ಮೈಸೂರು, ಜು.1(ವೈಡಿಎಸ್)- ಶಾಸಕ ಮುನಿರತ್ನ ಮತ್ತು ರಮೇಶ್ ಜಾರಕಿಹೊಳಿ ಅವರು ಯಾಕೆ ಸಚಿವ ಸಂಪುಟ ಸೇರಬಾರದು? ಎಂದು ಸುದ್ದಿಗಾರರನ್ನೇ ಮರು ಪ್ರಶ್ನಿಸಿದ ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವ ಕೆ.ಸಿ.ನಾರಾಯಣಗೌಡ, ಅವರಿಬ್ಬರೂ ಸಚಿವ ಸಂಪುಟ ಸೇರೇ ಸೇರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಗುರುವಾರ ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮುನಿರತ್ನ ಪ್ರಕರಣ ಇತ್ಯರ್ಥವಾಗಿದೆ. ರಮೇಶ್ ಜಾರಕಿಹೊಳಿ ಪ್ರಕರಣ ಕೂಡ ನ್ಯಾಯಾಲಯದಲ್ಲಿ ಕ್ಲಿಯರ್…
ಎನ್‍ಟಿಎಂ ಶಾಲೆ ಪರ ಮುಂದುವರೆದ ಹೋರಾಟ
July 1, 2021ಮೈಸೂರು,ಜೂ.30(ಪಿಎಂ)- ಮೈಸೂ ರಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಮಹಾರಾಣಿಯವರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ಎನ್‍ಟಿ ಎಂಎಸ್) ಉಳಿಸಿಕೊಂಡೇ, ವಿವೇಕ ಸ್ಮಾರಕ ನಿರ್ಮಿಸಬೇಕೆಂದು ಆಗ್ರಹಿಸಿ ಬುಧ ವಾರವೂ ವಿವಿಧ ಸಂಘಟನೆಗಳ ಮುಖಂ ಡರು ಪ್ರತಿಭಟನೆ ನಡೆಸಿದ್ದು, ಸ್ವಾಮಿ ವಿವೇಕಾನಂದರ ವೇಷಭೂಷಣದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಕ್ಕಳು ಗಮನ ಸೆಳೆದರು. ಶಾಲೆ ಎದುರು ಜಮಾಯಿಸಿದ ಪ್ರತಿ ಭಟನಾಕಾರರು, ಈ ಹಿಂದೆ ಜಿಲ್ಲಾಧಿ ಕಾರಿಗಳು ಶಾಲೆಗೆ ಸೇರಿದ ಜಾಗ ಹೊರತುಪಡಿಸಿ ಉಳಿದ ಜಾಗದಲ್ಲಿ ಸ್ಮಾರಕ ನಿರ್ಮಿಸಬಹುದು ಎಂದು ವರದಿ ನೀಡಿದ್ದಾರೆ. ಈ…
ಅಪೊಲೋ ಬಿಜಿಎಸ್ ಆಸ್ಪತ್ರೆಗಳಲ್ಲಿ ಲಸಿಕಾ ಮೆಗಾ ಅಭಿಯಾನ
July 1, 2021ಮೈಸೂರು,ಜೂ.30(ಆರ್‍ಕೆ)-ಮೈಸೂರು ಸೇರಿದಂತೆ ರಾಜ್ಯ ಹಾಗೂ ದೇಶದಾದ್ಯಂತ ಎಲ್ಲಾ ಅಪೊಲೋ ಬಿಜಿಎಸ್ ಆಸ್ಪತ್ರೆಗಳಲ್ಲಿ ಬುಧವಾರ ಕೊರೊನಾ ಲಸಿಕೆ ಮೆಗಾ ಅಭಿಯಾನ ನಡೆಯಿತು. ಕೋವಿಶೀಲ್ಡ್‍ಗೆ 780 ರೂ., ಕೋವ್ಯಾಕ್ಸಿನ್ ಲಸಿಕೆಗೆ 1,410 ರೂ.ನಂತೆ ಸರ್ಕಾರ ನಿಗದಿ ಪಡಿಸಿರುವ ದರದಲ್ಲಿ ಎಲ್ಲಾ ವಯಸ್ಸಿನ ಅರ್ಹ ಸಾರ್ವಜನಿ ಕರಿಗೆ ಲಸಿಕೆ ನೀಡಲಾಯಿತು. ಆನ್‍ಲೈನ್‍ನಲ್ಲಿ ಬುಕ್ ಮಾಡಿ ದವರು ಹಾಗೂ ಸ್ಥಳದಲ್ಲೇ ನೋಂದಣಿ ಮಾಡಿಸಿ, ಜನ ರಿಗೆ ಅಪೊಲೋ ಆಸ್ಪತ್ರೆಯಲ್ಲಿ ಲಸಿಕೆ ನೀಡಲಾಯಿತು. ಬೆಳಗ್ಗೆ 9.30ರಿಂದ ರಾತ್ರಿ 7.30 ಗಂಟೆ ವರೆಗೂ ಮೈಸೂರಿನ ಬಿಜಿಎಸ್…
