ಮೈಸೂರು,ಸೆ.12(ಆರ್‍ಕೆಬಿ)-ಮೈಕ್ ಚಂದ್ರು ಎಂದೇ ಜನಪ್ರಿಯರಾಗಿದ್ದ ಮೈಸೂ ರಿನ ಪ್ರಚಾರಕ ಎನ್.ಚಂದ್ರಶೇಖರ್ (71) ಶನಿವಾರ ರಾತ್ರಿ ರಾಣೆಬೆನ್ನೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಅವರು ಪತ್ನಿ ಸುಲೋಚನ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೈಸೂರಿನ ಜೆ.ಪಿ.ನಗರದ ನಿವಾಸಿ ಚಂದ್ರು ತನ್ನ ಸಹೋದರಿಯನ್ನು ನೋಡಲು ರಾಣೆಬೆನ್ನೂ ರಿಗೆ ಹೋಗಿದ್ದರು. ಅಲ್ಲಿ ಅವರಿಗೆ ಹೃದಯಾ ಘಾತ ಸಂಭವಿಸಿತು. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಕೊನೆಯುಸಿರೆಳೆದರು. ಅವರ ಪಾರ್ಥಿವ ಶರೀರವನ್ನು ಭಾನುವಾರ ಬೆಳಗ್ಗೆ ಅವರ ಮೈಸೂರಿನ ನಿವಾಸಕ್ಕೆ ತರಲಾಯಿತು. ಅಲ್ಲಿ ಸಾರ್ವಜನಿಕ ದರ್ಶನದ ನಂತರ…
DC instruction for short term skills training implementation
September 13, 2021ಮೈಸೂರು,ಸೆ.12-ಫ್ರಂಟ್‍ಲೈನ್ ವರ್ಕರ್ಸ್ ಗಳಾಗಿ ಕಾರ್ಯನಿರ್ವಹಿಸಲು ಆಸಕ್ತಿ ಇರುವ ಅಭ್ಯರ್ಥಿಗಳಿಗೆ ಅಲ್ಪಾವಧಿ ಕೌಶಲ ತರಬೇತಿ ನೀಡುವ ಕಾರ್ಯಕ್ರಮವನ್ನು ಯಶಸ್ವಿ ಮಾಡಲು ಸಂಬಂಧಿಸಿದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯದೊಂ ದಿಗೆ ಕೆಲಸ ಮಾಡುವಂತೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸಲಹೆ ನೀಡಿದರು. ಕೋವಿಡ್-19 ಫ್ರಂಟ್‍ಲೈನ್ ವರ್ಕರ್ ಗಳಾಗಿ ಕಾರ್ಯನಿರ್ವಹಿಸಲು ಆಸಕ್ತಿಯುಳ್ಳ ಅಭ್ಯರ್ಥಿಗಳಿಗೆ ಅಲ್ಪಾವಧಿ ಕೌಶಲ ತರಬೇತಿ ಗಳನ್ನು ಆಯೋಜಿಸುವ ಕುರಿತು ಡಿಸಿ ಕಚೇರಿಯಲ್ಲಿ ನಡೆದ ವಿಶೇಷ ಸಮಿತಿಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತ ನಾಡಿದರು. ಕಾರ್ಯಕ್ರಮದ ರೂಪರೇಷೆಗೆ ಕೇವಲ…
ಕೆರೆ ಒತ್ತುವರಿ ತೆರವುಗೊಳಿಸದೇ ಕೇವಲ ದೇವಾಲಯಗಳಿಗೆ ಕೈ ಹಾಕಿದ್ದೇಕೆ?
