ಮುಂಬರುವ ಸ್ಥಳೀಯ ಸಂಸ್ಥೆಗಳಿAದ ವಿಧಾನಪರಿಷತ್ ಚುನಾವಣೆಗೆ ಬಿಜೆಪಿಯಿಂದಲೇ ಕಣಕ್ಕಿಳಿಯಲು ಕಸರತ್ತು ಆರ್.ರಘು ಕೌಟಿಲ್ಯ, ಸಿ.ಬಸವೇಗೌಡರೂ ಮೈಸೂರು-ಚಾ.ನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಬಿಜೆಪಿಗೆ ಬರ್ತೀನಿ, ಮತ್ತೆ ಮೂರನೇ ಬಾರಿ ಮೈಸೂರು-ಚಾಮರಾಜನಗರ ಸ್ಥಳೀಯ ಸಂಸ್ಥೆಯಿAದ ಗೆದ್ದು ಬರ್ತೀನಿ. ಜನವರಿ ೫ರ ತನಕ ಜೆಡಿಎಸ್ ಸದಸ್ಯನಾಗಿ ಇರ್ತೀನಿ, ಕಳೆದ ಒಂದೂವರೆ ವರ್ಷದಿಂದ ನಾನು ಜೆಡಿಎಸ್ ನಿಂದ ದೂರ ಇದ್ದೀನಿ, ನಾಯಕರ ಸಂಪರ್ಕ ದಲ್ಲಿ ಇಲ್ಲ. ಪಕ್ಷದ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಹಾಗೂ ರಾಜ್ಯಾಧ್ಯಕ್ಷರ ಭೇಟಿ ಮಾಡಬೇಕಿತ್ತು. ಇಬ್ಬರೂ…
ಮುಕ್ತ ವಿವಿಯ ೨೨ ಬೋಧಕ ಸಿಬ್ಬಂದಿಗೆ ಯುಜಿಸಿ ವೇತನ ನೀಡುವುದಕ್ಕೆ ಬ್ರೇಕ್
October 2, 2021ನ್ಯಾಯಾಂಗ ನಿಂದನೆ ಹಿನ್ನೆಲೆಯಲ್ಲಿ ಯಥಾಸ್ಥಿತಿಗೆ ಕುಲಸಚಿವರಿಗೆ ಉನ್ನತ ಶಿಕ್ಷಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಕುಮಾರನಾಯಕ ನಿರ್ದೇಶನ ಮೈಸೂರು, ಅ.೧- ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ೨೨ ಖಾಯಂ ಸಿಬ್ಬಂದಿಗೆ ಯುಜಿಸಿ ವೇತನ ನೀಡುವುದು ನ್ಯಾಯಾಂಗ ನಿಂದನೆ ಯಾಗುವ ಕಾರಣ ಯಥಾಸ್ಥಿತಿ ಕಾಪಾಡು ವಂತೆ ಉನ್ನತ ಶಿಕ್ಷಣ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಕುಮಾರನಾಯಕ್ ಅವರು ಮುಕ್ತ ವಿವಿ ಕುಲಸಚಿವ ಪ್ರೊ. ಆರ್. ರಾಜಣ್ಣ ಅವರಿಗೆ ಪತ್ರ ಬರೆದು, ನಿರ್ದೇಶನ ನೀಡಿದ್ದಾರೆ. ಆ.೧೭ ರಂದು ನಡೆದ ಮುಕ್ತ…
ಅಪಘಾತದಲ್ಲಿ ಗಾಯಗೊಂಡಿದ ಖ್ಯಾತ ಶಿಲ್ಪಿ ಬಿ.ಎಸ್.ಯೋಗಿರಾಜ್ ಶಿಲ್ಪಿ ಸಾವು
October 1, 2021ಮೈಸೂರು,ಸೆ.30-ಅಪಘಾತದಲ್ಲಿ ಗಾಯಗೊಂಡಿದ್ದ ಮೈಸೂರಿನ ಖ್ಯಾತ ಶಿಲ್ಪಿ ಬಿ.ಎಸ್.