ಅವಧಿ ಮುಗಿದ ತಿನಿಸು: ಅಂಗಡಿ ಮಾಲೀಕನಿಗೆ 2 ಸಾವಿರ ರೂ. ದಂಡ ಮಾಸ್ಕ್ ಧರಿಸದ ಅಂಗಡಿ ಮಾಲೀಕರಿಂದಲೂ ದಂಡ ವಸೂಲಿ ಮಾಡಿದ ಮೈಸೂರು ಪಾಲಿಕೆ
July 1, 2021ಮೈಸೂರು, ಜೂ.30(ಎಂಟಿವೈ)- ಮೈಸೂರಿನ ಸಂತೆ ಪೇಟೆ, ಶಿವರಾಂಪೇಟೆ, ಚಿಕ್ಕ ಗಡಿಯಾರ ಬಳಿ ಬುಧ ವಾರ ಬೆಳಗ್ಗೆ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿ ಜಾಗೃತಿ ಮೂಡಿಸಿ ದರು. ಅದೇ ವೇಳೆ ಅಂಗಡಿಗಳಲ್ಲಿ ಪದಾರ್ಥಗಳನ್ನೂ ಪರಿಶೀಲಿಸಿ ಅವಧಿ ಮುಗಿದ ತಿನಿಸು ಮಾರುತ್ತಿದ್ದ ಅಂಗಡಿ ಮಾಲೀಕನಿಗೂ ದಂಡ ವಿಧಿಸಿದರು. ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗಾಗಿ ಬೆಳಗ್ಗೆ 6ರಿಂದ ಮಧ್ಯಾಹ್ನ 2ರವರೆಗೂ ವಿನಾಯಿತಿ…
ಪತ್ರಕರ್ತರ ಸಂಘಕ್ಕೆ ಥರ್ಮಾಮೀಟರ್ ಕೊಡುಗೆ
June 30, 2021ಮೈಸೂರು, ಜೂ.29(ಎಂಟಿವೈ)- ಕೊರೊನಾ ಸೋಂಕಿನ ಹಾವಳಿ ಹಿನ್ನೆಲೆಯಲ್ಲಿ ಪತ್ರಕರ್ತರ ಆರೋಗ್ಯ ರಕ್ಷಣೆಗಾಗಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘಕ್ಕೆ 250 ಥರ್ಮಾಮೀಟರ್‍ಗಳನ್ನು ಇನ್‍ಫೆÇೀಸಿಸ್ ಸಂಸ್ಥೆಯ ಸಾಫನ್ ಲಿ. ಕೊಡುಗೆಯಾಗಿ ನೀಡಿದೆ. ಪತ್ರಕರ್ತರ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಾಫನ್ ಲಿ.ನ ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ಉಡುಪ, ಥರ್ಮಾಮೀಟರ್‍ಗಳನ್ನು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್ ಅವರಿಗೆ ಹಸ್ತಾಂತರಿಸಿದರು. ಬಳಿಕ ಮಾತನಾಡಿ, ಕೊರೊನಾ 2ನೇ ಅಲೆಯ ತೀವ್ರತೆ ನಡುವೆಯೂ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ ಪತ್ರಕರ್ತರ ಆರೋಗ್ಯ ರಕ್ಷಣೆಗಾಗಿ ಸಣ್ಣ…
ಸಾರ್ವಜನಿಕ ರಸ್ತೆ ಮುಚ್ಚಿದ ಭೂ ಮಾಲೀಕ; ನಿವಾಸಿಗಳ ಪ್ರತಿಭಟನೆ
