ಮೈಸೂರು,ಸೆ.29(ಎಂಟಿವೈ)-ಜಂಬೂಸವಾರಿಗೆ ದಿನಗಣನೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅ.1ರಿಂದ ಗಜಪಡೆ ನಾಯಕ ಅಭಿಮನ್ಯುಗೆ ಮರದ ಅಂಬಾರಿ ಹೊರಿಸುವ ತಾಲೀಮು ನಡೆಸಲು ಉದ್ದೇಶಿಸಲಾಗಿದೆ. ಸೆ.20ರಿಂದ ಗಜಪಡೆ ನಾಯಕ ಅಭಿಮನ್ಯು, ಪರ್ಯಾಯ ಆನೆಗಳಾದ ಗೋಪಾಲಸ್ವಾಮಿ, ಧನಂಜಯ ಹಾಗೂ ಹೊಸ ಆನೆ ಅಶ್ವತ್ಥಾಮನಿಗೂ ಭಾರ ಹೊರಿಸುವ ತಾಲೀಮು ನಡೆಸಲಾಗುತ್ತಿತ್ತು. ಇದೀಗ ಜಂಬೂಸವಾರಿಗೆ 15 ದಿನ ಇರುವು ದರಿಂದ ಅ.1ರಿಂದ ಮರದ ಅಂಬಾರಿ ಹೊರಿಸಿ ತರಬೇತಿ ನೀಡಲಾಗುತ್ತದೆ. ಅ.1ರಂದು ಬೆಳಿಗ್ಗೆ 9.25ರಿಂದ 10.30ರೊಳಗೆ ಮರದ ಅಂಬಾ ರಿಗೆ ಪೂಜೆ ಸಲ್ಲಿಸಿ, ಅಭಿಮನ್ಯುವಿನ ಮೇಲೆ ಕಟ್ಟಿ ತಾಲೀಮು…
ವರಹಾ ದ್ವಾರದ ಬಳಿ ಇಂದು ದಸರಾ ಗಜಪಡೆ, ಅಶ್ವಾರೋಹಿ ದಳಕ್ಕೆ ಸಿಡಿಮದ್ದು ತಾಲೀಮು
September 30, 2021ಮೈಸೂರು, ಸೆ.29(ಎಂಟಿವೈ)- ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಅಭಿಮನ್ಯು ನೇತೃತ್ವದ ಗಜಪಡೆಗೆ ನಾಳೆ(ಸೆ.30) ಬೆಳಿಗ್ಗೆ 11ಕ್ಕೆ ಅರಮನೆಯ ವರಹಾ ದ್ವಾರದ ಬಳಿಯಿರುವ ವಾಹನ ನಿಲುಗಡೆ ಸ್ಥಳದಲ್ಲಿ ಸಿಡಿಮದ್ದು ತಾಲೀಮು ನಡೆಸ ಲಾಗುತ್ತಿದೆ ಎಂದು ಡಿಸಿಎಫ್ ಡಾ.ವಿ.ಕರಿಕಾಳನ್ ತಿಳಿಸಿದ್ದಾರೆ. ಪ್ರಸಕ್ತ ಸಾಲಿನ ದಸರಾ ಮಹೋತ್ಸವದ ಅ.7ರಿಂದ ಆರಂಭ ವಾಗಲಿದ್ದು, ಅ.15ರಂದು ಜಂಬೂಸವಾರಿ ಜರುಗಲಿದೆ. ಕೊರೊನಾ ಹಿನ್ನೆಲೆಯಲ್ಲಿ ಅರಮನೆ ಆವರಣಕ್ಕೆ ಮಾತ್ರ ಜಂಬೂ ಸವಾರಿ ಮೆರವಣಿಗೆ ಸೀಮಿತಗೊಳಿಸಲಾಗಿದೆ. ಜಂಬೂಸವಾರಿ ದಿನ ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ವೇಳೆ ಪೊಲೀಸ್ ಬ್ಯಾಂಡ್ ವಾದನದ ತಂಡ…
ನಾಳೆ ಅರಮನೆ ದರ್ಬಾರ್ ಹಾಲ್‍ನಲ್ಲಿ ಸಿಂಹಾಸನ ಜೋಡಣೆ
September 30, 2021ಮೈಸೂರು, ಸೆ.29(ಎಂಟಿವೈ)- ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಖಾಸಗಿ ದರ್ಬಾರ್‍ಗಾಗಿ ಭಾದ್ರಪದಮಾಸ ಕೃಷ್ಣ ಪಕ್ಷ ದಶಮಿ ದಿನವಾದ ಅ.1ರಂದು ಬೆಳಗ್ಗೆ 9.30ರೊಳಗೆ ಸಲ್ಲುವ ತುಲಾ ಲಗ್ನದಲ್ಲಿ ದರ್ಬಾರ್ ಹಾಲ್‍ನಲ್ಲಿ ಚಿನ್ನದ ಸಿಂಹಾಸನ ಹಾಗೂ ಕನ್ನಡಿ ತೊಟ್ಟಿಯಲ್ಲಿ ಬೆಳ್ಳಿಯ ಭದ್ರಾಸನ ಜೋಡಿಸಲಾಗುತ್ತದೆ. ಪ್ರಸಕ್ತ ಸಾಲಿನಲ್ಲಿ ದಸರಾ ಮಹೋತ್ಸವದ ಅ.7ರಿಂದ 15ರವರೆಗೆ ನಡೆಯಲಿದೆ. ಇದಕ್ಕಾಗಿ ಅರಮನೆಯ ಸ್ಟ್ರಾಂಗ್‍ರೂಮ್‍ನಲ್ಲಿ ಬಿಡಿ ಬಿಡಿಯಾಗಿದ್ದ ಸಿಂಹಾಸನವನ್ನು ದರ್ಬಾರ್ ಹಾಲ್‍ನಲ್ಲಿ ಜೋಡಣೆ ಮಾಡಲಾಗುತ್ತದೆ. ಈ ಸಾಲಿನ ದಸರಾ ಮಹೋತ್ಸವಕ್ಕಾಗಿ ಅ.1ರಂದು ಬೆಳಗ್ಗೆ 9.30ರೊಳಗೆ ಸಲ್ಲುವ ತುಲಾಲಗ್ನದಲ್ಲಿ…