September 13, 2021ಮೈಸೂರು, ಸೆ. 12(ಆರ್‍ಕೆ)- ನ್ಯಾಯಾಲಯ ಆದೇ ಶಿಸಿದ್ದರೂ ಕೆರೆಗಳ ಒತ್ತುವರಿ ತೆರವುಗೊಳಿಸದ ಮೈಸೂರು ಜಿಲ್ಲಾಡಳಿತವು, ಕೇವಲ ದೇವಾ ಲಯಗಳನ್ನು ನೆಲಸಮ ಮಾಡುತ್ತಿರುವುದೇಕೆ? ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರಿನ ಕುವೆಂಪುನಗರದ ಗಾನಭಾರತಿ ಸಭಾಂಗಣದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗ ವಹಿಸಿದ್ದ ಅವರು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿ ದರು. ಸುಪ್ರೀಂಕೋರ್ಟ್ ಹೇಳಿರುವುದು ಫುಟ್ ಪಾತ್ ಮೇಲಿರುವ, ಸಾರ್ವಜನಿಕ ಸ್ಥಳದಲ್ಲಿ ನಿರ್ಮಿ ಸಿರುವ ಹಾಗೂ ಪಾದಚಾರಿಗಳು ಮತ್ತು ವಾಹನ ಸಂಚಾರಕ್ಕೆ ಅಡ್ಡಿಯಾಗುವಂತಹ ಜಾಗದಲ್ಲಿರುವ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಿ…
ಯೋಗ, ಧ್ಯಾನದಿಂದ ಮಾನಸಿಕ ಶಾಂತಿ, ಉತ್ಸಾಹ ಸಾಧ್ಯ
September 13, 2021ಮೈಸೂರು, ಸೆ.12(ಆರ್‍ಕೆಬಿ)- ಮೈಸೂ ರಿನ ವಿಜಯನಗರದ 2ನೇ ಹಂತದಲ್ಲಿ ರುವ ಮೈಸೂರು ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಯೋಗ ಘಟಿಕೋತ್ಸವದಲ್ಲಿ ವಿವಿಧ ಕೋರ್ಸ್ ಗಳಲ್ಲಿ 26 ಮಂದಿಗೆ ಚಿನ್ನದ ಪದಕ ಮತ್ತು ಒಟ್ಟು 74 ಮಂದಿಗೆ ಪದವಿಯನ್ನು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಪ್ರದಾನ ಮಾಡಿದರು. ಮೈಸೂರಿನ ಗಾನಭಾರತಿ ವೀಣೆ ಶೇಷಣ್ಣ ಭವನದಲ್ಲಿ ಭಾನುವಾರ ನಡೆದ ಸಮಾರಂಭ ದಲ್ಲಿ ಪದವಿ ಪ್ರದಾನ ಮಾಡಿದ ಬಳಿಕ ಮಾತನಾಡಿದ ಜಿ.ಟಿ.ದೇವೇಗೌಡರು, ನಮ್ಮ ಆತ್ಮರಕ್ಷಣೆ, ಮಾನಸಿಕ ಸಮತೋಲನಕ್ಕೆ…
ಕಾಯಕ ಸಮಾಜಗಳ ಒಕ್ಕೂಟದಿಂದ ಸೆ.20ರಂದು ಬೆಂಗಳೂರಲ್ಲಿ ಪ್ರತಿಭಟನೆ
September 12, 2021ಮೈಸೂರು,ಸೆ.11(ಪಿಎಂ)-ಕಾಯಕ ಸಮಾಜಗಳಿ ರುವ `2ಎ ಮೀಸಲಾತಿ ಪಟ್ಟಿ’ಗೆ ಪಂಚಮಸಾಲಿ ಸೇರಿ ದಂತೆ ಇನ್ನಿತರ ಲಿಂಗಾಯತ ಸಮುದಾಯಗಳನ್ನು ಸೇರಿಸಬೇಕೆಂಬ ಒತ್ತಾಯಕ್ಕೆ ಸರ್ಕಾರ ಮಣಿಯ ಬಾರದೆಂದು ಆಗ್ರಹಿಸಿ ರಾಜ್ಯ ಕಾಯಕ ಸಮಾಜಗಳ ಒಕ್ಕೂಟದ ವತಿಯಿಂದ ಸೆ.20ರಂದು ಬೆಂಗಳೂರಿ ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ವಿಧಾನಪರಿಷತ್ ಮಾಜಿ ಸದಸ್ಯರೂ ಆದ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಸಿ.ಪುಟ್ಟಸಿದ್ದಶೆಟ್ಟಿ ತಿಳಿಸಿದರು. ಮೈಸೂರಿನ ಜಲದರ್ಶಿನಿ ಅತಿಥಿಗೃಹದ ಸಭಾಂಗಣ ದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾಯಕ ಸಮಾಜಗಳ ಒಕ್ಕೂಟದ ರಾಜ್ಯ ಕಾರ್ಯಕಾರಿಣಿ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಲಿಂಗಾಯತ…
ಸಂಚಾರ ನಿಯಮ ಉಲ್ಲಂಘನೆ: ಪೊಲೀಸರ ವಿಶೇಷ ಕಾರ್ಯಾಚರಣೆ
September 12, 2021ಮೈಸೂರು, ಸೆ. 11(ಆರ್‍ಕೆ)- ಕೆಲ ತಿಂಗಳಿಂದ ಬಿಡುವು ನೀಡಿದ್ದ ಸಂಚಾರ ಪೊಲೀಸರು, ಗೌರಿ-ಗಣೇಶ ಹಬ್ಬ ಮುಗಿ ಯುತ್ತಿದ್ದಂತೆಯೇ ನಿಯಮ ಉಲ್ಲಂಘಿಸುವ ವಾಹನ ಸವಾರರ ವಿರುದ್ಧ ಸಮರ ಸಾರಿದ್ದಾರೆ. ಸಂಚಾರ ನಿಯಮಗಳನ್ನು ಗಾಳಿಗೆ ತೂರಿ ವಾಹನ ಸವಾರರು ಅಡ್ಡಾದಿಡ್ಡಿ ಚಾಲನೆ ಮಾಡುತ್ತಿರುವುದರಿಂದ ಮೈಸೂರು ನಗರದಲ್ಲಿ ಅಪಘಾತಗಳು ಹೆಚ್ಚಾಗಿ, ಸಾವು-ನೋವುಗಳು ಸಂಭವಿಸುತ್ತಿರುವುದ ರಿಂದ ಎಚ್ಚೆತ್ತ ಸಂಚಾರ ಪೊಲೀಸರು, ಇಂದಿನಿಂದ ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ. ಮೈಸೂರು ನಗರ ಸಂಚಾರ ವಿಭಾಗದ ಎಸಿಪಿ ಗಂಗಾಧರ ಸ್ವಾಮಿ ನೇತೃತ್ವದಲ್ಲಿ…
ಮೈಸೂರಲ್ಲಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ ಆಚರಣೆ: ಕರ್ತವ್ಯದ ವೇಳೆ ಹುತಾತ್ಮರಾದ ಹಸಿರು ಯೋಧರ ಸ್ಮರಣೆ
September 12, 2021ಮೈಸೂರು, ಸೆ.11(ಎಂಟಿವೈ)- ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನದ ಆವ ರಣದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಅರಣ್ಯ ಹುತಾ ತ್ಮರ ದಿನಾಚರಣೆಯಲ್ಲಿ ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹುತಾತ್ಮರಾದ ಹಸಿರು ಯೋಧ ರಿಗೆ ಗೌರವ ಸಮರ್ಪಿಸಲಾಯಿತು. ಅರಣ್ಯ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛ ಸಮರ್ಪಿಸುವ ಮೂಲಕ ಹುತಾತ್ಮರಾದ ಅರಣ್ಯ ಇಲಾಖೆ ಸಿಬ್ಬಂದಿಗೆ ಗೌರವ ನಮನ ಅರ್ಪಿಸಿದರು. ಬಳಿಕ ಎಸ್ಪಿ ಆರ್.ಚೇತನ್ ಮಾತನಾಡಿ, ಅರಣ್ಯ ಸಂಪತ್ತಿನ…
ವಿವೇಕಾನಂದರ ಚಿಕಾಗೋ ಭಾಷಣ ಎಂದೆಂದಿಗೂ ಪ್ರಸ್ತುತ
