ಮೈಸೂರು

ಬಾಯ್ತೆರೆದಿರುವ ಮ್ಯಾನ್ ಹೋಲ್
ಮೈಸೂರು

ಬಾಯ್ತೆರೆದಿರುವ ಮ್ಯಾನ್ ಹೋಲ್

October 19, 2021

ಮೈಸೂರು, ಅ.18(ಆರ್‍ಕೆಬಿ)- ಮೈಸೂರಿನ ಕೆಎಸ್‍ಆರ್‍ಟಿಸಿ ಗ್ರಾಮಾಂತರ ಕೇಂದ್ರ ಬಸ್ ನಿಲ್ದಾಣದ ನಿರ್ಗಮನ ದ್ವಾರದ ಬಳಿ ಮ್ಯಾನ್ ಹೋಲ್ ಬಾಯ್ತೆರೆದುಕೊಂಡಿದ್ದು, ಯಾವುದೇ ಕ್ಷಣ ಪ್ರಯಾಣಿಕರ ಪ್ರಾಣಾಪಾಯ ತಂದೊಡ್ಡುವ ಸಾಧ್ಯತೆ ಇದೆ. ಬೆಂಗಳೂರು-ಮೈಸೂರು ಪ್ಲಾಟ್‍ಫಾರಂ ಬಳಿ ನಿರ್ಗಮನ ದ್ವಾರಕ್ಕೆ ಹೊಂದಿಕೊಂಡಂತಿರುವ ಈ ಮ್ಯಾನ್ ಹೋಲ್‍ನ ಮಲೀನÀ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಚರಂಡಿಗೆ ಅಳವಡಿಸಿರುವ ಕಬ್ಬಿಣದ ಗ್ರಿಲ್ ಸಂಪೂರ್ಣ ಹಾಳಾಗಿದ್ದು, ನಿಲ್ದಾಣಕ್ಕೆ ಓಡಾಡುವ ಪ್ರಯಾಣಿ ಕರು ಅದನ್ನು ದಾಟಿಕೊಂಡು ಓಡಾಡುವ ಪರಿಸ್ಥಿತಿ ಇದೆ. ಮಳೆ ಬಂದಾ ಗಲಂತೂ ಉಕ್ಕಿ ಹರಿಯುವ…

ವಾರದಲ್ಲಿ ದಸರಾ ಲೆಕ್ಕ: ಸಚಿವ ಎಸ್.ಟಿ.ಸೋಮಶೇಖರ್
ಮೈಸೂರು

ವಾರದಲ್ಲಿ ದಸರಾ ಲೆಕ್ಕ: ಸಚಿವ ಎಸ್.ಟಿ.ಸೋಮಶೇಖರ್

October 17, 2021

ಮೈಸೂರು,ಅ.೧೬(ಆರ್‌ಕೆ)-ವಾರದೊಳ ಗಾಗಿ ೨೦೨೧ರ ದಸರಾ ಮಹೋತ್ಸವದ ಲೆಕ್ಕ ನೀಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ. ಮೈಸೂರಿನ ಸರ್ಕಾರಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಈ ಬಾರಿಯ ದಸರಾ ಮಹೋ ತ್ಸವಕ್ಕೆ ಮುಖ್ಯಮಂತ್ರಿಗಳು ೬ ಕೋಟಿ ರೂ. ಮಂಜೂರು ಮಾಡಿದ್ದರು. ಈಗಾಗಲೇ ಚಾಮರಾಜನಗರ, ಶ್ರೀರಂಗಪಟ್ಟಣ ದಸರಾಗೆ ತಲಾ ೫೦ ಲಕ್ಷ ಹಾಗೂ ಅರಕಲಗೂಡು ದಸರಾಗೆ ೨೦ ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಮೈಸೂರು ದಸರಾಗೆ ಮಾಡಿರುವ ವೆಚ್ಚದ ಬಗ್ಗೆ ವಾರದೊಳಗಾಗಿ ಲೆಕ್ಕ ಕೊಡುತ್ತೇನೆ…

ಮಧುವನದ ನಿವಾಸಿಗಳನ್ನು ಕಾಡಿದ ಮಳೆರಾಯ….
ಮೈಸೂರು

ಮಧುವನದ ನಿವಾಸಿಗಳನ್ನು ಕಾಡಿದ ಮಳೆರಾಯ….