ಬಲಿಜ ವಿದ್ಯಾರ್ಥಿನಿಲಯದ ಪುನರ್ ನಿರ್ಮಾಣಕ್ಕೆ ಸಂಪೂರ್ಣ ನೆರವು
September 29, 2021ಮೈಸೂರು,ಸೆ.28- ಸಮಾಜದ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ವಿದ್ಯಾರ್ಥಿನಿಲಯದ ಪುನರ್ ನಿರ್ಮಾಣಕ್ಕೆ ಬೇಕಾದ ಹಣಕಾಸಿನ ನೆರವನ್ನು ಸಂಪೂರ್ಣವಾಗಿ ಒದಗಿಸಲಾಗುವುದು ಎಂದು ಮಾಜಿ ಸಚಿವ ಎಂ.ಆರ್. ಸೀತಾರಾಮ್ ಭರವಸೆ ನೀಡಿದರು. ನಗರದ ಸರಸ್ವತಿಪುರಂ ಶ್ರೀಯೋಗಿ ನಾರಾಯಣ ಬಲಿಜ(ಬಣಜಿಗ) ಸಂಘದ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿ, ಕಟ್ಟಡದ ಪರಿಸ್ಥಿತಿ ಪರಿಶೀಲಿಸಿದರು. ಬಳಿಕ ಸಮಾಜದ ಮುಖಂಡರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಬಲಿಜ ಸಮಾಜದ ಮಕ್ಕಳ ವಿದ್ಯಾಭ್ಯಾಸಕ್ಕೆ ನಿರ್ಮಿಸಿರುವ ಹಾಸ್ಟೆಲ್‍ಗಳನ್ನು ಖಾಸಗಿಯವರಿಗೆ ಕೊಡದೆ ಸಂಘದಿಂದಲೇ ನಿರ್ವಹಣೆ ಮಾಡಬೇಕು. ಬೆಂಗಳೂರಿ ನಲ್ಲಿ ಇದ್ದ ಹಾಸ್ಟೆಲ್ ಅನ್ನು ಖಾಸಗಿಯವರಿಗೆ ವಹಿಸಿಕೊಟ್ಟ…
6ನೇ ತಂಡದ ಮಹಿಳಾ ಕಾನ್‍ಸ್ಟೇಬಲ್‍ಗಳ ಆಕರ್ಷಕ ನಿರ್ಗಮನ ಪಥ ಸಂಚಲನ
September 29, 2021ಮೈಸೂರು, ಸೆ.28(ಆರ್‍ಕೆ)- ಮೈಸೂರಿನ ಪೊಲೀಸ್ ತರಬೇತಿ ಶಾಲೆ (ಪಿಟಿಎಸ್)ಯಲ್ಲಿ 8 ತಿಂಗಳ ಬುನಾದಿ ತರಬೇತಿ ಪಡೆದ 6ನೇ ತಂಡದ 242 ಮಹಿಳಾ ಕಾನ್‍ಸ್ಟೇಬಲ್‍ಗಳ ನಿರ್ಗಮನ ಪಥಸಂಚಲನ ಮಂಗಳವಾರ ಜ್ಯೋತಿನಗರದ ಡಿಎಆರ್ ಪರೇಡ್ ಮೈದಾನದಲ್ಲಿ ನಡೆಯಿತು. ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪ್ರಶಿಕ್ಷಣಾರ್ಥಿಗಳ ಆಕರ್ಷಕ ಪಥ ಸಂಚಲನ ವೀಕ್ಷಿಸಿ ಗೌರವ ವಂದನೆ ಸ್ವೀಕರಿಸಿದರಲ್ಲದೆ ತರಬೇತಿ ಅವಧಿಯಲ್ಲಿ ಸಾಧನೆ ಮೆರೆದ ಮಹಿಳಾ ಪೊಲೀಸ್ ಕಾನ್‍ಸ್ಟೇಬಲ್‍ಗಳಿಗೆ ಬಹುಮಾನ ವಿತರಿಸಿದರು. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ತರ ಬೇತಿ)…
ಕೇಂದ್ರದಿಂದ ಜಾತಿ ಜನಗಣತಿ ನಿರ್ಲಕ್ಷ್ಯ ವಿರೋಧಿಸಿ ಅಂಚೆ ಪತ್ರ ಚಳವಳಿ