September 12, 2021ಮೈಸೂರು, ಸೆ.11(ಎಸ್‍ಬಿಡಿ)- ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣ ಎಂದಿಗೂ ಪ್ರಸ್ತುತ ಎಂದು ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಹೇಳಿದರು. ಅಮೆರಿಕಾದ ಚಿಕಾಗೋ ನಗರದಲ್ಲಿ ನಡೆದ `ವಿಶ್ವ ಧರ್ಮ ಸಂಸತ್’(1893ರ ಸೆ.11)ನಲ್ಲಿ ಸ್ವಾಮಿ ವಿವೇಕಾನಂದರು ಐತಿಹಾಸಿಕ ಭಾಷಣ ಮಾಡಿ ಇಂದಿಗೆ 128 ವರ್ಷ. ಈ ಹಿನ್ನೆಲೆ ಯಲ್ಲಿ ಪ್ರಜ್ಞಾವಂತ ನಾಗರಿಕರ ವೇದಿಕೆ ವತಿಯಿಂದ ಮಂಡಿ ಮೊಹಲ್ಲಾದ ವೆಂಕಟ ರಮಣಸ್ವಾಮಿ ದೇವಾಲಯದಲ್ಲಿ ಆಯೋ ಜಿಸಿದ್ದ `ವಿವೇಕ ವಾಣಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣದ ವರ್ಷಾಚರಣೆ ಮೂಲಕ…
ಸೆ.27ರಂದು ಭಾರತ್ ಬಂದ್
September 12, 2021ಮೈಸೂರು,ಸೆ.11(ಪಿಎಂ)- ಕೇಂದ್ರ ಸರ್ಕಾರದ 3 ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದು, ಅಗತ್ಯ ವಸ್ತುಗಳ ಬೆಲೆ ಇಳಿಕೆಗೆ ಆಗ್ರಹಿಸಿ ದೇಶದ 500ಕ್ಕೂ ಹೆಚ್ಚು ಸಂಘಟನೆಗಳು ರಾಷ್ಟ್ರೀಯ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ಸೆ.27 ರಂದು ಭಾರತ್ ಬಂದ್‍ಗೆ ಕರೆ ನೀಡಿದ್ದು, ಇದಕ್ಕೆ ಬೆಂಬಲ ಸೂಚಿಸಿ ರಾಜ್ಯದಲ್ಲೂ ಬಂದ್ ನಡೆಸಲಾಗುವುದು ಎಂದು ಕಿಸಾನ್ ಮೋರ್ಚಾ ಮುಖ್ಯಸ್ಥರೂ ಆದ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರು ಬೂರು ಶಾಂತಕುಮಾರ್ ತಿಳಿಸಿದರು. ಮೈಸೂರಿನ ಜಲದರ್ಶಿನಿ ಅತಿಥಿಗೃಹದ ಸಭಾಂಗಣದಲ್ಲಿ ಶನಿವಾರ ಪತ್ರಿಕಾಗೋಷ್ಠಿ ಯಲ್ಲಿ…
ವಿವಿಧ ಸೇವಾಕಾರ್ಯ ಮೂಲಕ ಶಾಸಕ ನಾಗೇಂದ್ರ ಹುಟ್ಟುಹಬ್ಬ ಆಚರಣೆ
September 12, 2021ಮೈಸೂರು, ಸೆ.11(ಎಂಕೆ)- ಮೈಸೂರು ನಗರದ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ವಿಶೇಷಚೇತನ ಮಕ್ಕಳಿಗೆ ಉಪ ಹಾರ, ಹಣ್ಣು-ಹಂಪಲು ವಿತರಣೆ, ಶಾಲಾ ಮಕ್ಕಳಿಗೆ ಪುಸ್ತಕ ಹಾಗೂ ಮಹಿಳೆಯರಿಗೆ ಸೀರೆ ವಿತರಣೆ ಮಾಡುವ ಮೂಲಕ ಶಾಸಕ ಎಲ್.ನಾಗೇಂದ್ರ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಎದುರಿನಲ್ಲಿ ಶನಿವಾರ ಬೆಳಗ್ಗೆ 7.30ಕ್ಕೆ ಪಾರಿವಾಳಗಳಿಗೆ ಆಹಾರ ನೀಡುವ ಮೂಲಕ ಆರಂಭವಾದ ಶಾಸಕ ಎಲ್. ನಾಗೇಂದ್ರ ಅವರ ಹುಟ್ಟುಹಬ್ಬದ ಕಾರ್ಯ ಕ್ರಮಗಳು ರಾತ್ರಿ 9 ಗಂಟೆಯವರೆಗೆ ನಡೆ ದವು. ವಿಜಯನಗರ…










