ಮೈಸೂರು, ಸೆ.7- ಮೈಸೂರು ಜಿಲ್ಲೆಯಲ್ಲಿ ಗಣೇಶ ಚತುರ್ಥಿ ಹಬ್ಬವನ್ನು ಸರಳವಾಗಿ ಆಚರಿಸಲು ಸರ್ಕಾರ ಅನುಮತಿ ನೀಡಿದೆ. ಮನೆಗಳಲ್ಲಿ, ಖಾಸಗಿ ಹಾಗೂ ಸಾರ್ವಜನಿಕ ಬಯಲು ಪ್ರದೇಶಗಳಲ್ಲಿ ಕನಿಷ್ಠ ಸಂಖ್ಯೆಯಲ್ಲಿ ಆಚರಿಸಲು ಅವಕಾಶ ನೀಡಲಾ ಗಿದೆ. ಅಧಿಕಾರಿಗಳು ಈ ನಿಯಮಗಳು ಕಟ್ಟು ನಿಟ್ಟಾಗಿ ಪಾಲನೆಯಾಗುವಂತೆ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಹೇಳಿದರು. ಡಿಸಿ ಕಚೇರಿಯಲ್ಲಿ ಗಣೇಶ ಚತುರ್ಥಿ ಆಚರಣೆ ಸಂಬಂಧ ಅಧಿ ಕಾರಿಗಳ ಸಭೆ ನಡೆಸಿ, ಸರ್ಕಾರದ ಮಾರ್ಗಸೂಚಿ ಕಟ್ಟುನಿಟ್ಟಿನ ಪಾಲನೆ ಬಗ್ಗೆ ಅವರು ಸೂಚಿಸಿದರು….
ಪೆಟ್ರೋಲ್, ಡೀಸೆಲ್, ಗ್ಯಾಸ್, ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ
September 8, 2021ಮೈಸೂರು, ಸೆ.7(ಆರ್‍ಕೆಬಿ)- ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ಸೇನಾಪಡೆ ಜಿಲ್ಲಾ ಘಟಕ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬೆಲೆಗಳನ್ನು ಇಳಿಸಬೇಕು ಎಂದು ಆಗ್ರಹಿಸಿದರು. `ಅಚ್ಛೇ ದಿನ್’ (ಒಳ್ಳೆಯ ದಿನಗಳು) ಬರುತ್ತವೆ ಎಂದು ಹೇಳುತ್ತಾ ಜನರನ್ನು ಕೇಂದ್ರ ಸರ್ಕಾರ ವಂಚಿಸುತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರದ ದುರಾಡಳಿತದಿಂದಾಗಿ ನಗರವಾಸಿ ಮಧ್ಯಮವರ್ಗದ ಜನರ ಬದುಕು ನರಕವಾಗಿದೆ. ವಿದ್ಯುತ್ ದರವೂ ಶೇ.30ರಷ್ಟು ಹೆಚ್ಚಾಗಿದೆ….
ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳ ಜಯಂತಿ ಆಚರಣೆ
September 8, 2021ಮೈಸೂರು, ಸೆ.7- ಸುತ್ತೂರು ಶ್ರೀಕ್ಷೇತ್ರ ದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮಿಗಳವರ ಸಾನ್ನಿಧ್ಯದಲ್ಲಿ ಶ್ರಾವಣ ಮಾಸ ಪೂಜಾನುಷ್ಠಾನ ಸಮಾರೋಪ ಹಾಗೂ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 106 ನೆಯ ಜಯಂತಿ ಮಹೋತ್ಸವವನ್ನು ಭಕ್ತಿ ಭಾವದಿಂದ ಆಚರಿಸಲಾಯಿತು. ನುಡಿನಮನ ಮತ್ತು ಸಮಾರೋಪ ಭಾಷಣ ಮಾಡಿದ ಕರ್ನಾಟಕ ಸರ್ಕಾರದ ಗಡಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ. ಸೋಮಶೇಖರ್ ಮಾತನಾಡಿ, ರಾಜೇಂದ್ರ ಸ್ವಾಮಿಗಳವರು ತ್ರಿವಿಧ ದಾಸೋಹಿಗಳಾಗಿ ದಣಿವರಿಯದ ಕಾಯಕಯೋಗಿಗಳಾಗಿ ಶಾಂತಿ, ಸಾಮರಸ್ಯ, ದಯೆ, ನಿಸ್ವಾರ್ಥತೆ ಯನ್ನು ಬದುಕಿನಲ್ಲಿ…
ಕೋವಿಡ್ ಸಮಯ ಅರಿಸಿನ ಗಣಪ ಉತ್ತಮ: ಹೆಚ್.ವಿ.ರಾಜೀವ್ ಸಲಹೆ
September 8, 2021ಮೈಸೂರು,ಸೆ.7-ಮೈಸೂರು ನಗರಾ ಭಿವೃದ್ಧಿ ಪ್ರಾಧಿಕಾರದ ಕಚೇರಿ ಆವರಣ ದಲ್ಲಿ ಪರಿಸರ ಸ್ನೇಹಿ ಬಳಗದ ವತಿಯಿಂದ ಏರ್ಪಡಿಸಿದ್ದ ಪರಿಸರ ಸ್ನೇಹಿ ಅರಿಸಿನ ಗಣೇಶ ಅಭಿಯಾನದಲ್ಲಿ ಮುಡಾ ಅಧ್ಯಕ್ಷ ಎಚ್.ವಿ. ರಾಜೀವ್ ಭಿತ್ತಿಪತ್ರ ಬಿಡುಗಡೆಗೊಳಿಸಿದರು. ಮೈಸೂರು ನಗರ ಮತ್ತು ತಾಲೂಕು ಮಟ್ಟದ ಪರಿಸರ ಸ್ನೇಹಿ ಗಣೇಶೋತ್ಸವ ಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು. ಕೋವಿಡ್ ತೀವ್ರತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗಣೇಶ ಹಬ್ಬದ ಸಂದರ್ಭ ಅರಿಸಿನ ಗಣೇಶ ಮೂರ್ತಿ…
ನೂರಾರು ಕೋಟಿ ಬೆಲೆಬಾಳುವ ಸಾರ್ವಜನಿಕ ಆಸ್ತಿ ರಕ್ಷಣೆಗೆ ಆಗ್ರಹಿಸಿ ಎಂ.ಜಿ.ರಸ್ತೆ ತರಕಾರಿ ಮಾರುಕಟ್ಟೆ ವ್ಯಾಪಾರಿಗಳ ಪ್ರತಿಭಟನೆ
September 8, 2021ಮೈಸೂರು, ಸೆ.7(ಆರ್‍ಕೆಬಿ)- ಮೈಸೂ ರಿನ ದೊಡ್ಡಕೆರೆ ಸರ್ವೆ ನಂ.1ರ 145.13 ಎಕರೆ ಸಾರ್ವಜನಿಕ ಆಸ್ತಿಯ ಅಕ್ರಮ ಖಾತೆ ಮಾಡಿ ಅದನ್ನು ಕಬಳಿಸುವ ಯತ್ನದಲ್ಲಿ ಶಾಮೀಲಾಗಿರುವ ನಗರಪಾಲಿಕೆ ಅಧಿಕಾರಿ ಗಳ ಮೇಲೆ ಕಾನೂನು ಕ್ರಮ ಕೈಗೊಂಡು, ಅತಿಕ್ರಮ ತೆರವುಗೊಳಿಸಬೇಕು. ಎಂ.ಜಿ. ರಸ್ತೆ ತರಕಾರಿ ವ್ಯಾಪಾರಸ್ಥರಿಗೆ ಪರ್ಯಾಯ ವಾಗಿ ಫುಟ್‍ಪಾತ್ ಮೇಲೆ ತರಕಾರಿ ವ್ಯಾಪಾರ ಮಾಡುತ್ತಾ ಅಶಾಂತಿ ಸೃಷ್ಟಿಸುತ್ತಿರುವ ದಲ್ಲಾಳಿ ಗಳನ್ನು ತೆರವುಗೊಳಿಸಬೇಕು ಎಂದು ಆಗ್ರ ಹಿಸಿ ಎಂ.ಜಿ.ರಸ್ತೆ ತರಕಾರಿ ವ್ಯಾಪಾರಿಗಳು ಮಂಗಳವಾರ ಮೈಸೂರು ನಗರಪಾಲಿಕೆ ಕಚೇರಿ ಎದುರು ಪ್ರತಿಭಟನೆ…
ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ
September 8, 2021ಮೈಸೂರು, ಸೆ.7(ಆರ್‍ಕೆಬಿ)- ದೆಹಲಿ ಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ಅತ್ಯಾಚಾರ ನಡೆಸಿ, ಭೀಕರ ರೀತಿ ಯಲ್ಲಿ ಹತ್ಯೆ ಮಾಡಿರುವ ಘಟನೆಯನ್ನು ಖಂಡಿಸಿ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮೈಸೂರು ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ಮೈಸೂರು ಪುರಭವನದ ಎದುರಿನ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಯಿತು. ದೇಶ ಕಾಯುವ ಯೋಧರಿಗೆ, ಜನರನ್ನು ರಕ್ಷಿಸುವ ಪೊಲೀಸರಿಗೇ ಭದ್ರತೆ ಇಲ್ಲದಂತಾ ಗಿದೆ. ದೆಹಲಿಯ ಪೊಲೀಸ್ ಅಧಿಕಾರಿ ಯಾಗಿ ನಾಲ್ಕು ತಿಂಗಳ ಹಿಂದಷ್ಟೇ ಕೆಲಸಕ್ಕೆ ಸೇರಿದ್ದ 21 ವರ್ಷದ ಯುವತಿಯ…
ಎನ್‍ಇಪಿಯಿಂದ ಉನ್ನತ ಶಿಕ್ಷಣದಲ್ಲಿ ಕ್ರಾಂತಿಕಾರಿ ಬದಲಾವಣೆ
September 8, 2021ಮೈಸೂರು, ಸೆ.7(ಎಂಟಿವೈ)- ಉನ್ನತ ಶಿಕ್ಷಣದಲ್ಲಿ ಕ್ರಾಂತಿಕಾರಿ ಬದಲಾವಣೆÉ ತರುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‍ಇಪಿ)ಯನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಸ್ಪಷ್ಟಪಡಿಸಿದ್ದಾರೆ. ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಆವರಣದಲ್ಲಿ ಮಂಗಳ ವಾರ ಕಾಲೇಜು ಶಿಕ್ಷಣ ಇಲಾಖೆ, ಮಹಾ ರಾಣಿ ಮಹಿಳಾ ವಿಜ್ಞಾನ ಕಾಲೇಜು, ಕಲಾ, ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಸಂಬಂಧಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಕಾಲಕಾಲಕ್ಕೆ…
ಆಡಳಿತ ಮಂಡಳಿ ಪರಿಶ್ರಮದಲ್ಲೇ ಸಹಕಾರ ಸಂಘದ ಪ್ರಗತಿ; ಜಿಟಿಡಿ
September 7, 2021ಮೈಸೂರು,ಸೆ.6(ಎಸ್‍ಬಿಡಿ)- ಸಹಕಾರ ಸಂಘಗಳ ಬೆಳವಣಿಗೆ ಆಡಳಿತ ಮಂಡಳಿ ಪರಿಶ್ರಮವನ್ನು ಅವಲಂಬಿಸಿರುತ್ತದೆ ಎಂದು ಹಿರಿಯ ಸಹಕಾರಿಯೂ ಆದ ಶಾಸಕ ಜಿ.ಟಿ.ದೇವೇಗೌಡ ಅಭಿಪ್ರಾಯಪಟ್ಟರು. ಮೈಸೂರಿನ ರಾಮಕೃಷ್ಣನಗರ `ಐ’ ಬ್ಲಾಕ್‍ನ `ಆದ್ಯ ಸೌಹಾರ್ದ ಸಹಕಾರಿ ಸಂಘ’ದ ಉದ್ಘಾಟನೆಯನ್ನು ಭಾನುವಾರ ನೆರವೇರಿಸಿದ ಅವರು, ಸಹಕಾರ ಸಂಘ ಗಳ ಬೆಳವಣಿಗೆಗೆ ಆಡಳಿತ ಮಂಡಳಿ ಪ್ರಾಮಾಣಿಕ ವಾಗಿ ದುಡಿಯಬೇಕು. ಸದಸ್ಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿ, ಸಮನ್ವಯದಿಂದ ಕೆಲಸ ಮಾಡಬೇಕು. ಸಿಬ್ಬಂದಿಯೂ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು. ಸದಸ್ಯರ ನಂಬಿಕೆಯನ್ನು ಹುಸಿಗೊಳಿಸದಂತೆ ಸಂಘ ಮುನ್ನಡೆಯಬೇಕು ಎಂದು ಮಾರ್ಗದರ್ಶನ ಮಾಡಿದರು….