ಯೋಗಿರಾಜ್ ಶಿಲ್ಪಿ (70) ಅವರು ಚಿಕಿತ್ಸೆ ಫಲಕಾರಿ ಯಾಗದೆ ಗುರುವಾರ ಸಂಜೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರು. ಮೈಸೂರಿನ ಚಾಮರಾಜ ಜೋಡಿ ರಸ್ತೆ ನಿವಾಸಿಯಾದ ಇವರು ಕಳೆದ ಶನಿವಾರ (ಸೆ.25) ಸಂಜೆ ತಮ್ಮ ಆಕ್ಟೀವಾ ಸ್ಕೂಟರ್‍ನಲ್ಲಿ ಲಲಿತ್ ಮಹಲ್ ರಸ್ತೆಯಲ್ಲಿ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿ ಸ್ಕೂಟರ್‍ನಿಂದ ಬಿದ್ದು, ಗಾಯಗೊಂಡಿ ದ್ದರು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಹೃದಯಾಘಾತದಿಂದ ಇಂದು ಸಂಜೆ ಮೃತಪಟ್ಟರೆಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರು ಪತ್ನಿ, ಇಬ್ಬರು…
ಸರಳವಲ್ಲ, ಇದು ಸಂಪೂರ್ಣ ಬಿಜೆಪಿ ದಸರಾ
October 1, 2021ಮೈಸೂರು,ಸೆ.30(ಪಿಎಂ)- ದಸರಾ ಉದ್ಘಾಟನೆಯ ಸಂಪ್ರದಾಯ ಮುರಿಯ ಬಾರದು ಹಾಗೂ ವೈಭವವಾಗಿ ದಸರಾ ಆಚರಿಸುವ ಮೂಲಕ ಜನಸಾಮಾನ್ಯರು, ವ್ಯಾಪಾರಸ್ಥರು ಮತ್ತು ಕಲಾವಿದರನ್ನೂ ಪ್ರೋತ್ಸಾಹಿಸಬೇಕೆಂದು ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಗುರುವಾರ ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದರು. ಮೈಸೂರಿನ ಜಯಚಾಮರಾಜ ಒಡೆ ಯರ್ ವೃತ್ತದಲ್ಲಿ (ಹಾರ್ಡಿಂಜ್ ವೃತ್ತ) ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದ ಅವರು, ಮೈಸೂರು ದಸರಾಗೆ ಐತಿಹಾಸಿಕ ಹಿನ್ನೆಲೆ ಇದ್ದು, ಇದನ್ನು ಸರಳವಾಗಿ ಆಚರಿಸುವ ಮೂಲಕ ತೀರಾ ಕೆಳಮಟ್ಟಕ್ಕೆ ತರಬಾರದು ಎಂದು ಕಿಡಿಕಾರಿದರು. ಇದೇ ವೇಳೆ…
ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ರಾಜ್ಯ ದಸಂಸ ಪ್ರತಿಭಟನೆ
October 1, 2021ಮೈಸೂರು,ಸೆ.30(ಪಿಎಂ)-ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಮತ್ತು ಬಿಜೆಪಿ ಸರ್ಕಾರಗಳು ಲೂಟಿಕೋರ ನೀತಿ ಅನುಸರಿಸುತ್ತಿವೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ದಸಂಸ-ಡಾ.ಡಿ.ಜಿ.ಸಾಗರ್ ಬಣ) ಮೈಸೂರು ಜಿಲ್ಲಾ ಘಟಕದ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರು ಡಿಸಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಇಡೀ ದೇಶದ ಜನತೆ ಕೋವಿಡ್ 2ನೇ ಅಲೆಯ ಅನಾರೋಗ್ಯ ಮತ್ತು ನಿರುದ್ಯೋಗ ಸೇರಿದಂತೆ ಅನೇಕ ರೀತಿಯ ಸಂಕಷ್ಟಕ್ಕೆ ಸಿಲುಕಿರುವಾಗ ಅವರಿಗೆ ನೆರವಾಗಬೇಕಾದ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು, ಅಗತ್ಯ…