September 29, 2021ಮೈಸೂರು, ಸೆ.28(ಆರ್‍ಕೆಬಿ)- ಜಾತಿ ಗಣತಿ ನಡೆಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‍ಗೆ ಪ್ರಮಾಣಪತ್ರ ಸಲ್ಲಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋ ಧಿಸಿ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಕಾರ್ಯಕರ್ತರು ಮಂಗಳವಾರ ನಗರಪಾಲಿಕೆ ಎದುರಿನ ಅಂಚೆ ಪೆಟ್ಟಿಗೆ ಬಳಿ ಅಂಚೆ ಪತ್ರ ಚಳವಳಿ ನಡೆಸಿದರು. ಕೇಂದ್ರ ಸರ್ಕಾರ ಹಿಂದುಳಿದ ವರ್ಗ ಗಳ ವಿರೋಧಿ ನೀತಿ ಅನುಸರಿಸುತ್ತಿದೆ. ಸಮ ಸಮಾಜ ನಿರ್ಮಾಣಕ್ಕೆ, ಸರ್ಕಾರದ ಸವಲತ್ತುಗಳು ಸಮಾನ ಹಂಚಿಕೆಗೆ, ಹಿಂದು ಳಿದ ವರ್ಗಗಳ ಜನಸಂಖ್ಯೆಗೆ ಅನುಗುಣ ವಾಗಿ ಮೀಸಲಾತಿ ಪಡೆಯಲು…
ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಮುಖಂಡರ ಸಭೆ
September 29, 2021ಮೈಸೂರು, ಸೆ. 28- ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಚಾಮುಂಡೇಶ್ವರಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ವ್ಯಾಪ್ತಿಗೆ ಬರುವ ಶ್ರೀರಾಂಪುರ ಗ್ರಾಮ ಪಂಚಾಯಿತಿಯ ಮಹದೇವಪುರ ಗ್ರಾಮದಲ್ಲಿ ಚಾಮುಂಡೇಶ್ವರಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಎಸ್ಸಿ ಘಟಕದ ಅಧ್ಯಕ್ಷ ಪಿ.ಲಕ್ಷ್ಮಣ್ ಪ್ರಭು ನೇತೃತ್ವದಲ್ಲಿ ಮಹಾದೇವಪುರ ವ್ಯಾಪ್ತಿಯ 8 ವಾರ್ಡ್‍ಗಳ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಏರ್ಪಡಿಸಲಾಗಿತ್ತು. ಸಭೆಯ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಕೆಪಿಸಿಸಿ ಸದಸ್ಯ ಕೆ.ಮರಿಗೌಡ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಉಸ್ತು ವಾರಿಗಳಾದ ಗುರುಪಾದಸ್ವಾಮಿ ಆಗಮಿಸಿದ್ದರೆ,…
ಶ್ವಾನಗಳಿಗೆ ತಪ್ಪದೇ ರೇಬಿಸ್ ಲಸಿಕೆ ಕೊಡಿಸಿ
September 29, 2021ಮೈಸೂರು, ಸೆ.28(ಆರ್‍ಕೆಬಿ)- ವಿಶ್ವ ರೇಬಿಸ್ ದಿನದ ಅಂಗವಾಗಿ ಪಶು ಸಂಗೋ ಪನಾ ಇಲಾಖೆಯು ಜಿಲ್ಲೆಯ ಎಲ್ಲಾ ಸರ್ಕಾರಿ ಪಶು ವೈದ್ಯ ಆಸ್ಪತ್ರೆಗಳಲ್ಲಿ ಹಮ್ಮಿಕೊಂಡಿ ರುವ ಶ್ವಾನಗಳಿಗೆ ರೇಬಿಸ್ ವಿರುದ್ಧದ ಉಚಿತ ಲಸಿಕೆ ನೀಡುವ ಮೂರು ದಿನಗಳ ಶಿಬಿರಕ್ಕೆ ಮಂಗಳವಾರ ಚಾಲನೆ ದೊರೆಯಿತು. ಲೂಯಿಸ್ ಪಾಶ್ಚರ್, ರೇಬಿಸ್ ವಿರುದ್ಧ ಲಸಿಕೆಯನ್ನು ಯಶಸ್ವಿಯಾಗಿ ಕಂಡು ಹಿಡಿದ ಸೆ.28ರಂದು ವಿಶ್ವ ರೇಬಿಸ್ ದಿನ ಆಚರಿಸ ಲಾಗುತ್ತಿದೆ. ಈ ದಿನದ ಅಂಗವಾಗಿ ಮೈಸೂ ರಿನ 11 ಪಶು ವೈದ್ಯ ಆಸ್ಪತ್ರೆಗಳು ಸೇರಿದಂತೆ ಮೈಸೂರು…
ವಚನ ಸಾಹಿತ್ಯವನ್ನು ಸುಲಭವಾಗಿ ಅರ್ಥೈಸಿಕೊಳ್ಳಲಾಗದು!