`ವಿಶ್ವ ಆಲ್‍ಝೈಮರ್ಸ್ ಮಾಸಾಚರಣೆ’ಗೆ ಚಾಲನೆ
September 7, 2021ಮೈಸೂರು,ಸೆ.6(ಪಿಎಂ)-ಆಲ್‍ಝೈಮರ್ಸ್ ಅಂಡ್ ರಿಲೇಟೆಡ್ ಡಿಸಾರ್ಡರ್ಸ್ ಸೊಸೈಟಿ ಆಫ್ ಇಂಡಿಯಾ ಮೈಸೂರು ಘಟಕದ ವತಿಯಿಂದ `ವಿಶ್ವ ಆಲ್‍ಝೈಮರ್ಸ್ ಮಾಸಾಚರಣೆ (ವಿಶ್ವ ಮರೆಗುಳಿತನ ಕಾಯಿಲೆ ಮಾಸಾ ಚರಣೆ) ಅಂಗವಾಗಿ ಹಮ್ಮಿಕೊಂಡಿರುವ ವಿವಿಧ ಅರಿವು ಕಾರ್ಯಕ್ರಮಗಳಿಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಹಾಗೂ ಕಾವೇರಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಜಿ.ಆರ್.ಚಂದ್ರಶೇಖರ್ ಚಾಲನೆ ನೀಡಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮ ವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಚಾಲನೆ ನೀಡಿದ ಅವರು, ಮರೆಗುಳಿತನ ಕಾಯಿಲೆ (ಆಲ್‍ಝೈಮರ್ಸ್) ಹಿರಿ ಯರಲ್ಲಿ…
ಮುಡಾದಿಂದ ಸೈಕಲ್ ಜಾಥಾ ಮೂಲಕ ಕ್ವಿಟ್ ಇಂಡಿಯಾ ಚಳವಳಿ ಸ್ಮರಣೆ
September 7, 2021ಮೈಸೂರು,ಸೆ.6(ಆರ್‍ಕೆ)-ಅಜಾದಿ ಕ ಅಮೃತ್ ಮಹೋ ತ್ಸವದ ಅಂಗವಾಗಿ ಮುಡಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಇಂದು ಮೈಸೂರಲ್ಲಿ ಸೈಕಲ್ ಜಾಥಾ ನಡೆಸಿ ಕ್ವಿಟ್ ಇಂಡಿಯಾ ಚಳುವಳಿಯ ಸ್ಮರಣೆ ಮಾಡಿದರು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ. ರಾಜೀವ್, ಆಯುಕ್ತ ಡಾ.ಡಿ.ಬಿ.ನಟೇಶ್ ನೇತೃತ್ವದಲ್ಲಿ ಅರಮನೆ ಉತ್ತರ ದ್ವಾರದ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯಿಂದ ಆರಂಭವಾದ ಜಾಥಾಗೆ ಟ್ರಿಣ್ ಟ್ರಿಣ್ ಸೈಕಲ್‍ಗಳನ್ನು ಬಳಸಿಕೊಳ್ಳಲಾಯಿತು. ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಪೂರೈಸಿದ ಹಿನ್ನೆಲೆ ಯಲ್ಲಿ ರಾಷ್ಟ್ರದಾದ್ಯಂತ ಅಜಾದಿ ಕ…