October 17, 2021

ಮೈಸೂರು,ಅ.೧೬(ಎಂಕೆ)- ‘ಮಧು ವನ’ಕ್ಕೆ ಮಳೆಯ ಕಾಟ… ನೀರಿನ ರಭಸಕ್ಕೆ ಕೊಚ್ಚಿಹೋದ ಸಿಲಿಂಡರ್, ಅಕ್ಕಿ, ಬೆಳೆ, ಬಟ್ಟೆ ಇತ್ಯಾದಿ ವಸ್ತುಗಳು…! ಮೈಸೂರಿನಲ್ಲಿ ಶುಕ್ರವಾರ ಸುರಿದ ಭಾರೀ ಮಳೆಗೆ ಎಂಜಿ ರಸ್ತೆಯಲ್ಲಿರುವ ‘ಮಧುವನ’ ಕಾಲೋನಿ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ. ಕೆಲವೇ ನಿಮಿಷಗಳಲ್ಲಿ ಮನೆಯೊಳಗೆಲ್ಲಾ ನುಗ್ಗಿದ್ದ ನೀರು, ‘ಹೂ’ ಮಾರಾಟ ಮಾಡಿಕೊಂಡು ಜೀವನ ಸಾಗಿ ಸುತ್ತಿದ್ದ ನಿವಾಸಿಗಳ ಬದುಕನ್ನು ಅತಂತ್ರ ವನ್ನಾಗಿಸಿದೆ. ಸುಮಾರು ೬೦-೭೦ ಮನೆಗಳಿರುವ ‘ಮಧುವನ’ ಕಾಲೋನಿ ಯಲ್ಲಿನ ಸುಮಾರು ೨೦-೩೦ ಮನೆಗಳಿಗೆ ನೀರು ನುಗ್ಗಿದ್ದು, ೧೦-೧೫ ಮನೆಗಳಲ್ಲಿ ಗೃಹ…

ರಾಜ್ಯದಲ್ಲಿ ಕೊರೊನಾ ಇಳಿಮುಖ ಮೈಸೂರು ಜಿಲ್ಲೆಯಲ್ಲಿ ೨೧ ಮಂದಿಗೆ ಸೋಂಕು
ಮೈಸೂರು

ರಾಜ್ಯದಲ್ಲಿ ಕೊರೊನಾ ಇಳಿಮುಖ ಮೈಸೂರು ಜಿಲ್ಲೆಯಲ್ಲಿ ೨೧ ಮಂದಿಗೆ ಸೋಂಕು

October 17, 2021

ಮೈಸೂರು,ಅ.೧೬(ವೈಡಿಎಸ್)- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ. ಶನಿವಾರ ೨೬೪ ಮಂದಿಗೆ ಸೋಂಕು ತಗುಲಿದ್ದು, ೪೨೧ ಮಂದಿ ಗುಣಮುಖರಾಗಿದ್ದಾರೆ. ಮೈಸೂರಿನ ಓರ್ವ ಸೇರಿದಂತೆ ರಾಜ್ಯದಲ್ಲಿ ೬ ಮಂದಿ ಸಾವನ್ನಪ್ಪಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಶನಿವಾರ ೨೧ ಮಂದಿಗೆ ಸೋಂಕು ದೃಢಪಟ್ಟಿದ್ದು, ಓರ್ವ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಶನಿವಾರÀ ೫೬ ಮಂದಿ ಸೇರಿದಂತೆ ಇದುವರೆಗೆ ೧,೭೫,೯೧೧ ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ೧,೭೮,೬೯೬ ಮಂದಿಗೆ ಸೋಂಕು ತಗುಲಿದಂತಾಗಿದೆ. ಇದುವರೆಗೆ ೨,೪೦೩ ಮಂದಿ ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿನ್ನೂ ೩೮೨ ಸಕ್ರಿಯ ಪ್ರಕರಣಗಳಿವೆ. ಹೆಚ್.ಡಿ.ಕೋಟೆ ತಾಲೂಕಿನ…