ಮೈಸೂರು ಜಿಲ್ಲಾ ಕೊರಮ ಸಮಾಜದಿಂದ ಪ್ರತಿಭಟನೆ
October 1, 2021ಮೈಸೂರು,ಸೆ.30(ಪಿಎಂ)- ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ತೊಂಡಾಳು ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ವಿಶಾಲಾಕ್ಷಿ (ಕೊರಮ ಸಮು ದಾಯ) ಎಂಬ ಮಹಿಳೆ ಮೇಲೆ ಕ್ಷುಲ್ಲಕ ಕಾರಣಕ್ಕೆ ಅನ್ಯ ಕೋಮಿನವರು (ಸವರ್ಣೀ ಯರು) ಹಲ್ಲೆ ನಡೆಸಿ ದೌರ್ಜನ್ಯ ನಡೆಸಿ ದ್ದಾರೆ ಎಂದು ಆರೋಪಿಸಿ ಹಾಗೂ ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಒತ್ತಾಯಿಸಿ ಮೈಸೂರು ಜಿಲ್ಲಾ ಕೊರಮ ಸಮಾಜದ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಆ.8 ರಂದು ತೊಂಡಾಳು…
ಕಬ್ಬಿನ ಎಫ್‍ಆರ್‍ಪಿ ದರ ಹೆಚ್ಚಳಕ್ಕೆ ಆಗ್ರಹಿಸಿ ಅ.5ರಂದು ವಿಧಾನಸೌಧಕ್ಕೆ ಮುತ್ತಿಗೆ
October 1, 2021ಮೈಸೂರು,ಸೆ.30(ಪಿಎಂ)- ಎರಡು ವರ್ಷಗಳಿಂದ ಕಬ್ಬಿನ ಎಫ್‍ಆರ್‍ಪಿ (ನ್ಯಾಯೋಚಿತ ಮತ್ತು ಕನಿಷ್ಠ ಬೆಂಬಲ ಬೆಲೆ) ದರ ನಿಗದಿ ಮಾಡದ ಕೇಂದ್ರ ಸರ್ಕಾರ, ಇದೀಗ 2021 -22ನೇ ಸಾಲಿಗೆ ಕೇವಲ 5 ರೂ. ಹೆಚ್ಚಿಸಿ, ಕ್ವಿಂಟಾಲ್‍ಗೆ 290 ರೂ. ದರ ನಿಗದಿಗೊಳಿಸಿದ್ದು, ಪುನರ್ ಪರಿಶೀಲಿಸಿ, ಕ್ವಿಂಟಾಲ್‍ಗೆ ಕನಿಷ್ಠ 350 ರೂ. ದರ ನಿಗದಿಗೆ ಒತ್ತಾಯಿಸಿದರೂ ಪ್ರಯೋಜನ ವಾಗಿಲ್ಲ. ಹೀಗಾಗಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಅ.5ರಂದು ವಿಧಾನಸೌಧ ಮುತ್ತಿಗೆ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಕುರು ಬೂರು…
ಮೈಸೂರಲ್ಲಿ ಭಾರೀ ಮಳೆ: ಧರೆಗುರುಳಿದ ಮರಗಳು ತಗ್ಗುಪ್ರದೇಶದ ಮನೆಗಳಿಗೆ ನೀರು
October 1, 2021ಮೈಸೂರು, ಸೆ.30(ಎಂಕೆ)- ಮೈಸೂರಿನಲ್ಲಿ ಗುರುವಾರ ಸುರಿದ ಭಾರೀ ಮಳೆಗೆ ಎರಡು ಬೃಹತ್ ಮರಗಳು ಧರೆಗುರುಳಿದ್ದು, ತಗ್ಗು ಪ್ರದೇಶದಲ್ಲಿನ ಬಡಾವಣೆಗಳಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದೆ. ಕಳೆದ 15 ದಿನಗಳಿಂದ ಬಿಡುವು ನೀಡಿದ್ದ ಮಳೆ ಗುರುವಾರ 2 ಗಂಟೆ ಗಳಿಗೂ ಹೆಚ್ಚು ಕಾಲ ಧಾರಾಕಾರವಾಗಿ ಸುರಿ ಯಿತು. ಸಂಜೆ 5 ಗಂಟೆ ಸುಮಾರಿಗೆ ಶುರುವಾಗಿ 7 ಗಂಟೆಯವರೆಗೂ ಸುರಿಯಿತು. ಪರಿಣಾಮ ಫೈವ್‍ಲೆಟ್ ವೃತ್ತ ಹಾಗೂ ಸುಣ್ಣದಕೇರಿ ಮಹದೇಶ್ವರ ದೇವ ಸ್ಥಾನದ ಬಳಿ ಬೃಹತ್ ಮರಗಳು ಧರೆಗುರುಳಿದರೆ, ದೇವರಾಜ ಅರಸು…