September 29, 2021ಮೈಸೂರು,ಸೆ.28(ಪಿಎಂ)-ಜನಪ್ರಿಯ ವಚನಗಳನ್ನು ಮಾತ್ರ ಉದ್ಘರಿಸಿ ವಚನ ಸಾಹಿತ್ಯ ಸರಳ-ಸುಲಭ ಎನ್ನುವುದು ಹೆಚ್ಚು ರೂಢಿಯಲ್ಲಿದೆ. ಆದರೆ ಇಲ್ಲಿಯೂ ಸುಲಭವಾಗಿ ಅರ್ಥೈಸಿಕೊಳ್ಳಲಾಗದ ಹಲವು ಕ್ಲಿಷ್ಟಕರ ಅಂಶಗಳಿವೆ ಎಂದು ಸಂಶೋಧಕ ಮತ್ತು ವಿಮರ್ಶಕ ಡಾ.ಬಸವರಾಜ ಕಲ್ಲುಡಿ ಅಭಿಪ್ರಾಯಪಟ್ಟರು. ಮೈಸೂರಿನ ಮಾನಸಗಂಗೋತ್ರಿಯ ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ವಿವಿ ಶ್ರೀ ಬಸವೇಶ್ವರ ಸಾಮಾಜಿಕ ಪರಿಷ್ಕರಣೆ ಸಂಶೋಧನೆ ಮತ್ತು ವಿಸ್ತರಣೆ ಕೇಂದ್ರ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಚಿಂತನ ಚಿತ್ತಾರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿ ಕೊಂಡಿದ್ದ ಸಮಾರಂಭದಲ್ಲಿ ಹಿರಿಯ ವಿಮರ್ಶಕ ಪ್ರೊ.ಓ….
ಹಿಂದೂಗಳ ಭಾವನೆಗಳಿಗೆ ದ್ರೋಹ ಮಾಡಿದವರು ಮುಂದಿನ ಚುನಾವಣೆಯಲ್ಲಿ ಗೆಲ್ಲಲಾರರು
September 29, 2021ಮೈಸೂರು, ಸೆ.28(ಆರ್‍ಕೆಬಿ)- ನಂಜನಗೂಡು ತಾಲೂಕಿನ ಹುಚ್ಚಗಣಿ ದೇವಸ್ಥಾನವನ್ನು ಕೆಡವಿದ ಸಂಬಂಧ ಹಿಂದೂ ಜಾಗರಣ ವೇದಿಕೆ ವತಿಯಿಂದ ಮಂಗಳವಾರ ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಪ್ರತಿಭಟನಾ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ, ಹಿಂದೂ ಜಾಗರಣ ವೇದಿಕೆ ದಕ್ಷಿಣ ಭಾರತ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್, ಹಿಂದೂ ಸಮಾಜಕ್ಕೆ ದ್ರೋಹ ಮಾಡಿದವರು ಮುಂದಿನ ಚುನಾವಣೆ ಯಲ್ಲಿ ಹೇಗೆ ಗೆಲ್ಲಲು ಸಾಧ್ಯ ಎಂಬುದನ್ನು ಹಿಂದೂಗಳು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ದೇವಸ್ಥಾನ ತೆರವು ಕಾರ್ಯವನ್ನು ಇಡೀ ವಿಧಾನಸಭೆ ಪಕ್ಷಾತೀತವಾಗಿ…