June 30, 2021ಮೈಸೂರು, ಜೂ.29(ಎಂಟಿವೈ)- ಸಾರ್ವಜನಿಕ ರಸ್ತೆಯನ್ನು ಖಾಸಗಿ ವ್ಯಕ್ತಿಯೊಬ್ಬರು ಮುಚ್ಚಿದ್ದಾರೆ ಎಂದು ಆರೋಪಿಸಿ ಕಸ್ತೂರಿ ಕನ್ನಡ ವೇದಿಕೆ ಹಾಗೂ ಮೈಸೂರು ಕನ್ನಡ ವೇದಿಕೆ ನೇತೃತ್ವದಲ್ಲಿ ಮಹದೇವ ಪುರ ನಿವಾಸಿಗಳು ಮುಚ್ಚಿದ ರಸ್ತೆ ಬಳಿಯೇ ಮಂಗಳವಾರ ಪ್ರತಿಭಟನೆ ನಡೆಸಿದರು. ಮೈಸೂರು ತಾಲೂಕಿನ ಮಹದೇವಪುರದಿಂದ ಮಾನಂದವಾಡಿ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸಿದ್ದ ರಸ್ತೆಯನ್ನು ತಮ್ಮ ಜಮೀನಿಗೆ ಸೇರಿಸಿಕೊಂಡಿರುವ ಖಾಸಗಿ ವ್ಯಕ್ತಿ ರಸ್ತೆ ಇರುವೆಡೆ ಮಣ್ಣು ತುಂಬಿಸಿದ್ದಾರೆ. ಇದರಿಂದ ಮಹದೇವಪುರ ಗ್ರಾಮಸ್ಥರಿಗೆ ಸಂಪರ್ಕ ರಸ್ತೆಯೇ ಇಲ್ಲದಂತಾಗಿದ್ದು, ಈಗ ಬಳಸು ಮಾರ್ಗ ದಲ್ಲಿ ಸಂಚರಿಸಬೇಕಾದ ಪರಿಸ್ಥಿತಿ…
ಮೃಗಾಲಯ ಸಿಬ್ಬಂದಿಗೆ ಬ್ಯಾಂಕ್ ಆಫ್ ಬರೋಡದಿಂದ ದಿನಸಿ ಕಿಟ್
June 30, 2021ಮೈಸೂರು, ಜೂ.29(ಎಂಕೆ)- ಬ್ಯಾಂಕ್ ಆಫ್ ಬರೋಡಾದಿಂದ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯ ಸಿಬ್ಬಂದಿಗೆ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ನೇತೃತ್ವದಲ್ಲಿ ಅಕ್ಕಿ, ಬೆಳೆ, ಸಕ್ಕರೆ ಇನ್ನಿತರೆ ಆಹಾರ ಪದಾರ್ಥಗಳಿರುವ ದಿನಸಿ ಕಿಟ್‍ಗಳನ್ನು ವಿತರಿಸಲಾಯಿತು. ಬಳಿಕ ಮಾತನಾಡಿದ ಎಲ್.ಆರ್.ಮಹದೇವಸ್ವಾಮಿ, ಮೈಸೂರು ಮಹಾರಾಜರ ಕೊಡುಗೆಯಿಂದ ಜನಸಾಮಾನ್ಯರು ವಿವಿಧ ಬಗೆಯ ಪ್ರಾಣಿ-ಪಕ್ಷಿಗಳನ್ನು ವೀಕ್ಷಣೆ ಮಾಡುವ ಅವಕಾಶ ಲಭಿಸಿದೆ. ಕೊರೊನಾ ಸೋಂಕಿನಿಂದಾಗಿ ಮೃಗಾಲಯಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾದರೂ ಹಲವರು ತಮ್ಮ ಇಷ್ಟದ ಪ್ರಾಣಿಗಳನ್ನು ದತ್ತು ಪಡೆದು ಹಾಗೂ ಉದ್ಯಮಿಗಳು ಸಿಎಸ್‍ಆರ್ ಫಂಡ್…
ಮೃಗಾಲಯದಲ್ಲಿ `ಇ-ಯುವ ಸಂಘಟನೆ’ 12-18 ವಯಸ್ಸಿನವರಿಂದ ಅರ್ಜಿ ಆಹ್ವಾನ; 60 ಮಂದಿಗಷ್ಟೇ ಅವಕಾಶ
June 30, 2021ಮೈಸೂರು,ಜೂ.29(ಎಂಟಿವೈ)-ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಯಶಸ್ವಿ ಕಾರ್ಯಕ್ರಮದಲ್ಲಿ ಒಂದಾದ ಯುವ ಸಂಘಟನೆ(ಯೂತ್ ಕ್ಲಬ್) ಈ ಬಾರಿ ಕೊರೊನಾ ಸೋಂಕಿನ ಹಾವಳಿ ಯಿಂದಾಗಿ `ಇ-ಯುವ ಸಂಘ ಟನೆ’ಯಾಗಿ ಚಟುವಟಿಕೆ ನಡೆಸ ಲಿದೆ. ಆಸಕ್ತರು ಜು.10ರೊಳಗೆ ವೆಬ್ ಸೈಟ್‍ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ ತಿಳಿಸಿದ್ದಾರೆ. ಪ್ರಸಕ್ತ ಸಾಲಿನ ಯುವ ಸಂಘಟನೆ ಚಟುವಟಿಕೆ ಜು.25ಕ್ಕೆ ಆರಂಭಗೊಳ್ಳಲಿದೆ. 2022ರ ಜ.9ರವರೆಗೂ ಪ್ರತಿ ಭಾನುವಾರ ಚಟುವಟಿಕೆ ನಡೆಸಲಾಗುವುದು. 12-18 ವರ್ಷ ವಯೋಮಾನದ ಆಸಕ್ತರು `ಇ-ಯುವ ಸಂಘಟನೆ’ ಸದಸ್ಯತ್ವ…