ನರಿ, ಪುನುಗು ಬೆಕ್ಕಿನ ಚರ್ಮ, ಉಡ ಮಾರಾಟಕ್ಕೆ ಯತ್ನ: ಒಬ್ಬನ ಬಂಧನ
ಮೈಸೂರು

ನರಿ, ಪುನುಗು ಬೆಕ್ಕಿನ ಚರ್ಮ, ಉಡ ಮಾರಾಟಕ್ಕೆ ಯತ್ನ: ಒಬ್ಬನ ಬಂಧನ

October 17, 2021

ಮೈಸೂರು,ಅ.೧೬(ಎAಟಿವೈ)-ಅಳಿವಿ ನಂಚಿನಲ್ಲಿರುವ ನರಿ, ಪುನುಗು ಬೆಕ್ಕಿನ ಚರ್ಮ ಹಾಗೂ ೨ ಜೀವಂತ ಉಡ ಮಾರಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಅರಣ್ಯ ಸಂಚಾರಿ ದಳದ ಸಿಬ್ಬಂದಿ ಬಂಧಿಸಿ, ೫ ಚರ್ಮ ಹಾಗೂ ೨ ಉಡ ವಶಪಡಿಸಿಕೊಂಡಿದ್ದಾರೆ. ಮAಡ್ಯ ಜಿಲ್ಲೆ ನಾಗಮಂಗಲ ತಾಲೂಕು ಶಿಕಾರಿಪುರ ಗ್ರಾಮದ ಯಶವಂತರಾವ್ (೪೮) ಬಂಧಿತ ಆರೋಪಿ. ಈತ ಹಲವಾರು ಅರಣ್ಯ ಅಪರಾಧ ಪ್ರಕರಣಗಳಲ್ಲಿ ಭಾಗಿ ಯಾಗಿದ್ದಾನೆ ಎಂದು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ತಿಳಿಸಿದ್ದಾರೆ. ನಾಗಮಂಗಲ ಹಾಗೂ ಹುಣಸೂರು ತಾಲೂ ಕಿನ ಪಕ್ಷಿರಾಜಪುರದ ಹಕ್ಕಿಪಿಕ್ಕಿ ಜನಾಂಗದವ…

ತಮಿಳ್ನಾಡಿನಲ್ಲಿ ಸೆರೆ ಹಿಡಿದ ಹುಲಿಗೆ ಮೈಸೂರಲ್ಲಿ `ಆರೈಕೆ’!
ಮೈಸೂರು

ತಮಿಳ್ನಾಡಿನಲ್ಲಿ ಸೆರೆ ಹಿಡಿದ ಹುಲಿಗೆ ಮೈಸೂರಲ್ಲಿ `ಆರೈಕೆ’!

October 17, 2021

ಮೈಸೂರು, ಅ.೧೬(ಎಂಟಿವೈ)-ತಮಿಳುನಾಡಿನ ಮದುಮಲೈ ಹುಲಿ ಸಂರಕ್ಷಿತ ಪ್ರದೇಶದ ಮಸಣಗುಡಿ ಕಾಡಂಚಿನ ಗ್ರಾಮದಲ್ಲಿ ನಾಲ್ವರನ್ನು ಬಲಿ ಪಡೆದಿದ್ದ ಹುಲಿಯನ್ನು ಸೆರೆ ಹಿಡಿಯಲಾಗಿದೆ. ಅದನ್ನು ಮೈಸೂರು ಹೊರ ವಲಯದ ಕೂರ್ಗಳ್ಳಿಯ ಮೈಸೂರು ಮೃಗಾಲಯದ ಪುನ ರ್ವಸತಿ ಕೇಂದ್ರಕ್ಕೆ ತಂದು ಆರೈಕೆ ಮಾಡಲಾಗುತ್ತಿದೆ. ಅನ್ಯ ರಾಜ್ಯದಲ್ಲಿ ಸೆರೆ ಸಿಕ್ಕಿದ ಹುಲಿಗೆ ಮೈಸೂರು ಮೃಗಾಲಯದ ವತಿಯಿಂದ ಆರೈಕೆ ಮಾಡುತ್ತಿರುವುದು ಇದೇ ಮೊದಲು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊAಡಿರುವ ತಮಿಳುನಾಡಿನ ಮದುಮಲೆ ಹುಲಿ ಸಂರಕ್ಷಿತ ಪ್ರದೇಶದ ಮಸಣಗುಡಿ ರಸ್ತೆಯಲ್ಲಿನ ಪಂದಲೂರು ವಲಯ ವ್ಯಾಪ್ತಿಯಲ್ಲಿ…

ಮೈಸೂರಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪರ ಕಂಚಿನ ಪ್ರತಿಮೆ ಅನಾವರಣ
ಮೈಸೂರು

ಮೈಸೂರಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪರ ಕಂಚಿನ ಪ್ರತಿಮೆ ಅನಾವರಣ

October 17, 2021

ಮೈಸೂರು,ಅ.೧೬(ಪಿಎಂ)-ಭಾರತೀಯ ಸೇನೆಯ ಪ್ರಪ್ರಥಮ ದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಪ್ರತಿಮೆಯನ್ನು ಅವರ ಹೆಸರಿನಲ್ಲೇ ಇರುವ ಮೈಸೂರಿನ ಪ್ರಮುಖ ವೃತ್ತ ದಲ್ಲಿ ಶನಿವಾರ ಪ್ರತಿಷ್ಠಾಪನೆ ಮಾಡಲಾಯಿತು. ಈ ಮೊದಲು ಮೆಟ್ರೋಪೋಲ್ ವೃತ್ತ ಎಂದು ಕರೆಯಲಾಗುತ್ತಿತ್ತು. ಹಲವು ವರ್ಷಗಳ ಹಿಂದೆಯೇ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಹೆಸರನ್ನು ನಾಮಕಾರಣ ಮಾಡಿ, ಅವರ ಪುತ್ಥಳಿ ಪ್ರತಿಷ್ಠಾಪಿಸಲಾಗಿತ್ತು. ಇದೀಗ ಇಂದು ಬೆಳಗ್ಗೆ ೫೦೦ ಕೆಜಿ ತೂಕದ ಕಂಚಿನ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಯಿತು. ಬಳಿಕ ನೂತನ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಶಾಸಕ…

ದಸರಾ ಸರಳವಾದರೂ ಆಕರ್ಷಣೆಗೇನೂ ಕಡಿಮೆ ಇಲ್ಲ
ಮೈಸೂರು

ದಸರಾ ಸರಳವಾದರೂ ಆಕರ್ಷಣೆಗೇನೂ ಕಡಿಮೆ ಇಲ್ಲ

October 17, 2021

ಮೈಸೂರು,ಅ.೧೬(ವೈಡಿಎಸ್)-ವಿಶ್ವವಿಖ್ಯಾತ ನಾಡ ಹಬ್ಬ ದಸರಾ ಮಹೋತ್ಸವ ಸರಳವಾದರೂ ಆಕರ್ಷಣೆ ಗೇನು ಕಡಿಮೆ ಇರಲಿಲ್ಲ. ದಸರಾ ಮುಕ್ತಾಯವಾದರೂ ಸಾವಿರಾರು ಮಂದಿ ಪ್ರವಾಸಿಗರು, ಸಾರ್ವಜನಿಕರು ನಗರಕ್ಕೆ ಆಗಮಿಸಿ ಶನಿವಾರ ದೀಪಾಲಂಕಾರದ ಸೌಂದರ್ಯವನ್ನು ಕಣ್ತುಂಬಿಕೊAಡರು. ಶುಕ್ರವಾರ ದಸರಾ ಮುಕ್ತಾಯಗೊಂಡಿದೆ. ಆದರೆ, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಮೈಸೂರಿಗೆ ಭೇಟಿ ನೀಡುತ್ತಿರುವುದು ಮತ್ತು ಜನಪ್ರತಿನಿಧಿಗಳು, ಸ್ಥಳೀಯ ನಿವಾಸಿಗಳ ಬೇಡಿಕೆಯ ಮೇರೆಗೆ ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಅವರು ದೀಪಾಲಂಕಾರವನ್ನು ಇನ್ನೂ ೯ ದಿನಗಳವರೆಗೆ ವಿಸ್ತರಿಸಿದ್ದಾರೆ. ಈ ಬಾರಿಯ ದಸರಾ ದಲ್ಲಿ ದೀಪಾಲಂಕಾರಕ್ಕೆ ಹೆಚ್ಚಿನ ಪ್ರಾಧಾನ್ಯತೆ…

