಲ್ಲಿ ಸೋಮವಾರ ರೋಡ್ ಶೋ ಹಾಗೂ ಪಾದಯಾತ್ರೆ ನಡೆಸಿ, ಮತ ಯಾಚನೆ ಮಾಡಿ ಮಾತನಾಡಿದ ಅವರು, ಈ ಚುನಾವಣೆ…

ಕನಿಷ್ಠ 130 ಸ್ಥಾನ ಗೆದ್ದೇ ಗೆಲ್ಲುತ್ತೇವೆ
ಮೈಸೂರು

ಕನಿಷ್ಠ 130 ಸ್ಥಾನ ಗೆದ್ದೇ ಗೆಲ್ಲುತ್ತೇವೆ

April 24, 2018

ಮೈಸೂರು: ಮೇ 12ರಂದು ನಡೆಯುವ ಚುನಾವಣೆ ಯಲ್ಲಿ ಕಾಂಗ್ರೆಸ್ ಪಕ್ಷ ಕನಿಷ್ಠ 130 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆತ್ಮ ವಿಶ್ವಾಸದಿಂದ ನುಡಿದರು. ಮೈಸೂರಿನ ಅವರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ತ್ರಿಕೋನ ಸ್ಪರ್ಧೆ ಇದ್ದರೂ, ವಾಸ್ತವವಾಗಿ ಉತ್ತರ ಕರ್ನಾ ಟಕದಲ್ಲಿ ಕಾಂಗ್ರೆಸ್-ಬಿಜೆಪಿ, ಹಳೇ ಮೈಸೂರು ಭಾಗದ 6-7 ಜಿಲ್ಲೆಗಳಲ್ಲಿ ಕಾಂಗ್ರೆಸ್-ಜೆಡಿಎಸ್ ನೇರ ಸ್ಪರ್ಧೆ ಇದೆ. ಇದರಲ್ಲಿ ಕಾಂಗ್ರೆಸ್ ಕನಿಷ್ಠ 130 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ನನಗೆ ಚಾಮುಂಡೇಶ್ವರಿ, ವರುಣಾ ಹೇಗೋ…

ಅಪ್ರಾಪ್ತ ಬಾಲಕಿ ಅತ್ಯಾಚಾರಕ್ಕೆ ಮರಣದಂಡನೆ ಸುಗ್ರೀವಾಜ್ಞೆ ಹೊರಡಿಸಿದ 48 ಗಂಟೆಯಲ್ಲಿ ಮೈಸೂರಲ್ಲಿ ಬಾಲಕಿ ಬಲಿ
ಮೈಸೂರು

ಅಪ್ರಾಪ್ತ ಬಾಲಕಿ ಅತ್ಯಾಚಾರಕ್ಕೆ ಮರಣದಂಡನೆ ಸುಗ್ರೀವಾಜ್ಞೆ ಹೊರಡಿಸಿದ 48 ಗಂಟೆಯಲ್ಲಿ ಮೈಸೂರಲ್ಲಿ ಬಾಲಕಿ ಬಲಿ

April 24, 2018

ಮೈಸೂರು: ಅಪ್ರಾಪ್ತರ ಮೇಲೆ ಅತ್ಯಾಚಾರ ನಡೆಸುವವರಿಗೆ ಮರಣದಂಡನೆ ವಿಧಿಸುವ ಪೊಕ್ಸೋ ಕಾಯ್ದೆ ತಿದ್ದುಪಡಿಗೆ ಕೇಂದ್ರದಿಂದ ಸುಗ್ರಿವಾಜ್ಞೆ ಘೋಷಣೆಗೊಂಡ 48 ಗಂಟೆಯೊಳಗೆ ಮೈಸೂರಿನಲ್ಲಿ ಅತ್ಯಾಚಾರ ಪ್ರಕರಣ ನಡೆದಿದ್ದು, ಇದಕ್ಕೆ 9 ವರ್ಷದ ಅಪ್ರಾಪ್ತೆ ಬಲಿಯಾಗಿದ್ದಾಳೆ. ಈ ಘಟನೆ ಕೆಸರೆ ಬಡಾವಣೆಯಲ್ಲಿ ನಡೆದಿದ್ದು, ಇಲ್ಲಿನ ಶಾಲೆಯೊಂದರಲ್ಲಿ 4ನೇತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಬಲಿಯಾಗಿದ್ದಾಳೆ. ಘಟನೆ ವಿವರ: ಶಾಲೆಗೆ ರಜೆಯಿದ್ದ ಹಿನ್ನೆಲೆಯಲ್ಲಿ ಭಾನುವಾರ ಸ್ನೇಹಿತೆಯರೊಂದಿಗೆ ಆಟವಾಡಲು ತೆರಳಿದ್ದ ಬಾಲಕಿ, ಸ್ವಲ್ಪ ಸಮಯದ ನಂತರ ಮನೆಗೆ ಬಂದಿದ್ದಾಳೆ. ಮರುದಿನ ಬೆಳಿಗ್ಗೆ ತಲೆ ನೋಯುತ್ತಿದೆ…

