ಶಾಸಕ ಸಾ.ರಾ.ಮಹೇಶ್ ನಾಮಪತ್ರ ಸಲ್ಲಿಕೆ
ಮೈಸೂರು

ಶಾಸಕ ಸಾ.ರಾ.ಮಹೇಶ್ ನಾಮಪತ್ರ ಸಲ್ಲಿಕೆ

April 24, 2018

ಕೆ.ಆರ್.ನಗರ: ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಾ.ರಾ.ಮಹೇಶ್ ಸೋಮವಾರ ನಾಮಪತ್ರ ಸಲ್ಲಿಸಿದರು.

ಮೈಸೂರು-ಹಾಸನ ರಸ್ತೆಯಲ್ಲಿರುವ ತೋಪಮ್ಮ ದೇವಸ್ಥಾನದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ವಿಶ್ವನಾಥ್, ಶಾಸಕ ಜಿ.ಟಿ. ದೇವೇಗೌಡ, ನವನಗರ ಬ್ಯಾಂಕ್ ಅಧ್ಯಕ್ಷ ಬಸಂತ್ ನಂಜಪ್ಪ, ನಗರದ ಮುಸ್ಲಿಂ ಜೆಡಿಎಸ್ ಮುಖಂಡ ಡಾ.ಮಹಬೂಬ್ ಖಾನ್, ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ ಇತರರೊಡನೆ ಪೂಜೆ ಸಲ್ಲಿಸಿ, ನಂತರ ಸಾವಿರಾರು ಕಾರ್ಯಕರ್ತರೊಡನೆ ಜೆಡಿ ಎಸ್‍ನ ಪ್ರಚಾರವಾಹನದಲ್ಲಿ ಮೆರವಣ ಗೆ ಹೊರಟು ತಾಲೂಕು ಕಚೇರಿಯಲ್ಲಿ ಚುನಾ ವಣಾಧಿಕಾರಿ ರೇಷ್ಮಾ ಹಾನಗಲ್ ಅವರಿಗೆ ನಾಮಪತ್ರ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಕಾಂಗ್ರೆಸ್, ಬಿಜೆಪಿಯೊಂದಿಗೆ ಜೆಡಿಎಸ್ ಯಾವುದೇ ಒಳ ಒಪ್ಪಂದ ಮಾಡಿಕೊಂಡಿಲ್ಲ. ತಾಲೂಕಿನ ಜನತೆ ಅಪಪ್ರಚಾರಕ್ಕೆ ಬಲಿ ಯಾಗದೆ ನಿಷ್ಠಾವಂತ ರಾಜಕಾರಣ ಸಾ.ರಾ. ಮಹೇಶ್ ಕಳೆದುಕೊಳ್ಳಬೇಡಿ. ಇವರನ್ನು ನಿಮ್ಮ ತಾಲೂಕಿಗೆ ಸೀಮಿತಗೊಳಿಸದೆ ಮುಂದಿನ ದಿನ ರಾಜ್ಯ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸುವಂತೆ ಬಹುಮತದೊಂದಿಗೆ ಆಯ್ಕೆ ಮಾಡಿ ಎಂದು ಮನವಿ ಮಾಡಿದರು.

ಸಿದ್ದರಾಮಯ್ಯನವರು ಜಿ.ಟಿ.ದೇವೇ ಗೌಡರನ್ನಾಗಲಿ, ಸಾ.ರಾ. ಅಥವಾ ವಿಶ್ವನಾಥ ರನ್ನಾಗಲಿ ಸೋಲಿಸುವ ಪ್ರಶ್ನೆಯೇ ಇಲ್ಲ. ಕಾರಣ ಇಲ್ಲಿ ಸಿದ್ದರಾಮಯ್ಯನವರನ್ನು ಸೋಲಿ ಸುವುದು ನನ್ನ ಗುರಿ ಎಂದು ಎಲ್ಲೂ ಹೇಳಿಲ್ಲ. ನನ್ನ ಗುರಿ, ಜವಾಬ್ದಾರಿ ಏನಿ ದ್ದರೂ ನನ್ನ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವುದು ಎಂದರು.

ಸಾ.ರಾ.ಗೆ ಜನ ಬೆಂಬಲ ಇದೆ. ಯಾರಿಗೂ ಸೋಲಿಸಲು ಸಾಧ್ಯವಿಲ್ಲ. ಆ ಬಗ್ಗೆ ಏನೋ ವ್ಯತ್ಯಾಸÀವಾಗಿದೆ. ನಮ್ಮ ಕುಟುಂಬದ ಎಲ್ಲರೂ ಚೆನ್ನಾಗಿದ್ದೇವೆ ಎಂದು ಈ ಬಗ್ಗೆ ಸಾ.ರಾ. ಪತ್ರಿಕೆಗೆ ಹೇಳಿಕೆ ನೀಡಿದ್ದಾರೆ. ಅದು ಮುಗಿದ ವಿಷಯ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಚಂದ್ರಶೇಖರ್, ಮುಖಂಡರಾದ ಎ.ಟಿ.ಸೋಮಶೇಖರ್, ಪುರಸಭಾ ಸದಸ್ಯರಾದ ಜಗದೀಶ, ಶಿವಶಕ್ತಿ ಕುಮಾರ, ಪುರಸಭಾ ಸದಸ್ಯ ಉಮೇಶ, ನಗರಾಧ್ಯಕ್ಷ ಡಿ.ಸಿ.ಮಂಜುನಾಥ, ಕೆ.ಎಲ್.ರಮೇಶ, ರಾಜೇಗೌಡ, ದೆಗ್ಗನಹಳ್ಳಿ ಕಾಂತರಾಜ್, ಒಕ್ಕಲಿಗರ ಸಂಘದ ಅಧ್ಯಕ್ಷ ಅಣ್ಣೇಗೌಡ, ನಿರ್ದೇಶಕ ಹೆಚ್.ಪಿ.ಶಿವಣ್ಣ, ಮಹದೇವ, ಆನಂದ, ಸುಜಯ್ ಕೀರ್ತಿ, ಮಧು, ಮಧುಚಂದ್ರ, ಪ್ರಭುಶಂಕರ್, ಪುರಸಭಾ ಧ್ಯಕ್ಷೆ ಕವಿತಾ ವಿಜಯಕುಮಾರ, ಹನಸೋಗೆ ನಾಗರಾಜ, ಹರದನಹಳ್ಳಿ ವಿಜಯ್, ವೈ.ಆರ್.ಪ್ರಕಾಶ್, ಡೈರಿ ಪ್ರಕಾಶ್, ಹೋಟೆಲ್ ರವಿ, ಕಾಮಧೇನು ಶಿವ ಶಂಕರ್, ಕೆ.ಎಸ್.ರೇವಣ್ಣ ಇನ್ನಿತರಿದ್ದರು.

Translate »