ಅರಮನೆ ವೀಕ್ಷಣೆಗೆ ಸಿಗದ ಅವಕಾಶ: ಪ್ರವಾಸಿಗರಿಗೆ ನಿರಾಶೆ
ಮೈಸೂರು

ಅರಮನೆ ವೀಕ್ಷಣೆಗೆ ಸಿಗದ ಅವಕಾಶ: ಪ್ರವಾಸಿಗರಿಗೆ ನಿರಾಶೆ

October 16, 2021

ಮೈಸೂರು, ಅ.15-ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ಸ್ಥಾನಕ್ಕೆ ಈ ವರ್ಷದ ಡಿಸೆಂಬರ್‍ನಲ್ಲಿ ನಡೆಯಲಿರುವ ಚುನಾವಣೆ ಯಲ್ಲಿ ಸ್ಪರ್ಧೆಗೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿ, ಮೈಸೂರು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರೂ ಆದ, ಕೆಪಿಸಿಸಿ ಸದಸ್ಯ ಕೆ.ಮರಿಗೌಡ ಶುಕ್ರವಾರ ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಜೆ.ವಿಜಯ್‍ಕುಮಾರ್ ಅವರಿಗೆ ಅರ್ಜಿ ಸಲ್ಲಿಸಿದರು. ನಂತರ ಮಾತನಾಡಿದ ಅವರು, ನಾನು ಸುಮಾರು 30 ವರ್ಷಗಳಿಂದ ಮಂಡಲ ಪಂಚಾಯಿತಿ, ಗ್ರಾಮ ಪಂಚಾಯಿತಿ ಸದಸ್ಯ, ತಾಲೂಕು…

ಒಂದೆಡೆ ಜಂಬೂಸವಾರಿ ವೀಕ್ಷಿಸಲು ಜನ ಪರದಾಡಿದರೆ,  ಇತ್ತ ಟ್ಯಾಕ್ಸಿಗಳಾಗಿದ್ದ ಜನಪ್ರತಿನಿಧಿಗಳ ವಾಹನಗಳು
ಮೈಸೂರು

ಒಂದೆಡೆ ಜಂಬೂಸವಾರಿ ವೀಕ್ಷಿಸಲು ಜನ ಪರದಾಡಿದರೆ, ಇತ್ತ ಟ್ಯಾಕ್ಸಿಗಳಾಗಿದ್ದ ಜನಪ್ರತಿನಿಧಿಗಳ ವಾಹನಗಳು

October 16, 2021

ಮೈಸೂರು,ಅ.15(ಎಂಕೆ)- ಕೊರೊನಾ ಹಿನ್ನೆಲೆ 2ನೇ ಬಾರಿಯೂ ಅರಮನೆ ಆವರಣಕ್ಕೆ ಸೀಮಿತವಾಗಿ ನಡೆದ ವಿಶ್ವವಿಖ್ಯಾತ ದಸರಾ ಜಂಬೂಸವಾರಿ ವೀಕ್ಷಣೆಗೆ ಸಾರ್ವಜನಿಕರು ಪರ ದಾಡಿದ್ದು ಕಂಡು ಬಂದಿತು. ಅರಮನೆಯ ಕರಿಕಲ್ಲು ತೊಟ್ಟಿ ಗೇಟ್ ಬಳಿ ಜಮಾಯಿಸಿದ ಸಾವಿರಾರು ಮಂದಿ ಪ್ರವೇಶಕ್ಕೆ ಅವಕಾಶ ನೀಡು ವಂತೆ ಪೊಲೀಸರೊಂದಿಗೆ ಮಾತಿ ಗಿಳಿದರು. ಮಧ್ಯಾಹ್ನವಾಗುತ್ತಿದ್ದರಿಂದ ಅರಮನೆ ಆವರಣಕ್ಕೆ ಏಕೈಕ ಪ್ರವೇಶ ದ್ವಾರವಾಗಿದ್ದ ಕರಿಕಲ್ಲುತೊಟ್ಟಿ ಗೇಟ್ ಬಳಿ ತಂಡೋಪತಂಡವಾಗಿ ಬರಲಾ ರಂಭಿಸಿದ ಜನರು ಜಂಬೂ ಸವಾರಿ ನೋಡಲು ಪರದಾಡಿದರು. ಈ ವೇಳೆ ಹಲವು ಮಂದಿ ನಾವು…

1 163 164 165 166 167 1,611
Translate »