ಶಾಸಕ ಸಾ.ರಾ.ಮಹೇಶ್ ನಾಮಪತ್ರ ಸಲ್ಲಿಕೆ
ಮೈಸೂರು

ಶಾಸಕ ಸಾ.ರಾ.ಮಹೇಶ್ ನಾಮಪತ್ರ ಸಲ್ಲಿಕೆ

April 24, 2018

ಕೆ.ಆರ್.ನಗರ: ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಾ.ರಾ.ಮಹೇಶ್ ಸೋಮವಾರ ನಾಮಪತ್ರ ಸಲ್ಲಿಸಿದರು. ಮೈಸೂರು-ಹಾಸನ ರಸ್ತೆಯಲ್ಲಿರುವ ತೋಪಮ್ಮ ದೇವಸ್ಥಾನದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ವಿಶ್ವನಾಥ್, ಶಾಸಕ ಜಿ.ಟಿ. ದೇವೇಗೌಡ, ನವನಗರ ಬ್ಯಾಂಕ್ ಅಧ್ಯಕ್ಷ ಬಸಂತ್ ನಂಜಪ್ಪ, ನಗರದ ಮುಸ್ಲಿಂ ಜೆಡಿಎಸ್ ಮುಖಂಡ ಡಾ.ಮಹಬೂಬ್ ಖಾನ್, ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ ಇತರರೊಡನೆ ಪೂಜೆ ಸಲ್ಲಿಸಿ, ನಂತರ ಸಾವಿರಾರು ಕಾರ್ಯಕರ್ತರೊಡನೆ ಜೆಡಿ ಎಸ್‍ನ ಪ್ರಚಾರವಾಹನದಲ್ಲಿ ಮೆರವಣ ಗೆ ಹೊರಟು ತಾಲೂಕು ಕಚೇರಿಯಲ್ಲಿ ಚುನಾ ವಣಾಧಿಕಾರಿ ರೇಷ್ಮಾ ಹಾನಗಲ್…

ತಿ.ನರಸೀಪುರ ಕಾಂಗ್ರೆಸ್ ಅಭ್ಯರ್ಥಿ ಡಾ.ಹೆಚ್.ಸಿ.ಮಹದೇವಪ್ಪ ನಾಮಪತ್ರ ಸಲ್ಲಿಕೆ
ಮೈಸೂರು

ತಿ.ನರಸೀಪುರ ಕಾಂಗ್ರೆಸ್ ಅಭ್ಯರ್ಥಿ ಡಾ.ಹೆಚ್.ಸಿ.ಮಹದೇವಪ್ಪ ನಾಮಪತ್ರ ಸಲ್ಲಿಕೆ

April 24, 2018

ತಿ.ನರಸೀಪುರ, ಏ.23(ಎಸ್‍ಕೆ)- ವಿಧಾನ ಸಭಾ ಚುನಾವಣೆ ರಂಗೇರುತ್ತಿದ್ದು, ಲೋಕೋ ಪಯೋಗಿ ಸಚಿವ ಡಾ.ಹೆಚ್.ಸಿ. ಮಹ ದೇವಪ್ಪ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದರು. ಪಟ್ಟಣದ ಶ್ರೀ ಗುಂಜಾ ನರಸಿಂಹಸ್ವಾಮಿ ದೇವಾಲಯಕ್ಕೆ ಆಗಮಿಸಿದ ಮಹದೇವಪ್ಪ ವಿಶೇಷ ಪೂಜೆ ಸಲ್ಲಿಸಿ, ನಂತರ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಜೊತೆ ತೆರೆದ ವಾಹನದಲ್ಲಿ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ತಾಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿ ಮಂಜುನಾಥ್ ಅವರಿಗೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿ, ಐದು ವರ್ಷಗಳ ಸಾಧನೆ ಮತ್ತು ಸ್ಥಿರ…