ಸಮರ್ಪಣಾ ಮನೋಭಾವದಿಂದ ನಿತ್ಯ ಜನಪರ ಸೇವೆಯಲ್ಲಿ ತೊಡಗಿರುವ ಶಾಸಕ ರಾಮದಾಸ್
October 1, 2021ಮೈಸೂರು, ಸೆ.30(ಆರ್‍ಕೆಬಿ)- ಕೃಷ್ಣರಾಜ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಕನಸಿ ನೊಂದಿಗೆ ಕಾರ್ಯೋನ್ಮುಖರಾಗಿರುವ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್, ಕಳೆದ ಸೆ.17ರಿಂದ 20 ದಿನಗಳ ಮೋದಿ ಯುಗ್ ಉತ್ಸವ ಕಾರ್ಯಕ್ರಮ ನಡೆಸುತ್ತಿದ್ದು, ಇದು ಅ.6ರವರೆಗೆ ನಡೆಯಲಿದೆ. ಅದರ ಭಾಗವಾಗಿ ಮೈಸೂರು ವಿದ್ಯಾರಣ್ಯಪುರಂ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಬಳಿಯ ಉದ್ಯಾನವನದಲ್ಲಿ ಸಚಿವ ಕೆ.ಸುಧಾಕರ್ ಸಮ್ಮುಖದಲ್ಲಿ ಅನೇಕ ಜನಪರ ಕಾರ್ಯಕ್ರಮಗಳು ನಡೆದವು. ಆರೋಗ್ಯ ಸಚಿವ ಕೆ.ಸುಧಾಕರ್ ಕೃಷ್ಣಮೂರ್ತಿ ಪುರಂನಲ್ಲಿರುವ ಭಗಿನಿ ಸೇವಾ ಸಮಾಜದಲ್ಲಿ ಕೋವಿಡ್ ಲಸಿಕಾಕರಣಕ್ಕೆ ಚಾಲನೆ ನೀಡಿದರು. ಬಳಿಕ ಜಯನಗರ…
ತಮಿಳುನಾಡಿಗೆ ನೀರು ಹರಿಸದಂತೆ ಕಾಂಗ್ರೆಸ್ ಒತ್ತಾಯ
October 1, 2021ಮೈಸೂರು,ಸೆ.30(ಎಂಟಿವೈ)- ಕಾವೇರಿ ಕಣಿವೆ ಭಾಗದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಪ್ರಮಾಣ ಕ್ಷೀಣಿಸಿದ್ದರೂ, ತಮಿಳುನಾಡಿಗೆ 70 ಟಿಎಂಸಿ ನೀರು ಬಿಡುವÀಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ ಆದೇಶಿಸಿದ್ದರೂ ಯಾವುದೇ ಕಾರಣಕ್ಕೂ ನೀರು ಬಿಡದಂತೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಒತ್ತಾಯಿಸಿದ್ದಾರೆ. ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಕಾವೇರಿ ಭಾಗದ 4 ಜಲಾಶಯಗಳಲ್ಲಿ ಕೇವಲ 66 ಟಿಎಂಸಿ ನೀರು ಮಾತ್ರ ಸಂಗ್ರಹ ವಿದೆ. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸ ಬಾರದು ಎಂದರು. ಸೆ.27…