ಪದವಿ ಕಾಲೇಜುಗಳಲ್ಲಿ ವಿಶೇಷ ಲಸಿಕೆ ಅಭಿಯಾನ ಲಸಿಕೆ ಪಡೆಯಲು ವಿದ್ಯಾರ್ಥಿಗಳಲ್ಲಿ ಉತ್ಸಾಹ
June 30, 2021ಮೈಸೂರು, ಜೂ.29(ಆರ್‍ಕೆಬಿ)- ಶೀಘ್ರ ದಲ್ಲೇ ಕಾಲೇಜುಗಳನ್ನು ಪ್ರಾರಂಭಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಪ್ರಾರಂ ಭಿಸಿರುವ ವಿಶೇಷ ಲಸಿಕಾ ಅಭಿಯಾನದ ಅಂಗವಾಗಿ ಮೈಸೂರಿನ ವಿವಿಧ ಕಾಲೇಜು ಗಳಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಕಾರ್ಯ ಆರಂಭವಾಗಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕಾ ಅಭಿ ಯಾನಕ್ಕೆ ಮೈಸೂರು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಮಂಗಳವಾರ ಶಾರದಾ ವಿಲಾಸ್ ಕಾಲೇಜಿನಲ್ಲಿ ಚಾಲನೆ ನೀಡಿ ಮಾತ ನಾಡಿ, ಜಿಲ್ಲೆಯಲ್ಲಿ ಹಲವಾರು ಕಾಲೇಜು ಗಳಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿ 1,58,000 ಮಂದಿ ಇದ್ದಾರೆ….
ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯ: ಪುತ್ರನ ಅಂಗಾಂಗ ದಾನಕ್ಕೆ ಪೋಷಕರ ಸಮ್ಮತಿ
June 30, 2021ಮೈಸೂರು, ಜೂ.29 (ವೈಡಿಎಸ್)- ರಸ್ತೆ ಅಪ ಘಾತಕ್ಕೀಡಾಗಿ ಮೆದುಳು ನಿಷ್ಕ್ರಿಯಗೊಂಡ ಪುತ್ರನ ಅಂಗಾಗಗಳನ್ನು ದಾನ ಮಾಡುವ ಮೂಲಕ ಸಾವಿ ನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಅಜ್ಜಹಳ್ಳಿ ನಿವಾಸಿ ರಾಮಕೃಷ್ಣ(50) ಎಂಬುವರ ಅಂಗಾಗ ಗಳನ್ನು ದಾನ ಮಾಡಲು ಪೋಷಕರು ನಿರ್ಧರಿಸಿದ್ದು, ಪುತ್ರನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ರಾಮಕೃಷ್ಣ ಎಂಬವರು ಮೂರು ದಿನದ ಹಿಂದೆ ಬೈಕ್‍ನಲ್ಲಿ ಮೈಸೂರಿಗೆ ಬರುತ್ತಿದ್ದಾಗ ಶ್ರೀರಂಗಪಟ್ಟಣ ಚೆಕ್‍ಪೋಸ್ಟ್ ಬಳಿ ನಿಂತಿದ್ದ ವೇಳೆ ವಾಹನವೊಂದು ವೇಗವಾಗಿ ಬಂದು ಡಿಕ್ಕಿ ಹೊಡೆದಿತ್ತು. ಇದರಿಂದ ಗಂಭೀರವಾಗಿ…