ತಿ.ನರಸೀಪುರ ಬಿಜೆಪಿ ಅಭ್ಯರ್ಥಿ ಶಂಕರ್ ನಾಮಪತ್ರ ಸಲ್ಲಿಕೆ
ಮೈಸೂರು

ತಿ.ನರಸೀಪುರ ಬಿಜೆಪಿ ಅಭ್ಯರ್ಥಿ ಶಂಕರ್ ನಾಮಪತ್ರ ಸಲ್ಲಿಕೆ

April 24, 2018

ತಿ.ನರಸೀಪುರ, ಏ.23(ಎಸ್‍ಕೆ)- ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜಾತ್ಯಾತೀತ ಜನತಾದಳ ಪಕ್ಷ ಗಳಿಗೆ ಸೆಡ್ಡು ಹೊಡೆಯಲು ಸಜ್ಜಾಗಿರುವ ಬಿಜೆಪಿ ಅಭ್ಯರ್ಥಿ ಎಸ್.ಶಂಕರ್ ಅವರು ಸೋಮವಾರ ಮಧ್ಯಾಹ್ನ ಮಿನಿ ವಿಧಾನ ಸೌಧದಲ್ಲಿ ನಾಮಪತ್ರ ಸಲ್ಲಿಸಿದರು. ಪಟ್ಟಣದ ಶ್ರೀ ಗುಂಜಾ ನರಸಿಂಹ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿ ತೆರೆದ ವಾಹನದಲ್ಲಿ ಪ್ರಮುಖ ರಸ್ತೆಗಳಲ್ಲಿ ಮೆರವಣ ಗೆ ಮೂಲಕ ತಾಲೂಕು ಕಚೇರಿಯಲ್ಲಿ ಮಂಜುನಾಥ್ ಅವರಿಗೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸಿದ ನಂತರ ಎಸ್. ಶಂಕರ್ ಮಾತನಾಡಿ, ದಶಕದಿಂದ ಕಾಂಗ್ರೆಸ್ಸನ್ನು ಜೆಡಿಎಸ್‍ಗೆ…

ಮತದಾರರು ನನ್ನ ಪುನರಾಯ್ಕೆ ಬಯಸಿದ್ದಾರೆ
ಮೈಸೂರು

ಮತದಾರರು ನನ್ನ ಪುನರಾಯ್ಕೆ ಬಯಸಿದ್ದಾರೆ

April 24, 2018

ಕೆ.ಆರ್.ನಗರ: ತನಗೆ ಮತ ನೀಡಿದ ಮತದಾರರಿಗೆ ಯಾವುದೇ ತಾರತಮ್ಯವಿಲ್ಲದೆ ಸ್ಪಂದಿಸಿರು ವುದರಿಂದ ಮೂರನೇ ಬಾರಿಯೂ ಅತ್ಯಧಿಕ ಮತ ನೀಡುವುದರ ಮೂಲಕ ಈ ಕ್ಷೇತ್ರದ ಜನ ತನ್ನನು ಆಯ್ಕೆ ಮಾಡಲಿ ದ್ದಾರೆ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು. ನಿವೃತ್ತ ಡಿಡಿಪಿಐ ರಾಮ ಲಿಂಗು ಅವರನ್ನು ಪಟ್ಟಣದ ಅವರ ನಿವಾಸದಲ್ಲಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತ ನಾಡಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಆದ ವರ್ಚಸ್ಸಿನಿಂದ ಕೆಲಸ ಮಾಡಿ ಈಗ ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಅಪಾರ ಬಲ ಬಂದಂತಾಗಿದೆ….

ಮೈಸೂರು

ಕೋಣನೂರಿನಲ್ಲಿ ಬಿರುಗಾಳಿ ಸಹಿತ ಮಳೆ-ಅಪಾರ ನಷ್ಟ

April 24, 2018

ತಗಡೂರು, ಏ. 23(ಗುರುಸ್ವಾಮಿ)- ನಂಜನಗೂಡು ತಾಲೂಕಿನ ಕೋಣನೂರು ಗ್ರಾಮದಲ್ಲಿ ನಿನ್ನೆ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಗೆ ಅಪಾರ ನಷ್ಟ ಸಂಭವಿಸಿದೆ. ಕಿಟ್ಟಪ್ಪ ಎಂಬುವರಿಗೆ ಸೇರಿದ ಬಾಳೆ ಸಂಪೂರ್ಣ ನಾಶವಾಗಿದೆ. ಕೂಸಣ್ಣ ಎಂಬುವರಿಗೆ ಸೇರಿದ 4 ತೆಂಗಿನ ಮರಗಳು ಧರೆಗುರುಳಿವೆ. ಗ್ರಾಮದ ಕರಿಯಪ್ಪ ಎಂಬುವರಿಗೆ ಸೇರಿದ ಮನೆ ಮೇಲ್ಛಾವಣ ಹಾರಿ ಹೋಗಿದ್ದು, ಅಪಾರ ನಷ್ಟ ಸಂಭವಿಸಿದೆ. ಲಕ್ಷಾಂತರ ರೂ.ಗಳ ನಷ್ಟವಾಗಿ ಇನ್ನಿತರ ಫಸಲು ಕೂಡ ಮಳೆಗೆ ಹಾಳಾಗಿವೆ. ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರ ದೊರಕಿಸಿಕೊಡಬೇಕೆಂದು ರೈತರು…

1 1,605 1,606 1,607 1,608 1,609 1,611
Translate »